Colletotrichum spp.
ಶಿಲೀಂಧ್ರ
ಬೆಳೆಯ ವಿಧ, ಪ್ರಭೇದ ಮತ್ತು ಪರಿಸರ ಪರಿಸ್ಥಿತಿಗಳು ರೋಗಲಕ್ಷಣಗಳ ತೀವ್ರತೆಯನ್ನು ಪ್ರಭಾವಿಸುತ್ತವೆ. ಬೂದು ಬಣ್ಣದಿಂದ ಕಂದು ಬಣ್ಣದ ಗಾಯಗಳು ಎಲೆಗಳು, ಕಾಂಡಗಳು, ಬೀಜಕೋಶಗಳು ಅಥವಾ ಹಣ್ಣುಗಳ ಮೇಲೆ ಕಾಣಿಸಿಕೊಳ್ಳುತ್ತವೆ. ಈ ತಾಣಗಳು ವೃತ್ತಾಕಾರ, ಅಂಡಾಕಾರ ಅಥವಾ ಅನಿಯಮಿತ ಆಕಾರದಲ್ಲಿರಬಹುದು ಮತ್ತು ಗಾಡ ಕಂದು, ಕೆಂಪು ಅಥವಾ ನೇರಳೆ ಅಂಚುಗಳೊಂದಿಗೆ ಇರಬಹುದು. ಅನುಕೂಲಕರ ಹವಾಮಾನ ಪರಿಸ್ಥಿತಿಗಳಲ್ಲಿ, ಅವು ಹೆಚ್ಚು ಸಂಖ್ಯೆಯಲ್ಲಿರುತ್ತವೆ, ಹಿಗ್ಗುತ್ತವೆ ಮತ್ತು ಒಗ್ಗೂಡುತ್ತವೆ. ಈ ಪ್ರಕ್ರಿಯೆಯಲ್ಲಿ ಗಾಢ ಕಂದು ಅಥವಾ ಕಪ್ಪು ಬಣ್ಣಕ್ಕೆ ತಿರುಗುತ್ತವೆ. ಅವುಗಳ ಕೇಂದ್ರವು ಕ್ರಮೇಣ ಬೂದು ಬಣ್ಣದ್ದಾಗುತ್ತದೆ ಮತ್ತು ಸೋಂಕಿನ ನಂತರದ ಹಂತಗಳಲ್ಲಿ, ಇದು ಸಣ್ಣ ಚದುರಿದ ಕಪ್ಪು ಮಚ್ಚೆಗಳನ್ನು ತೋರಿಸುತ್ತದೆ. ಕೆಲವು ಬೆಳೆಗಳಲ್ಲಿ ಎಲೆಗಳ ಮಧ್ಯದಲ್ಲಿನ ಕೆಂಪು ಬಣ್ಣವು ಸಾಮಾನ್ಯವಾಗಿದೆ. ತೀವ್ರತರವಾದ ಪ್ರಕರಣಗಳಲ್ಲಿ, ಎಲೆಗಳು ಬಾಡುತ್ತವೆ, ಒಣಗುತ್ತವೆ ಮತ್ತು ಉದುರಿಹೋಗುತ್ತವೆ. ಇದರಿಂದಾಗಿ ಸಸ್ಯದ ಎಲೆಗಳು ಅಕಾಲಿಕವಾಗಿ ಉದುರುತ್ತವೆ. ಕಾಂಡಗಳ ಮೇಲೆ, ಗಾಯಗಳು ಉದ್ದವಾಗಿರುತ್ತವೆ, ಗುಂಡಿ ಬಿದ್ದಿರುತ್ತವೆ ಮತ್ತು ಕಂದು ಬಣ್ಣದ್ದಾಗಿರುತ್ತವೆ. ಮತ್ತು ಗಾಢವಾದ ಅಂಚುಗಳನ್ನು ಹೊಂದಿರುತ್ತವೆ. ಅವು ದೊಡ್ಡದಾಗುತ್ತಿದ್ದಂತೆ, ಗಾಯಗಳು ಕಾಂಡದ ಬುಡವನ್ನು ಸುತ್ತುವರಿಯಬಹುದು. ಇದರಿಂದಾಗಿ ಸಸ್ಯವು ಬಾಡಿ, ನೆಲಕ್ಕೆ ಬಾಗಬಹುದು. ಕಾಂಡಗಳು ಅಥವಾ ಕೊಂಬೆಗಳ ಟಾಪ್ ಡೈಬ್ಯಾಕ್ ಸಹ ಸಾಮಾನ್ಯವಾಗಿದೆ.
