ಕಡಲೆ ಕಾಳು & ಬೇಳೆ

ಕಡಲೆಯ ಒಣ ಬೇರು ಕೊಳೆತ

Macrophomina phaseolina

ಶಿಲೀಂಧ್ರ

ಸಂಕ್ಷಿಪ್ತವಾಗಿ

  • ಬೆಳೆಯು ತೇವಾಂಶದ ಒತ್ತಡದ ಸ್ಥಿತಿಗೆ ಒಡ್ಡಿಕೊಂಡಾಗ ಒಣ ಬೇರು ಕೊಳೆ ರೋಗವು ಹೆಚ್ಚು ತೀವ್ರವಾಗಿರುತ್ತದೆ.
  • ಇದು ಅನುಕೂಲಕರ ಪರಿಸ್ಥಿತಿಗಳಲ್ಲಿ 50 - 100% ಇಳುವರಿ ನಷ್ಟಕ್ಕೆ ಕಾರಣವಾಗಬಹುದು.
  • ರೋಗಕಾರಕವು ಬೀಜದಿಂದ ಮತ್ತು ಮಣ್ಣಿನಿಂದ ಹರಡುತ್ತದೆ.
  • ಹೂಬಿಡುವ ನಂತರದ ಹಂತದಲ್ಲಿ ರೋಗಲಕ್ಷಣಗಳು ಸ್ಪಷ್ಟವಾಗಿರುತ್ತವೆ: ತೊಟ್ಟುಗಳು ಮತ್ತು ಎಲೆಗಳು ಜೋತು ಬೀಳುವುದು ಮತ್ತು ಹಸಿರು ಬಣ್ಣ ಕಳೆದುಕೊಳ್ಳುವುದು.

ಇವುಗಳಲ್ಲಿ ಸಹ ಕಾಣಬಹುದು


ಕಡಲೆ ಕಾಳು & ಬೇಳೆ

ರೋಗಲಕ್ಷಣಗಳು

ರೋಗದ ಆರಂಭದಲ್ಲಿ ಕಡಲೆ ಹೊಲಗಳಲ್ಲಿ, ಒಣಗಿದ ಸಸ್ಯಗಳು ಚದುರಿದಂತೆ ಅಲ್ಲಲ್ಲಿ ಕಂಡುಬರುತ್ತದೆ. ರೋಗದ ಮೊದಲ ಲಕ್ಷಣಗಳು ಎಲೆಗಳು ಹಳದಿಯಾಗುವುದು ಮತ್ತು ಎಲೆಗಳು ಒಣಗುವುದು. ಈ ಸೋಂಕಿತ ಎಲೆಗಳು ಸಾಮಾನ್ಯವಾಗಿ ಒಂದು ಅಥವಾ ಎರಡು ದಿನಗಳಲ್ಲಿ ಉದುರುತ್ತವೆ. ಮತ್ತು ಮುಂದಿನ ಎರಡು ಅಥವಾ ಮೂರು ದಿನಗಳಲ್ಲಿ ಇಡೀ ಸಸ್ಯ ಸಾಯುತ್ತದೆ. ಪೀಡಿತ ಸಸ್ಯಗಳ ಎಲೆಗಳು ಮತ್ತು ಕಾಂಡಗಳು ಸಾಮಾನ್ಯವಾಗಿ ಒಣಹುಲ್ಲಿನ ಬಣ್ಣದ್ದಾಗಿರುತ್ತವೆ. ಆದರೆ ಕೆಲವು ಸಂದರ್ಭಗಳಲ್ಲಿ, ಕೆಳಗಿನ ಎಲೆಗಳು ಮತ್ತು ಕಾಂಡಗಳು ಕಂದು ಬಣ್ಣವನ್ನು ತೋರಿಸುತ್ತವೆ. ಮುಖ್ಯ ಬೇರು ಕಪ್ಪಾಗಿರುತ್ತದೆ ಮತ್ತು ಒಣ ಮಣ್ಣಿನಲ್ಲಿ ಬೇಗ ಮುರಿಯುತ್ತದೆ.

