ಹತ್ತಿ

ಹತ್ತಿಯಲ್ಲಿ ಒದ್ದೆ ಹವಾಮಾನ ರೋಗ

Ascochyta gossypii

ಶಿಲೀಂಧ್ರ

ಸಂಕ್ಷಿಪ್ತವಾಗಿ

  • ಕಾಟಿಲಿಡಾನ್ ಗಳು ಮತ್ತು ಸಸಿಗಳ ಕೆಳಗಿನ ಎಲೆಗಳ ಮೇಲೆ, ವೃತ್ತಾಕಾರದ, ತಿಳಿ ಕಂದು ಅಥವಾ ಬಿಳಿ ಕಲೆಗಳು.
  • ಬೆಳೆದ ಎಲೆಗಳ ಮೇಲೆ ಗಾಢ ಕಂದು ಅಂಚುಗಳಿರುವ ಕಪ್ಪು ಚುಕ್ಕೆಗಳು.
  • ಮತ್ತು ಕಾಂಡಗಳ ಮೇಲೆ ಉದ್ದವಾದ, ಕಪ್ಪು ಅಥವಾ ಬೂದಿ ಬಣ್ಣದ ಗಾಯಗಳು.
  • ಹೂವುಗಳು ದಾಳಿಗೊಳಗಾಗುವುದಿಲ್ಲ.
  • ಆದರೆ ಬೀಜಕೋಶಗಳು ಅರ್ಧ-ತೆರೆಯಲ್ಪಡುತ್ತವೆ ಮತ್ತು ಲಿಂಟ್ ಬಣ್ಣ ಕಳೆದುಕೊಳ್ಳಬಹುದು.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ಹತ್ತಿ

ರೋಗಲಕ್ಷಣಗಳು

ಆಸ್ಕೊಚಿಟಾ ರೋಗವು ಸಾಮಾನ್ಯವಾಗಿ ಋತುವಿನ ಆರಂಭದಲ್ಲಿ ಸಂಭವಿಸುತ್ತದೆ. ಇದು ಕಾಟಿಲಿಡಾನ್ ಮತ್ತು ಸಸಿಗಳ ಕೆಳ ಎಲೆಗಳ ಮೇಲೆ ವೃತ್ತಾಕಾರದ, ವಿವಿಧ ಗಾತ್ರದ ತಿಳಿ ಕಂದು ಅಥವಾ ಬಿಳಿ ಬಣ್ಣದ ಕಲೆಗಳಿಂದ ಗುರುತಿಸಲ್ಪಡುತ್ತದೆ. ಈ ಗಾಯಗಳು ಗಣನೀಯ ಗಾತ್ರವನ್ನು ತಲುಪಬಹುದು ಮತ್ತು ನೇರಳೆ-ಕಂದು ಅಂಚನ್ನು ಹೊಂದಬಹುದು. ನಂತರದಲ್ಲಿ ಸೋಂಕು, ಬೆಳೆದ ಎಲೆಗಳ ಮೇಲೆ ಕಂದು ಬಣ್ಣದ ಛಾಯೆಗಳಾಗಿ ಕಾಣಿಸಿಕೊಳ್ಳುತ್ತದೆ. ಗಾಯಗಳು ಒಗ್ಗೂಡಿ, ವ್ಯಾಪಕವಾದ ಕಪ್ಪು ಕಲೆಗಳನ್ನು ರೂಪಿಸುತ್ತವೆ. ಈ ಗಾಯಗಳ ಕೇಂದ್ರವು ನಂತರ ತಿಳಿ ಕಂದು ಅಥವಾ ಬೂದು ಬಣ್ಣಕ್ಕೆ ತಿರುಗಿ ಕಾಗದದಂತಾಗುತ್ತದೆ. ಅಂತಿಮವಾಗಿ ಉದುರುತ್ತದೆ. ಉದ್ದವಾದ, ಕಪ್ಪು ಅಥವಾ ಬೂದಿ ಬೂದು ಬಣ್ಣದ ಹುಣ್ಣುಗಳು ಕಾಂಡಗಳ ಮೇಲೆ ಗೋಚರಿಸುತ್ತವೆ, ಮುಖ್ಯವಾಗಿ ಹಲವಾರು ದಿನಗಳ ಮೋಡ ಕವಿದ ವಾತಾವರಣ, ಆರ್ದ್ರ ಹವಾಮಾನದ ನಂತರ. ಇಲ್ಲಿಯೂ ಸಹ, ಸಣ್ಣ, ಕಪ್ಪು ಚುಕ್ಕೆಗಳು ಗಾಯಗಳಲ್ಲಿ ಗೋಚರಿಸುತ್ತವೆ. ಕಾಲಾನಂತರದಲ್ಲಿ, ಹುಣ್ಣಗಳು ಒಣಗಿ, ಬಿರುಕು ಬಿಟ್ಟು ನಂತರ ಕಾಂಡವನ್ನು ಸುತ್ತುತ್ತವೆ. ಸಸ್ಯದ ಹೆಚ್ಚಿನ ಭಾಗಗಳನ್ನು ಕೊಲ್ಲುತ್ತವೆ. ಹೂವುಗಳ ಮೇಲೆ ದಾಳಿಯಾಗುವುದಿಲ್ಲ, ಆದರೆ ಬೀಜಕೋಶಗಳು ಅರ್ಧ-ತೆರೆಯಲ್ಪಡಬಹುದು ಮತ್ತು ಲಿಂಟ್ ಗಳು ಬೂದುಬಣ್ಣಕ್ಕೆ ತಿರುಗಬಹುದು.

