ಸೋಯಾಬೀನ್

ಸೋಯಾಬೀನ್ ನಲ್ಲಿ ಆಲ್ಟರ್ನೇರಿಯಾ ಎಲೆ ಚುಕ್ಕೆ

Alternaria spp.

ಶಿಲೀಂಧ್ರ

ಸಂಕ್ಷಿಪ್ತವಾಗಿ

  • ಸೋಂಕಿತ ಬೀಜಗಳಿಂದ ಬೆಳೆಯುತ್ತಿರುವ ಹೊಸದಾಗಿ ಹೊರಹೊಮ್ಮಿದ ಸಸಿಗಳ ಸಾವು.
  • ಎಲೆಗಳ ಮೇಲೆ ವೃತ್ತಾಕಾರದ ಕಂದು ಬಣ್ಣದಿಂದ ಬೂದು ಬಣ್ಣದ ಚುಕ್ಕೆಗಳು ಕೇಂದ್ರೀಕೃತ ಉಂಗುರಗಳ ಜೊತೆಗೆ ಕಾಣಿಸಿಕೊಳ್ಳುತ್ತವೆ.
  • ಕಲೆಗಳ ಕೇಂದ್ರವು ಒಣಗಿ, ಉದುರಿಹೋಗಬಹುದು.
  • ಇದು "ಶಾಟ್-ಹೋಲ್ " ಪರಿಣಾಮ ಮತ್ತು ಅಕಾಲಿಕ ಎಲೆ ಉದುರುವಿಕೆಗೆ ಕಾರಣವಾಗುತ್ತದೆ.
  • ಬೀಜಗಳು ಸಣ್ಣದಾಗಿದ್ದು, ಮೇಲ್ಮೈಯಲ್ಲಿ ಗಾಢವಾದ ಅನಿಯಮಿತ ಮತ್ತು ಗುಳಿಬಿದ್ದ ಪ್ರದೇಶಗಳನ್ನು ಹೊಂದಿರುತ್ತವೆ.

ಇವುಗಳಲ್ಲಿ ಸಹ ಕಾಣಬಹುದು

2 ಬೆಳೆಗಳು
ಕ್ಯಾನೋಲ
ಸೋಯಾಬೀನ್

ಸೋಯಾಬೀನ್

ರೋಗಲಕ್ಷಣಗಳು

ಸಂಬಂಧಪಟ್ಟ ಸಸ್ಯ ಪ್ರಭೇದವನ್ನು ಅವಲಂಬಿಸಿ ಲಕ್ಷಣಗಳು ಬದಲಾಗುತ್ತವೆ. ಸೋಂಕಿತ ಬೀಜಗಳಿಂದ ಬೆಳೆಯುವ ಸಸಿಗಳಲ್ಲಿ ರೋಗಕಾರಕಗಳು ಸಾಮಾನ್ಯವಾಗಿ ಹೊಸದಾಗಿ ಹೊರಹೊಮ್ಮಿದ ಸಸ್ಯಗಳ ಸಾವಿಗೆ ಕಾರಣವಾಗುತ್ತವೆ. ಬೆಳೆದ ಸಸ್ಯಗಳಲ್ಲಿ, ಗಾಢ-ಕಂದು ಬಣ್ಣದ, ವೃತ್ತಾಕಾರದ ಕಲೆಗಳು ಏಕಕೇಂದ್ರಿತ ಬೆಳವಣಿಗೆ ಮತ್ತು ಸ್ಪಷ್ಟವಾದ ಅಂಚುಗಳ ಜೊತೆಗೆ ಹಳೆಯ ಎಲೆಗಳಲ್ಲಿ ಮೊದಲು ಬೆಳೆಯುತ್ತವೆ. ಕಾಲಾನಂತರದಲ್ಲಿ, ಈ ಟಾರ್ಗೆಟ್ ರೀತಿಯ ಕಲೆಯ ಕೇಂದ್ರವು ತೆಳುವಾಗುತ್ತದೆ ಮತ್ತು ಕಾಗದದಂತಾಗುತ್ತದೆ. ಅಂತಿಮವಾಗಿ ಉದುರಿಬಿದ್ದು, ಎಲೆಗೆ "ಶಾಟ್-ಹೋಲ್" ಅಂಶವನ್ನು ನೀಡುತ್ತದೆ. ಗಾಯಗಳು ವಿಸ್ತರಿಸುತ್ತಾ, ಒಗ್ಗೂಡಿದಾಗ, ಎಲೆಗಳು ಸತ್ತ ಅಂಗಾಂಶಗಳಿಂದ ಆವರಿಸಲ್ಪಡುತ್ತವೆ. ಇದು ಅಕಾಲಿಕ ಎಲೆ ಉದುರುವಿಕೆಗೆ ಕಾರಣವಾಗುತ್ತದೆ. ಪ್ರೌಢಾವಸ್ಥೆಯ ಬೀಜಕೋಶಗಳಲ್ಲಿಯೂ ಸಹ ಕಲೆಗಳು ಕಾಣಿಸಿಕೊಳ್ಳಬಹುದು. ಇದು ಕ್ಷೀಣಿಸಿದ, ಸಣ್ಣ ಮತ್ತು ಬಣ್ಣಕಳೆದುಕೊಂಡ ಬೀಜಗಳನ್ನು, ಕೊಳೆಯುವ ಲಕ್ಷಣಗಳೊಂದಿಗೆ ಹೊಂದಿರುತ್ತದೆ. ಆದರೂ, ಈ ರೋಗವು ಸಾಮಾನ್ಯವಾಗಿ, ಬೆಳೆಯ ಮುಕ್ತಾಯದ ಅವಧಿಯಲ್ಲಿ ಸಂಭವಿಸುವುದರಿಂದ, ಅದು ಕಡಿಮೆ ಇಳುವರಿ ನಷ್ಟವನ್ನು ಉಂಟುಮಾಡುತ್ತದೆ ಮತ್ತು ನಿರ್ವಹಣಾ ಶಿಫಾರಸುಗಳ ಅಗತ್ಯವಿರುವುದಿಲ್ಲ.

