ಕಡಲೆಕಾಯಿ

ಹಣ್ಣಿನ ಮೋಲ್ಡ್ ಗಳು

Aspergillus spp.

ಶಿಲೀಂಧ್ರ

ಸಂಕ್ಷಿಪ್ತವಾಗಿ

  • ಹಣ್ಣಿನ ಕವಚ ಬಣ್ಣ ಕಳೆದುಕೊಳ್ಳುವುದು ಮತ್ತು ಹಣ್ಣುಗಳ ಕೊಳೆತ.
  • ನಿರ್ದಿಷ್ಟವಾಗಿ ವಿದಳನ ಅವಧಿಯಲ್ಲಿ.
  • ಪಿಸ್ತಾ ಕೀಟಗಳಿಂದ ಆಕ್ರಮಣಕ್ಕೊಳಗಾಗುವ ಹಣ್ಣುಗಳು ಅತ್ಯಂತ ಹೆಚ್ಚು ರೋಗಕ್ಕೆ ತುತ್ತಾಗುತ್ತವೆ.

ಇವುಗಳಲ್ಲಿ ಸಹ ಕಾಣಬಹುದು

8 ಬೆಳೆಗಳು
ಬೆಳ್ಳುಳ್ಳಿ
ಮೆಕ್ಕೆ ಜೋಳ
ಮಾವು
ಈರುಳ್ಳಿ
ಇನ್ನಷ್ಟು

ಕಡಲೆಕಾಯಿ

ರೋಗಲಕ್ಷಣಗಳು

ಹಣ್ಣಿನ ಪಕ್ವತೆಯ ಅವಧಿಯಲ್ಲಿ ಆರ್ದ್ರ ಪರಿಸ್ಥಿತಿ ಇದ್ದರೆ, ಪಿಸ್ತಾ ಹಣ್ಣುಗಳನ್ನು ಹಲವಾರು ಶಿಲೀಂಧ್ರಗಳು ಆಕ್ರಮಿಸಬಹುದು ಮತ್ತು ಹಣ್ಣನ್ನು ಕೊಳೆಯಿಸಬಹುದು. ಇದು ಮುಖ್ಯವಾಗಿ ಕವಚ ಬಣ್ಣ ಕಳೆದುಕೊಳ್ಳುವುದು ಮತ್ತು ಕೆಲವು ಸಂದರ್ಭಗಳಲ್ಲಿ, ವಾಸನೆಯಿಲ್ಲದ ಮತ್ತು ಬಣ್ಣರಹಿತ ಎಫ್ಲಾಟಾಕ್ಸಿನ್ ಗಳ ಉತ್ಪಾದನೆಯಿಂದ ತಿಳಿಯುತ್ತದೆ. ಆಕ್ರಮಣದ ಮಟ್ಟ ಅಥವಾ ಶಿಲೀಂಧ್ರದ ವಿಧವನ್ನು ಅವಲಂಬಿಸಿ, ಬಣ್ಣ ಕಳೆದುಕೊಳ್ಳುವಿಕೆ ಮತ್ತು ಕೊಳೆತವು ಕಂಡುಬರುತ್ತದೆ. ಸಾಮಾನ್ಯವಾಗಿ, ಸಿಪ್ಪೆಯು ಹಳದಿ ಅಥವಾ ಕಂದು ಹಳದಿ ಬಣ್ಣಕ್ಕೆ ತಿರುಗುತ್ತವೆ. ಸಿಪ್ಪೆಗಳ ಅಡಿಯಲ್ಲಿ, ಶಿಲೀಂಧ್ರಗಳ ಬೆಳವಣಿಗೆಯ ಚಿಹ್ನೆಗಳು ಕವಚಗಳ ಮೇಲೆ ಗೋಚರಿಸುತ್ತವೆ. ಅವುಗಳು ಕಲೆಯಂತೆ ಕಾಣುತ್ತವೆ. ಸಿಪ್ಪೆ ಹೆಚ್ಚಾಗಿ ಕವಚಕ್ಕೆ ಅಂಟಿರುತ್ತದೆ. ವಿದಳವಾದ ಹಣ್ಣುಗಳು ಮತ್ತು ಕೀಟಗಳಿಂದ ದಾಳಿಮಾಡಲ್ಪಟ್ಟವುಗಳು ನಿರ್ದಿಷ್ಟವಾಗಿ ಹಾನಿಗೆ ಒಳಗಾಗುತ್ತವೆ.

