Mycosphaerella coffeicola
ಶಿಲೀಂಧ್ರ
ತಿಳಿ-ಕಂದು/ಬೂದು ಬಣ್ಣದ ಮಧ್ಯಭಾಗವಿರುವ, ಸುತ್ತಲೂ ಹಳದಿ ಹೊರವರ್ತುಲದೊಂದಿಗೆ ಅಗಲವಾದ ಗಾಢ ಕಂದು ಬಣ್ಣದ ಉಂಗುರಗಳಿರುವ 15 ಮಿಮೀ ಅಗಲವಿರುವ ವೃತ್ತಾಕಾರದ ಕಂದು ಕಲೆಗಳು ಎಲೆಗಳ ಮೇಲೆ ಕಾಣಿಸಿಕೊಳ್ಳುತ್ತವೆ. ಕಲೆಗಳು ಹೆಚ್ಚಾಗಿ ನಾಳಗಳ ನಡುವೆ ಮತ್ತು ಅಂಚುಗಳ ಮೇಲೆ ಇರುತ್ತವೆ. ಕೆಲವೊಮ್ಮೆ ಕಲೆಗಳು ದೊಡ್ಡ ಮಚ್ಚೆಗಳಾಗಿ ಬೆಳೆಯುತ್ತವೆ, ಮತ್ತು ಎಲೆಗಳ ರೋಗ ಸಂಭವಿಸುತ್ತದೆ. ಇದು ಸಾಮಾನ್ಯವಾಗಿ 600 ಮೀ ಎತ್ತರಕ್ಕಿಂತ ಹೆಚ್ಚಿರುವ ತಂಪಾದ, ಆರ್ದ್ರ ಪ್ರದೇಶಗಳಲ್ಲಿ ಕಂಡುಬರುತ್ತದೆ. ಹಣ್ಣುಗಳ ಮೇಲಿನ ಸೋಂಕುಗಳು ಸಾಮಾನ್ಯವಾಗಿ ಚಿಕ್ಕದಾಗಿರುತ್ತವೆ, ಸುಮಾರು 5 ಮಿಮೀ ಅಗಲವಿರುತ್ತವೆ, ಆದರೆ ಕೆಲವೊಮ್ಮೆ ಅವು ಇಡೀ ಹಣ್ಣನ್ನು ಆವರಿಸುತ್ತವೆ. ಸಾಮಾನ್ಯವಾಗಿ, ಅವು ಎಲೆಗಳಲ್ಲಿ ಇರುವುದಕ್ಕಿಂತ ಆಕಾರದಲ್ಲಿ ಹೆಚ್ಚು ಅನಿಯಮಿತವಾಗಿರುತ್ತವೆ ಮತ್ತು ಮುಖ್ಯವಾಗಿ ಸೂರ್ಯನಿಗೆ ಒಡ್ಡಿದ ಬದಿಯಲ್ಲಿರುತ್ತವೆ. ತೀವ್ರತರವಾದ ಪ್ರಕರಣಗಳಲ್ಲಿ, ಅಕಾಲಿಕವಾಗಿ ಎಲೆ ಉದುರುವುದು ಮತ್ತು ಕಾಂಡದ ಡೈಬ್ಯಾಕ್ ಸಂಭವಿಸಬಹುದು.
ಇಂದಿನವರೆಗೂ, ಈ ರೋಗದ ವಿರುದ್ಧ ಯಾವುದೇ ಜೈವಿಕ ನಿಯಂತ್ರಣ ಪರಿಹಾರ ಲಭ್ಯವಿಲ್ಲ. ನಿಮಗೆ ಯಾವುದಾದರೂ ತಿಳಿದಿದ್ದರೆ ದಯವಿಟ್ಟು ನಮ್ಮನ್ನು ಸಂಪರ್ಕಿಸಿ.
ಲಭ್ಯವಿದ್ದರೆ ಜೈವಿಕ ಚಿಕಿತ್ಸೆಗಳೊಂದಿಗೆ ತಡೆಗಟ್ಟುವ ಕ್ರಮಗಳಿರುವ ಸಮಗ್ರ ವಿಧಾನವನ್ನು ಯಾವಾಗಲೂ ಪರಿಗಣಿಸಿ. ಅಗತ್ಯವಿದ್ದರೆ, ತಾಮ್ರ ಅಥವಾ ಟ್ರಯಾಜೋಲ್‌ಗಳಂತಹ ವಸ್ತುಗಳ ಉತ್ಪನ್ನಗಳನ್ನು ಬಳಸಿ. ಹೂಬಿಡಲು ಆರಂಭಿಸಿದಾಗ ಮೊದಲುಗೊಂಡು ಮೂರು ತಿಂಗಳ ಕಾಲ ತಾಮ್ರವನ್ನು ಸಿಂಪಡಿಸಿ. ಗಮನಿಸಿ, ತಾಮ್ರದ ಶಿಲೀಂಧ್ರನಾಶಕಗಳು ಪ್ರಯೋಜನಕಾರಿ ಕೀಟಗಳನ್ನು ಕೊಲ್ಲಬಹುದು.
ಕಲೆಗಳು ಮೈಕೋಸ್ಫೆರೆಲ್ಲಾ ಕಾಫಿಕೋಲಾ ಎಂಬ ಶಿಲೀಂಧ್ರದಿಂದ ಉಂಟಾಗುತ್ತವೆ. ಇದಕ್ಕೆ ಹೆಚ್ಚಿನ ತೇವಾಂಶ, ಅಧಿಕ ಮಳೆ, ಬೆಚ್ಚಗಿನ ತಾಪಮಾನ ಮತ್ತು ಬರ ಒತ್ತಡದ ಅವಧಿಗಳು ಅನುಕೂಲಕರ. ಅದರಲ್ಲೂ ವಿಶೇಷವಾಗಿ ಹೂಬಿಡುವ ಹಂತದ ನಂತರ. ಎಲೆಗಳ ಅವಶೇಷಗಳಲ್ಲಿ ರೋಗಕಾರಕವು ಬದುಕುಳಿಯುತ್ತದೆ. ಬೀಜಕಗಳು ಗಾಳಿ ಮತ್ತು ಮಳೆ ತುಂತುರುವಿನಿಂದ ಹರಡುತ್ತವೆ ಮತ್ತು ಮೊಳಕೆಯೊಡೆಯಲು ನೀರಿನ ಅಗತ್ಯವಿರುವಾಗ ಹೊಲಗಳಲ್ಲಿ ಮಾನವ ಚಲನೆಯ ಮೂಲಕ, ವಿಶೇಷವಾಗಿ ಸಸ್ಯಗಳು ತೇವವಾಗಿದ್ದಾಗ ಹರಡುತ್ತದೆ. ಎಳೆಯ ಮತ್ತು ನೆರಳು ಇಲ್ಲದ ಮರಗಳು ಹೆಚ್ಚು ರೋಗಕ್ಕೆ ಒಳಗಾಗುತ್ತವೆ.