Pythium spp.
ಶಿಲೀಂಧ್ರ
ಸಸಿ ಸಾಯುವ ರೋಗವು ಸಸಿಯ ಬೆಳವಣಿಗೆಯ ಸಮಯದಲ್ಲಿ ಎರಡು ಹಂತಗಳಲ್ಲಿ ಬರಬಹುದು, ಸಸಿ ಚಿಗುರುವ ಮುನ್ನ ಮತ್ತು ಸಸಿ ಚಿಗುರಿದ ನಂತರ. ಸಸಿ ಚಿಗುರುವ ಮೊದಲಿನ ಹಂತದಲ್ಲಿ, ಬಿತ್ತನೆ ಮಾಡಿದ ಕೂಡಲೇ ಶಿಲೀಂಧ್ರವು ಬೀಜಗಳನ್ನು ಆಕ್ರಮಿಸುತ್ತದೆ ಮತ್ತು ಇದರಿಂದ ಬೀಜಗಳು ಕೊಳೆಯುತ್ತವೆ ಮತ್ತು ಚಿಗುರೊಡೆಯುವುದಕ್ಕೆ ಅಡ್ಡಿಯಾಗುತ್ತದೆ. ಸಸಿ ಚಿಗುರಿದ ನಂತರದ ಹಂತದಲ್ಲಿ, ಸಸಿ ಬೆಳವಣಿಗೆ ಸರಿಯಾಗಿ ಆಗುವುದಿಲ್ಲ ಮತ್ತು ಕಾಂಡದ ತಳಭಾಗವು ಕೊಳೆಯಲು ಆರಂಭವಾಗುತ್ತದೆ. ಇದರಿಂದ ಕಾಂಡಗಳು ಮೃದು ಮತ್ತು ಗೊಣ್ಣೆಯಂತಾಗಿ ನೀರಿನಲ್ಲಿ-ನೆನೆಸಿದಂತೆ, ಬೂದು, ಕಂದು ಅಥವಾ ಕಪ್ಪು ಬಣ್ಣಕ್ಕೆ ಬದಲಾಗುತ್ತವೆ. ಎಳೆ ಸಸ್ಯಗಳು ಕ್ಲೋರೋಟಿಕ್(ಹಸಿರು ಬಣ್ಣ ಕಳೆದುಕೊಳ್ಳುತ್ತವೆ) ಆಗುತ್ತವೆ ಮತ್ತು ಬಾಡುತ್ತಾ ಮಣ್ಣಿನ ಮೇಲೆ ಬೀಳುತ್ತವೆ. ಅವು ಬಿದ್ದಿರುವುದನ್ನು ನೋಡಿದರೆ ಅವುಗಳನ್ನು ತಳದಲ್ಲಿ ಕತ್ತರಿಸಿದಂತೆ ಕಂಡುಬರುತ್ತವೆ. ಮಣ್ಣಿನ ಮೇಲ್ಮೈ ಮತ್ತು ಸತ್ತ ಸಸ್ಯಗಳ ಮೇಲೆ ಬಿಳಿ ಅಥವಾ ಬೂದುಬಣ್ಣದ ಬೂಸ್ಟು-ಬೆಳವಣಿಗೆ ಕಾಣಿಸಬಹುದು. ಸಸಿ ನಷ್ಟವು ತೀವ್ರವಾಗಿದ್ದರೆ, ಮತ್ತೊಮ್ಮೆ ನೆಡುವುದು ಅಗತ್ಯವಾಗಬಹುದು.
