ಸೋಯಾಬೀನ್

ಸೋಯಾಬೀನಿನ ಕಾಂಡದ ಅಂಗಮಾರಿ ರೋಗ

Diaporthe phaseolorum var. sojae

ಶಿಲೀಂಧ್ರ

ಸಂಕ್ಷಿಪ್ತವಾಗಿ

  • ಕಾಂಡ, ಎಲೆತೊಟ್ಟು, ಮತ್ತು ಬೀಜಕೋಶಗಳಲ್ಲಿ ಗಾಢ ಚುಕ್ಕೆಗಳು ಸಾಲು ಸಾಲಾಗಿ ಮೂಡುತ್ತವೆ.
  • ಬೀಜದ ಮೇಲ್ಮೈಯಲ್ಲಿ ಬಣ್ಣ ಮತ್ತು ರಚನೆಯಲ್ಲಿ ಬಿಳಿ ಸೀಮೆಸುಣ್ಣದಂತೆ ಕಾಣುವ ಬೂಷ್ಟು ಗೋಚರಿಸುತ್ತದೆ.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ಸೋಯಾಬೀನ್

ರೋಗಲಕ್ಷಣಗಳು

ಈ ಸೋಂಕಿನ ಗಮನಾರ್ಹ ಲಕ್ಷಣವೆಂದರೆ ಪಿಕ್ನೀಡಿಯಾ. ಪಿಕ್ನೀಡಿಯಾವೆಂದರೆ ಶಿಲೀಂಧ್ರದ ಒಂದು ಭಾಗ, ಇದು ಬೀಜಕಗಳನ್ನು ಹೊತ್ತಿರುತ್ತದೆ. ಇದು ಚಿಕ್ಕದಾದ ಕಪ್ಪಗಿನ ಚುಕ್ಕೆಗಳ ರೂಪದಲ್ಲಿ ಕಾಂಡ, ಬೀಜಕೋಶ, ಮತ್ತು ನೆಲಕ್ಕೆ ಬಿದ್ದ ಎಲೆಗಳ ತೊಟ್ಟುಗಳಲ್ಲೆಲ್ಲ ಸಾಲುಸಾಲಾಗಿ ಬೆಳೆಯುತ್ತವೆ. ಸೋಂಕಿತ ಗಿಡದ ಮೇಲ್ಭಾಗವು ಹಳದಿ ಬಣ್ಣಕ್ಕೆ ತಿರುಗಿ ಸತ್ತು ಹೋಗಬಹುದು. ಸೋಂಕಿತ ಬೀಜಗಳು ಬಿರುಕೊಡೆದು, ಸುಕ್ಕುಗಟ್ಟಿ ಮಸುಕಾಗಿ ಕಾಣಬಹುದು ಮತ್ತು ಊದಾ ಬೂಷ್ಟಿನಿಂದ ಮುಚ್ಚಿಕೊಂಡಿರಬಹುದು. ಸೋಂಕು ತಗುಲಿದ ಭಾಗಗಳು ಅವಧಿಗೆ ಮೊದಲೇ ಸಾಯುತ್ತವೆ

ಶಿಫಾರಸುಗಳು

ಜೈವಿಕ ನಿಯಂತ್ರಣ

ಜೈವಿಕ ನಿಯಂತ್ರಣದ ಯಾವುದೇ ವಿಧಾನ ತಿಳಿದು ಬಂದಿಲ್ಲ. ಸೋಂಕಿನ ಸಾಧ್ಯತೆಯನ್ನು ಕಡಿಮೆ ಮಾಡುವ ಅಥವಾ ಅದರ ತೀವ್ರತೆಯನ್ನು ಕಡಿಮೆ ಮಾಡುವ ಯಾವುದಾದರೂ ವಿಧಾನ ಗೊತ್ತಿದ್ದರೆ, ದಯವಿಟ್ಟು ನಮಗೆ ತಿಳಿಸಿ.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದರೆ, ಸಾವಯವ ಚಿಕಿತ್ಸೆಗಳೊಂದಿಗೆ ನಿರ್ಬಂಧಕ ಮಾರ್ಗಗಳನ್ನು ಸೇರಿಸಿ ಸಮಗ್ರ ವಿಧಾನವನ್ನು ಮೊದಲು ಪರಿಗಣಿಸಿ. ಬೀಜ ಮೂಡುವ ಸಮಯದ ಶುರುವಿನಲ್ಲಿ ಎಲೆಗಳಿಗೆ ಸಿಂಪಡಿಸುವ ಶಿಲೀಂಧ್ರನಾಶಕಗಳನ್ನು ಉಪಯೋಗಿಸುವುದರಿಂದ ಬೀಜದ ಗುಣಮಟ್ಟವನ್ನು ಉಳಿಸಿಕೊಳ್ಳಬಹುದು. ಬೀಜಕೋಶ ಮೂಡಿದಾಗಿನಿಂದ ಕೊನೆಯ ಹಂತದವರೆಗೂ ಶಿಲೀಂಧ್ರನಾಶಕಗಳನ್ನು ಬಳಸುವುದರಿಂದ ಬೀಜ ಸೋಂಕಿನ ಸಂಭವವನ್ನು ಕಡಿಮೆ ಮಾಡುತ್ತದೆ. ಬೀಜಕ್ಕೆ ಸೋಂಕು ತಗುಲಿದ್ದಲ್ಲಿ ಬಿತ್ತನೆಗೆ ಮೊದಲು (ಬೆನೋಮಿಲ್‍ನಂತಹ ಶಿಲೀಂಧ್ರನಾಶಕಗಳಿಂದ) ಸಂಸ್ಕರಿಸಬೇಕು.

