Elsinoë mangiferae
ಶಿಲೀಂಧ್ರ
ಎಲ್ಸಿನೋ ಮ್ಯಾಂಜಿಫೆರೆ ಶಿಲೀಂಧ್ರದಿಂದ ರೋಗಲಕ್ಷಣಗಳು ಉಂಟಾಗುತ್ತವೆ. ಪ್ರಭೇದ, ಸಸ್ಯದ ಭಾಗ, ಸೋಂಕಿನ ಸಮಯದಲ್ಲಿ ಅಂಗಾಂಶಗಳ ವಯಸ್ಸು, ಸಸ್ಯದ ಚೈತನ್ಯ ಮತ್ತು ಎಷ್ಚು ಸೊಂಪಾಗಿವೆ ಎಂಬಂತಹ ವಿವಿಧ ಅಂಶಗಳನ್ನು ಅವಲಂಬಿಸಿ ರೋಗಲಕ್ಷಣಗಳು ಬದಲಾಗಬಹುದು. ಎಳೆಯ ಹಣ್ಣುಗಳ ಮೇಲೆ ಸಣ್ಣ ಕಪ್ಪು ಗಾಯಗಳು ಕಾಣಿಸಿಕೊಳ್ಳುತ್ತವೆ. ಸೋಂಕು ತೀವ್ರಗೊಳ್ಳುತ್ತಿದ್ದಂತೆ ಎಲೆಗಳ ಮೇಲೆ ದುಂಡಗಿನ ಅಥವಾ ಅನಿಯಮಿತ ಕಂದು ಬಣ್ಣದಿಂದ ಬೂದು ಬಣ್ಣದ ಗಾಯಗಳು ರೂಪುಗೊಳ್ಳುತ್ತವೆ. ಎಲೆಗಳು ಸುಕ್ಕುಗಟ್ಟುತ್ತವೆ, ವಿರೂಪಗೊಳ್ಳುತ್ತವೆ ಮತ್ತು ಉದುರುತ್ತವೆ. ಗಾಯಗಳು ತಿಳಿ-ಕಂದು ಬಣ್ಣದ ಹಕ್ಕಳೆ/ ಹುರುಪು ಅಥವಾ ಗಾಯದ ಅಂಗಾಂಶಗಳಾಗಿ ಬೆಳೆಯುತ್ತವೆ. ತೀವ್ರವಾಗಿ ಬಾಧಿತ ಹಣ್ಣುಗಳು ಅಕಾಲಿಕವಾಗಿ ಉದುರಬಹುದು. ಆದರೆ ಮರದ ಮೇಲೆ ಉಳಿದಿರುವ ಹಣ್ಣುಗಳಲ್ಲಿ ಗಾಯದ ಅಂಗಾಂಶಗಳು ಬೆಳೆಯುತ್ತವೆ. ಇದು ಹಣ್ಣನ್ನು ಮಾರುಕಟ್ಟೆಗೆ ಯೋಗ್ಯವಿಲ್ಲದಂತೆ ಮಾಡುತ್ತದೆ. ಸ್ವಲ್ಪ ಬೆಳೆದ ಬೂದು ಬಣ್ಣದ, ಅಂಡಾಕಾರದ ಗಾಯಗಳು ಕಾಂಡದ ಅಂಗಾಂಶದ ಮೇಲೆ ಸಂಭವಿಸುತ್ತವೆ. ಕಾಂಡಗಳ ಮೇಲೆ ದೊಡ್ಡ, ತಿಳಿ-ಕಂದು, ಕಾರ್ಕಿ ನಂತಹ ಪ್ರದೇಶಗಳನ್ನು ಸಹ ಗಮನಿಸಬಹುದು. ಅಪರೂಪದ ಸಂದರ್ಭಗಳಲ್ಲಿ, ಎಲೆಗಳ ಮೇಲೆ ಗಾಯಗಳು ಸಂಭವಿಸುತ್ತವೆ. ಹೊರ ವರ್ತುಲಗಳಿರುವ ಕಂದು ಕಲೆಗಳು ಕಾಣಿಸಿಕೊಳ್ಳುತ್ತವೆ ಮತ್ತು ಎಲೆಗಳ ಅಂಚುಗಳಲ್ಲೂ ಸಹ ಗಾಯಗಳು ಬೆಳೆಯುತ್ತವೆ. ಎಲೆಗಳ ಕೆಳಗಿನ ಮೇಲ್ಮೈಗಳಲ್ಲಿ ಕಾರ್ಕಿ ಗಾಯಗಳನ್ನು ಸಹ ಗಮನಿಸಬಹುದು. ಸೋಂಕು ತೀವ್ರವಾದಾಗ ಎಲೆ ಉದುರಬಹುದು.
ಇದುವರೆಗೆ, ಈ ಶಿಲೀಂಧ್ರಗಳ ವಿರುದ್ಧ ಯಾವುದೇ ಜೈವಿಕ ನಿಯಂತ್ರಣ ವಿಧಾನಗಳನ್ನು ಅಭಿವೃದ್ಧಿಪಡಿಸಲಾಗಿಲ್ಲ. ಆದಾಗ್ಯೂ, ಸೋಂಕಿತ ಸಸ್ಯ ಭಾಗಗಳ ಚಿಕಿತ್ಸೆಗಾಗಿ ತಾಮ್ರವನ್ನು ಹೊಂದಿರುವ ಶಿಲೀಂಧ್ರನಾಶಕಗಳನ್ನು ಬಳಸಬಹುದು.