ಶಿಫಾರಸುಗಳು

ಜೈವಿಕ ನಿಯಂತ್ರಣ

ಜಲೀಯ ಸಾರಗಳು ಮತ್ತು ಬೇವಿನ ಎಣ್ಣೆಯಂತಹ, ಎಲೆ, ಕಾಂಡ, ತೊಗಟೆ, ಹಣ್ಣಿನ ತಿರುಳು ಮತ್ತು ಎಣ್ಣೆಯ ಸಾರಗಳಿಂದ ಮಣ್ಣಿನಿಂದ ಹರಡುವ ರೋಗಕಾರಕ ಎಂ. ಫಾಸೊಲಿನಾದ ಬೆಳವಣಿಗೆಯನ್ನು ತಡೆಯಬಹುದು. ಟ್ರೈಕೊಡರ್ಮಾ ವೈರೈಡ್ ಮತ್ತು ಟ್ರೈಕೊಡರ್ಮಾ ಹಾರ್ಜಿಯಾನಂ ನಂತಹ ವಿರೋಧಿ ರೋಗಕಾರಕಗಳು / ಜೈವಿಕ ನಿಯಂತ್ರಣ ಏಜೆಂಟ್‌ಗಳು ರೋಗದ ಸಂಭವವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ. ಬೀಜ ಸಂಸ್ಕರಣೆಗಾಗಿ ಟಿ. ಹರ್ಜಿಯಾನಮ್ + ಪಿ. ಫ್ಲೋರಸೆನ್ಸ್ (ಎರಡೂ @ 5 ಗ್ರಾಂ / ಕೆಜಿ ಬೀಜ ದರದಲ್ಲಿ) ಸಂಯೋಜನೆಯನ್ನು ಬಳಸಿ. ನಂತರ ಬಿತ್ತನೆಯ ಸಮಯದಲ್ಲಿ ಸಾಂದ್ರಗೊಳಿಸಿದ ಟಿ. ಹರ್ಜಿಯಾನಮ್ + ಪಿ. ಫ್ಲೋರಸೆನ್ಸ್ @ 2.5 ಕೆಜಿ / 250 ಕೆಜಿ ಹಟ್ಟಿ ಗೊಬ್ಬರ (ಎಫ್‌ವೈಎಂ)ವನ್ನು ಮಣ್ಣಿಗೆ ಸೇರಿಸಿ.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದರೆ ತಡೆಗಟ್ಟುವ ಕ್ರಮಗಳು ಮತ್ತು ಜೈವಿಕ ಚಿಕಿತ್ಸೆಗಳು ಇರುವ ಸಂಯೋಜಿತ ವಿಧಾನವನ್ನು ಯಾವಾಗಲೂ ಪರಿಗಣಿಸಿ. ಒಣ ಬೇರು ಕೊಳೆತದ ರಾಸಾಯನಿಕ ನಿಯಂತ್ರಣ ಪರಿಣಾಮಕಾರಿಯಲ್ಲ. ಏಕೆಂದರೆ ಎಂ. ಫಾಸೊಲಿನಾ ಆಶ್ರಯದಾತ ಸಸ್ಯಗಳ ವಿಶಾಲ ಶ್ರೇಣಿಯನ್ನು ಹೊಂದಿದೆ ಮತ್ತು ಮಣ್ಣಿನಲ್ಲಿ ಹೆಚ್ಚು ಕಾಲ ಉಳಿಯುತ್ತದೆ. ಸಸಿ ಹಂತದಲ್ಲಿ ವಿಶೇಷವಾಗಿ ದುರ್ಬಲವಾಗಿರುವ ಕಡಲೆ ಬೆಳೆಯಲ್ಲಿನ ನಷ್ಟವನ್ನು ಕಡಿಮೆ ಮಾಡಲು ಶಿಲೀಂಧ್ರನಾಶಕಗಳಿಂದ ಬೀಜ ಸಂಸ್ಕರಣೆಯು ಸ್ವಲ್ಪ ಮಟ್ಟಿಗೆ ಪರಿಣಾಮಕಾರಿಯಾಗಿದೆ. ಕಾರ್ಬೆಂಡಜಿಮ್ ಮತ್ತು ಮ್ಯಾಂಕೋಜೆಬ್‌ನೊಂದಿಗಿನ ಶಿಲೀಂಧ್ರನಾಶಕ ಬೀಜದ ಚಿಕಿತ್ಸೆ ಮತ್ತು ನಂತರದಲ್ಲಿ ಮಣ್ಣಿಗೆ ಕೀಟನಾಶಕಗಳನ್ನು ಹಾಕುವುದರಿಂದ ರೋಗದ ಸಂಭವವನ್ನು ಗಮನಾರ್ಹವಾಗಿ ಕಡಿಮೆ ಮಾಡಬಹುದು.