ಶಿಫಾರಸುಗಳು

ಜೈವಿಕ ನಿಯಂತ್ರಣ

ರೋಗಕ್ಕೆ ಯಾವುದೇ ಪರಿಣಾಮಕಾರಿ ಜೈವಿಕ ಚಿಕಿತ್ಸೆಗಳಿಲ್ಲ. ಆದರೆ, ತಾಮ್ರ ಆಧಾರಿತ ಜೈವಿಕ ಶಿಲೀಂಧ್ರನಾಶಕಗಳು, ಅನುಕೂಲಕರ ಹವಾಮಾನ ಪರಿಸ್ಥಿತಿಗಳಲ್ಲಿ ಬಳಸಿದಾಗ ಸ್ವೀಕಾರಾರ್ಹ ಪರಿಣಾಮವನ್ನು ತೋರಿಸಿವೆ.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದರೆ, ಜೈವಿಕ ಚಿಕಿತ್ಸೆಗಳೊಂದಿಗೆ ತಡೆಗಟ್ಟುವ ಕ್ರಮಗಳನ್ನು ಸಂಯೋಜಿಸುವ ಒಂದು ಸಮಗ್ರ ವಿಧಾನವನ್ನು ಯಾವಾಗಲೂ ಪರಿಗಣಿಸಿ. ಕೀಟನಾಶಕಗಳೊಂದಿಗೆ ಮೆಗಾಸ್ಟಿಗ್ಮಸ್ ಪಿಸ್ತಾಶಿಯಾ ಮತ್ತು ಯುರಿಟೋಮಾ ಪ್ಲಾಟ್ನಿಕೋವಿಗಳನ್ನು ನಿಯಂತ್ರಿಸಲು ಕ್ರಮಗಳನ್ನು ಕೈಗೊಳ್ಳಿ. ಕ್ಲೋರೊಥಲೋನಿಲ್ (200ಮಿಲೀ / 100ಲೀ) ಅಥವಾ ತಾಮ್ರ ಆಧರಿತ ಉತ್ಪನ್ನಗಳಿಂದ ಪೀಡಿತ ಮರಗಳ ನಿಯಂತ್ರಣ ಚಿಕಿತ್ಸೆ ಮಾಡಿ. ಸುಗ್ಗಿಯ ಕೊನೆಯಲ್ಲಿ ಕೀಟನಾಶಕಗಳ ಬಳಕೆ ಬಹಳ ಪರಿಣಾಮಕಾರಿಯಾಗಿರುತ್ತದೆ ಏಕೆಂದರೆ ಅವುಗಳು ಹಣ್ಣುಗಳ ಮೇಲೆ ರೋಗದ ಅತಿಕ್ರಮಣವನ್ನು ತಪ್ಪಿಸುತ್ತವೆ. ಚಿಕಿತ್ಸೆಯ ಪರಿಣಾಮಕಾರಿತ್ವವು ಬಳಕೆಯ ಸಮಯ, ಶಿಫಾರಸು ಮಾಡಿದ ಪ್ರಮಾಣಗಳಲ್ಲಿ ಬಳಕೆ ಮತ್ತು ಅಟೊಮೈಝರ್ ವೇಗವನ್ನು ಅವಲಂಬಿಸಿರುತ್ತದೆ.