ಶಿಲೀಂಧ್ರಗಳಾದ ಟ್ರೈಕೋಡರ್ಮಾ ವೈರಿಡ್, ಬ್ಯೂವರ್ರಿಯಾ ಬಾಸ್ಸಿನಾ ಅಥವಾ ಬ್ಯಾಕ್ಟೀರಿಯಾಗಳಾದ ಸೂಡೊಮೊನಾಸ್ ಫ್ಲೋರೊಸೆನ್ಸ್ ಮತ್ತು ಬ್ಯಾಸಿಲಸ್ ಸಬ್ಟಿಲಿಸ್ಗಳನ್ನು ಆಧರಿಸಿದ ಜೈವಿಕ ಶಿಲೀಂಧ್ರನಾಶಕಗಳನ್ನು ಬಳಸಿಕೊಂಡು ಬೀಜ ಚಿಕಿತ್ಸೆ ಮಾಡಬಹುದು ಅಥವಾ ನಾಟಿ ಮಾಡುವ ಸಮಯದಲ್ಲಿ ಬೇರಿನ ವಲಯದ ಸುತ್ತಲೂ ಅದನ್ನು ಹಾಕುವ ಮೂಲಕ ಸಸಿ ಚಿಗುರುವ ಮುನ್ನ ಬರುವ ಸಾಯುವ ರೋಗವನ್ನು ತಡೆಗಟ್ಟಬಹುದು ಅಥವಾ ನಿಯಂತ್ರಿಸಬಹುದು. ಕೆಲವು ಸಂದರ್ಭಗಳಲ್ಲಿ, ತಾಮ್ರದ ಆಕ್ಸಿಕ್ಲೋರೈಡ್ ಅಥವಾ ಬೋರ್ಡೆಕ್ಸ್ ಮಿಶ್ರಣ ಗಳಂತಹ ತಾಮ್ರದ ಶಿಲೀಂಧ್ರನಾಶಕಗಳ ಸಹಾಯದಿಂದ ಬೀಜಗಳ ಮುಂಜಾಗ್ರತಾ ಚಿಕಿತ್ಸೆಯು ರೋಗದ ಸಂಭವನೀಯತೆಯನ್ನು ಮತ್ತು ತೀವ್ರತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಯುಪಟೋರಿಯಮ್ ಕ್ಯಾನಬಿನಮ್ ಸಸ್ಯದ ಸಾರಗಳನ್ನು ಆಧರಿಸಿ ಮನೆಯಲ್ಲಿ ತಯಾರಿಸಿದ ದ್ರಾವಣಗಳು ಶಿಲೀಂಧ್ರದ ಬೆಳವಣಿಗೆಯನ್ನು ಸಂಪೂರ್ಣವಾಗಿ ಪ್ರತಿಬಂಧಿಸುತ್ತವೆ. "ಹೊಗೆ-ನೀರು" ಅನ್ನು (ಸಸ್ಯ ವಸ್ತುವನ್ನು ಸುಟ್ಟು ನೀರಿನಲ್ಲಿ ಅದರ ಹೊಗೆಯನ್ನು ಕರಗಿಸುವ ಮೂಲಕ ತಯಾರಿಸಲಾಗುತ್ತದೆ) ಬಳಸಿ ಮಾಡಿದ ನೀರಾವರಿ ಸಹ ಶಿಲೀಂಧ್ರದ ಮೇಲೆ ಪರಿಣಾಮ ಬೀರುತ್ತದೆ.
ಯಾವಾಗಲೂ ಜೈವಿಕ ಚಿಕಿತ್ಸೆಗಳು ಲಭ್ಯವಿದ್ದರೆ ಅದರ ಜೊತೆ ನಿರೋಧಕ ಕ್ರಮಗಳನ್ನು ಒಟ್ಟುಗೂಡಿಸಿ ಸಮಗ್ರವಾದ ಮಾರ್ಗವನ್ನು ಪರಿಗಣಿಸಿ. ಮುಂಜಾಗ್ರತಾ ಕ್ರಮಗಳು ಮತ್ತು ಕೃಷಿ ಕೆಲಸದ ಸಮಯದಲ್ಲಿ ಎಚ್ಚರಿಕೆಯ ಕಾರ್ಯಾಚರಣೆಯು ರೋಗವನ್ನು ತಡೆಗಟ್ಟುವ ಉತ್ತಮ ಮಾರ್ಗಗಳಾಗಿವೆ. ಸಸಿ ಸಾಯುವ ರೋಗದ ಇತಿಹಾಸ ಇರುವ ಭೂಮಿ ಅಥವಾ ಒಳಚರಂಡಿ ಸಮಸ್ಯೆಗಳಿದ್ದ ಜಾಗಗಳಲ್ಲಿ ಶಿಲೀಂಧ್ರನಾಶಕಗಳನ್ನು ಮುಂಜಾಗ್ರತಾ ಕ್ರಮವಾಗಿ ಪರಿಗಣಿಸಬಹುದು. ಮೆಟಾಕ್ಸಿಲ್ - ಎಂ ಅನ್ನು ಬಳಸಿ ಬೀಜ ಚಿಕಿತ್ಸೆ ಮಾಡಿದರೆ ಸಸಿ ಚಿಗುರುವ ಮುನ್ನ ಬರುವ ಸಾಯುವ ರೋಗವನ್ನು ತಡೆಗಟ್ಟಬಹುದು ಅಥವಾ ನಿಯಂತ್ರಿಸಬಹುದು. ಮೋಡ ಕವಿದ ವಾತಾವರಣದಲ್ಲಿ ಕ್ಯಾಫ್ಟಾನ್ ಅನ್ನು 31.8ಶೇ ದರದಲ್ಲಿ ಅಥವಾ ಮೆಟಲಾಕ್ಸಿಲ್-ಎಮ್ ಅನ್ನು 75 ಶೇ ದರದಲ್ಲಿ ಎಲೆಗಳ ಮೇಲೆ ಸಿಂಪಡಿಸಬಹುದು. ನಾಟಿ ಮಾಡಿದಂದಿನಿಂದ ಮಣ್ಣು ಅಥವಾ ಸಸ್ಯದ ತಳಭಾಗವನ್ನು ತಾಮ್ರದ ಆಕ್ಸಿಕ್ಲೋರೈಡ್ ಅಥವಾ ಕ್ಯಾಫ್ಟಾನ್ ನಿಂದ ಪ್ರತೀ ಹದಿನೈದು ದಿನಗಳಿಗೊಮ್ಮೆ ನೆನೆಸಬಹುದು.
