ಬದನೆ

ಮೆಣಸಿನ ಚೊಯೆನೊಫೋರಾ ಅಂಗಮಾರಿ

Choanephora cucurbitarum

ಶಿಲೀಂಧ್ರ

ಸಂಕ್ಷಿಪ್ತವಾಗಿ

  • ಶಿಲೀಂಧ್ರವು ಸಾಮಾನ್ಯವಾಗಿ ಸಸ್ಯಗಳ ಮೇಲಿನ ಭಾಗಗಳಿಗೆ ಮೊದಲು ಸೋಂಕು ತಗುಲಿಸುತ್ತದೆ ಮತ್ತು ನಂತರ ಕೆಳಕ್ಕೆ ಬೆಳೆಯುತ್ತದೆ.
  • ಎಲೆಗಳು ಮತ್ತು ಮೊಗ್ಗುಗಳು ಒದ್ದೆಯಾಗುತ್ತವೆ ಮತ್ತು ಬೆಳ್ಳಿಯ ಬಣ್ಣ ಪಡೆದು ಕೊಳೆಯಲು ಪ್ರಾರಂಭಿಸುತ್ತವೆ.
  • ಹಣ್ಣುಗಳ ಭಾಗವು ಕಂದು ಬಣ್ಣದಿಂದ ಕಪ್ಪು ಬಣ್ಣಕ್ಕೆ ತಿರುಗುತ್ತದೆ, ಸಾಮಾನ್ಯವಾಗಿ ಹೂವಿರುವ ತುದಿಯಲ್ಲಿ.
  • ಸೋಂಕಿತ ಅಂಗಾಂಶಗಳಲ್ಲಿ ಶಿಲೀಂಧ್ರ ಬೆಳವಣಿಗೆಯ ಒಂದು ಪದರವು ಸ್ಪಷ್ಟವಾಗಿ ಗೋಚರಿಸುತ್ತದೆ.

ಇವುಗಳಲ್ಲಿ ಸಹ ಕಾಣಬಹುದು

21 ಬೆಳೆಗಳು
ಹುರುಳಿ
ಹಾಗಲಕಾಯಿ
ಎಲೆಕೋಸು
ಹೂಕೋಸು
ಇನ್ನಷ್ಟು

ಬದನೆ

ರೋಗಲಕ್ಷಣಗಳು

ಆರಂಭಿಕ ಲಕ್ಷಣಗಳು ಹೂವುಗಳು, ಹೂವಿನ ಮೊಗ್ಗುಗಳು ಅಥವಾ ಬೆಳೆಯುತ್ತಿರುವ ಬಿಂದುಗಳ ಕಪ್ಪಾಗುವಿಕೆ ಮತ್ತು ಬಾಡುವಿಕೆ (ಬ್ಲಾಸಮ್ ಬ್ಲೈಟ್) ಯನ್ನು ಒಳಗೊಂಡಿರುತ್ತದೆ. ಈ ರೋಗವು ನಂತರ ಕೆಳಕ್ಕೆ ಹರಡುತ್ತದೆ. ನೀರಿನಲ್ಲಿ ನೆನೆಸಿದಂತಹ ಗಾಯಗಳನ್ನು ಎಲೆಗಳ ಮೇಲೆ ಉತ್ಪತ್ತಿ ಮಾಡುತ್ತದೆ. ಇದು ಎಲೆಗಳಿಗೆ ಬೆಳ್ಳಿ ಬಣ್ಣದ ಛಾಯೆಯನ್ನು ನೀಡುತ್ತದೆ. ಹಳೆಯ ಗಾಯಗಳು ಸತ್ತಂತೆ ಆಗುತ್ತವೆ ಮತ್ತು ಒಣಗಿದಂತೆ ಕಂಡುಬರುತ್ತವೆ. ಇದು ರೋಗಯುಕ್ತ ಎಲೆ ಸುಳಿಗಳು ಮತ್ತು ಅಂಚುಗಳಿಗೆ ಕಾರಣವಾಗುತ್ತದೆ. ಕಾಂಡಗಳ ಮೇಲೆ, ಕೊಳೆತ ಚಿಹ್ನೆಗಳು ಕಂದು - ಕಪ್ಪು ತೇಪೆಗಳಂತೆ ಕಾಣಿಸಿಕೊಳ್ಳುತ್ತದೆ ಮತ್ತು ಡೈ-ಬ್ಯಾಕ್ ( ಸಸ್ಯ ಮೇಲಿನಿಂದ ಕೆಳಗೆ ಸಾಯುವುದು) ಕಾಣಿಸಿಕೊಳ್ಳುತ್ತದೆ. ಅಂತಿಮವಾಗಿ, ಇಡೀ ಸಸ್ಯವೇ ಬಾಡಬಹುದು. ಎಳೆಯ ಹಣ್ಣುಗಳಲ್ಲಿ ಸಾಮಾನ್ಯವಾಗಿ ಹೂ ತುದಿಯಲ್ಲಿ, ಕಪ್ಪು ಮೃದು ಕೊಳೆತ ಜಾಗಗಳು ಬೆಳೆಯಬಹುದು. ಸಮೀಪದಿಂದ ತಪಾಸಣೆ ಮಾಡಿದಾಗ ಎಲ್ಲಾ ಸೋಂಕಿತ ಅಂಗಾಂಶಗಳ ಮೇಲೆ ಬೆಳ್ಳಿಯ, ಕೂದಲು-ರೀತಿಯ ಬೆಳವಣಿಗೆಯನ್ನು ನೋಡಬಹುದು. ಸಸಿಗಳಲ್ಲಿ, ಇದನ್ನು ಫೈಟೊಫ್ಥೊರಾ ರೋಗದ ಲಕ್ಷಣಗಳೊಂದಿಗೆ ತಪ್ಪಾಗಿ ಭಾವಿಸಿ ಗೊಂದಲವಾಗುವ ಸಾಧ್ಯತೆ ಇದೆ.

