ಹತ್ತಿ

ಮೈರೋಥೀಸಿಯಮ್ ಎಲೆ ಚುಕ್ಕೆ

Myrothecium roridum

ಶಿಲೀಂಧ್ರ

ಸಂಕ್ಷಿಪ್ತವಾಗಿ

  • ಕಾಂಡ ಮತ್ತು ಕ್ರೌನ್ ಕೊಳೆತ.
  • ಅಂಚುಗಳ ಹತ್ತಿರ, ಎಲೆಗಳ ಮೇಲೆ ತಿಳಿ ಕಂದು ಬಣ್ಣದಿಂದ ಕಪ್ಪು ಕಲೆಗಳು.
  • ಗಾಯಗಳ ಕೇಂದ್ರವು ಉದುರಿಹೋಗುತ್ತದೆ - ಗುಂಡೂ ಹೊಡೆದಂತಹ ರಂಧ್ರಗಳು.

ಇವುಗಳಲ್ಲಿ ಸಹ ಕಾಣಬಹುದು


ಹತ್ತಿ

ರೋಗಲಕ್ಷಣಗಳು

ರೋಗಲಕ್ಷಣಗಳು ಕಾಂಡ ಮತ್ತು ಮೇಲಿನ ಭಾಗಗಳ ಕೊಳೆತ ಮತ್ತು ಕಂದು, ಸಾಂದ್ರೀಕೃತ ಕಲೆಗಳು ಇರುವ ಎಲೆಗಳ ಮೂಲಕ ಕಂಡು ಬರುತ್ತದೆ. ಅಧಿಕ ಆರ್ದ್ರತೆಯಲ್ಲಿ, ಉಬ್ಬಿದ, ಕಪ್ಪು ರಚನೆಗಳು ಮತ್ತು ಬಿಳಿ ಕುಚ್ಚುಗಳು ಗಾಯಗಳ ಮೇಲೆ ಬೆಳೆಯಬಹುದು. ಅವುಗಳು ವಿಶಿಷ್ಟ ರೂಪವನ್ನು ನೀಡುತ್ತವೆ. ತೋಟಗಾರಿಕಾ ಬೆಳೆಗಳಲ್ಲಿ, ಸಾಮಾನ್ಯವಾಗಿ ಮೇಲಿನ ಭಾಗಗಳಲ್ಲಿ ಮತ್ತು ಪಕ್ಕದ ಎಲೆಯ ತೊಟ್ಟುಗಳಲ್ಲಿ ಕಂದು ಮೃದು ಕೊಳೆತದಂತೆ ರೋಗಲಕ್ಷಣಗಳು ಆರಂಭವಾಗುತ್ತದೆ. ಕಾಂಡದ ಮೂಲಕ ಗಾಯಗಳು ಕ್ರಮೇಣ ಬೆಳೆದಂತೆ, ತೊಂದರೆಗೊಳಗಾದ ಅಂಗಾಂಶಗಳ ಮೇಲೆ ಸಣ್ಣ ಬಿಳಿ ಕುಚ್ಚುಗಳು ಕಾಣಿಸಿಕೊಳ್ಳುತ್ತವೆ. ಎಲೆಗಳ ಮೇಲೆ ಕಪ್ಪು ಬಣ್ಣದಿಂದ ಕಂದು ಬಣ್ಣದ ಸಣ್ಣ ಅನಿಯಮಿತ ಕಲೆಗಳು ಕಾಣಿಸಿಕೊಳ್ಳುತ್ತವೆ. ಸ್ಪಷ್ಟವಾಗಿ ರೂಪಿಸಲ್ಪಟ್ಟ ಮಧ್ಯದ ಕೇಂದ್ರೀಕೃತ ಉಂಗುರದೊಂದಿಗೆ ಕಲೆಗಳು ಹೆಚ್ಚು ವೃತ್ತಾಕಾರದ ಆಕಾರವನ್ನು ಕ್ರಮೇಣವಾಗಿ ತೆಗೆದುಕೊಳ್ಳುತ್ತವೆ. ನಂತರ, ಹಳೆಯ ಗಾಯಗಳು ಒಗ್ಗೂಡಬಹುದು ಮತ್ತು ಸಣ್ಣ ಬಿಳಿ ಚುಕ್ಕೆಗಳಿಂದ ಮುಚ್ಚಲ್ಪಡುತ್ತವೆ. ಅದು ಒಣಗಿದಾಗ, ಗಾಯಗಳ ಮಧ್ಯಭಾಗವು ಕಾಗದದಂತಾಗುತ್ತದೆ ಮತ್ತು ಬಿಳಿ ಬಣ್ಣಕ್ಕೆ ತಿರುಗುತ್ತದೆ ಮತ್ತು ಅಂತಿಮವಾಗಿ ಉದುರಿ ಎಲೆಗಳಲ್ಲಿ ಅನಿಯಮಿತ ಶಾಟ್ ಹೋಲ್ ಗಳನ್ನು ಉಳಿಸುತ್ತದೆ. ರೋಗದ ನಂತರದ ಹಂತಗಳಲ್ಲಿ, ಸಂಪೂರ್ಣ ಸಸ್ಯವು ಕುಸಿಯಬಹುದು. ಆದರೆ ಹಣ್ಣುಗಳ ಮೇಲೆ ಪರಿಣಾಮ ಬೀರುವುದು ಅಪರೂಪ.