ಅದಕ್ಕೆ ಏನು ಕಾರಣ

ಪಿಸ್ತಾದಲ್ಲಿ ಹಣ್ಣಿನ ಕೊಳೆತವು ಆಸ್ಪರ್ಜಿಲ್ಲಸ್ ನ ಹಲವು ಜಾತಿಗಳಿಂದ ಉಂಟಾಗುತ್ತದೆ. ಆದರೆ ಪೆನಿಸಿಲಿಯಂ, ಸ್ಟೆಮ್ಫಿಲಿಯಂ ಅಥವಾ ಫುಸೇರಿಯಮ್ ಗಳ ಕೆಲವು ಜಾತಿಗಳಿಂದಲೂ ಉಂಟಾಗುತ್ತದೆ. ರೋಗವು ಹೆಚ್ಚಾಗಿ ಕೀಟಗಳ ಮುತ್ತುವಿಕೆಗೆ ಸಂಬಂಧಿಸಿದೆ. ವಿಶೇಷವಾಗಿ ಪಿಸ್ತಾ ಬೀಜ ಚಾಲ್ಸಿಡ್ (ಮೆಗಾಸ್ಟಿಗ್ಮಸ್ ಪಿಸ್ತಾಶಿಯಾ) ಮತ್ತು ಪಿಸ್ತಾ ಬೀಜ ಕಣಜ (ಯುರಿಟೋಮಾ ಪ್ಲೋಟ್ನಿಕೋವಿ). ಈ ಕೀಟಗಳಿಂದ ಮಾಡಲ್ಪಟ್ಟ ರಂಧ್ರಗಳು ಶಿಲೀಂಧ್ರಗಳ ನುಗ್ಗುವಿಕೆಯನ್ನು ಸುಲಭಗೊಳಿಸುತ್ತವೆ. ಪಕ್ವತೆಯ ಅವಧಿಯಲ್ಲಿ ಹೆಚ್ಚಿನ ಉಷ್ಣತೆ, ಆರ್ದ್ರತೆ ಮತ್ತು ಒದ್ದೆ ಸ್ಥಿತಿಗಳು ರೋಗಕ್ಕೆ ಅನುಕೂಲಕರವಾದರೂ, ಅಸ್ಪೆರ್ಗಿಲ್ಲಸ್ ಜಾತಿಗಳ ಸೋಂಕು ಸಾಮಾನ್ಯಕ್ಕಿಂತ ಹೆಚ್ಚು ಒಣ ಪರಿಸ್ಥಿತಿಯಲ್ಲೂ ಸಂಭವಿಸಬಹುದು. ಕತ್ತಲು ಮತ್ತು ವಾತಾಯನ ಕೊರತೆಯು ಸಹ ರೋಗದ ಹರಡುವಿಕೆಗೆ ಕಾರಣವಾಗುತ್ತದೆ. ವಸಂತ ಋತುವಿನ ಕೊನೆಯಲ್ಲಿ ಮತ್ತು ಬೇಸಿಗೆಯ ಆರಂಭದಲ್ಲಿ ನೀರಿನ ಕೊರತೆಯು ವಿದಳನವಾದ ಹಣ್ಣುಗಳ ಸಂಖ್ಯೆಯನ್ನು ಹೆಚ್ಚಿಸುತ್ತದೆ ಮತ್ತು ಇದರಿಂದಾಗಿ ರೋಗ ಚಕ್ರಕ್ಕೆ ಅನುಕೂಲವಾಗುತ್ತದೆ.


ಮುಂಜಾಗ್ರತಾ ಕ್ರಮಗಳು

  • ಪಿಸ್ತಾಶಿಯಾ ಅಟ್ಲಾಂಟಿಕಾದ ಮೇಲೆ ಕಸಿ ಮಾಡಬೇಡಿ.
  • ಏಕೆಂದರೆ, ಇದು ಬೇಗ ವಿಘಟನೆಯಾಗುವ ಹಣ್ಣುಗಳ ಸಂಖ್ಯೆಯನ್ನು ಹೆಚ್ಚಿಸುತ್ತದೆ.
  • ವಸಂತ ಋತುವಿನ ಕೊನೆಯಲ್ಲಿ ಮತ್ತು ಬೇಸಿಗೆಯ ಆರಂಭದಲ್ಲಿ ಬರ / ಜಲಕ್ಷಾಮಕ್ಕೆ ವಿದಳವಾಗುವ ಹಣ್ಣುಗಳ ಸಂಖ್ಯೆಯನ್ನು ಹೆಚ್ಚಿಸಬಹುದು.
  • ಕತ್ತಲಿನ, ಕಡಿಮೆ ಗಾಳಿಯಾಡುವ ಸ್ಥಳಗಳಲ್ಲಿ ದೀರ್ಘಕಾಲದವರೆಗೆ ಪಿಸ್ತಾಗಳನ್ನು ಸಂಗ್ರಹಿಸುವುದನ್ನು ತಪ್ಪಿಸಿ.
  • ಮೆಗಾಸ್ಟಿಗ್ಮಸ್ ಪಿಸ್ತಾಶಿಯಾ (ಪಿಸ್ತಾ ಬೀಜ ಚಾಲ್ಸಿಡ್) ಮತ್ತು ಯುರಿಟೋಮಾ ಪ್ಲೋಟ್ನಿಕೊವಿ (ಪಿಸ್ತಾ ಬೀಜ ಕಣಜ) ದ ದಾಳಿಯನ್ನು ತಡೆಗಟ್ಟಿ.
  • ಋತುವಿನಲ್ಲಿ ತಡವಾಗಿ ಕೊಯ್ಲು ಮಾಡುವುದನ್ನು ತಪ್ಪಿಸಿ ಮತ್ತು ಹವಾಮಾನ ಆರ್ದ್ರ ಮತ್ತು ಒದ್ದೆಯಾಗಿರುವ ಸಂದರ್ಭದಲ್ಲಿ ಕೊಯ್ಲು ಮಾಡಬೇಡಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