Stemphylium solani
ಶಿಲೀಂಧ್ರ
ಬೂದು ಎಲೆ ಚುಕ್ಕೆ 2 ಸೆಂ.ಮೀ ವ್ಯಾಸದಷ್ವು ದೊಡ್ಡದಾಗಿರಬಹುದು. ವೃತ್ತಾಕಾರವಾಗಿದ್ದು, ನೇರಳೆ ಅಂಚು ಹೊಂದಿರುತ್ತದೆ. ಅವು ಬೆಳೆದಂತೆ, ಗಾಯಗಳ ಒಳಗೆ ಒಂದು ಕೇಂದ್ರೀಕೃತ ನಮೂನೆ ಮತ್ತು ಬಿಳಿಯ ಕೇಂದ್ರ ಬೆಳೆಯುತ್ತದೆ. ಇದು ನಂತರ ಬಿರುಕು ಬಿಡಬಹುದು ಮತ್ತು ಬೀಳಬಹುದು. ಇದರಿಂದಾಗಿ "ಶಾಟ್- ಹೋಲ್" ಪರಿಣಾಮ ಉಂಟಾಗುತ್ತದೆ. ಗಾಯಗಳು ಸಾಮಾನ್ಯವಾಗಿ ಮೇಲಾವರಣದ ಮೇಲ್ಭಾಗದ ಎಲೆಗಳಲ್ಲಿ ಕಾಣಿಸಿಕೊಳ್ಳುತ್ತದೆ. ಮತ್ತು ಎಲೆಯ ಅಂಚಿನಲ್ಲಿ ಪ್ರಾರಂಭವಾಗಿ ಒಳಮುಖವಾಗಿ ಸಾಗುತ್ತದೆ. ಹೂ ಅರಳುವ ಕೊನೆಯ ಹಂತದಲ್ಲಿ ಸಸ್ಯದ ಮೇಲಿನ ಎಲೆಗಳು ಹೆಚ್ಚಾಗಿ ಸೋಂಕಿಗೆ ಒಳಗಾಗುವ ಸಾಧ್ಯತೆ ಹೆಚ್ಚು. ಆ ಸಮಯದಲ್ಲಿ ಪೋಷಕಾಂಶಗಳ ಹೆಚ್ಚಿನ ಬೇಡಿಕೆ ಇರುವುದೇ ಇದಕ್ಕೆ ಕಾರಣ. ಈ ರೋಗವನ್ನು ಸರಿಯಾದ ಕಾಲಕ್ಕೆ ಪತ್ತೆಹಚ್ಚಿ K ಚಿಕಿತ್ಸೆ ನೀಡಿದರೆ ಇದು ದ್ವಿತೀಯಕ ರೋಗವಾಗಿರುತ್ತದೆ. ಆದರೆ ಚಿಕಿತ್ಸೆ ನೀಡದೇ ಇದ್ದರೆ, ದೊಡ್ಡ ಪ್ರಮಾಣದಲ್ಲಿ ಅಕಾಲಿಕ ಎಲೆ ಉದುರುವಿಕೆ ಮತ್ತು ಇಳುವರಿ ನಷ್ಟಕ್ಕೆ ಕಾರಣವಾಗಬಹುದು.
ಇದುವರೆಗೂ, ಈ ರೋಗಕ್ಕೆ ವಿರುದ್ಧವಾದ ಜೈವಿಕ ನಿಯಂತ್ರಣ ಪರಿಹಾರಗಳಿಲ್ಲ. ತಡೆಗಟ್ಟುವ ಕ್ರಮವನ್ನು ಅನುಸರಿಸಿ.