ಬಿತ್ತನೆ ಮಾಡುವ ಮೊದಲು ಬೆಚ್ಚಗಿನ ನೀರಿನಲ್ಲಿ ಬೀಜಗಳನ್ನು ಮುಳುಗಿಸುವುದರಿಂದ (ತಾಪಮಾನ ಮತ್ತು ಸಮಯವು ಬೆಳೆಯನ್ನು ಅವಲಂಬಿಸಿರುತ್ತದೆ) ರೋಗ ಹರಡುವುದನ್ನು ತಡೆಯಬಹುದು. ಬೇವಿನ ಎಣ್ಣೆ ಸಿಂಪಡಿಸಬಹುದು. ಜೈವಿಕ ಏಜೆಂಟ್‌ಗಳು ಸೋಂಕನ್ನು ನಿಯಂತ್ರಿಸಲು ಸಹ ಸಹಾಯ ಮಾಡಬಹುದು. ಟ್ರೈಕೊಡರ್ಮಾ ಹಾರ್ಜಿಯಾನಮ್ ಮತ್ತು ಸ್ಯೂಡೋಮೊನಾಸ್ ಫ್ಲೋರೊಸೆನ್ಸ್, ಬ್ಯಾಸಿಲಸ್ ಸಬ್ಟಿಲಿಸ್ ಅಥವಾ ಬಿ. ಮೈಲೋಲಿಕ್ಫೆಸಿಯನ್ಸ್ ಎಂಬ ಶಿಲೀಂಧ್ರವನ್ನು ಆಧರಿಸಿದ ಉತ್ಪನ್ನಗಳನ್ನು ಬೀಜ ಚಿಕಿತ್ಸೆಯ ಭಾಗವಾಗಿ ಸಹ ಬಳಸಬಹುದು. ರೋಗಲಕ್ಷಣಗಳು ಪತ್ತೆಯಾದ ನಂತರ ಸಾವಯವವಾಗಿ ಅನುಮೋದಿತವಾದ ತಾಮ್ರದ ಸೂತ್ರೀಕರಣಗಳನ್ನು ಈ ಕಾಯಿಲೆಯ ವಿರುದ್ಧ ವಿವಿಧ ಬೆಳೆಗಳಲ್ಲಿ ಸಿಂಪಡಿಸಬಹುದು.
ಲಭ್ಯವಿದ್ದರೆ ಜೈವಿಕ ಚಿಕಿತ್ಸೆಗಳೊಂದಿಗೆ ತಡೆಗಟ್ಟುವ ಕ್ರಮಗಳಿರುವ ಸಂಯೋಜಿತ ವಿಧಾನವನ್ನು ಯಾವಾಗಲೂ ಪರಿಗಣಿಸಿ. ದಿನದ ಆರಂಭದಲ್ಲೇ ಸಿಂಪಡಣೆ ಮಾಡಿ ಮತ್ತು ಬಿಸಿಲಿನ ಹವಾಮಾನಗಳಲ್ಲಿ ಸಿಂಪಡಣೆ ಮಾಡಬೇಡಿ. ಬಿತ್ತನೆಗೆ ಮೊದಲು ಬೀಜಗಳನ್ನು ಚಿಕಿತ್ಸೆಗೆ ಒಳಪಡಿಸಿ. ಬೀಜ ಬಿತ್ತನೆ ಮಾಡುವ ಮೊದಲು ಶಿಲೀಂಧ್ರಗಳನ್ನು ಕೊಲ್ಲಲು ಬೀಜ ಚಿಕಿತ್ಸೆ ಬಳಸಬಹುದು. ಸೋಂಕಿನ ಅಪಾಯವನ್ನು ಕಡಿಮೆ ಮಾಡಲು ಅಜಾಕ್ಸಿಸ್ಟ್ರೋಬಿನ್, ಬೊಸ್ಕಾಲಿಡ್, ಕ್ಲೋರೊಥಲೋನಿಲ್, ಮಾನೆಬ್, ಮ್ಯಾಂಕೋಜೆಬ್ ಅಥವಾ ಪ್ರೋಥಿಯೊಕೊನಜೋಲ್ ಅನ್ನು ಒಳಗೊಂಡಿರುವ ಶಿಲೀಂಧ್ರನಾಶಕಗಳನ್ನು ತಡೆಗಟ್ಟುವ ರೀತಿಯಲ್ಲಿ ಸಿಂಪಡಿಸಬಹುದು (ದಯವಿಟ್ಟು ನಿಮ್ಮ ಬೆಳೆಗೆ ನಿರ್ದಿಷ್ಟ ಸೂತ್ರೀಕರಣ ಮತ್ತು ಶಿಫಾರಸುಗಳನ್ನು ಪರಿಶೀಲಿಸಿ). ಈ ಕೆಲವು ಉತ್ಪನ್ನಗಳಿಗೆ ಪ್ರತಿರೋಧಕತೆ ಕಂಡುಬಂದಿರುವ ಕೆಲವು ಪ್ರಕರಣಗಳು ವರದಿಯಾಗಿವೆ. ಕೆಲವು ಬೆಳೆಗಳಲ್ಲಿ, ಯಾವುದೇ ಪರಿಣಾಮಕಾರಿ ಚಿಕಿತ್ಸೆಗಳು ಲಭ್ಯವಿಲ್ಲ. ಅಂತಿಮವಾಗಿ, ವಿದೇಶಕ್ಕೆ ರವಾನೆಯಾಗುವ ಹಣ್ಣುಗಳಲ್ಲಿ ರೋಗ ಪ್ರಮಾಣವನ್ನು ಕಡಿಮೆ ಮಾಡಲು ಸುಗ್ಗಿಯ ನಂತರದ ಚಿಕಿತ್ಸೆಗಳೊಂದಿಗೆ ಆಹಾರ-ದರ್ಜೆಯ ಮೇಣಗಳನ್ನು ಹಚ್ಚಬಹುದು.
