Diaporthe vexans
ಶಿಲೀಂಧ್ರ
ಎಲೆಗಳು, ಕಾಂಡ ಮತ್ತು ಹಣ್ಣುಗಳಲ್ಲಿ ರೋಗಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಅವುಗಳು ಹಣ್ಣುಗಳಲ್ಲಿ ಹೆಚ್ಚು ಗೋಚರಿಸುತ್ತವೆ. ತಿಳಿಯಾದ ಕೇಂದ್ರಗಳೊಂದಿಗೆ ಹಲವಾರು ಸಣ್ಣ, ಬೂದು ಬಣ್ಣದಿಂದ ಕಂದು ಬಣ್ಣದ ಕಲೆಗಳು ಎಲೆಗಳ ಮೇಲೆ ಕಾಣಿಸುತ್ತವೆ ಮತ್ತು ಅಂತಿಮವಾಗಿ ಇವು ಹಲವಾರು ಸಂಖ್ಯೆಯಲ್ಲಿ ಕಾಣಿಸಿಕೊಂಡು ಎಲೆಯ ಮೇಲ್ಮೈಯ ದೊಡ್ಡ ಪ್ರದೇಶವನ್ನು ಒಳಗೊಳ್ಳಬಹುದು. ತೀವ್ರವಾಗಿ-ಸೋಂಕಿತವಾದ ಎಲೆಗಳು ಹಸಿರು ಬಣ್ಣ ಕಳೆದುಕೊಳ್ಳುತ್ತವೆ. ಮತ್ತು ಬಿರುಕುಗೊಂಡ, ಹಾನಿಗೊಳಗಾದ, ಅಂಗಾಂಶದೊಂದಿಗೆ (ಎಲೆ ಅಂಗಮಾರಿ) ಉದುರುತ್ತವೆ. ಕಾಂಡಗಳ ಮೇಲೆ ಕಂದು ಬಣ್ಣದಿಂದ ಕಪ್ಪು ಬಣ್ಣದ, ಗುಳಿಬಿದ್ದ ಹುಣ್ಣುಗಳು ಬೆಳೆಯಬಹುದು. ಸಸ್ಯದ ತಳದಲ್ಲಿ ಈ ಹುಣ್ಣುಗಳು ಕಾಂಡವನ್ನು ಸುತ್ತಿ, ನೀರು ಮತ್ತು ಪೋಷಕಾಂಶಗಳ ಸಾಗಣೆಯನ್ನು ತಡೆಗಟ್ಟುತ್ತವೆ. ಅಂತಿಮವಾಗಿ ಸಸ್ಯವನ್ನು ಕೊಲ್ಲುತ್ತವೆ. ಕಂದು, ಮೃದುವಾದ, ಗುಳಿಬಿದ್ದ ಗಾಯಗಳು ಹಣ್ಣುಗಳಲ್ಲಿ ಕಾಣಿಸುತ್ತವೆ. ಅವುಗಳು ದೊಡ್ಡದಾಗುತ್ತಿದ್ದಂತೆ, ಅನೇಕವೇಳೆ ವಿಲೀನಗೊಳ್ಳುತ್ತವೆ. ಹಣ್ಣಿನ ಮೇಲ್ಮೈಯ ಒಂದು ದೊಡ್ಡ ಭಾಗವನ್ನು ಆವರಿಸುತ್ತವೆ. ಮತ್ತು ಅವುಗಳ ಅಂಚುಗಳಲ್ಲಿ ಸಣ್ಣ ಕಪ್ಪು ಚುಕ್ಕೆಗಳಿರುವ ಕೇಂದ್ರೀಕೃತ ಉಂಗುರಗಳನ್ನು ರಚಿಸುತ್ತವೆ. ಅಂತಿಮವಾಗಿ, ಹಣ್ಣುಗಳು ಕೊಳೆಯುತ್ತವೆ. ಸಣ್ಣ ಕಪ್ಪು ಚುಕ್ಕೆಗಳು, ಎಲೆಗಳು ಮತ್ತು ಕಾಂಡಗಳಲ್ಲಿನ ಹಳೆಯ ಗಾಯಗಳಲ್ಲೂ ಸಹ ಗೋಚರಿಸುತ್ತವೆ. ಒಣ ಪರಿಸ್ಥಿತಿಗಳಲ್ಲಿ, ಸೋಂಕಿತ ಹಣ್ಣುಗಳು ಸಸ್ಯದ ಮೇಲೆಯೇ ಕುಗ್ಗಿ, ಒಣಗಿ, ಮಮ್ಮಿಫೈ ಆಗುತ್ತವೆ.
