ಗೋಧಿ

ಆಲ್ಟರ್ನೇರಿಯಾ ಲೀಫ್ ಬ್ಲೈಟ್ (ಎಲೆ ರೋಗ)

Alternaria triticina

ಶಿಲೀಂಧ್ರ

ಸಂಕ್ಷಿಪ್ತವಾಗಿ

  • ಗೋಧಿ ಸಸ್ಯಗಳು 7-8 ವಾರಗಳಿದ್ದಾಗ ಈ ರೋಗ ಕಾಣಿಸಿಕೊಳ್ಳುತ್ತದೆ.
  • ಬೆಳೆ ಪಕ್ವವಾದಾಗ ಪರಿಸ್ಥಿತಿ ತೀವ್ರವಾಗುತ್ತದೆ.
  • ಸಣ್ಣ, ಅಂಡಾಕಾರದ, ಬಣ್ಣಬಣ್ಣದ ಗಾಯಗಳು ಎಲೆಗಳ ಮೇಲೆ ಅನಿಯಮಿತ ರೀತಿಯಲ್ಲಿ ಹರಡಿರುವುದನ್ನು ಕಾಣಬಹುದು.
  • ಗಾಯಗಳು ದೊಡ್ಡದಾಗುತ್ತಿದ್ದಂತೆ ಅವು ಗಾಢ ಕಂದು ಬಣ್ಣದಿಂದ ಬೂದು ಬಣ್ಣಕ್ಕೆ ತಿರುಗುತ್ತವೆ ಮತ್ತು ಅನಿಯಮಿತ ಆಕಾರದಲ್ಲಿರುತ್ತವೆ.
  • ಎಲೆಗಳು ಅಂತಿಮವಾಗಿ ಒಣಗುತ್ತವೆ.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ಗೋಧಿ

ರೋಗಲಕ್ಷಣಗಳು

ಎಳೆಯ ಸಸ್ಯಗಳು ರೋಗಕಾರಕಕ್ಕೆ ನಿರೋಧಕವಾಗಿರುತ್ತವೆ. ಕೆಳಭಾಗದ ಎಲೆಗಳು ಯಾವಾಗಲೂ ಸೋಂಕಿನ ಚಿಹ್ನೆಗಳನ್ನು ತೋರಿಸುತ್ತವೆ, ಅದು ಕ್ರಮೇಣ ಮೇಲಿನ ಎಲೆಗಳಿಗೆ ಹರಡುತ್ತದೆ. ಸೋಂಕು ಸಣ್ಣ, ಅಂಡಾಕಾರದ, ಕ್ಲೋರೋಟಿಕ್ ಗಾಯಗಳಾಗಿ ಪ್ರಾರಂಭವಾಗುತ್ತದೆ, ಅವು ಕೆಳಭಾಗದ ಎಲೆಗಳ ಮೇಲೆ ಅನಿಯಮಿತವಾಗಿ ಹರಡಿರುತ್ತವೆ, ಕ್ರಮೇಣ ಮೇಲಿನ ಎಲೆಗಳಿಗೆ ಹರಡುತ್ತವೆ. ಕಾಲಾನಂತರದಲ್ಲಿ, ಗಾಯಗಳು ಹಿಗ್ಗುತ್ತವೆ, ಆಕಾರದಲ್ಲಿ ಅನಿಯಮಿತವಾಗಿರುತ್ತವೆ ಮತ್ತು ಗಾಢ ಕಂದು ಅಥವಾ ಬೂದು ಬಣ್ಣದ ಗುಳಿಬಿದ್ದ ಗಾಯಗಳಾಗಿ ಬೆಳೆಯುತ್ತವೆ. ಗಾಯಗಳು ಪ್ರಕಾಶಮಾನವಾದ ಹಳದಿ ಅಂಚು ವಲಯವನ್ನು ಹೊಂದಿರಬಹುದು ಮತ್ತು 1ಸೆಂಮೀ ಅಥವಾ ಹೆಚ್ಚಿನ ವ್ಯಾಸದಲ್ಲಿ ಬೆಳೆಯಬಹುದು. ತೇವಾಂಶದ ಪರಿಸ್ಥಿತಿಗಳಲ್ಲಿ, ಗಾಯಗಳನ್ನು ಕಪ್ಪು ಪೌಡರಿ ಕೋನಿಡಿಯಾದಿಂದ ಮುಚ್ಚಬಹುದು. ರೋಗದ ನಂತರದ ಹಂತಗಳಲ್ಲಿ, ಗಾಯಗಳು ಒಟ್ಟಿಗೆ ವಿಲೀನಗೊಂಡು ಇಡೀ ಎಲೆಯ ಸಾವಿಗೆ ಕಾರಣವಾಗುತ್ತದೆ. ತೀವ್ರತರವಾದ ಪ್ರಕರಣಗಳಲ್ಲಿ, ಎಲೆಗಳ ಕವಚಗಳು, ಆನ್ಸ್ ಮತ್ತು ಹೊಟ್ಟುಗಳ ಮೇಲೂ ಸಹ ಪರಿಣಾಮವಾಗುತ್ತದೆ ಮತ್ತು ಸುಟ್ಟ ನೋಟವನ್ನು ಹೊಂದಿರುತ್ತವೆ.