ಅದಕ್ಕೆ ಏನು ಕಾರಣ

ಇದು ಮಣ್ಣಿನಿಂದ ಹರಡುವ ಶಿಲೀಂಧ್ರ ಎಳೆಗಳು ಅಥವಾ ಮ್ಯಾಕ್ರೋಫೋಮಿನಾ ಫಾಸೊಲಿನಾ ಎಂಬ ಶಿಲೀಂಧ್ರದ ಬೀಜಕಗಳಿಂದ ಪ್ರಾರಂಭಿಸಲ್ಪಟ್ಟು ಮಣ್ಣಿನಿಂದ ಹರಡುವ ರೋಗ. ವಾತಾವರಣದ ತಾಪಮಾನವು 30 - 35°C ನಡುವೆ ಇದ್ದಾಗ ರೋಗಲಕ್ಷಣಗಳು ಇದ್ದಕ್ಕಿದ್ದಂತೆ ಕಾಣಿಸಿಕೊಳ್ಳುತ್ತವೆ. ಉಷ್ಣತೆಯ ಹೆಚ್ಚಳ ಮತ್ತು ಹೆಚ್ಚಿದ ತೇವಾಂಶದ ಒತ್ತಡದಿಂದ, ಉಷ್ಣವಲಯದ ಆರ್ದ್ರ ಪ್ರದೇಶಗಳಲ್ಲಿ ಶಿಲೀಂಧ್ರವು ಹೆಚ್ಚು ತೀವ್ರವಾಗಿರುತ್ತದೆ. ರೋಗವು ಸಾಮಾನ್ಯವಾಗಿ ಹೂಬಿಡುವ ಮತ್ತು ಬೀಜಕೋಶ ಬೆಳೆಯುವ ಹಂತಗಳಲ್ಲಿ ಕಾಣಿಸಿಕೊಳ್ಳುತ್ತದೆ. ಸೋಂಕಿತ ಸಸ್ಯಗಳು ಸಂಪೂರ್ಣವಾಗಿ ಒಣಗಿದಂತೆ ಕಾಣುತ್ತವೆ. ಆಶ್ರಯದಾತ ಬೆಳೆಯ ಅನುಪಸ್ಥಿತಿಯಲ್ಲಿ, ಲಭ್ಯವಿರುವ ಸತ್ತ ಸಾವಯವ ವಸ್ತುಗಳ ಮೇಲೆ ಸ್ಪರ್ಧಾತ್ಮಕ ಪೂತಿ ಜೀವಿಯಾಗಿ ಇದು ಮಣ್ಣಿನಲ್ಲಿ ಉಳಿಯುತ್ತದೆ. ಎಮ್. ಫಾಸೊಲಿನಾ ಅನುಕೂಲಕರ ಪರಿಸ್ಥಿತಿಗಳಲ್ಲಿ 50 - 100% ಇಳುವರಿ ನಷ್ಟಕ್ಕೆ ಕಾರಣವಾಗಬಹುದು.


ಮುಂಜಾಗ್ರತಾ ಕ್ರಮಗಳು

  • ಲಭ್ಯವಿದ್ದರೆ ಸಹಿಷ್ಣು ಪ್ರಭೇದಗಳನ್ನು ಆಯ್ಕೆಮಾಡಿ.
  • ಮಾಗುವ ಸಮಯದಲ್ಲಿ ಹೆಚ್ಚಿನ ತಾಪಮಾನವನ್ನು ತಪ್ಪಿಸಲು ಬೇಗ ಮಾಗುವ ಪ್ರಭೇದಗಳನ್ನು ಬಿತ್ತಿ.
  • ಇದರಿಂದಾಗಿ ಸೋಂಕು ಕಡಿಮೆಯಾಗುತ್ತದೆ.
  • ರೋಗದ ಲಕ್ಷಣಗಳಿಗಾಗಿ ಹೊಲವನ್ನು ನಿಯಮಿತವಾಗಿ ಮೇಲ್ವಿಚಾರಣೆ ಮಾಡಿ.
  • ಉತ್ತಮ ಮಣ್ಣಿನ ತೇವಾಂಶವನ್ನು ಕಾಪಾಡಿಕೊಳ್ಳಿ.
  • ಆಳವಾಗಿ ಉಳುಮೆ ಮಾಡಿ ಸೋಂಕಿತ ಸಸ್ಯಗಳ ಅವಶೇಷಗಳನ್ನು ಮಣ್ಣಿನಿಂದ ತೆಗೆದುಹಾಕಿ.
  • ಅವುಗಳನ್ನು ನಾಶಮಾಡಿ.
  • ಸುಗ್ಗಿಯ ನಂತರ, ನಿಮ್ಮ ಮಣ್ಣನ್ನು ಸೋಂಕುರಹಿತಗೊಳಿಸಲು ಮಣ್ಣಿನ ಸೌರೀಕರಣ ಮಾಡಿ.
  • ಎತ್ತರದ ಮಡುಗಳಲ್ಲಿ ನಿಮ್ಮ ಬೆಳೆ ಬೆಳೆಸಿರಿ ಮತ್ತು ನಾಟಿ ಮಾಡುವ ಮೊದಲು ನೇಗಿಲು ಹೊಡೆಯಿರಿ.
  • ಆಶ್ರಯದಾತವಲ್ಲದ ಬೆಳೆಗಳೊಂದಿಗೆ 3 ವರ್ಷಗಳ ಬೆಳೆ ಸರದಿಯನ್ನು ಯೋಜಿಸಿ.
  • ಉದಾಹರಣೆಗೆ, ಹುಲ್ಲುಜೋಳ ಅಥವಾ ಮೆಂತ್ಯ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