ಶಿಫಾರಸುಗಳು

ಜೈವಿಕ ನಿಯಂತ್ರಣ

ಸೋಯಾಬೀನ್ ನಲ್ಲಿ ಆಲ್ಟರ್ನೇರಿಯಾ ಎಲೆ ಚುಕ್ಕೆ ವಿರುದ್ಧ ಜೈವಿಕ ಉತ್ಪನ್ನಗಳು ಲಭ್ಯವಿಲ್ಲ. ಸಾವಯವ ಚಿಕಿತ್ಸೆ, ತಾಮ್ರವನ್ನು ಆಧರಿಸಿದ ಶಿಲೀಂಧ್ರನಾಶಕಗಳ ಬಳಕೆಯನ್ನು (ಸಾಮಾನ್ಯವಾಗಿ ಸುಮಾರು 2.5 ಗ್ರಾಂ / ಲೀಟರ್) ಒಳಗೊಂಡಿರುತ್ತದೆ.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದಲ್ಲಿ , ತಡೆಗಟ್ಟುವ ಕ್ರಮಗಳು ಮತ್ತು ಜೈವಿಕ ಚಿಕಿತ್ಸೆಗಳು ಒಟ್ಟಾಗಿರುವ ಸಂಯುಕ್ತ ರೋಗ ನಿರ್ವಹಣೆಯನ್ನು ಪರಿಗಣಿಸಿ. ಈ ರೋಗವು ಋತುವಿನ ಅಂತ್ಯದಲ್ಲಿ ಕಂಡುಬಂದಲ್ಲಿ ನಿರ್ದಿಷ್ಟ ನಿರ್ವಹಣೆಯ ಅಗತ್ಯವಿರುವುದಿಲ್ಲ. ಋತುವಿನ ಆರಂಭದಲ್ಲಿ ಮತ್ತು ಶಿಲೀಂಧ್ರದ ಬೆಳವಣಿಗೆಗೆ ಅನುಕೂಲಕರವಾದ ಪರಿಸ್ಥಿತಿಗಳಲ್ಲಿ ಸೋಂಕು ಸಂಭವಿಸಿದಲ್ಲಿ ಶಿಲೀಂಧ್ರನಾಶಕವನ್ನು ಪರಿಗಣಿಸಬಹುದು. ಆ ಸಂದರ್ಭದಲ್ಲಿ, ಮನ್ಕೋಜೆಬ್, ಅಜೋಕ್ಸಿಸ್ಟ್ರೋಬಿನ್ ಅಥವಾ ಪೈರಾಕ್ಲೋಸ್ಟ್ರೋಬಿನ್ ಆಧಾರಿತ ಉತ್ಪನ್ನಗಳನ್ನು ರೋಗಲಕ್ಷಣಗಳ ಮೊದಲ ಚಿಹ್ನೆಗಳು ಕಂಡುಬಂದಾಗ ಹಾಕಬಹುದು. ದೊಡ್ಡ ಮಟ್ಟದಲ್ಲಿ ರೋಗ ಹರಡುವವರೆಗೆ ಚಿಕಿತ್ಸೆಯನ್ನು ವಿಳಂಬ ಮಾಡಬೇಡಿ. ಯಶಸ್ವಿಯಾದ ನಿಯಂತ್ರಣ ಮಾಡಲು ಆಗ ಸಾಕಷ್ಟು ತಡವಾಗಿರುತ್ತದೆ. ಈ ಶಿಲೀಂಧ್ರನಾಶಕಗಳೊಂದಿಗೆ ಚಿಕಿತ್ಸೆ ನೀಡಲಾದ ಬೀಜಗಳು ಸಹ ರೋಗವನ್ನು ತಡೆಗಟ್ಟುವಲ್ಲಿ ಪರಿಣಾಮಕಾರಿಯಾಗುತ್ತವೆ.