ಶಿಫಾರಸುಗಳು

ಜೈವಿಕ ನಿಯಂತ್ರಣ

ಇಂದಿನವರೆಗೂ, ಯಾವುದೇ ಜೈವಿಕ ಚಿಕಿತ್ಸೆಯು ಈ ರೋಗದ ವಿರುದ್ಧ ಲಭ್ಯವಿಲ್ಲ. ಬೋರ್ಡೆಕ್ಸ್ ಮಿಶ್ರಣದಂತಹ ತಾಮ್ರ ಆಧಾರಿತ ಶಿಲೀಂಧ್ರನಾಶಕಗಳನ್ನು, ರೋಗ ಹರಡುವಿಕೆಯನ್ನು ಕಡಿಮೆ ಮಾಡಲು ಬಳಸಬಹುದು. ಆದಾಗ್ಯೂ, ಇದು ಸಸ್ಯಗಳಲ್ಲಿ ವಿಷಕಾರಿ ಪ್ರತಿಕ್ರಿಯೆಯನ್ನು ಉಂಟುಮಾಡಬಹುದು ಎಂಬುದನ್ನು ಗಮನಿಸಿ.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದರೆ, ತಡೆಗಟ್ಟುವ ಕ್ರಮಗಳು ಮತ್ತು ಜೈವಿಕ ಚಿಕಿತ್ಸೆಗಳು ಒಟ್ಟಾಗಿರುವ ಸಮಗ್ರ ವಿಧಾನವನ್ನು ಯಾವಾಗಲೂ ಪರಿಗಣಿಸಿ. ಬೀಜಗಳನ್ನು ಬಿತ್ತನೆ ಮಾಡುವ ಮೊದಲು ತಿರಾಮ್ ಅಥವಾ ತಿರಾಮ್ ಮತ್ತು ತಿಯಾಬೆಂಡಜೋಲ್ ಆಧಾರಿತ ಬೀಜದ ಡ್ರೆಸ್ಸಿಂಗ್ ಮೂಲಕ ಚಿಕಿತ್ಸೆ ನೀಡಬಹುದು. ಕ್ಲೋರೊಥಲೋನಿಲ್ ಅನ್ನು ಆಧರಿಸಿದ ನಿಯಂತ್ರಕ ಎಲೆಗಳ ಶಿಲೀಂಧ್ರನಾಶಕಗಳನ್ನು ಬಳಸಬಹುದು. ವಿಶೇಷವಾಗಿ ರೋಗಕ್ಕೆ ಒಳಗಾಗುವ ಪ್ರಭೇದ ಬೆಳೆಸಿದ್ದರೆ. ರೋಗ ಪತ್ತೆಯಾದ ನಂತರ, ವ್ಯವಸ್ಥಿತ ಕ್ರಮದೊಂದಿಗೆ, ಎಲೆಗಳ ಶಿಲೀಂಧ್ರನಾಶಕಗಳ ಸರದಿ ಬಳಕೆ ಶಿಫಾರಸು ಮಾಡಲಾಗುತ್ತದೆ (ಬೊಸ್ಕ್ಯಾಲಿಡ್, ಮನ್ಕೊಜೆಬ್, ಪಿರಾಕ್ಲೋಸ್ಟ್ರೋಬಿನ್ + ಫ್ಲಕ್ಸಾಪೈರಾಕ್ಸಡ್). ಗಂಭೀರ ಇಳುವರಿ ನಷ್ಟವನ್ನು ತಪ್ಪಿಸಲು ಬೆಳೆ ಋತುವಿನ ಉದ್ದಕ್ಕೂ ಚಿಕಿತ್ಸೆಯನ್ನು ಮಾಡಬೇಕು.

