ಇತರೆ

ಬೇರು ಮತ್ತು ಬುಡ ಕೊಳೆ ರೋಗ

Cochliobolus sativus

ಶಿಲೀಂಧ್ರ

ಸಂಕ್ಷಿಪ್ತವಾಗಿ

  • ಕಾಂಡ ಮತ್ತು ಬೇರುಗಳ ಬುಡಭಾಗಗಳಲ್ಲಿ ಗಾಢ-ಕಂದು ಬಣ್ಣದ ಪ್ರದೇಶಗಳು (ಬೇರು ಮತ್ತು ಬುಡ ಕೊಳೆತ).
  • ಕೆಳಗಿನ ಎಲೆಗಳ ಮೇಲೆ ಉದ್ದವಾದ, ಕಂದು ಬಣ್ಣದ ಕಪ್ಪು ಕಲೆಗಳು (ಸ್ಪಾಟ್ ಬ್ಲಾಟ್ಚ್).
  • ನಂತರದ ಹಂತಗಳಲ್ಲಿ, ಒಂದು ಅಥವಾ ಹೆಚ್ಚಿನ ಕಿರುಕದಿರುಗಳು ಅಥವಾ ಸಂಪೂರ್ಣ ತೆನೆಯೇ ಅಕಾಲಿಕವಾಗಿ ಬಿಳುಚಿಕೊಳ್ಳುತ್ತದೆ (ತೆನೆ ಅಂಗಮಾರಿ).
  • ಹಸಿರು ಬಣ್ಣ ಕಳೆದುಕೊಂಡ(ಕ್ಲೋರೋಟಿಕ್) ಆಗಿರುವ ಮತ್ತು ಕುಂಠಿತಗೊಂಡ ಸಸ್ಯಗಳು ಗದ್ದೆಯಲ್ಲಿ ಅಲ್ಲಲ್ಲಿ ಒಂದೊಂದರಂತೆ ಅಥವಾ ಅನಿಯಮಿತ ತೇಪೆಗಳಂತೆ ಹರಡುತ್ತವೆ.

ಇವುಗಳಲ್ಲಿ ಸಹ ಕಾಣಬಹುದು


ಇತರೆ

ರೋಗಲಕ್ಷಣಗಳು

ರೋಗಲಕ್ಷಣಗಳು ಪರಿಸರ ಪರಿಸ್ಥಿತಿಗಳು ಮತ್ತು ಸಸ್ಯ ಬೆಳವಣಿಗೆಯ ಹಂತದ ಮೇಲೆ ಅವಲಂಬಿತವಾಗಿರುತ್ತವೆ. ಕೆಲವು ಸಂದರ್ಭಗಳಲ್ಲಿ, ಕಲುಷಿತವಾದ ಬೀಜಗಳು ಸಸಿ ರೋಗಕ್ಕೆ ಕಾರಣವಾಗಬಹುದು, ಇದನ್ನು ಎಳೆ ಸಸ್ಯಗಳ ಮೇಲೆ ಗಾಢ ಕಂದು ಬಣ್ಣದ ಪ್ರದೇಶಗಳು ಕಾಣಿಸಿಕೊಳ್ಳುವುದರಿಂದ ಗುರುತಿಸಬಹುದು. ಬಲಿತ ಸಸ್ಯಗಳಿಗೆ ಬೇಗ ಸೋಂಕಾಗದರೆ ಅದು ರೋಗಲಕ್ಷಣಗಳನ್ನು ಉಂಟುಮಾಡದಿರಬಹುದು, ಎಲೆಗಳ ಪ್ರಮಾಣ ಮತ್ತು ಟಿಲ್ಲರ್ ಗಳ ಸಂಖ್ಯೆಯು ಕಡಿಮೆಯಾಗುವುದನ್ನು ಹೊರತುಪಡಿಸಿ. ಆದಾಗ್ಯೂ, ಗಾಢ-ಕಂದು ಪ್ರದೇಶಗಳು ಕಾಂಡದ ತಳಭಾಗ (ಬುಡ ಕೊಳೆತ) ಅಥವಾ ನೆಲದದಡಿ ಮತ್ತು ಒಳಗೆಣ್ಣುಗಳು ಮತ್ತು ಬೇರುಗಳ ಮೇಲೆ (ಬೇರು ಕೊಳೆತ) ಇರುತ್ತವೆ. ನಂತರ, ರೋಗಕಾರಕವು ಕಾಂಡದೊಳಗೆ ಮುಂದುವರೆದಂತೆ, ಉದ್ದವಾದ, ಕಂದು ಬಣ್ಣದ ಕಪ್ಪು ಕಲೆಗಳು ಕೆಳಗಿನ ಎಲೆಗಳಲ್ಲಿ ಕಾಣಿಸಿಕೊಳ್ಳುತ್ತವೆ. ದೀರ್ಘಾವಧಿಯ ಮಳೆಗಾಲದ ಕಾಲದಲ್ಲಿ ಇದು ವಿಶೇಷವಾಗಿ ಸ್ಪಷ್ಟವಾಗಿ ಕಂಡುಬರುತ್ತದೆ. ಹಸಿರು ಬಣ್ಣ ಕಳೆದುಕೊಂಡ(ಕ್ಲೋರೋಟಿಕ್) ಮತ್ತು ಕುಂಠಿತಗೊಂಡ ಸಸ್ಯಗಳು ಗದ್ದೆಯಲ್ಲಿ ಅಲ್ಲಲ್ಲಿ ಒಂದೊಂದರಂತೆ ಅಥವಾ ಅನಿಯಮಿತ ತೇಪೆಗಳಂತೆ ಹರಡುತ್ತವೆ. ಒಂದು ಅಥವಾ ಹೆಚ್ಚು ಕಿರುಕದಿರುಗಳು ಅಥವಾ ಸಂಪೂರ್ಣ ತೆನೆಯೇ (ತೆನೆ ಅಂಗಮಾರಿ) ಅಕಾಲಿಕವಾಗಿ ಬಿಳುಚಿಕೊಳ್ಳುವುದು ತಡವಾದ ಸೋಂಕುಗಳ ಸಾಮಾನ್ಯ ಲಕ್ಷಣವಾಗಿದೆ.

