Pseudoperonospora cubensis
ಶಿಲೀಂಧ್ರ
ಬೆಳೆಗಳ ನಡುವಿನ ಸ್ವಲ್ಪ ವ್ಯತ್ಯಾಸಗಳ ಹೊರತಾಗಿಯೂ, ಕುಕುರ್ಬಿಟ್ಗಳಿಗೆ ಬರುವ ಡೌನಿ ಶಿಲೀಂಧ್ರವನ್ನು, ಸಾಮಾನ್ಯವಾಗಿ ಪ್ರಮುಖ ನಾಳಗಳಿಗಿಂತ ದೊಡ್ಡದಾಗಿರದ, ಎಲೆಗಳ ಮೇಲಿನ ಭಾಗದಲ್ಲಿ ಹಳದಿ, ಕೋನೀಯ ಕಲೆಗಳ ಬೆಳವಣಿಗೆಗಳಿಂದ ಗುರುತಿಸಬಹುದು. ಈ ಅಂತರನಾಳೀಯ ಕ್ಲೋರೋಸಿಸ್ ಕ್ರಮೇಣ ಹಳದಿಯಿಂದ ಕಂದು ಮೊಸಾಯಿಕ್ ಮಾದರಿಯನ್ನು ರೂಪಿಸುತ್ತದೆ. ಅದನ್ನು ವೈರಸ್ ಸೋಂಕು ಎಂದು ತಪ್ಪು ತಿಳಿಯಬೇಡಿ. ಕೆಳಗಿನ ಎಲೆ ಭಾಗದಲ್ಲಿ, ಈ ಕಲೆಗಳ ಕೆಳಗೆ ಕಾಣುವ ನೀರು ತುಂಬಿದ ಗಾಯಗಳು ತಣ್ಣನೆಯ ತಾಪಮಾನ ಮತ್ತು ಹೆಚ್ಚಿನ, ದೀರ್ಘಕಾಲದ ತೇವಾಂಶದ ಸಮಯದಲ್ಲಿ ನಿಧಾನವಾಗಿ ತಿಳಿ-ಬೂದು, ವೆಲ್ವೆಟ್ ರೀತಿಯಲ್ಲಿ ಅಸ್ಪಷ್ಟವಾಗಿ ಗೋಚರಿಸುತ್ತವೆ. ಶಿಲೀಂಧ್ರವು ಸಸ್ಯದಿಂದ ಪೋಷಕಾಂಶಗಳನ್ನು ಹೊರತೆಗೆಯುವುದರಿಂದ, ಅದು ಎಳೆ ಚಿಗುರುಗಳು, ಹೂವುಗಳು ಅಥವಾ ಹಣ್ಣುಗಳ ಗಾತ್ರ ಕಡಿಮೆ ಮಾಡುತ್ತದೆ ಅಥವಾ ಕೊಲ್ಲುತ್ತದೆ ಮತ್ತು ಬೆಳವಣಿಗೆ ಕುಂಠಿತಗೊಳ್ಳುತ್ತದೆ ಮತ್ತು ಇಳುವರಿಯಲ್ಲಿ ಕಡಿತವಾಗುತ್ತದೆ. ಪ್ರೌಡ್ರೀ ಶಿಲೀಂಧ್ರಕ್ಕೆ ವಿರುದ್ಧವಾಗಿ, ಲೇಪನವು ಎಲೆಗಳ ಕೆಳಭಾಗದಲ್ಲಿ ಪ್ರತ್ಯೇಕವಾಗಿ ಕಂಡುಬರುತ್ತದೆ ಮತ್ತು ಅದರ ಬೆಳವಣಿಗೆ ಮುಖ್ಯ ನಾಳಗಳಿಗೆ ಸೀಮಿತವಾಗಿರುತ್ತದೆ. ಇದಲ್ಲದೆ, ಅದನ್ನು ಸುಲಭವಾಗಿ ತೆಗೆದುಹಾಕಲಾಗುವುದಿಲ್ಲ.
