Gibberella fujikuroi
ಶಿಲೀಂಧ್ರ
ಪರಿಸರ ಸ್ಥಿತಿ ಮತ್ತು ರೋಗದ ತೀವ್ರತೆಯನ್ನು ಅವಲಂಬಿಸಿ ರೋಗಲಕ್ಷಣಗಳು ಬದಲಾಗಬಹುದು. ಸೋಂಕಿತ ಸಸ್ಯಗಳು ಅವುಗಳ ಅಸಹಜ ಎತ್ತರದಿಂದಾಗಿ ಸುಲಭವಾಗಿ ಪತ್ತೆಯಾಗುತ್ತವೆ. ಉದ್ದವಾಗಿ ಅಥವಾ ಕುಂಠಿತವಾಗಿ ಮತ್ತು ಮಸುಕಾಗಿ ಕಾಣುತ್ತವೆ. ಬೀಜಗಳ ಮೇಲೆ ಗಾಯಗಳು ಇರುತ್ತವೆ. ಕೊಳೆತ ಸ್ಥಿತಿ ಮತ್ತು ಮಂಕಾಗಿ ಕಾಣುತ್ತವೆ. ತೊಗಟೆಯ ಬಣ್ಣ ಕಳೆದುಕೊಳ್ಳುವಿಕೆ, ಮೋಲ್ಡ್ ಗಳ ಬೆಳವಣಿಗೆ, ಕುಂಠಿತ ಬೆಳೆವಣಿಗೆ ರೋಸೆಟ್ಟಿಂಗ್ ಲಕ್ಷಣಗಳು ಕಾಂಡಗಳಲ್ಲಿ ಕಂಡುಬರುತ್ತವೆ. ಎಲೆಗಳಲ್ಲಿ ಅಸಹಜ ಬಣ್ಣಗಳು ಮತ್ತು ಶಿಲೀಂಧ್ರಗಳ ಬೆಳವಣಿಗೆಯನ್ನು ಕಾಣಬಹುದು. ತೆನೆ ಭಾಗದಲ್ಲಿ ಕಪ್ಪು ಅಥವಾ ಕಂದು ಬಣ್ಣದ ಗಾಯಗಳು ಕಾಣುತ್ತವೆ ಮತ್ತು ತೆನೆ ಕೊಳೆತ ಕಾಣಬಹುದು. ಇಡೀ ಸಸ್ಯವು ಬಾಡಿ ಹೋಗುತ್ತದೆ ಮತ್ತು ಆರಂಭಿಕ ಮಾಗುವಿಕೆ ಮತ್ತು ಸಸಿ ರೋಗ ಕಂಡುಬರುತ್ತದೆ.
ರೋಗಕಾರಕವನ್ನು ಹರಡುವ ಕೀಟಗಳನ್ನು ನಿಯಂತ್ರಿಸಲು ಬೇವಿನ ಸಾರವನ್ನು ಸಿಂಪಡಿಸಿ. ರೋಗಕಾರಕವನ್ನು ನಿಗ್ರಹಿಸಲು ಟ್ರೈಕೊಡರ್ಮಾ ಎಸ್‌ಪಿಪಿಯಂತಹ ಜೈವಿಕ ನಿಯಂತ್ರಣ ಏಜೆಂಟ್‌ಗಳನ್ನು ಪರಿಚಯಿಸಿ. ಕಾಂಡದ ಕೊಳೆತವನ್ನು ನಿಯಂತ್ರಿಸುವಲ್ಲಿ ಸ್ಯೂಡೋಮೊನಾಸ್ ಫ್ಲುರೋಸೆನ್ಸ್ ಸಹ ಪರಿಣಾಮಕಾರಿಯಾಗಿದೆ. ಆ ಎರಡೂ ಪದಾರ್ಥಗಳನ್ನು ಬೀಜೋಪಚಾರವಾಗಿ ಮತ್ತು ಮಣ್ಣಿನ ಅನ್ವಯವಾಗಿ ಬಳಸಬಹುದು. 250 ಕೆಜಿ ಎಫ್‌ವೈಎಂನೊಂದಿಗೆ ಬೆಳೆಯನ್ನು ಬಲಪಡಿಸಿ.