ಶಿಫಾರಸುಗಳು

ಜೈವಿಕ ನಿಯಂತ್ರಣ

ಈ ರೋಗಕ್ಕೆ ನಿಜವಾದ ಜೈವಿಕ ಚಿಕಿತ್ಸೆ ಇಲ್ಲ. ಬೆನಿನ್ ಎನ್ನುವ ಜಾಗದಲ್ಲಿ, ಬಾಸಿಲ್ಲಸ್ ಸಬ್ಟಿಲಿಸ್ ಎಂಬ ಬ್ಯಾಕ್ಟೀರಿಯಾವು ಚೊಯೆನೊಫೋರಾ ಕುಕುರ್ಬಿಟರಂ ವಿರುದ್ಧ ಪ್ರತಿರೋಧ ಪರಿಣಾಮ ಬೀರಿ ಕೆಲವು ಬೆಳೆಗಳಲ್ಲಿ ಧನಾತ್ಮಕವಾಗಿ ಕೆಲಸಮಾಡಿದೆ. ಆದಾಗ್ಯೂ, ಮೆಣಸುಗಳ ಮೇಲೆ ಇದರ ಯಾವುದೇ ಪರೀಕ್ಷೆಯನ್ನು ಕೈಗೊಳ್ಳಲಾಗಿಲ್ಲ.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದರೆ, ಜೈವಿಕ ಚಿಕಿತ್ಸೆಗಳೊಂದಿಗೆ ತಡೆಗಟ್ಟುವ ಕ್ರಮಗಳಿರುವ ಸಮಗ್ರವಾದ ಮಾರ್ಗವನ್ನು ಯಾವಾಗಲೂ ಮೊದಲು ಪರಿಗಣಿಸಿ. ಈ ರೋಗಕ್ಕೆಂದೇ ಗುರುತಿಸಲಾಗಿರುವ ಶಿಲೀಂಧ್ರನಾಶಕಗಳು ಇಲ್ಲವಾದ್ದರಿಂದ ತಡೆಗಟ್ಟುವಿಕೆಯೇ ಮುಖ್ಯವಾಗಿದೆ. ಶಿಲೀಂಧ್ರನಾಶಕಗಳನ್ನು ಬಳಸಿಕೊಂಡು ನಿಯಂತ್ರಿಸುವುದು ರೋಗಲಕ್ಷಣಗಳ ಬೆಳವಣಿಗೆಯನ್ನು ತಡೆಯಲು ಸಹಾಯ ಮಾಡಬಹುದು. ಆದರೆ ಸಸ್ಯಗಳು ನಿರಂತರವಾಗಿ ಹೂಬಿಡುವುದರಿಂದ ಮತ್ತು ಆ ಮೂಲಕ ರೋಗಕ್ಕೆ ಸತತ ಈಡಾಗುವ ಕಾರಣ ಸಾಮಾನ್ಯವಾಗಿ ಇದು ಪ್ರಾಯೋಗಿಕವಲ್ಲ.