ಡೌನಿ ಶಿಲೀಂಧ್ರವನ್ನು ಎದುರಿಸಲು ವಾಣಿಜ್ಯ ಜೈವಿಕ ಚಿಕಿತ್ಸೆಗಳು ಲಭ್ಯವಿದೆ. ಸೋಂಕು ಕಡಿಮೆ ಇದ್ದ ಸಂದರ್ಭಗಳಲ್ಲಿ, ಹವಾಮಾನವು ಸುಧಾರಿಸುವವರೆಗೂ ಏನು ಮಾಡದಿರುವುದು ಉತ್ತಮ. ಕೆಲವು ಸಂದರ್ಭಗಳಲ್ಲಿ, ಜೈವಿಕ ಸೋಂಕು-ಪೂರ್ವ ಶಿಲೀಂಧ್ರನಾಶಕಗಳು ಸಸ್ಯಗಳ ಮಾಲಿನ್ಯವನ್ನು ತಪ್ಪಿಸಲು ಸಹಾಯ ಮಾಡುತ್ತದೆ ಮತ್ತು ಅವುಗಳಲ್ಲಿ ಬೋರ್ಡೆಕ್ಸ್ ಮಿಶ್ರಣದಂತಹ ತಾಮ್ರ ಆಧಾರಿತ ಶಿಲೀಂಧ್ರನಾಶಕಗಳು ಇರುತ್ತವೆ.
ಯಾವಾಗಲೂ ಜೈವಿಕ ಚಿಕಿತ್ಸೆಗಳು ಲಭ್ಯವಿದ್ದರೆ ಅದರ ಜೊತೆ ನಿರೋಧಕ ಕ್ರಮಗಳನ್ನು ಒಟ್ಟುಗೂಡಿಸಿ ಸಮಗ್ರವಾದ ಮಾರ್ಗವನ್ನು ಪರಿಗಣಿಸಿ. ರಕ್ಷಿತ ಶಿಲೀಂಧ್ರನಾಶಕಗಳು ಸಸ್ಯಗಳ ಮಾಲಿನ್ಯವನ್ನು ತಡೆಗಟ್ಟಲು ಸಹಾಯ ಮಾಡುತ್ತವೆ ಆದರೆ ಎಲೆಗಳ ಕೆಳಭಾಗದಲ್ಲಿ ಅವುಗಳನ್ನು ಸರಿಯಾಗಿ ಸಿಂಪಡಿಸಬೇಕು. ಮಂಕೊಜೆಬ್, ಕ್ಲೋರೊಥಲೋನಿಲ್ ಅಥವಾ ತಾಮ್ರ-ಆಧಾರಿತ ಸಂಯುಕ್ತಗಳನ್ನು ಹೊಂದಿರುವ ಶಿಲೀಂಧ್ರನಾಶಕ ಸೂತ್ರಗಳನ್ನು ಬಳಸಬಹುದು. ಮೊದಲ ರೋಗಲಕ್ಷಣಗಳು ಪತ್ತೆಯಾದ ತಕ್ಷಣವೇ ಸೋಂಕಿನ-ನಂತರದ ಶಿಲೀಂಧ್ರನಾಶಕವನ್ನು ಸಿಂಪಡಿಸಬೇಕು. ಸಾಮಾನ್ಯವಾಗಿ ಬಳಸಲಾಗುವ ಸೋಂಕಿನ-ನಂತರದ ಶಿಲೀಂಧ್ರನಾಶಕಗಳೆಂದರೆ ಮೆಫೆನೊಕ್ಸಮ್, ಸ್ಟ್ರೋಬಿಲ್ಯೂರಿನ್ಸ್, ಫ್ಲೂಪಿಕಲೈಡ್, ಫಾಮೋಕ್ಸಾಡಾನ್ + ಸಿಮ್ಆಕ್ಸನಿಲ್, ಸೈಝೋಫಮಿಡ್, ಮತ್ತು ಝೊಕ್ಸಮೈಡ್. ಈ ಕೆಲವು ಉತ್ಪನ್ನಗಳ ಪ್ರತಿರೋಧವನ್ನು ಗಮನಿಸಲಾಗಿದೆ.