ಲಭ್ಯವಿದ್ದಲ್ಲಿ ಜೈವಿಕ ಚಿಕಿತ್ಸೆಗಳೊಂದಿಗೆ ತಡೆಗಟ್ಟುವ ಕ್ರಮಗಳಿರುವ ಸಂಯೋಜಿತ ವಿಧಾನವನ್ನು ಯಾವಾಗಲೂ ಪರಿಗಣಿಸಿ. ಬೀಜಗಳನ್ನು ನಾಟಿ ಮಾಡುವ ಮೊದಲು ಮ್ಯಾಂಕೋಜೆಬ್ 50% ಮತ್ತು ಕಾರ್ಬೆಂಡಜಿಮ್ 25% ದ್ರಾವಣದೊಂದಿಗೆ ಬೆರೆಸಿ.
ಮಣ್ಣಿನಿಂದ ಹರಡುವ ಶಿಲೀಂಧ್ರ ಗಿಬ್ಬೆರೆಲ್ಲಾ ಫುಜಿಕುರಾಯ್‌ನಿಂದ ಈ ರೋಗ ಉಂಟಾಗುತ್ತದೆ. ರೋಗಕಾರಕ ಬೀಜಕಗಳು ಗಾಳಿ ಮತ್ತು ಮಳೆಯ ಮೂಲಕ ಹರಡುತ್ತವೆ ಮತ್ತು ಗಾಯಗಳ ಮೂಲಕ ಮೆಕ್ಕೆಜೋಳದ ತೆನೆಗಳನ್ನು ಪ್ರವೇಶಿಸುತ್ತದೆ. ಬೀಜಕ್ಕೆ ರೋಗ ತಗುಲುವ ಮೂಲಕ ಗಿಡಗಳಿಗೂ ತಗಲುತ್ತದೆ. ಆದರೆ ನಂತರದ ಹಂತಗಳಲ್ಲಿ ರೋಗಲಕ್ಷಣಗಳು ಗೋಚರಿಸುತ್ತವೆ. ಇದು ಬೀಜಗಳು, ಬೆಳೆ ಉಳಿಕೆಗಳು ಅಥವಾ ಹುಲ್ಲುಗಳಂತಹ ಪರ್ಯಾಯ ಆತಿಥೇಯ ಸಸ್ಯಗಳ ಮೇಲೆ ಉಳಿದುಕೊಂಡಿರುತ್ತದೆ. ಇದು ಸಿಲ್ಕ್ಸ್, ಬೇರುಗಳು ಮತ್ತು ಕಾಂಡಗಳ ಮೂಲಕ ಬೀಜಕದ ಮೂಲಕ ಹರಡುತ್ತದೆ. ಇದು ಮುಖ್ಯವಾಗಿ ಕೀಟಗಳಿಂದ ಉಂಟಾಗುವ ಗಾಯಗಳ ಮೂಲಕ ಜೋಳದ ತೆನೆ ಪ್ರವೇಶಿಸುತ್ತದೆ. ಇದು ಪ್ರವೇಶ ಬಿಂದುಗಳಿಂದ ಕಾಳುಗಳಲ್ಲಿ ಮೊಳಕೆಯೊಡೆಯುತ್ತದೆ ಮತ್ತು ಕ್ರಮೇಣ ಆಕ್ರಮಣ ಮಾಡುತ್ತದೆ. ಪರ್ಯಾಯವಾಗಿ, ಇದು ಸಸ್ಯವನ್ನು ಬೇರುಗಳಿಂದ ಆಕ್ರಮಣ ಮಾಡಲು ಪ್ರಾರಂಭಿಸಬಹುದು ಮತ್ತು ವ್ಯವಸ್ಥಿತವಾಗಿ ಬೆಳೆಯುತ್ತಾ ಸಸ್ಯದ ಮೇಲಕ್ಕೆ ಚಲಿಸಬಹುದು. ಪರಿಸರ (ಒತ್ತಡ) ಪರಿಸ್ಥಿತಿಗಳಲ್ಲಿ ಸಸ್ಯಗಳು ಸೋಂಕಿಗೆ ಒಳಗಾಗಬಹುದು, ಆದರೆ ಹವಾಮಾನವು ಬೆಚ್ಚಗಿರುವಾಗ (26-28 ° C) ಮತ್ತು ತೇವಾಂಶದಿಂದ ಕೂಡಿರುವಾಗ ಮತ್ತು ಸಸ್ಯಗಳು ಹೂಬಿಡುವ ಹಂತವನ್ನು ತಲುಪುವ ಸಮಯದಲ್ಲಿ ರೋಗಲಕ್ಷಣಗಳು ತೀವ್ರವಾಗಿರುತ್ತವೆ.