ಶಿಫಾರಸುಗಳು

ಜೈವಿಕ ನಿಯಂತ್ರಣ

ಸ್ಪೊರೊಬೊಲೊಮೈಸಸ್ ರೋಸಿಯಸ್ ಎನ್ನುವ ಶಿಲೀಂಧ್ರವು ಕೊಕ್ಲಿಯೋಬೊಲಸ್ ಸ್ಯಾಟಿವಸ್ ನ ನೈಸರ್ಗಿಕ ಶತ್ರುವಾಗಿದ್ದು, ರೋಗದ ಸಂಭವನೀಯತೆ ಮತ್ತು ತೀವ್ರತೆಯನ್ನು ಕಡಿಮೆ ಮಾಡಲು ಧಾನ್ಯಗಳಲ್ಲಿ ಬಳಸಲಾಗುತ್ತಿದೆ. ಈ ರೋಗಕಾರಕದ ಇತರ ಪ್ರತಿರೋಧಕಗಳೂ ಸಹ ಲಭ್ಯವಿವೆ.

ರಾಸಾಯನಿಕ ನಿಯಂತ್ರಣ

ಯಾವಾಗಲೂ ಜೈವಿಕ ಚಿಕಿತ್ಸೆಗಳು ಲಭ್ಯವಿದ್ದರೆ ಅದರ ಜೊತೆ ನಿರೋಧಕ ಕ್ರಮಗಳನ್ನು ಒಟ್ಟುಗೂಡಿಸಿ ಸಮಗ್ರವಾದ ಮಾರ್ಗವನ್ನು ಪರಿಗಣಿಸಿ. ಸೂಕ್ತವಾದ ಶಿಲೀಂಧ್ರನಾಶಕದಿಂದ ಬೀಜದ ಸಂಸ್ಕರಣೆಯು ಇತರ ಋತುಗಳಲ್ಲಿ ಬೀಜಗಳ ಮೇಲೆ ಇನಾಕ್ಯುಲಮ್ ಸಾಗಣೆಯಾಗುವ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ.