ಸಾಯುವ ರೋಗ (ಡ್ಯಾಂಪಿಂಗ್-ಆಫ್) ಎನ್ನುವುದು ಹಲವಾರು ಬೆಳೆಗಳ ಮೇಲೆ ಪರಿಣಾಮ ಬೀರಬಹುದು ಮತ್ತು ಪೈಥಿಯಂ ಎಂಬ ಶಿಲೀಂಧ್ರಗಳಿಂದ ಉಂಟಾಗುತ್ತದೆ. ಇದು ಮಣ್ಣು ಅಥವಾ ಸಸ್ಯದ ಉಳಿಕೆಗಳಲ್ಲಿ ಹಲವಾರು ವರ್ಷಗಳವರೆಗೆ ಬದುಕಬಲ್ಲದು. ಈ ರೋಗಕಾರಕಗಳು ನೆಲದಲ್ಲಿ ಇರುತ್ತವೆ ಮತ್ತು ವಾತಾವರಣವು ಆರ್ದ್ರವಾಗಿದ್ದಾಗ, ಎಲೆಯ ಮೇಲಾವರಣಗಳು ದಟ್ಟವಾಗಿದ್ದಾಗ ಮತ್ತು ಮಣ್ಣು ತಂಪು ಮತ್ತು ತೇವವಾಗಿದ್ದಾಗ ಹೊರಬಂದು ಬದುಕುತ್ತವೆ. ನೀರು ನಿಲ್ಲುವುದು ಅಥವಾ ಹೆಚ್ಚಿನ ಸಾರಜನಕ ರಸಗೊಬ್ಬರ ಬಳಕೆಯಂತಹ ಒತ್ತಡದ ಪರಿಸ್ಥಿತಿಗಳು, ಸಸ್ಯಗಳನ್ನು ದುರ್ಬಲಗೊಳಿಸುತ್ತವೆ ಮತ್ತು ರೋಗದ ಬೆಳವಣಿಗೆಗೆ ಸಹಕಾರಿಯಾಗುತ್ತದೆ. ಕಲುಷಿತವಾದ ಉಪಕರಣಗಳು ಅಥವಾ ಸಲಕರಣೆಗಳು ಮತ್ತು ಬಟ್ಟೆಗಳು ಅಥವಾ ಶೂಗಳ ಮೇಲಿರುವ ಮಣ್ಣಿನ ಮೂಲಕ ಬೀಜಕಗಳು ಹರಡುತ್ತವೆ. ಇವು ಸಸ್ಯಗಳ ಇಡೀ ಜೀವನ ಚಕ್ರದಲ್ಲಿ ಬೆಳೆಗಳ ಮೇಲೆ ಆಕ್ರಮಣ ಮಾಡಬಹುದಾದರೂ, ಮೊಳಕೆಯೊಡೆಯುವ ಬೀಜಗಳು ಅಥವಾ ಎಳೆ ಸಸಿಗಳು ಈ ರೋಗಕ್ಕೆ ಹೆಚ್ಚು ಸೂಕ್ಷ್ಮವಾಗಿರುತ್ತವೆ. ಈ ರೋಗವು ಅದೇ ಜಾಗದಲ್ಲಿ ಒಂದು ಋತುವಿನಿಂದ ಇನ್ನೊಂದಕ್ಕೆ ಹರಡುವುದಿದಿಲ್ಲ, ಆದರೆ ಪರಿಸ್ಥಿತಿಗಳು ಸೋಂಕಿಗೆ ಎಲ್ಲಿ ಮತ್ತು ಯಾವಾಗ ಅನುಕೂಲಕರವಾಗುತ್ತದೋ ಅಲ್ಲಿ ಕಾಣಿಸಿಕೊಳ್ಳುತ್ತವೆ.