ಶಿಫಾರಸುಗಳು

ಜೈವಿಕ ನಿಯಂತ್ರಣ

ಬೀಜಗಳನ್ನು ಪ್ರತಿ ಕೆಜಿ ಬೀಜಕ್ಕೆ ವಿಟವಾಕ್ಸ್ 2.5 ನೊಂದಿಗೆ ಚಿಕಿತ್ಸೆ ನೀಡುವ ಮೂಲಕ ಬೀಜದಿಂದ ಹರಡುವ ಸೋಂಕನ್ನು ನಿಯಂತ್ರಿಸಬಹುದು. ಟ್ರೈಕೊಡರ್ಮಾ ವಿರೈಡ್ ಮತ್ತು ವಿಟವಾಕ್ಸ್ ಮಿಶ್ರಣವು ಮತ್ತಷ್ಟು ಸೋಂಕುಗಳಿಗೆ ಪರಿಣಾಮಕಾರಿಯಾಗಿ ಅಡ್ಡಿಯಾಗುತ್ತದೆ (98.4% ರಷ್ಟು). ಮೊದಲ ಮತ್ತು ಎರಡನೆಯ ದ್ರವೌಷಧ ಸಿಂಪಡಣೆಗಳಲ್ಲಿ ಯೂರಿಯಾ 2 - 3% ಅನ್ನು ಝಿನೆಬ್‌ನೊಂದಿಗೆ ಮಿಶ್ರಣ ಮಾಡಿ. ಜಲೀಯ ಬೇವಿನ ಎಲೆ ಸಾರಗಳನ್ನು ಬಳಸಿ. ಬೀಜದಿಂದ ಹರಡುವ ಇನಾಕ್ಯುಲಮ್ ಅನ್ನು ಕಡಿಮೆ ಮಾಡಲು ಶಿಲೀಂಧ್ರನಾಶಕ ಮತ್ತು ಬಿಸಿನೀರಿನ ಚಿಕಿತ್ಸೆಯನ್ನು ಬಳಸಲಾಗುತ್ತದೆ. ರೋಗವು ಮತ್ತಷ್ಟು ಏಕಾಏಕಿಯಾಗಿ ಹರಡುವುದನ್ನು ನಿಯಂತ್ರಿಸಲು ರೋಗಕಾರಕಗಳಾದ ಟ್ರೈಕೊಡರ್ಮಾ ವಿರೈಡ್ (2%) ಮತ್ತು ಟಿ. ಹರ್ಜಿಯಾನಮ್ (2%), ಆಸ್ಪರ್ಜಿಲಸ್ ಹ್ಯೂಮಿಕೋಲಾ ಮತ್ತು ಬ್ಯಾಸಿಲಸ್ ಸಬ್ಟಿಲಿಸ್ ಅನ್ನು ಹೆಚ್ಚಾಗಿ ಬಳಸಲಾಗುತ್ತದೆ.

ರಾಸಾಯನಿಕ ನಿಯಂತ್ರಣ

ಯಾವಾಗಲೂ ಜೈವಿಕ ಚಿಕಿತ್ಸೆಗಳು ಲಭ್ಯವಿದ್ದರೆ ಅದರ ಜೊತೆ ನಿರೋಧಕ ಕ್ರಮಗಳನ್ನು ಒಟ್ಟುಗೂಡಿಸಿ ಸಮಗ್ರವಾದ ಮಾರ್ಗವನ್ನು ಪರಿಗಣಿಸಿ. ಎ. ಟ್ರಿಟಿಸಿನಾವನ್ನು ಶಿಲೀಂಧ್ರನಾಶಕಗಳ ಮೂಲಕ ರೋಗದ ತೀವ್ರತೆಯಲ್ಲಿ 75% ಕಡಿಮೆ ಮಾಡಿ ಸಸ್ಯ ಇಳುವರಿ ಹೆಚ್ಚಿಸುವ ಮೂಲಕ ನಿಯಂತ್ರಿಸಬಹುದು. ಶಿಲೀಂಧ್ರನಾಶಕಗಳಾದ ಮ್ಯಾಂಕೋಜೆಬ್, ಝಿರಾಮ್, ಝಿನೆಬ್ (0.2%), ಥಿರಾಮ್, ಫೈಟೊಲಾನ್, ಪ್ರೊಪಿನೆಬ್, ಕ್ಲೋರೊಥಲೋನಿಲ್ ಮತ್ತು ನಬಾಮ್, ಪ್ರೊಪಿಕೋನಜೋಲ್ (0.15%), ಟೆಬುಕೊನಜೋಲ್ ಮತ್ತು ಹೆಕ್ಸಕೋನಜೋಲ್ (0.5%) ಗಳನ್ನು ಬಳಸಿ. ಮ್ಯಾಂಕೋಜೆಬ್‌ಗೆ ಸಹಿಷ್ಣುತೆಯನ್ನು ಬೆಳೆಸುವುದನ್ನು ತಡೆಯಲು, ಶಿಲೀಂಧ್ರನಾಶಕಗಳ ಸಂಯೋಜನೆಯನ್ನು ಬಳಸಿ.