ಕೊಲೆಟೊಟ್ರಿಚಮ್ ಸ್ಪೀಷಿಸ್ ನ ಹಲವಾರು ಜಾತಿಯ ಶಿಲೀಂಧ್ರಗಳಿಂದ ರೋಗಲಕ್ಷಣಗಳು ಉಂಟಾಗುತ್ತವೆ. ಅವು ಮಣ್ಣಿನಲ್ಲಿ, ಬೀಜಗಳಿಗೆ ಸಂಬಂಧಿಸಿದ, ಅಥವಾ ಸಸ್ಯದ ಭಗ್ನಾವಶೇಷಗಳು ಮತ್ತು ಪರ್ಯಾಯ ಆತಿಥೇಯ ಸಸ್ಯಗಳ ಮೇಲೆ ನಾಲ್ಕು ವರ್ಷಗಳವರೆಗೆ ಬದುಕಿರುತ್ತವೆ. ಸೋಂಕನ್ನು ಹೊಸ ಸಸ್ಯಗಳಿಗೆ ಕೊಂಡೊಯ್ಯಲು ಎರಡು ಮಾರ್ಗಗಳಿವೆ. ಮಣ್ಣಿನ- ಅಥವಾ ಬೀಜದಿಂದ ಹರಡುವ ಬೀಜಕಗಳು ಮೊಳಕೆಯೊಡೆಯುವ ಸಮಯದಲ್ಲಿ ಸಸಿಗಳಿಗೆ ಸೋಂಕು ತಗುಲಿಸಿದಾಗ, ಅಂಗಾಂಶಗಳಲ್ಲಿ ವ್ಯವಸ್ಥಿತವಾಗಿ ಬೆಳೆದು ಪ್ರಾಥಮಿಕ ಸೋಂಕು ಸಂಭವಿಸುತ್ತದೆ. ಇತರ ಸಂದರ್ಭಗಳಲ್ಲಿ, ಬೀಜಕಗಳು ಮಳೆ ಹನಿಗಳಿಂದ ಕೆಳಗಿನ ಎಲೆಗಳ ಮೇಲೆ ಚಿಮುಕಿಸಲ್ಪಡುತ್ತವೆ ಮತ್ತು ಮೇಲಕ್ಕೆ ಹರಡುವ ಸೋಂಕು ಪ್ರಾರಂಭವಾಗುತ್ತದೆ. ಎಲೆ ಅಥವಾ ಹಣ್ಣಿನ ಗಾಯಗಳಲ್ಲಿ ಉತ್ಪತ್ತಿಯಾಗುವ ಬೀಜಕಗಳನ್ನು ಮಳೆಯ ಹನಿಗಳು, ಇಬ್ಬನಿ, ಹೀರುವ ಕೀಟಗಳು ಅಥವಾ ಹೊಲದ ಕಾರ್ಮಿಕರು, ಮೇಲಿನ ಸಸ್ಯ ಭಾಗಗಳಿಗೆ ಅಥವಾ ಇತರ ಸಸ್ಯಗಳಿಗೆ ಹರಡಿದಾಗ ದ್ವಿತೀಯಕ ಸೋಂಕುಗಳು ಪ್ರಾರಂಭವಾಗುತ್ತವೆ. ತಂಪಾದ ಬೆಚ್ಚಗಿನ ತಾಪಮಾನಗಳು (20 ರಿಂದ 30 ° C ಸೂಕ್ತ), ಹೆಚ್ಚಿನ ಪಿಹೆಚ್ ಹೊಂದಿರುವ ಮಣ್ಣು, ದೀರ್ಘಕಾಲದ ಎಲೆಗಳ ತೇವ, ಆಗಾಗ್ಗೆ ಮಳೆ ಬೀಳುವುದು ಮತ್ತು ದಟ್ಟವಾದ ಮೇಲಾವರಣಗಳು ರೋಗಕ್ಕೆ ಅನುಕೂಲಕರವಾಗಿವೆ. ಸಮತೋಲಿತ ರಸಗೊಬ್ಬರ ಬಳಕೆ ಬೆಳೆಗಳು ಆಂಥ್ರಾಕ್ನೋಸ್ ಗೆ ಒಳಗಾಗುವುದನ್ನು ಕಡಿಮೆ ಮಾಡುತ್ತದೆ.