ಅದಕ್ಕೆ ಏನು ಕಾರಣ

ಸೋಯಾಬೀನ್ ನಲ್ಲಿ, ಆಲ್ಟರ್ನೇರಿಯಾದ ಎಲೆ ಚುಕ್ಕೆ ಆಲ್ಟರ್ನೇರಿಯಾ ಜಾತಿಗೆ ಸೇರಿದ ಹಲವಾರು ಶಿಲೀಂಧ್ರಗಳಿಂದ ಉಂಟಾಗುತ್ತದೆ. ಈ ರೋಗಾಣುಗಳು ಬೀಜಕೋಶಗಳ ಗೋಡೆಗಳನ್ನು ಮುರಿಯುತ್ತವೆ. ಬೀಜಗಳಿಗೆ ಸೋಂಕು ತಗಲಿಸುತ್ತವೆ ಮತ್ತು ಋತುಗಳ ನಡುವಿನಲ್ಲಿ ರೋಗದ ಮುಖ್ಯ ಸಂವಹನ ಮಾರ್ಗವಾಗಿ ಇದನ್ನು ಬಳಸುತ್ತವೆ. ಶಿಲೀಂಧ್ರವು, ರೋಗಕ್ಕೆ ಒಳಗಾಗುವ ಕಳೆಗಳು ಅಥವಾ ಕೊಳೆತಿಲ್ಲದ ಬೆಳೆಯ ಅವಶೇಷಗಳ ಮೇಲೆ ಚಳಿಗಾಲವನ್ನು ಕಳೆಯಬಲ್ಲವು. ಸಸ್ಯಗಳ ಮಧ್ಯೆ ದ್ವಿತೀಯಕ ಹರಡುವಿಕೆಯು ಮುಖ್ಯವಾಗಿ ವಾಯುಗಾಮಿಯಾಗಿದೆ ಮತ್ತು ಬೆಚ್ಚಗಿನ, ಆರ್ದ್ರ ವಾತಾವರಣದಲ್ಲಿ, ಗಾಳಿ ಮತ್ತು ಮಳೆಯ ತುಂತುರುಗಳಿಂದ ಸುಗಮಗೊಳ್ಳುತ್ತದೆ. ಎಲೆ ಆರ್ದ್ರತೆಯು ಸೂಕ್ತವಾಗಿದ್ದರೆ, ಶಿಲೀಂಧ್ರವು ಗಂಟೆಗಳೊಳಗೆ ಮೊಳಕೆಯೊಡೆಯುತ್ತದೆ ಮತ್ತು ಎಲೆಯ ನೈಸರ್ಗಿಕ ರಂಧ್ರಗಳ ಮೂಲಕ ಅಥವಾ ಕೀಟಗಳ ಗಾಯಗಳ ಮೂಲಕ ಅಂಗಾಂಶಗಳನ್ನು ಪ್ರವೇಶಿಸುತ್ತದೆ. ಕಾಯಿಲೆಯ ಬೆಳವಣಿಗೆಗೆ ಸೂಕ್ತ ತಾಪಮಾನ 20-27 °C ಆಗಿರುತ್ತದೆ. ಸಸಿ ಹಂತದಲ್ಲಿ ಮತ್ತು ಋತುವಿನ ಕೊನೆಯಲ್ಲಿ ಎಲೆಗಳು ಪ್ರಬುದ್ಧವಾದಾಗ ಸಸ್ಯಗಳು ಅತ್ಯಂತ ಸುಲಭವಾಗಿ ರೋಗಕ್ಕೆ ಒಳಗಾಗುತ್ತವೆ. ಮಳೆಗಾಲದ ನಂತರದ ಅವಧಿಯಲ್ಲಿ ನೀರಾವರಿ ಮಾಡಲಾದ ಸೋಯಾಬೀನ್ ಬೆಳೆಗಳಲ್ಲಿ ಈ ರೋಗವು ಮುಖ್ಯವಾಗಿರುತ್ತದೆ ಮತ್ತು ಸಸ್ಯಕ್ಕೆ ಸಂಬಂಧಿಸಿದ ಸಸ್ಯಕ ಅಥವಾ ಪೋಷಕಾಂಶದ ಒತ್ತಡದಿಂದಾಗಿ ಹೆಚ್ಚಾಗುತ್ತದೆ.