ಜೈವಿಕ ಶಿಲೀಂಧ್ರನಾಶಕಗಳೊಂದಿಗಿನ ಚಿಕಿತ್ಸೆಗಳು ರೋಗದ ಸಂಭವನೀಯತೆ ಮತ್ತು ತೀವ್ರತೆಯನ್ನು ಕಡಿಮೆ ಮಾಡಲು ಸಹಾಯಕವಾಗಬಹುದು. ತಾಮ್ರದ ದ್ರಾವಣಗಳನ್ನು ಆಧರಿಸಿರುವ ಉತ್ಪನ್ನಗಳು (ಉದಾಹರಣೆಗೆ ಬೋರ್ಡೆಕ್ಸ್ ಮಿಶ್ರಣವನ್ನು) ಎಲೆ ಸಿಂಪಡಕದಂತೆ ಅನ್ವಯಿಸಬಹುದು. ಬೇವಿನ ಸಾರಗಳು ಸುರಕ್ಷಿತ ಮತ್ತು ಪರಿಸರ ಸ್ನೇಹಿ ಪರಿಹಾರವಾಗಿದ್ದು, ಇದನ್ನು ರೋಗದ ನಿರ್ವಹಣೆಯಲ್ಲಿ ಬಳಸಲಾಗುತ್ತದೆ. ಬಿಸಿ ನೀರಿನಲ್ಲಿ ಬೀಜಗಳ ಚಿಕಿತ್ಸೆಯನ್ನು ಕೂಡಾ (15 ಮಿ.ನಿ.ಗೆ 56 °C) ಪರಿಗಣಿಸಬಹುದು.
ಲಭ್ಯವಿದ್ದರೆ , ತಡೆಗಟ್ಟುವ ಕ್ರಮಗಳು ಮತ್ತು ಜೈವಿಕ ಚಿಕಿತ್ಸೆಗಳು ಒಟ್ಟಾಗಿರುವ ಸಮಗ್ರ ವಿಧಾನವನ್ನು ಯಾವಾಗಲೂ ಪರಿಗಣಿಸಿ. ಹೊಲದಲ್ಲಿ ರೋಗ ಗುರುತಿಸಲ್ಪಟ್ಟರೆ ಮತ್ತು ಆರ್ಥಿಕ ಮಿತಿಗಳನ್ನು ತಲುಪಿದರೆ, ಶಿಲೀಂಧ್ರನಾಶಕಗಳೊಂದಿಗಿನ ಚಿಕಿತ್ಸೆಯನ್ನು ಶಿಫಾರಸು ಮಾಡಲಾಗುತ್ತದೆ. ಅಜೋಕ್ಸಿಸ್ಟ್ರೋಬಿನ್, ಬೊಸ್ಕ್ಯಾಲಿಡ್, ಕ್ಯಾಪ್ಟಾನ್, ಕ್ಲೋರೊಥಲೋನಿಲ್, ತಾಮ್ರದ ಆಕ್ಸಿಕ್ಲೋರೈಡ್, ಡಿಥಿಯೊಕಾರ್ಬಮೆಟ್ಸ್, ಮನೆಬ್, ಮನ್ಕೊಜೆಬ್, ಥಿಯೋಪನೆಟ್-ಮೀಥೈಲ್, ಟಲ್ಕ್ಲೋಫೊಸ್-ಮೀಥೈಲ್, ಪಿರಾಕ್ಲೋಸ್ಟ್ರೋಬಿನ್ ಇವು ಹೆಚ್ಚು ಸಾಮಾನ್ಯವಾಗಿ ಬಳಕೆಯಾಗುವ ಎಲೆ ಸಿಂಪಡಕ ಶಿಲೀಂಧ್ರನಾಶಕಗಳಾಗಿವೆ. ಕೃಷಿ ನಿಯಂತ್ರಣ ತಂತ್ರಗಳೊಂದಿಗೆ ಸಂಯೋಜಿಸಿದಾಗ ಈ ಶಿಲೀಂಧ್ರನಾಶಕಗಳು ಹೆಚ್ಚು ಪರಿಣಾಮಕಾರಿ. ಬೀಜ ಚಿಕಿತ್ಸೆಯನ್ನು ಕೂಡ ಬಳಸಿಕೊಳ್ಳಬಹುದು. ಉದಾಹರಣೆಗೆ ಥಿಯೋಫೆನೆಟ್ ಮೀಥೈಲ್ (0.2%).