ಶಿಫಾರಸುಗಳು

ಜೈವಿಕ ನಿಯಂತ್ರಣ

ಇದುವರೆಗೂ, ಮೈರೋಥಿಸಿಯಮ್ ಎಲೆ ಚುಕ್ಕೆ ವಿರುದ್ಧ ಜೈವಿಕ ನಿಯಂತ್ರಣ ವಿಧಾನ ತಿಳಿದು ಬಂದಿಲ್ಲ. ಈ ಶಿಲೀಂಧ್ರಕ್ಕೆ ಚಿಕಿತ್ಸೆ ನೀಡುವ ಯಾವುದೇ ವಿಧಾನಗಳು ನಿಮಗೆ ತಿಳಿದಿದ್ದರೆ ದಯವಿಟ್ಟು ನಮ್ಮನ್ನು ಸಂಪರ್ಕಿಸಿ.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದಲ್ಲಿ , ತಡೆಗಟ್ಟುವ ಕ್ರಮಗಳು, ಕೃಷಿ ಪದ್ಧತಿಗಳು ಮತ್ತು ಜೈವಿಕ ಚಿಕಿತ್ಸೆಗಳು ಒಟ್ಟಾಗಿರುವ ಸಮಗ್ರ ವಿಧಾನವನ್ನು ಯಾವಾಗಲೂ ಪರಿಗಣಿಸಿ. ರೋಗಲಕ್ಷಣಗಳು ಮೊದಲು ಕಂಡಾಗ, ಮ್ಯಾಂಕೊಜೆಬ್ ಅಥವಾ ತಾಮ್ರದ ಆಕ್ಸಿಕ್ಲೋರೈಡ್ ಅನ್ನು 2 ಕೆಜಿ / ಹೆಕ್ಟೇರ್ ನಂತೆ ಸಿಂಪಡಿಸಿ ಮತ್ತು 15 ದಿನಗಳ ಅಂತರದಲ್ಲಿ ಎರಡು ಮೂರು ಬಾರಿ ಇದೇ ಚಿಕಿತ್ಸೆ ಪುನರಾವರ್ತಿಸಿ. ಋತುವಿನಲ್ಲಿ ತಡವಾಗಿ ಸೋಂಕು ಸಂಭವಿಸಿದರೆ, ಕೊಯ್ಲಿಗೂ ಮೊದಲಿನ ಅಂತರವನ್ನು ಪರಿಗಣಿಸಬಹುದು ಎಂಬುದು ನನೆಪಿರಲಿ.