ಅದಕ್ಕೆ ಏನು ಕಾರಣ

ಆಸ್ಕೋಚಿಟಾ ರೋಗವು ಪ್ರಮುಖವಾಗಿ ಹತ್ತಿ ಉತ್ಪಾದಿಸುವ ಹೆಚ್ಚಿನ ಪ್ರದೇಶಗಳಲ್ಲಿ ವರದಿಯಾಗಿದೆ ಮತ್ತು ಇದು ಶಿಲೀಂಧ್ರ ಆಸ್ಕೊಚಿಟಾ ಗೊಸ್ಸಿಪಿಯಿಂದ ಉಂಟಾಗುತ್ತದೆ. ಇದು ಸಸ್ಯದ ಉಳಿಕೆಗಳ ಮೇಲೆ ಹಲವಾರು ವರ್ಷಗಳವರೆಗೆ ಸುಪ್ತಾವಸ್ಥೆಯಲ್ಲಿ ಇರಬಲ್ಲದು ಮತ್ತು ಅನುಕೂಲಕರ ಪರಿಸ್ಥಿತಿಗಳಲ್ಲಿ ಇದು ಬೀಜಕಗಳನ್ನು ಉತ್ಪಾದಿಸುತ್ತದೆ. ಅವು ನಂತರ ಗಾಳಿ ಮತ್ತು ಮಳೆಯ ತುಂತುರಿನಿಂದ ಹರಡುತ್ತವೆ. ಕೆಲವೊಮ್ಮೆ ಹಲವು ಕಿಲೋಮೀಟರ್ ಗಳ ವರೆಗೂ ಹರಡುತ್ತವೆ. ಶೀತ ಹವಾಮಾನ, ಮೋಡ ಮಳೆಯ ವಾತಾವರಣ, ಅಧಿಕ ಆರ್ದ್ರತೆ, ಬೆಳಗ್ಗಿನ ಇಬ್ಬನಿ ಮತ್ತು ದೀರ್ಘಕಾಲದ ಎಲೆಯ ಆರ್ದ್ರತೆ (2 ಗಂಟೆಗಳ ಅಥವಾ ಹೆಚ್ಚು) ರೋಗದ ಹರಡುವಿಕೆಗೆ ಅನುಕೂಲವಾಗಿವೆ. ಅದರಲ್ಲೂ ವಿಶೇಷವಾಗಿ ಆರಂಭಿಕ ಸಸ್ಯ ಹಂತಗಳಲ್ಲಿ. ಶಿಲೀಂಧ್ರವು ವಿಶಾಲವಾದ ತಾಪಮಾನ ಶ್ರೇಣಿಯಲ್ಲಿ (5-30 °C) ಬೆಳೆಯಬಲ್ಲದು ಆದರೆ ಉತ್ತಮ ಬೆಳವಣಿಗೆಯನ್ನು 15-25 °C ನಡುವೆ ತಲುಪುತ್ತದೆ. ಪರಿಸ್ಥಿತಿಗಳು ಅನುಕೂಲಕರವಾಗಿದ್ದರೆ ಬೆಳವಣಿಗೆ ಋತುವಿನ ಅವಧಿಯಲ್ಲಿ ಸೋಂಕಿನ ಅನೇಕ ಚಕ್ರಗಳು ಸಂಭವಿಸಬಹುದು. ಇಳುವರಿ ನಷ್ಟಗಳು ಅಪರೂಪವಾಗಿ ವರದಿಯಾಗಿವೆ. ಆದರೆ ಅನುಕೂಲಕರ ಸ್ಥಿತಿಗಳಿದ್ದಲ್ಲಿ ನಷ್ಟ ಸಾಧ್ಯವಿದೆ.