ಈ ರೋಗಲಕ್ಷಣಗಳು ಫೊಮೋಪ್ಸಿಸ್ ವೆಕ್ಸನ್ಸ್ ಎಂಬ ಶಿಲೀಂಧ್ರದಿಂದ ಉಂಟಾಗುತ್ತದೆ. ಈ ರೋಗಕಾರಕ ಬಿಳಿಬದನೆಗೆ ನಿರ್ಬಂಧಿಸಲ್ಪಟ್ಟಂತೆ ತೋರುತ್ತದೆ (ಟೊಮ್ಯಾಟೊ ಮತ್ತು ಮೆಣಸುಗಳಲ್ಲಿ ಸೋಂಕಿನ ಕೆಲವು ಪ್ರಕರಣಗಳು ವರದಿಯಾಗಿವೆ). ಬೆಳೆಯ ಅವಶೇಷಗಳಲ್ಲಿ ಶಿಲೀಂಧ್ರವು ಉಳಿದುಕೊಂಡಿರುತ್ತದೆ ಮತ್ತು ಅದರ ಬೀಜಕಗಳು ಗಾಳಿ ಮತ್ತು ಮಳೆಗಳಿಂದ ಆರೋಗ್ಯಕರ ಸಸ್ಯಗಳ ಮೇಲೆ ಹರಡುತ್ತವೆ. ಇದು ಬೀಜಗಳೊಳಗೆ ಮತ್ತು ಬೀಜಗಳ ಮೇಲೆ ಕೂಡ ಹರಡುವ ಸಾಧ್ಯತೆ ಇದೆ. ಇದರಿಂದಾಗಿ ಈ ರೋಗದ ವಿರುದ್ಧದ ಹೋರಾಟದಲ್ಲಿ ಪ್ರಮಾಣೀಕೃತ ಬೀಜಗಳು ಮತ್ತು ಆರೋಗ್ಯಕರ ಸಸಿಗಳನ್ನು ಬಳಸುವುದು ಮುಖ್ಯವಾಗಿದೆ. ಎಲೆಯ ಅಂಗಾಂಶಗಳೊಳಗೆ ನುಗ್ಗುವಿಕೆಯು 6-12 ಗಂಟೆಗಳ ಒಳಗೆ ನಡೆಯಬಹುದು ಮತ್ತು ಸೋಂಕು ಮತ್ತು ರೋಗ ಅಭಿವೃದ್ಧಿಗೆ ಬಿಸಿಯಾದ ವಾತಾವರಣ (27-35 °C) ಮತ್ತು ತುಲನಾತ್ಮಕವಾಗಿ ಆರ್ದ್ರ ಪರಿಸ್ಥಿತಿ ಅಗತ್ಯವಾಗಿರುತ್ತದೆ. ಶೇಖರಣಾ ಕೋಣೆಗಳಲ್ಲಿ 30 °C ಮತ್ತು 50% ರಷ್ಟು ಆರ್ದ್ರತೆಯಲ್ಲಿ ಹಣ್ಣಿನ ಮೇಲಿನ ಗಾಯಗಳು ಬೆಳೆಯುವ ಸಾಧ್ಯತೆಯಿದೆ.