ಮುಂಜಾಗ್ರತಾ ಕ್ರಮಗಳು

  • ಸಾಧ್ಯವಾದರೆ ಪ್ರಮಾಣಿತ ಮೂಲಗಳಿಂದ ಉತ್ತಮ ಗುಣಮಟ್ಟದ, ಆರೋಗ್ಯಕರ ಬೀಜಗಳನ್ನು ಬಳಸಿ.
  • ನಿಮ್ಮ ಪ್ರದೇಶದಲ್ಲಿ ನಿರೋಧಕ ಪ್ರಭೇದಗಳಿವೆಯೇ ಎಂದು ಪರಿಶೀಲಿಸಿ.
  • ಉತ್ತಮವಾಗಿ ಗಾಳಿಯಾಡಲು ಅವಕಾಶವಾಗುವಂತೆ ನಾಟಿ ಮಾಡುವಾಗ ಸಸ್ಯಗಳ ನಡುವೆ ಸಾಕಷ್ಟು ಜಾಗವನ್ನು ಬಿಡಿ.
  • ರೋಗದ ಚಿಹ್ನೆಗಳಿಗಾಗಿ ನಿಯಮಿತವಾಗಿ ಹೊಲದ ಮೇಲ್ವಿಚಾರಣೆ ಮಾಡಿ, ವಿಶೇಷವಾಗಿ ಕಾಯಿಲೆಗೆ ಅನುಕೂಲಕರವಾದ ಪರಿಸ್ಥಿತಿಗಳಿರುವಾಗ.
  • ಸೋಂಕಿತ ಸಸ್ಯಗಳನ್ನು ತೆಗೆದುಹಾಕಿ ಮತ್ತು ಸುತ್ತಮುತ್ತ ಬೆಳದಿರುವ ಸಸ್ಯಗಳನ್ನು ಕಿತ್ತು ಸಂಗ್ರಹಿಸಿ.
  • ಹೊಲದಲ್ಲಿ ಮತ್ತು ಸುತ್ತಲಿನಲ್ಲಿ ಕಳೆಗಳನ್ನು ತೆಗೆದುಹಾಕಿ.
  • ಎಲೆಗಳು ತೇವವಾಗಿದ್ದಾಗ ಹೊಲದಲ್ಲಿ ಕೆಲಸ ಮಾಡುವುದನ್ನು ತಪ್ಪಿಸಿ.
  • ಸುಗ್ಗಿಯ ನಂತರ ಹೊಲದಿಂದ ಬೆಳೆಯ ಉಳಿಕೆಗಳನ್ನು ನಾಶಮಾಡಿ.
  • ಕನಿಷ್ಠ ಮೂರು ವರ್ಷಗಳ ಕಾಲ ರೋಗಕ್ಕೆ ಒಳಗಾಗದ ಬೆಳೆಗಳೊಂದಿಗೆ ಬೆಳೆ ಸರದಿ ಯೋಜನೆ ಮಾಡಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