Phyllachora maydis
ಶಿಲೀಂಧ್ರ
ಮೊದಲ ರೋಗಲಕ್ಷಣಗಳೆಂದರೆ ಸಣ್ಣ, ಉಬ್ಬಿದ ಹಳದಿ-ಕಂದು ಬಣ್ಣದ ಚುಕ್ಕೆಗಳು. ಇವುಗಳ ಮಧ್ಯೆ ಕಪ್ಪು ಕೇಂದ್ರಗಳಿದ್ದು ಎಲೆಗಳ ಎರಡು ಬದಿಗಳಲ್ಲೂ ಇರುತ್ತವೆ. ಕಲೆಗಳು ವೃತ್ತಾಕಾರದ, ಕಂದುಬಣ್ಣದ ಗಾಯಗಳಿಂದ ಸುತ್ತುವರೆದಿರಬಹುದು, ಇದನ್ನು ಸಾಮಾನ್ಯವಾಗಿ "ಮೀನು-ಕಣ್ಣು" ಎಂದು ಕರೆಯಲಾಗುತ್ತದೆ. ವೃತ್ತಾಕಾರದ, ಅಂಡಾಕಾರದ, ಕೆಲವೊಮ್ಮೆ ಕೋನೀಯ ಅಥವಾ ಅನಿಯಮಿತ ಚುಕ್ಕೆಗಳು ಒಗ್ಗೂಡಿ 10 ಮಿಮೀ ಉದ್ದದ ಪಟ್ಟೆಗಳನ್ನು ರೂಪಿಸುತ್ತವೆ. ಇಡೀ ಎಲೆಯು ಚುಕ್ಕೆಗಳಿಂದ ಮುಚ್ಚಲ್ಪಡುತ್ತದೆ ಮತ್ತು ಸುತ್ತಮುತ್ತಲಿನ ಎಲೆಗಳು ಒಣಗುತ್ತವೆ. ರೋಗಲಕ್ಷಣಗಳು ಕೆಳಗಿನ ಎಲೆಗಳಲ್ಲಿ ಕಾಣಿಸಿಕೊಳ್ಳುತ್ತವೆ ಮತ್ತು ಮೇಲಿನ ಎಲೆಗಳಿಗೆ ಹರಡುತ್ತವೆ. ತೀವ್ರವಾದ ಮುತ್ತುವಿಕೆಯ ಸಂದರ್ಭದಲ್ಲಿ ಚುಕ್ಕೆಗಳು ಹೊಟ್ಟು ಮತ್ತು ಎಲೆಗಳ ಕವಚಗಳ ಮೇಲೂ ಕಾಣಿಸಿಕೊಳ್ಳುತ್ತವೆ. 21 ರಿಂದ 30 ದಿನಗಳ ನಂತರ ಎಲೆಗಳು ಸಂಪೂರ್ಣವಾಗಿ ಸಾಯಬಹುದು. ಇದು ಬೆಳೆಯ ಮಾರುಕಟ್ಟೆ ಸಾಧ್ಯತೆಯಲ್ಲಿನ ಇಳಿಕೆಗೆ ಕಾರಣವಾಗುತ್ತದೆ.
ಈ ರೋಗದ ವಿರುದ್ಧ ಯಾವುದೇ ಜೈವಿಕ ನಿಯಂತ್ರಣ ಪರಿಹಾರವು ಲಭ್ಯವಿಲ್ಲವೆಂದು ಕಾಣುತ್ತದೆ. ನಿಮಗೆ ಯಾವುದಾದರೂ ತಿಳಿದಿದ್ದರೆ ದಯವಿಟ್ಟು ನಮ್ಮನ್ನು ಸಂಪರ್ಕಿಸಿ.
ಲಭ್ಯವಿದ್ದಲ್ಲಿ ಜೈವಿಕ ಚಿಕಿತ್ಸೆಗಳ ಜೊತೆಗೆ ತಡೆಗಟ್ಟುವ ಕ್ರಮಗಳಿರುವ ಸಂಯೋಜಿತ ವಿಧಾನವನ್ನು ಯಾವಾಗಲೂ ಪರಿಗಣಿಸಿ. ಇಂದಿನವರೆಗೆ, ಈ ರೋಗಕ್ಕೆ ಯಾವುದೇ ರಾಸಾಯನಿಕ ಚಿಕಿತ್ಸೆ ತಿಳಿದಿಲ್ಲ. ನಿಮಗೆ ಯಾವುದಾದರೂ ತಿಳಿದಿದ್ದರೆ ದಯವಿಟ್ಟು ನಮ್ಮನ್ನು ಸಂಪರ್ಕಿಸಿ.
ಮೂರು ಶಿಲೀಂಧ್ರಗಳ ಜಾತಿಗಳ ಪರಸ್ಪರ ಕ್ರಿಯೆಯಿಂದ ರೋಗಲಕ್ಷಣಗಳು ಉಂಟಾಗುತ್ತವೆ: ಫಿಲಾಚೋರಾ ಮೇಡಿಸ್, ಮೊನೊಗ್ರಾಫೆಲ್ಲಾ ಮೇಡಿಸ್ ಮತ್ತು ಹೈಪರ್‌ಪ್ಯಾರಸೈಟ್ ಕೊನಿಯೊಥೈರಿಯಮ್ ಫೈಲಾಕೋರೆ. P. ಮೇಡಿಸ್‌ನಿಂದ ಸೋಂಕು ಉಂಟಾದ ಎರಡು ಅಥವಾ ಮೂರು ದಿನಗಳ ನಂತರ ಗಾಯಗಳು M. ಮೇಡಿಸ್‌ನಿಂದ ಆಕ್ರಮಿಸಲ್ಪಡುತ್ತವೆ. ಶಿಲೀಂಧ್ರವು ಸಸ್ಯದ ಅವಶೇಷಗಳಲ್ಲಿ 3 ತಿಂಗಳು ಅಥವಾ ಅದಕ್ಕಿಂತ ಹೆಚ್ಚು ಕಾಲ ಬದುಕಬಲ್ಲದು. ಬೀಜಕಗಳು ಗಾಳಿ ಮತ್ತು ಮಳೆಯಿಂದ ಹರಡುತ್ತವೆ. 16-20 ಡಿಗ್ರಿ ಸೆಲ್ಸಿಯಸ್‌ನ ತಂಪಾದ ತಾಪಮಾನ ಮತ್ತು ಹೆಚ್ಚಿನ ಸಾಪೇಕ್ಷ ಆರ್ದ್ರತೆಯು ರೋಗದ ಉಲ್ಬಣಕ್ಕೆ ಅನುಕೂಲಕರವಾಗಿದೆ. ಆದ್ದರಿಂದ ನದಿ ದಡದ ಸಮೀಪದಲ್ಲಿರುವ ಹೊಲಗಳು ಈ ರೋಗಕ್ಕೆ ತುತ್ತಾಗುತ್ತವೆ.