ಅದಕ್ಕೆ ಏನು ಕಾರಣ

ಶಿಲೀಂಧ್ರ ಮೈರೋಥಿಸಿಯಂ ರೋರಿಡಮ್ ನಿಂದ ರೋಗಲಕ್ಷಣಗಳು ಉಂಟಾಗುತ್ತವೆ. ಇದು ನಿಯಮಿತವಾಗಿ ಹಲವಾರು ಆರ್ಥಿಕವಾಗಿ ಮುಖ್ಯವಾದ ಬೆಳೆಗಳು ಮತ್ತು ಅಲಂಕಾರಿಕ ಸಸ್ಯಗಳಲ್ಲಿ ಕಾಂಡ ಮತ್ತು ಸಸ್ಯದ ಮೇಲಿನ ಭಾಗಗಳ ಕೊಳೆತ ಉಂಟುಮಾಡುತ್ತದೆ. ರೋಗವು ಅನೇಕ ವಿಧಗಳಲ್ಲಿ ಹರಡುತ್ತದೆ, ಉದಾಹರಣೆಗೆ, ಕಸಿ ಮಾಡುವ ಸಮಯದಲ್ಲಿ ಕೆಟ್ಟ ಅಭ್ಯಾಸಗಳ ಮೂಲಕ, ಓವರ್ಹೆಡ್ ನೀರಾವರಿ ಮೂಲಕ, ಯಾಂತ್ರಿಕ ಅಥವಾ ಕೀಟಗಳ ಗಾಯಗಳ ಮೂಲಕ. ಗಾಯಗೊಂಡ ಅಂಗಾಂಶಗಳು ಶಿಲೀಂಧ್ರವು ಸಸ್ಯದೊಳಗೆ ಪ್ರವೇಶಿಸಲು ಮತ್ತು ಸೋಂಕಿಗೆ ಒಳಪಡಿಸಲು ದ್ವಾರವಾಗುತ್ತದೆ. ಬೆಚ್ಚಗಿನ, ತೇವ ವಾತಾವರಣ ಮತ್ತು ಅಧಿಕ ಆರ್ದ್ರತೆಯ ಪರಿಸ್ಥಿತಿಯಲ್ಲಿ ರೋಗದ ಸಂಭವನೀಯತೆ ಮತ್ತು ರೋಗಲಕ್ಷಣಗಳ ತೀವ್ರತೆ ಎರಡೂ ಹೆಚ್ಚಾಗುತ್ತದೆ. ಅಧಿಕ-ರಸಗೊಬ್ಬರ ಸೊಂಪಾದ ಎಲೆಗಳ ಬೆಳವಣಿಗೆಗೆ ಕಾರಣವಾಗುತ್ತದೆ ಮತ್ತು ಇದು ರೋಗದ ಹರಡುವಿಕೆಗೆ ಕಾರಣವಾಗಬಹುದು.


ಮುಂಜಾಗ್ರತಾ ಕ್ರಮಗಳು

  • ಲಭ್ಯವಿದ್ದರೆ ನಿರೋಧಕ ಪ್ರಭೇದಗಳನ್ನು ಹುಡುಕಿ.
  • ಹೆಚ್ಚಿನ ರಸಗೊಬ್ಬರ ಬಳಕೆ ತಪ್ಪಿಸಿ ಮತ್ತು ಋತುವಿನಲ್ಲಿ ವಿಭಜಿತ ಬಳಕೆ ಯೋಜಿಸಿ.
  • ಹೊಲದ ಕೆಲಸದ ಸಮಯದಲ್ಲಿ ಸಸ್ಯಗಳಿಗೆ ಗಾಯಗಳಾಗುವುದನ್ನು ತಪ್ಪಿಸಿ.
  • ನೀರಾವರಿಯ ಸಮಯವನ್ನು ಎಚ್ಚರಿಕೆಯಿಂದ ಹೊಂದಿಸುವ ಮೂಲಕ ಎಲೆಯ ಆರ್ದ್ರತೆಯ ಅವಧಿಯನ್ನು ಕಡಿಮೆ ಮಾಡಿ.
  • ಹೊಲದ ಕೆಲಸದ ನಂತರ ಎಲ್ಲಾ ಸಾಧನಗಳನ್ನು ಸ್ವಚ್ಛಗೊಳಿಸಲು ಮತ್ತು ನಂತರ ಸೋಂಕು ನಿವಾರಿಸಲು ಮರೆಯದಿರಿ.
  • ಪ್ಯಾಕೇಜಿಂಗ್ ಸಮಯದಲ್ಲಿ ಉತ್ಪನ್ನಗಳ ಬಗ್ಗೆ ನಿಗಾ ವಹಿಸಿ.
  • ಕೆಟ್ಟ ಅಭ್ಯಾಸಗಳು ಹಣ್ಣುಗಳು ಗಾಯಗೊಳ್ಳಲು ಕಾರಣವಾಗಬಹುದು.
  • ಸೋಂಕಿತ ಸಸ್ಯದ ಉಳಿಕೆಗಳನ್ನು ತೆಗೆದುಹಾಕಿ ನಾಶ ಮಾಡಿ.
  • ಏಕ ಬೆಳೆ ತಪ್ಪಿಸಿ.
  • ಇದು ರೋಗವನ್ನು ಹರಡಲು ಪರಿಪೂರ್ಣ ಮಾರ್ಗವಾಗಿದೆ.
  • ನಿಮ್ಮ ಬೆಳೆಗಳಿಗೆ ಉತ್ತಮ pH ಅನ್ನು ಪಡೆಯಲು ಹೊಲಗಳಿಗೆ ಸುಣ್ಣವನ್ನು ಹಾಕಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