ನೀರಿನ ಜೀವಿಗಳ ಗುಂಪಿನ ಶಿಲೀಂಧ್ರವಾದ ಸೂಡೊಪೊರೊನೊಸ್ಪೊರಾ ಕ್ಯುಬೆನ್ಸಿಸ್ ನಿಂದ ರೋಗಲಕ್ಷಣಗಳು ಉಂಟಾಗುತ್ತವೆ. ಇದು ಹಸಿರು ಸಸ್ಯ ಅಂಗಾಂಶದ ಮೇಲೆ ಬದುಕುವಂಥ ಕಡ್ಡಾಯ ಪರಾವಲಂಬಿಯಾಗಿದೆ. ಇದು ತಂಪಾದ, ಆರ್ದ್ರ ಮತ್ತು ಸಾಪೇಕ್ಷ ಆರ್ದ್ರತೆಯ ಪರಿಸ್ಥಿತಿಗಳಲ್ಲಿ (ಭಾರೀ ಮಂಜು, ಇಬ್ಬನಿ , ಮಳೆ ಬೀಳುವಿಕೆಗಳು) ಮತ್ತು 15-23 ° ಸಿ ತಾಪಮಾನದಲ್ಲಿ ನೆರಳಿನ ಪ್ರದೇಶಗಳಲ್ಲಿ ವಿಶೇಷವಾಗಿ ವಿನಾಶಕಾರಿಯಾಗಿದೆ. ಸೋಂಕಿತ ಸಸ್ಯದ ಉಳಿಕೆಗಳು ಅಥವಾ ಚಿಗುರುಗಳಲ್ಲಿ ಅಥವಾ ಪರ್ಯಾಯ ಆಶ್ರಯದಾತ ಸಸ್ಯಗಳಲ್ಲಿ (ಬೆಳೆಗಳು ಮತ್ತು ಕಳೆಗಳು) ಶಿಲೀಂಧ್ರವು ಚಳಿಗಾಲವನ್ನು ಕಳೆಯುತ್ತದೆ. ಅನುಕೂಲಕರ ಸ್ಥಿತಿಗಳಲ್ಲಿ ಗಾಳಿ, ವಾಯು ಪ್ರವಾಹಗಳು ಮತ್ತು ಮಳೆ ಎರಚಲುಗಳು ಬೀಜಕಗಳನ್ನು ಆರೋಗ್ಯಕರ ಸಸ್ಯ ಅಂಗಾಂಶಗಳಿಗೆ ಹರಡುತ್ತವೆ. ಒಮ್ಮೆ ಅವು ರೋಗಕ್ಕೆ ಒಳಗಾಗುವ ಸಸ್ಯಗಳಿಗೆ ಬಂದರೆ, ಬೀಜಕಗಳು ಮೊಳಕೆಯೊಡೆಯುತ್ತವೆ ಮತ್ತು ಎಲೆಗಳ ಕೆಳಭಾಗದಲ್ಲಿರುವ ನೈಸರ್ಗಿಕ ರಂಧ್ರಗಳ ಮೂಲಕ ಸಸ್ಯ ಅಂಗಾಂಶಗಳನ್ನು ಪ್ರವೇಶಿಸುತ್ತವೆ. ಅಲ್ಲಿ ಅದು ಹರಡಲು ಆರಂಭವಾಗುತ್ತದೆ. ಅಂತಿಮವಾಗಿ ಆಂತರಿಕ ಅಂಗಾಂಶಗಳಲ್ಲಿ ಬೆಳೆಯುತ್ತದೆ ಮತ್ತು ವಿಶಿಷ್ಟವಾದ ಶಿಲೀಂಧ್ರದ ಪದರವನ್ನು ಹೊರಭಾಗದಲ್ಲಿ ರಚಿಸುತ್ತದೆ. ಅಲ್ಲಿ, ಬೀಜಕಗಳು ಉತ್ಪತ್ತಿಯಾಗುತ್ತವೆ ಮತ್ತು ಅದು ಇನ್ನೂ ರೋಗವನ್ನು ಹರಡುತ್ತದೆ.