ಅದಕ್ಕೆ ಏನು ಕಾರಣ

ಬೆಚ್ಚಗಿನ ಮತ್ತು ಆರ್ದ್ರವಾದ ಧಾನ್ಯ-ಬೆಳೆಯುವ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಶಿಲೀಂಧ್ರವಾದ ಕೊಕ್ಲಿಯೊಬೊಲಸ್ ಸ್ಯಾಟಿವಸ್ ನಿಂದ ಈ ರೋಗಲಕ್ಷಣಗಳು ಉಂಟಾಗುತ್ತವೆ. ಇದು ಮಣ್ಣಿನಲ್ಲಿ ಮತ್ತು ಸಸ್ಯಾವಶೇಷಗಳಲ್ಲಿ ಮೈಸಿಲಿಯಂ ಅಥವಾ ಬೀಜಕಗಳ ರೂಪದಲ್ಲಿ ಉಳಿದುಕೊಂಡಿರುತ್ತದೆ ಮತ್ತು ಆರೋಗ್ಯಕರ ಗಿಡಗಳಿಗೆ ಗಾಳಿ, ಮಳೆಯ ಎರಚಲು ಅಥವಾ ನೀರಾವರಿ ನೀರಿನಿಂದ ಹರಡುತ್ತದೆ. ಬಾರ್ಲಿ, ಗೋಧಿ ಮತ್ತು ರೈಗಳಲ್ಲದೆ, ಕಳೆಗಳು ಮತ್ತು ಹುಲ್ಲುಗಳ ಹಲವಾರು ಜಾತಿಗಳಿಗೂ ಸಹ ಇದು ಸೋಂಕು ತಗುಲಿಸಬಹುದು. ಓಟ್ ಈ ರೋಗಕ್ಕೆ ನಿರೋಧಕವಾಗಿದೆ ಆದರೆ ರೋಗಕಾರಕದ ಪ್ರಸರಣಕ್ಕೆ ಇದು ಸಹಾಯ ಮಾಡಬಹುದು. ಒಂದು ಸೂಕ್ಷ್ಮವಾಗಿರುವ ಹೋಸ್ಟ್ ಕಂಡುಬಂದರೆ ಮತ್ತು ಪರಿಸ್ಥಿತಿಗಳು ಅನುಕೂಲಕರವಾದಾಗ, ಅದರ ಬೀಜಕಗಳು ಮೊಳಕೆಯೊಡೆಯುತ್ತವೆ ಮತ್ತು ಎಳೆ ಸಸ್ಯ ಅಥವಾ ಅದರ ಬೇರುಗಳ ಮೇಲೆ ಪ್ರಾಥಮಿಕ ಸೋಂಕನ್ನು ಪ್ರಾರಂಭಿಸುತ್ತವೆ. ಇದು ಸಸ್ಯ ಅಂಗಾಂಶಗಳೊಳಗೆ ನೇರವಾಗಿ ಹೊರಚರ್ಮ(ಎಪಿಡರ್ಮಿಸ್) ಮೂಲಕ ಅಥವಾ ನೈಸರ್ಗಿಕ ರಂಧ್ರಗಳು ಅಥವಾ ಗಾಯಗಳ ಮೂಲಕ ಒಳಹೊಕ್ಕುತ್ತದೆ. ಸೋಂಕಿಗೊಳಗಾಗಿರುವ ಬೀಜ ಅಥವಾ ಕೃಷಿ ಉಪಕರಣಗಳು ಅಧಿಕ ದೂರದವರೆಗೆ ರೋಗಕಾರಕವನ್ನು ಹರಡುತ್ತವೆ ಮತ್ತು ನಂತರದ ಬೆಳೆಗಳಿಗೆ ಇನಾಕ್ಯುಲಮ್ಗಳಾಗಿ ಕಾರ್ಯನಿರ್ವಹಿಸುತ್ತವೆ. ಶಿಲೀಂಧ್ರದ ಜೀವನ ಚಕ್ರಕ್ಕೆ ಬೆಚ್ಚಗಿನ ತಾಪಮಾನಗಳು (28-32ºಸಿ ಸೂಕ್ತವಾದುದು) ಅನುಕೂಲಕರ.


ಮುಂಜಾಗ್ರತಾ ಕ್ರಮಗಳು

  • ಈ ರೋಗಕಾರಕಕ್ಕೆ ಸಂಪರ್ಕತಡೆ ನಿಭಂದನೆಗಳ ಬಗ್ಗೆ ತಿಳಿದಿರಲಿ.
  • ಪ್ರಮಾಣೀಕೃತ ರೋಗ- ಮುಕ್ತ ಬೀಜಗಳನ್ನು ಆಯ್ಕೆ ಮಾಡಿ.
  • ಸಾರಜನಕವನ್ನು ವಿಭಜಿತ ಪ್ರಮಾಣಗಳಲ್ಲಿ ಹಾಕುವ ಮೂಲಕ ಸರಿಯಾದ ಫಲವತ್ತತೆ ಕಾರ್ಯಕ್ರಮವನ್ನು ಮಾಡಿ.
  • ನಿಮ್ಮ ಬೆಳೆಯನ್ನು ಬಲಪಡಿಸಲು ಸೂಕ್ಷ್ಮಪೋಷಕಾಂಶವನ್ನು ಸೇರಿಸುವುದನ್ನು ಮರೆಯದಿರಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