ಮುಂಜಾಗ್ರತಾ ಕ್ರಮಗಳು

  • ಲಭ್ಯವಿದ್ದರೆ ಹೆಚ್ಚು ಬೇಗ ಚೇತರಿಸಿಕೊಳ್ಳುವ ಪ್ರಭೇದಗಳನ್ನು ಆರಿಸಿಕೊಳ್ಳಿ.
  • ಪ್ರಮಾಣೀಕೃತ ರೋಗ ಮುಕ್ತ ಬೀಜವನ್ನು ಬಳಸಿ.
  • ಪರ್ಯಾಯವಾಗಿ, ಆರೋಗ್ಯಕರ ಹೊಲದಿಂದ ಬೀಜಗಳನ್ನು ಬಳಸಿ.
  • ದಟ್ಟವಾದ ಮೇಲಾವರಣಗಳನ್ನು ತಪ್ಪಿಸಲು ಬೀಜ ದರಗಳಿಗೆ ಸಂಬಂಧಿಸಿದಂತೆ ಶಿಫಾರಸುಗಳನ್ನು ಅನುಸರಿಸಿ.
  • ರೋಗದ ಕೆಟ್ಟ ಪರಿಣಾಮವನ್ನು ತಪ್ಪಿಸಲು ತಡವಾಗಿ ನೆಡಿ.
  • ರೋಗದ ಚಿಹ್ನೆಗಳಿಗಾಗಿ ಹೊಲದ ಮೇಲ್ವಿಚಾರಣೆ ಮಾಡಿ.
  • ಹೊಲ ಮತ್ತು ಸುತ್ತಲಿನಲ್ಲಿ ತಾವಾಗಿ ಬೆಳೆದ ಸಸ್ಯಗಳು, ಬೇಡದ ಸಸ್ಯಗಳು ಮತ್ತು ಕಳೆಗಳನ್ನು ಕಿತ್ತು ಹಾಕಿ.
  • ಉತ್ತಮ ಕೃಷಿ ನೈರ್ಮಲ್ಯ ಪದ್ಧತಿಗಳನ್ನು ಪಾಲಿಸಿ.
  • ಉದಾಹರಣೆಗೆ ಪಾದರಕ್ಷೆ ಮತ್ತು ಬಟ್ಟೆ ತೊಳೆಯುವುದು ಮತ್ತು ಸಲಕರಣೆಗಳನ್ನು ಸ್ವಚ್ಛಗೊಳಿಸುವುದು.
  • ಅತಿ ನೀರಾವರಿ ಮತ್ತು ಸಿಂಪಡಿಸುವ ನೀರಾವರಿ ತಪ್ಪಿಸಿ.
  • ಎಲೆಯ ಮೇಲ್ಮೈಗಳು ತೇವವಾಗಿದ್ದಾಗ ಹೊಲದಲ್ಲಿ ಕೆಲಸ ಮಾಡುವುದನ್ನು ತಪ್ಪಿಸಿ.
  • ಇಳುವರಿ ಮೇಲೆ ಕೆಟ್ಟ ಪರಿಣಾಮಗಳನ್ನು ತಪ್ಪಿಸಲು ಸಾಧ್ಯವಾದಷ್ಟು ಬೇಗ ಕೊಯ್ಲು ಮಾಡಿ.
  • ಮುಂದಿನ ಋತುವಿಗೆ ಶಿಲೀಂಧ್ರ ಹರಡುವುದನ್ನು ಕಡಿಮೆ ಮಾಡಲು ಅವಶೇಷಗಳನ್ನು ಮಣ್ಣಿನ ಆಳದಲ್ಲಿ ಹೂತುಹಾಕಿ.
  • ಪರ್ಯಾಯವಾಗಿ ಅವುಗಳನ್ನು ತೆಗೆದುಹಾಕಿ ಮತ್ತು ಸುಡುವ ಮೂಲಕ ಅವುಗಳನ್ನು ನಾಶಮಾಡಿ.
  • ರೋಗಕ್ಕೆ ಒಳಗಾಗದ ಸಸ್ಯಗಳೊಂದಿಗೆ 2-3 ವರ್ಷದ ಬೆಳೆ ಸರದಿ ಯೋಜನೆ ಮಾಡಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