ಬೆಂಡೆಕಾಯಿ

ಬೆಂಡೆಯ ಎಲೆ ಚುಕ್ಕೆ

Pseudocercospora abelmoschi

ಶಿಲೀಂಧ್ರ

ಸಂಕ್ಷಿಪ್ತವಾಗಿ

  • ಎಲೆಗಳ ಕೆಳಗಿನ ಭಾಗದಲ್ಲಿ ಮಸಿ ಕಪ್ಪು ಕೋನೀಯ ಕಲೆಗಳು.
  • ಎಲೆಗಳು ಒಣಗುವುದು, ಒಣಗುವುದು ಮತ್ತು ಉದುರುವುದು.
  • ಕಾಂಡ ಮತ್ತು ಹಣ್ಣುಗಳ ಮೇಲೂ ಸಹ ಪರಿಣಾಮ ಬೀರುತ್ತದೆ.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ಬೆಂಡೆಕಾಯಿ

ರೋಗಲಕ್ಷಣಗಳು

ಆರಂಭದಲ್ಲಿ, ಎಲೆಗಳ ಕೆಳಗಿನ ಭಾಗದಲ್ಲಿ ಅಸ್ಪಷ್ಟವಾದ ಆಲಿವ್ ಬಣ್ಣದ ಕಲೆಗಳನ್ನು ಗಮನಿಸಬಹುದು. ವಿಶೇಷವಾಗಿ ನೆಲಕ್ಕೆ ಹತ್ತಿರವಿರುವ ಹಳೆಯ ಎಲೆಗಳು, ರೋಗಕ್ಕೆ ಒಳಗಾತ್ತವೆ. ಪೀಡಿತ ಎಲೆಯ ಮೇಲ್ಮೈಗಳಲ್ಲಿ ತಿಳಿ ಕಂದು ಬಣ್ಣದಿಂದ ಬೂದುಬಣ್ಣದ ಮೌಲ್ಡ್ ಶಿಲೀಂಧ್ರಗಳ ಬೆಳವಣಿಗೆಯನ್ನು ನೋಡಬಹುದು. ರೋಗವು ಮುಂದುವರೆದಂತೆ, ಕಲೆಗಳು ನೆಕ್ರೋಟಿಕ್ ಆಗುತ್ತವೆ ಮತ್ತು ಮೇಲಿನ ಎಲೆಯ ಮೇಲ್ಮೈಯಲ್ಲಿಯೂ ಕಾಣಿಸಿಕೊಳ್ಳಬಹುದು. ಸೋಂಕಿತ ಎಲೆಗಳು ಅಂತಿಮವಾಗಿ ಬಾಡುತ್ತವೆ ಮತ್ತು ಒಣಗುತ್ತವೆ. ಕಾಂಡ ಮತ್ತು ಹಣ್ಣು ಕೂಡ ಇದೇ ರೀತಿಯ ರೋಗಲಕ್ಷಣಗಳಿಗೆ ಒಳಗಾಗಬಹುದು. ತೀವ್ರವಾದ ಮುತ್ತುವಿಕೆಯ ಸಂದರ್ಭದಲ್ಲಿ, ಸಸ್ಯವು ಸಂಪೂರ್ಣವಾಗಿ ವಿರೂಪಗೊಳ್ಳಬಹುದು. ರೋಗಲಕ್ಷಣಗಳನ್ನು ಸಿ. ಮಲಯೆನ್ಸಿಸ್‌ ಎಂದು ತಪ್ಪು ತಿಳಿಯುವ ಸಂಭವ ಇದೆ.

ಶಿಫಾರಸುಗಳು

ಜೈವಿಕ ನಿಯಂತ್ರಣ

ಇಂದಿಗೂ, ಈ ರೋಗದ ವಿರುದ್ಧ ಲಭ್ಯವಿರುವ ಯಾವುದೇ ಜೈವಿಕ ನಿಯಂತ್ರಣ ವಿಧಾನದ ಬಗ್ಗೆ ನಮಗೆ ತಿಳಿದಿಲ್ಲ. ರೋಗಲಕ್ಷಣಗಳ ಸಂಭವನೀಯತೆ ಅಥವಾ ಗುರುತ್ವವನ್ನು ಕಡಿಮೆ ಮಾಡಲು ಯಾವುದೇ ಯಶಸ್ವಿ ವಿಧಾನದ ಬಗ್ಗೆ ನಿಮಗೆ ತಿಳಿದಿದ್ದರೆ, ದಯವಿಟ್ಟು ನಮ್ಮನ್ನು ಸಂಪರ್ಕಿಸಿ.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದರೆ ತಡೆಗಟ್ಟುವ ಕ್ರಮಗಳು ಮತ್ತು ಜೈವಿಕ ಚಿಕಿತ್ಸೆಗಳಿರುವ ಸಂಯೋಜಿತ ವಿಧಾನವನ್ನು ಯಾವಾಗಲೂ ಪರಿಗಣಿಸಿ. ಶಿಲೀಂಧ್ರನಾಶಕವನ್ನು ಮಧ್ಯಾಹ್ನ ಎಲೆಗಳ ಕೆಳಭಾಗದಲ್ಲಿ ಸಿಂಪಡಿಸಿ. ತಾಮ್ರದ ಆಕ್ಸಿಕ್ಲೋರೈಡ್ @ 0.3%, ಮಾಂಕೋಜೆಬ್ @ 0.25% ಅಥವಾ ಝಿನೆಬ್ @ 0.2% ನಂತಹ ರಕ್ಷಣಾತ್ಮಕ ಶಿಲೀಂಧ್ರನಾಶಕಗಳನ್ನು ಬಿತ್ತನೆ ಮಾಡಿದ ಒಂದು ತಿಂಗಳ ನಂತರ ಬಳಸಿ ಮತ್ತು ತೀವ್ರತೆಯನ್ನು ಅವಲಂಬಿಸಿ ಹದಿನೈದು ದಿನಗಳಿಗೊಮ್ಮೆ ಈ ವಿಧಾನವನ್ನು ಪುನರಾವರ್ತಿಸಿ. ಕಾರ್ಬೆಂಡಜಿಮ್ 50 ಡಿಎಫ್ @ 0.1% 15 ದಿನಗಳ ಅಂತರದಲ್ಲಿ ಬಳಸಿದಲ್ಲಿ ರೋಗವನ್ನು ನಿಯಂತ್ರಿಸಲು ಸಹಾಯವಾಗುತ್ತದೆ. ಎಂಬುದನ್ನು ಫಲಿತಾಂಶಗಳು ತೋರಿಸಿವೆ.