ಲಭ್ಯವಿದ್ದರೆ, ತಡೆಗಟ್ಟುವ ಕ್ರಮಗಳು ಮತ್ತು ಜೈವಿಕ ಚಿಕಿತ್ಸೆಗಳಿರುವ ಸಮಗ್ರ ವಿಧಾನವನ್ನು ಯಾವಾಗಲೂ ಪರಿಗಣಿಸಿ. ಶಿಲೀಂಧ್ರನಾಶಕಗಳು ಈ ರೋಗದ (ಪಿರಾಕ್ಲೋಸ್ಟ್ರೋಬಿನ್, ಪಿರಾಕ್ಲೋಸ್ಟ್ರೋಬಿನ್ + ಮೆಟ್ಕೊನಜೋಲ್) ಚಿಕಿತ್ಸೆಗೆ ಲಭ್ಯವಿವೆಯಾದರೂ, ಆರ್ಥಿಕವಾಗಿ ಕಾರ್ಯಸಾಧ್ಯವಲ್ಲವಾದ ಕಾರಣ ಸಾಮಾನ್ಯವಾಗಿ ಶಿಫಾರಸು ಮಾಡಲಾಗುವುದಿಲ್ಲ.
ರೋಗಲಕ್ಷಣಗಳು ಶಿಲೀಂಧ್ರ ಸ್ಟೆಮ್ಫೈಲಿಯಮ್ ಸೊಲಾನಿಯಿಂದ ಉಂಟಾಗುತ್ತದೆ. ಇದು ಉಂಟಾಗುವ ಸಂದರ್ಭ ಮತ್ತು ರೋಗದ ಬೆಳವಣಿಗೆಯು ಆರ್ದ್ರತೆ, ಹೆಚ್ಚು ಮಳೆ ಮತ್ತು ದೀರ್ಘಕಾಲದ ಬರಗಳಿದ್ದಾಗ ಹೆಚ್ಚಾಗಿರುತ್ತದೆ. ಸಸ್ಯೀಯ ಅಥವಾ ಪೋಷಕಾಂಶದ ಒತ್ತಡಗಳು ಮುಖ್ಯವಾಗಿ ಹೂಬಿಡುವ ಅಥವಾ ಬೀಜಕೋಶ ರಚನೆಯ ಸಮಯದಲ್ಲಿ ಪ್ರಮುಖ ಅಂಶಗಳಾಗಿವೆ. ಪೊಟ್ಯಾಸಿಯಮ್ ಕೊರತೆ ಮುಖ್ಯ ಅಂಶವಾಗಿದೆ ಆದರೆ ಇದು ಬರ, ಕೀಟದ ಒತ್ತಡ ಅಥವಾ ಮಣ್ಣಿನಲ್ಲಿ ನೆಮಟೋಡ್ ಗಳ ಉಪಸ್ಥಿತಿಗೂ ಸಂಬಂಧಿಸಿದೆ. ಈ ಶಿಲೀಂಧ್ರಗಳ ಬೀಜಕಗಳನ್ನು ಇತರ ಸಸ್ಯಗಳಿಗೆ ಹರಡುವಲ್ಲಿ ಗಾಳಿ ಕೂಡ ಸಹಾಯ ಮಾಡುತ್ತದೆ. 20-30 °C ತಾಪಮಾನವು ರೋಗಗಳ ಬೆಳವಣಿಗೆಗೆ ಸೂಕ್ತವಾಗಿದೆ. ಈ ಶಿಲೀಂಧ್ರವು ಆಲ್ಟರ್ನೇರಿಯಾ ಮತ್ತು ಸೆರ್ಕೊಸ್ಪೊರಾ ಜಾತಿಗಳ ಶಿಲೀಂಧ್ರಗಳೊಂದಿಗೆ ಒಂದು ರೋಗ ಸಂಕೀರ್ಣವನ್ನು ರೂಪಿಸಬಹುದು ಮತ್ತು ಅದೇ ಹೊಲದಲ್ಲಿ ಕಾಣಿಸಿಕೊಳ್ಳಬಹುದು. ಬದಲಿ ಆಶ್ರಯದಾತ ಸಸ್ಯಗಳೆಂದರೆ ಹತ್ತಿ, ಟೊಮೆಟೊ, ಆಲೂಗಡ್ಡೆ, ಮೆಣಸು, ಬದನೆ ಮತ್ತು ಈರುಳ್ಳಿ.