ಅದಕ್ಕೆ ಏನು ಕಾರಣ

ಡಯಾಪೋರ್ತೆ ಫಾಸಿಯೋಲೋರಮ್ ಎಂಬ ವರ್ಗದ ಶಿಲೀಂಧ್ರಗಳೇ ಈ ಸೋಂಕಿಗೆ ಕಾರಣ. ಇದನ್ನು ಫೊಮೋಸಿಸ್ ಸೋಜೇ ಎಂದು ಕೂಡ ಕರೆಯುತ್ತಾರೆ. ಸೋಂಕಿತ ಬೀಜ ಮತ್ತು ಬೆಳೆ ಶೇಷಗಳಲ್ಲಿ ಈ ಶಿಲೀಂಧ್ರವು ಬದುಕುತ್ತದೆ. ಸೋಂಕು ತಗುಲಿದ ಬೀಜಗಳು ಮುರುಟಿಕೊಳ್ಳುತ್ತವೆ, ಬಿರುಕೊಡೆಯುತ್ತವೆ, ಶಿಲೀಂಧ್ರದ ಮೈಸೀಲಿಯಮ್ಮಿನಿಂದ ಮುಚ್ಚಲ್ಪಟ್ಟಿರುತ್ತವೆ. ಸೋಂಕು ತೀವ್ರವಿದ್ದಲ್ಲಿ ಬೀಜ ಮೊಳಕೆಯೊಡೆಯದೆ ಇರಬಹುದು. ಬೀಜಕೋಶ ಬೆಳೆಯುವಾಗ ಮತ್ತು ಮಾಗುವ ಸಮಯದಲ್ಲಿ ಅದು ಬೆಚ್ಚಗಿನ, ಆರ್ದ್ರ ಹವೆಗೆ ಹೆಚ್ಚು ಕಾಲ ತೆರೆದುಕೊಂಡಿದ್ದಲ್ಲಿ ಸೋಂಕು ಬೀಜಕೋಶದಿಂದ ಬೀಜಕ್ಕೆ ವರ್ಗವಾಗುತ್ತದೆ. ಬೀಜಕೋಶವು ತುಂಬಿಕೊಳ್ಳುವ ಸಮಯದಲ್ಲಿ ತುಂಬಾ ಆರ್ದ್ರ ಹವೆಯಿದ್ದಲ್ಲಿ ಕಾಂಡಕ್ಕೆ ಸೋಂಕು ತಗುಲುವ ಸಾಧ್ಯತೆ ಹೆಚ್ಚು. ರೋಗಕಾರಕವು ಬೀಜದ ಗುಣಮಟ್ಟ ಕೆಡಿಸುತ್ತದೆ ಹಾಗೂ ತೀವ್ರ ಬೆಳೆಹಾನಿಗೆ ಕಾರಣವಾಗುತ್ತದೆ.


ಮುಂಜಾಗ್ರತಾ ಕ್ರಮಗಳು

  • ಉತ್ತಮ ಗುಣಮಟ್ಟದ ರೋಗಮುಕ್ತ ಬೀಜಗಳನ್ನು ಉಪಯೋಗಿಸಿ.
  • ಈ ರೋಗ ಹಿಂದೆಂದಾದರೂ ಕಾಣಿಸಿಕೊಂಡಿರುವ ಹೊಲದಲ್ಲಿ ಸಸಿ ನೆಡಬೇಡಿ.
  • ಬೀಜಕೋಶ ಮೂಡುವಾಗಿನಿಂದ ಬೆಳೆ ಮಾಗುವವರೆಗೆ ಪ್ರತಿ ಎರಡು ವಾರಕ್ಕೊಮ್ಮೆ ಗಿಡಗಳನ್ನು ಪರಶೀಲಿಸಿ.
  • ಪಿಗ್ವೀಡ್ ಮತ್ತು ವೆಲ್ವೆಟ್-ಲೀಫಿನಂಥ ಕಳೆಗಳು ಈ ಶಿಲೀಂಧ್ರಕ್ಕೆ ಆಶ್ರಯ ಕೊಡುತ್ತವೆ, ಅವು ಹೊಲದಲ್ಲಿ ಬೆಳೆಯದಂತೆ ನೋಡಿಕೊಳ್ಳಿ.
  • ಕುಯ್ಲು ತಡವಾದರೆ ಗಿಡಗಳು ತಣ್ಣಗಿನ ಮತ್ತು ತೇವಾಂಶವಿರುವ ವಾತಾವರಣಕ್ಕೆ ತೆರೆದುಕೊಳ್ಳುವುದರಿಂದಾಗಿ ಸೋಂಕಿನ ಸಾಧ್ಯತೆ ಹೆಚ್ಚುತ್ತದೆ.
  • ಸಮರ್ಪಕ ಉಳುಮೆ ಮತ್ತು ಸಮಯಕ್ಕೆ ಸರಿಯಾಗಿ ಕುಯ್ಲು ಮಾಡುವುದರಿಂದ ಸೋಂಕು ಪದಾರ್ಥದ ಪ್ರಮಾಣ ಕಡಿಮೆಯಾಗುತ್ತದೆ.
  • ಬೆಳೆ ಪರಿವರ್ತನೆ ಪದ್ಧತಿ ಬಳಸಿ ಜೋಳ ಮತ್ತು ಗೋಧಿಯಂತಹ ಬೆಳೆಗಳ ಜೊತೆ ಆವರ್ತಿಸಿ.
  • ಇವು ಈ ಶಿಲೀಂಧ್ರಕ್ಕೆ ಆಶ್ರಯ ಕೊಡುವುದಿಲ್ಲ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