ಅದಕ್ಕೆ ಏನು ಕಾರಣ

ಸ್ಯೂಡೋಸೆರ್ಕೊಸ್ಪೊರಾ ಅಬೆಲ್ಮೋಸ್ಚಿ ಎಂಬ ಶಿಲೀಂಧ್ರದಿಂದ ಎಲೆಗಳ ಕಲೆಗಳು ಉಂಟಾಗುತ್ತವೆ. ಇದು ಮಣ್ಣಿನಲ್ಲಿರುವ ಸೋಂಕಿತ ಸಸ್ಯ ಭಗ್ನಾವಶೇಷಗಳ ಮೇಲೆ ಉಳಿದುಕೊಂಡಿರುತ್ತದೆ ಮತ್ತು ಬೆಂಡೆ ಸಸ್ಯಗಳ ಬೇರುಗಳು ಮತ್ತು ಕೆಳಗಿನ ಎಲೆಗಳಿಗೆ ಸೋಂಕು ತರುತ್ತದೆ. ಬೀಜಕಗಳನ್ನು ಗಾಳಿ, ಮಳೆ, ನೀರಾವರಿ ಮತ್ತು ಯಾಂತ್ರಿಕ ಸಾಧನಗಳ ಮೂಲಕ ದ್ವಿತೀಯಕವಾಗಿ ಹರಡುತ್ತವೆ. ಆರ್ದ್ರ ಋತುವಿನಲ್ಲಿ (ಹೂಬಿಡುವ ಹಂತ) ಎಲೆಗಳ ಕಲೆಗಳು ಬಹಳ ಸಾಮಾನ್ಯವಾಗಿದೆ. ಏಕೆಂದರೆ ಶಿಲೀಂಧ್ರಗಳು ಬೆಚ್ಚಗಿನ ಮತ್ತು ಆರ್ದ್ರ ವಾತಾವರಣಕ್ಕೆ ಒಲವು ತೋರುತ್ತವೆ.


ಮುಂಜಾಗ್ರತಾ ಕ್ರಮಗಳು

  • ಪ್ರಮಾಣೀಕೃತ ಬೀಜ ಸಾಮಗ್ರಿಯನ್ನು ಮಾತ್ರ ಬಳಸಿ ಮತ್ತು ಎಲೆಗಳು ಒಣಗಿರುವಂತೆ ನಿಮ್ಮ ಬೆಳೆಗಳನ್ನು ಸಾಕಷ್ಟು ಅಂತರದಲ್ಲಿ ನೆಡಿ.
  • ನಿಮ್ಮ ಹೊಲವನ್ನು ನಿಯಮಿತವಾಗಿ ಮೇಲ್ವಿಚಾರಣೆ ಮಾಡಿ ಮತ್ತು ಸೋಂಕಿತ ಎಲೆಗಳನ್ನು ಸರಿಯಾಗಿ ತೆಗೆದುಹಾಕಿ (ಅವುಗಳನ್ನು ಸುಡುವುದು ಸಹ ಒಂದು ಆಯ್ಕೆಯಾಗಿದೆ).
  • ಉತ್ತಮ ಕಳೆ ನಿರ್ವಹಣೆ ಮಾಡಿ.
  • ಸಾಕಷ್ಟು ನೀರುಹಾಕುವುದು ಮತ್ತು ರಸಗೊಬ್ಬರ ನೀಡುವುದು ಸಸ್ಯ ಒತ್ತಡವನ್ನು ತಪ್ಪಿಸುತ್ತದೆ.
  • ಸಂಜೆಯ ಬದಲು ಬೆಳಿಗ್ಗೆ ನೀರಾವರಿ ಮಾಡಿ ಮತ್ತು ತುಂತುರು ನೀರಾವರಿ ಮತ್ತು ಸರಿಯಾಗಿ ನೀರು ಬಸಿಯದ ಮಣ್ಣನ್ನು ತಪ್ಪಿಸಿ.
  • ಆತಿಥೇಯವಲ್ಲದ ಬೆಳೆಗಳೊಂದಿಗೆ ಬೆಳೆ ಸರದಿಯನ್ನು ಪರಿಗಣಿಸಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