ಅದಕ್ಕೆ ಏನು ಕಾರಣ

ಅವಕಾಶವಾದಿ ಶಿಲೀಂಧ್ರ, ಚೊಯೆನೊಫೋರಾ ಕುಕುರ್ಬಿಟರಂನಿಂದ ರೋಗಲಕ್ಷಣಗಳು ಉಂಟಾಗುತ್ತವೆ. ಇದು ಮುಖ್ಯವಾಗಿ ಕೀಟಗಳಿಂದ ಅಥವಾ ಹೊಲದಲ್ಲಿ ಕೆಲಸದ ಸಮಯದಲ್ಲಿ ಯಾಂತ್ರಿಕ ವಿಧಾನಗಳಿಂದ ಹಾನಿಗೊಳಗಾದ ಅಂಗಾಂಶಗಳನ್ನು ಆಕ್ರಮಿಸುತ್ತವೆ. ಅದರ ಬೀಜಕಗಳು ಸಾಮಾನ್ಯವಾಗಿ ಗಾಳಿ, ನೀರಿನ ತುಂತುರು, ಮತ್ತು ಬಟ್ಟೆ, ಉಪಕರಣಗಳು ಮತ್ತು ಸಾಗುವಳಿ ಸಾಧನಗಳ ಮೂಲಕ ಹರಡುತ್ತವೆ. ದೀರ್ಘಕಾಲದ ಮಳೆಗಾಲದ ಅವಧಿಯಲ್ಲಿ, ಅಧಿಕ ಆರ್ದ್ರತೆ ಮತ್ತು ಅಧಿಕ ತಾಪಮಾನದಲ್ಲಿ ಸಾಮಾನ್ಯವಾಗಿ ರೋಗ ಏಕಾಏಕಿ ಸಂಭವಿಸುತ್ತದೆ. ಉಷ್ಣವಲಯದ ಹವಾಮಾನಗಳಲ್ಲಿ ಮಳೆಯ ಋತುವಿನಲ್ಲಿ ಬೆಳೆದ ಮೆಣಸಿಗೆ ಇದು ಅತಿಹೆಚ್ಚು ಹಾನಿಯನ್ನುಂಟುಮಾಡುತ್ತದೆ. ಈ ಪರಿಸ್ಥಿತಿಗಳಿಗೆ ಕಳಪೆಯಾಗಿ ಅಳವಡಿಸಲಾಗಿರುವ ಬೆಳೆಗಳು ನಿರ್ದಿಷ್ಟವಾಗಿ ಈ ರೋಗಕ್ಕೆ ಒಳಗಾಗುತ್ತದೆ. ಫೈಥೊಫ್ಟೋರಾ ರೋಗಲಕ್ಷಣದೊಂದಿಗೆ ಇದರ ವ್ಯತ್ಯಾಸವನ್ನು ತಿಳಿಯಲು, ಬೂದು ಕೂದಲಿನ ಉಪಸ್ಥಿತಿಗಾಗಿ ಅಂಗಾಂಶಗಳನ್ನು ಗಮನಿಸಿ (ಬೆಳಿಗ್ಗೆ ಸಮಯ ಒಳ್ಳೆಯದು)


ಮುಂಜಾಗ್ರತಾ ಕ್ರಮಗಳು

  • ರೋಗದ ಚಿಹ್ನೆಗಳಿಗಾಗಿ ಹೊಲದ ಮೇಲ್ವಿಚಾರಣೆ ಮಾಡಿ.
  • ಹೊಲ ಮತ್ತು ಅದರ ಸುತ್ತಲು ಪರ್ಯಾಯ ಆಶ್ರಯದಾತ ಸಸ್ಯಗಳು ಮತ್ತು ಕಳೆಗಳನ್ನು ತೆಗೆದುಹಾಕಿ.
  • ಮಣ್ಣಿನ ಸಂಕುಚತೆಯನ್ನು ಕಡಿಮೆ ಮಾಡಿ ಮತ್ತು ಸಾಧ್ಯವಾದರೆ ಒಳಚರಂಡಿ ಸುಧಾರಿಸಿ.
  • ನಾಟಿ ಮಾಡುವಾಗ ಸಸ್ಯದ ತಳದಲ್ಲಿ ಯಾವುದೇ ಗುಂಡಿ ಉಳಿದಿಲ್ಲ ಎಂದು ಖಚಿತಪಡಿಸಿಕೊಳ್ಳಿ.
  • ಸಸ್ಯಗಳ ನಡುವೆ ಹೆಚ್ಚು ಅಂತರ ಮತ್ತು ಎತ್ತರದ ಸಸಿಮಡಿಗಳು ಮತ್ತು ಉಬ್ಬುಗಳನ್ನು ಬಳಸಿ.
  • ತುಂತುರು ನೀರಾವರಿ ಮಾಡಬೇಡಿ ಮತ್ತು ಸಾಧ್ಯವಾದರೆ ಎಲೆಗಳನ್ನು ಒಣದಾಗಿ ಇರಿಸಿ.
  • ಪೋಷಕಾಂಶಗಳು ದಟ್ಟವಾದ ಮೇಲಾವರಣವನ್ನು ರಚಿಸುವ ಕಾರಣದಿಂದ ಅವುಗಳನ್ನು ವಿಪರೀತವಾಗಿ ಬಳಸಬೇಡಿ.
  • ರೋಗಕ್ಕೆ ಒಳಗಾಗದ ಬೆಳೆಗಳೊಂದಿಗೆ ಬೆಳೆ ಸರದಿ ಮಾಡಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