ಅದಕ್ಕೆ ಏನು ಕಾರಣ

ಆಲ್ಟರ್ನೇರಿಯಾ ಟ್ರಿಟಿಸಿನಾ ಎಂಬ ಶಿಲೀಂಧ್ರದಿಂದ ಹಾನಿ ಉಂಟಾಗುತ್ತದೆ. ಸೋಂಕು ಮಣ್ಣಿನಿಂದ ಮತ್ತು ಬೀಜದಿಂದ ಹರಡುತ್ತದೆ ಮತ್ತು ಕೆಲವೊಮ್ಮೆ ಗಾಳಿಯಿಂದಲೂ ಹರಡಬಹುದು. ಸೋಂಕಿತ ಬೀಜಗಳು ಆರೋಗ್ಯಕರ ಬೀಜಗಳಿಗಿಂತ ಚಿಕ್ಕದಾಗಿರಬಹುದು ಮತ್ತು ಕಂದು ಬಣ್ಣಕ್ಕೆ ತಿರುಗಿ ಸುಕ್ಕುಗಟ್ಟುತ್ತದೆ. ಸೋಂಕಿತ ಮಣ್ಣಿನಲ್ಲಿ ನೆಟ್ಟಾಗ ಅಥವಾ ಸೋಂಕಿತ ಬೆಳೆ ಉಳಿಕೆಗಳೊಂದಿಗೆ ಸಂಪರ್ಕ ಹೊಂದಿದಾಗ ಸಸ್ಯಗಳಿಗೆ ರೋಗ ತಗುಲುತ್ತದೆ (ಉದಾ., ಮಳೆಯ ಎರಚಲಿನಿಂದ ಅಥವಾ ನೇರ ಸಂಪರ್ಕದಿಂದ). ಬೇಸಿಗೆಯಲ್ಲಿ ಮಣ್ಣಿನ ಮೇಲ್ಭಾಗದಲ್ಲಿರುವ ಸೋಂಕಿತ ಸಸ್ಯಾವಶೇಷಗಳಲ್ಲಿ ಶಿಲೀಂಧ್ರವು ಎರಡು ತಿಂಗಳು ಕಾಲ ಬದುಕಬಲ್ಲದು ಎಂದು ವರದಿಯಾಗಿದೆ, ಆದರೆ ಹೂತು ಹಾಕಿರುವ ಅವಶೇಷಗಳಲ್ಲಿ ನಾಲ್ಕು ತಿಂಗಳು ಕಾಲ ಬದುಕಬಲ್ಲದು. ಎ. ಟ್ರಿಟಿಸಿನಾವು ಸುಮಾರು ನಾಲ್ಕು ವಾರಗಳೊಳಗಿನ ಎಳೆ ಗೋಧಿ ಮೊಳಕೆಗೆ ಸೋಂಕು ತಗುಲಿಸುವುದಿಲ್ಲ ಏಕೆಂದರೆ ಸಸ್ಯದ ವಯಸ್ಸಿನೊಂದಿಗೆ ಅದರ ರೋಗ ಸೂಕ್ಷ್ಮತೆ ಹೆಚ್ಚಾಗುತ್ತದೆ. ಸಸ್ಯಗಳಲ್ಲಿ ಸುಮಾರು ಏಳು ವಾರಗಳ ತನಕ ರೋಗಲಕ್ಷಣಗಳು ಸಾಮಾನ್ಯವಾಗಿ ಕಂಡುಬರುವುದಿಲ್ಲ. 20 - 25 °C ತಾಪಮಾನವು ಸೋಂಕು ಮತ್ತು ರೋಗ ಬೆಳವಣಿಗೆಗೆ ಸೂಕ್ತವಾಗಿದೆ. ತೀವ್ರ ಪರಿಸ್ಥಿತಿಗಳಲ್ಲಿ, ಇಳುವರಿ ನಷ್ಟವು 80% ಮೀರಬಹುದು.