ಲಭ್ಯವಿದ್ದರೆ, ಜೈವಿಕ ಚಿಕಿತ್ಸೆಗಳೊಂದಿಗೆ ತಡೆಗಟ್ಟುವ ಕ್ರಮಗಳಿರುವ ಸಂಯೋಜಿತ ವಿಧಾನವನ್ನು ಯಾವಾಗಲೂ ಪರಿಗಣಿಸಿ. ಆಕ್ಸಿಕ್ಲೋರೈಡ್ ಮತ್ತು ಹೈಡ್ರಾಕ್ಸೈಡ್ ಅಥವಾ ಆಕ್ಸೈಡ್ ನ ತಾಮ್ರದ ಶಿಲೀಂಧ್ರನಾಶಕಗಳನ್ನು ಕನಿಷ್ಠ ಹೂವಿನ ಮೊಗ್ಗು ಹೊರಹೊಮ್ಮುವ ಹಂತದಿಂದ ಎರಡು ಮೂರು ವಾರಗಳ ಅಂತರದಲ್ಲಿ ಹೂಬಿಡುವವರೆಗೂ ಹಾಕಿ. ಹೂಬಿಡುವ ಮತ್ತು ಹಣ್ಣು ನಿಲ್ಲುವ ಸಮಯದಲ್ಲಿ ತಾಮ್ರದ ದ್ರವೌಷಧಗಳ ಬದಲು ಮ್ಯಾಂಕೋಜೆಬ್ ಬಳಸಿ. ಆರ್ದ್ರ ಪರಿಸ್ಥಿತಿಗಳು ಶಿಲೀಂಧ್ರಗಳ ಸೋಂಕಿಗೆ ಅನುಕೂಲಕರವಾಗಿರುವುದರಿಂದ, ಶಿಲೀಂಧ್ರನಾಶಕವನ್ನು ಹೆಚ್ಚಾಗಿ ಬಳಸುವುದು ಅಗತ್ಯವಾಗಿರುತ್ತದೆ. ಇದು ತೊಳೆಯುವಿಕೆಯಿಂದಾಗುವ ಪರಿಣಾಮವನ್ನು ಸರಿದೂಗಿಸುತ್ತದೆ ಮತ್ತು ಚಿಕಿತ್ಸೆಯ ಪರಿಣಾಮಕಾರಿತ್ವವನ್ನು ಹೆಚ್ಚಿಸುತ್ತದೆ.
ಜೌಗು ತಗ್ಗು ತೋಟಗಳಲ್ಲಿ ಮಾವಿನ ಹಕ್ಕಳೆ ಕಾಣಿಸಿಕೊಳ್ಳುತ್ತದೆ. ಹೂಬಿಡುವ ಮತ್ತು ಹಣ್ಣು ನಿಲ್ಲುವ ಆರಂಭಿಕ ಹಂತಗಳಲ್ಲಿ ದೀರ್ಘಕಾಲದ ಮಳೆ ಈ ರೂಪಕ್ಕೆ ಕಾರಣವಾಗಬಹುದು. ಎಳೆಯ ಅಂಗಾಂಶಗಳು ಮಾತ್ರ ಸೋಂಕಿಗೆ ಗುರಿಯಾಗುತ್ತವೆ ಮತ್ತು ಹಣ್ಣು ಅರ್ಧದಷ್ಟು ಗಾತ್ರವನ್ನು ತಲುಪಿದ ನಂತರ ಸೋಂಕಿಗೆ ನಿರೋಧಕವಾಗುತ್ತದೆ. ಇದು ಜೀವಂತ ಸಸ್ಯ ಅಂಗಾಂಶಗಳ ಮೇಲೆ ಮಾತ್ರ ಬದುಕಬಲ್ಲದು. ಶಿಲೀಂಧ್ರ ಬೀಜಕಗಳು ಮಳೆಯ ತುಂತುರು ಅಥವಾ ಗಾಳಿಯ ಮೂಲಕ ಹರಡಬಹುದು, ಇದು ದ್ವಿತೀಯಕ ಸೋಂಕಿಗೆ ಕಾರಣವಾಗುತ್ತದೆ. ಇಲ್ಲದಿದ್ದರೆ, ಇದು ಮಣ್ಣಿನ ಅವಶೇಷಗಳಲ್ಲಿ ಉಳಿದುಕೊಂಡಿರುತ್ತದೆ. ಆಂಥ್ರಾಕ್ನೋಸ್‌ನ ಉಬ್ಬಿಲ್ಲದ ಗಾಯಗಳಿಗೆ ವ್ಯತಿರಿಕ್ತವಾಗಿ ಈ ಹಕ್ಕಳೆಗಳ ಗಾಯಗಳಲ್ಲಿ ಬೆಳೆದ ರಚನೆಗಳಿರುತ್ತವೆ ಎಂಬುದನ್ನು ಹೊರತುಪಡಿಸಿದರೆ, ರೋಗಲಕ್ಷಣಗಳು ಆಂಥ್ರಾಕ್ನೋಸ್‌ನಂತೆಯೇ ಇರುತ್ತವೆ.