ಮುಂಜಾಗ್ರತಾ ಕ್ರಮಗಳು

  • ಪ್ರಮಾಣೀಕರಿಸಿದ ಮೂಲಗಳಿಂದ ರೋಗಕ್ಕೆ ಬೇಗ ತುತ್ತಾಗದ ಪ್ರಭೇದಗಳು ಮತ್ತು ಆರೋಗ್ಯಕರ ಬೀಜಗಳನ್ನು ಬಳಸಿ.
  • ಉತ್ತಮ ನೈರ್ಮಲ್ಯ ಕ್ರಮಗಳನ್ನು ಅಭ್ಯಾಸ ಮಾಡಿ.
  • ಸೋಂಕಿತ ಬೆಳೆಗಳನ್ನು ಸುಟ್ಟು ಉಳುಮೆ ಮಾಡುವ ಮೂಲಕ ನಾಶಪಡಿಸಬೇಕು.
  • ಇದು ಸೋಂಕಿತ ಬೆಳೆ ಉಳಿಕೆಗಳ ಮೂಲಕ ರೋಗಕಾರಕವು ವೈಮಾನಿಕವಾಗಿ ಹರಡುವುದನ್ನು ತಡೆಯುತ್ತದೆ.
  • ಸೋಂಕಿತ ಬೆಳೆಗಳನ್ನು ನಾಶಮಾಡಲು ಸಸ್ಯನಾಶಕಗಳನ್ನು ಬಳಸಬಹುದು.
  • ಸೋಂಕಿತ ಗದ್ದೆಯಲ್ಲಿ ಕನಿಷ್ಠ ಎರಡು ವರ್ಷಗಳವರೆಗೆ ಮರು ನಾಟಿ ಮಾಡಬಾರದು.
  • ಬಿಸಾಡಬಹುದಾದ ಉಪಕರಣಗಳು, ಸೋಂಕಿತ ಸಸ್ಯ ವಸ್ತುಗಳು ಅಥವಾ ಮಣ್ಣನ್ನು ಆಟೋಕ್ಲೇವಿಂಗ್, ಅಧಿಕ-ತಾಪಮಾನ ದಹನ ಅಥವಾ ಆಳವಾಗಿ ಹೂಳುವ ಮೂಲಕ ವಿಲೇವಾರಿ ಮಾಡಬೇಕು.
  • ವಿಲೇವಾರಿಗಾಗಿ ಗದ್ದೆಯಿಂದ ತೆಗೆದುಹಾಕಲಾದ ಯಾವುದೇ ಸಾಧನಗಳನ್ನು ಡಬಲ್-ಬ್ಯಾಗ್ ಮಾಡಬೇಕು.
  • ಭವಿಷ್ಯದ ಸಾಂಕ್ರಾಮಿಕ ರೋಗಗಳನ್ನು ಪ್ರಚೋದಿಸಬಹುದಾದ ರೋಗಕಾರಕವು ಬದುಕುಳಿಯುವಿಕೆ ಮತ್ತು ಪ್ರಾಥಮಿಕ ಇನಾಕ್ಯುಲಮ್ ಅನ್ನು ಕಡಿಮೆ ಮಾಡಲು ಸುಗ್ಗಿಯ ನಂತರ ಬೆಳೆ ಅವಶೇಷಗಳನ್ನು ಆಳವಾಗಿ ಹೂತುಹಾಕಿ.
  • ಚಾಲ್ತಿಯಲ್ಲಿರುವ ಗಾಳಿಯ ದಿಕ್ಕಿಗೆ ಸಮಾನಾಂತರವಾಗಿ ಸಾಲುಗಳನ್ನು ನೆಡುವುದರ ಮೂಲಕ, ಸಸ್ಯಗಳ ಸಂಖ್ಯೆಯನ್ನು ಕಡಿಮೆ ಮಾಡುವ ಮೂಲಕ ಮತ್ತು ಸಾಲಿನಲ್ಲಿ ಅಗಲವಾದ ಅಂತರವನ್ನು ಬಿಟ್ಟು ನೆಡುವ ಮೂಲಕ ಮೇಲಾವರಣದೊಳಗೆ ಗಾಳಿಯ ಚಲನೆಯನ್ನು ಉತ್ತೇಜಿಸಿ.
  • ಎಲೆಗಳ ತೇವದ ಅವಧಿಯನ್ನು ಕಡಿಮೆ ಮಾಡಲು ಸಾಧ್ಯವಾದರೆ, ಮುಸ್ಸಂಜೆಯ ಹೊತ್ತಿಗೆ ನೀರಾವರಿ ಮಾಡುವುದನ್ನು ತಪ್ಪಿಸಿ ಮತ್ತು ಓವರ್ಹೆಡ್ ನೀರಾವರಿಯನ್ನು ಅನುಸರಿಸಿ.
  • ಸಾಕಷ್ಟು ರಸಗೊಬ್ಬರಗಳನ್ನು ಬಳಸಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