ಟೊಮೆಟೊ

ಟೊಮೆಟೊದಲ್ಲಿ ಲೀಫ್ ಮೊಲ್ಡ್ (ಎಲೆ ಬೂಷ್ಟು)

Mycovellosiella fulva

ಶಿಲೀಂಧ್ರ

ಸಂಕ್ಷಿಪ್ತವಾಗಿ

  • ಎಲೆಗಳ ಮೇಲಿನ ಭಾಗದಲ್ಲಿ ತಿಳಿ ಹಸಿರು ಅಥವಾ ಹಳದಿ ಬಣ್ಣದ ಹರಡಿದ ಕಲೆಗಳು.
  • ಕೆಳಭಾಗದಲ್ಲಿ ಆಲಿವ್ ಹಸಿರು ಬೂದು ನೇರಳೆ ಬಣ್ಣದ ತೇಪೆಗಳು.
  • ಎಲೆಗಳು ಸತ್ತು ಸುರುಳಿಯಾಗುತ್ತವೆ.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ಟೊಮೆಟೊ

ರೋಗಲಕ್ಷಣಗಳು

ರೋಗಲಕ್ಷಣಗಳು ಎಲೆಗೊಂಚಲುಗಳ ಎರಡೂ ಬದಿಗಳಲ್ಲಿ ಮತ್ತು ಕೆಲವೊಮ್ಮೆ ಹಣ್ಣಿನ ಮೇಲೂ ಕಂಡುಬರುತ್ತವೆ. ಮೊದಲು ಹಳೆಯ ಎಲೆಗಳಿಗೆ ಸೋಂಕಾಗುತ್ತದೆ ನಂತರ ರೋಗ ನಿಧಾನವಾಗಿ ಎಳೆಯ ಎಲೆಗಳ ಕಡೆಗೆ ಹರಡುತ್ತದೆ. ಮೇಲಿನ ಎಲೆಗಳ ಮೇಲೆ ಅನಿರ್ದಿಷ್ಟ ಅಂಚುಗಳಿರುವ ಸಣ್ಣ, ಹರಡಿದ, ತಿಳಿ ಹಸಿರು ಅಥವಾ ಹಳದಿ ಬಣ್ಣದ ಕಲೆಗಳು ಕಾಣಿಸಿಕೊಳ್ಳುತ್ತವೆ. ಕೆಳಭಾಗದಲ್ಲಿ, ಆಲಿವ್ ಹಸಿರು ಅಥವಾ ಬೂದು- ಕೆನ್ನೇರಳೆ ಬಣ್ಣದ ಮತ್ತು ತುಂಬಾ ನಯವಾದ ತೇಪೆಗಳು ಎಲೆಯ ಕಲೆಗಳ ಕೆಳಗೆ ಬೆಳೆಯುತ್ತದೆ. ಇವುಗಳಲ್ಲಿ ಬೀಜಕ-ಉತ್ಪಾದಿಸುವ ಭಾಗಗಳು ಮತ್ತು ಬೀಜಕ ರಾಶಿಗಳು (ಕೋನಿಡಿಯಾ) ಇರುತ್ತವೆ. ಕಾಲಾನಂತರದಲ್ಲಿ, ಕಲೆಗಳು ದೊಡ್ಡದಾದಂತೆ, ಸೋಂಕಿತ ಎಲೆಗಳ ಬಣ್ಣ ಹಳದಿಯಿಂದ (ಕ್ಲೋರೋಸಿಸ್) ಕಂದು (ನೆಕ್ರೋಸಿಸ್) ಬಣ್ಣಕ್ಕೆ ಬದಲಾಗುತ್ತದೆ ಮತ್ತು ಎಲೆ ಸುರುಳಿಯಾಗಿ ಒಣಗಲು ಆರಂಭವಾಗುತ್ತದೆ. ಎಲೆಗಳು ಅಕಾಲಿಕವಾಗಿ ಉದುರುತ್ತವೆ, ಸೋಂಕು ತೀವ್ರವಾದ ಸಂದರ್ಭದಲ್ಲಿ ವಿಪರ್ಣನವೂ ಆಗಬಹುದು. ಕೆಲವೊಮ್ಮೆ, ಈ ರೋಗಕಾರಕವು ವಿವಿಧ ರೋಗಲಕ್ಷಣಗಳೊಂದಿಗೆ ಹೂವುಗಳು ಅಥವಾ ಹಣ್ಣುಗಳ ಮೇಲೂ ಸಹ ರೋಗವನ್ನು ಉಂಟುಮಾಡುತ್ತದೆ. ಹೂವುಗಳು ಕಪ್ಪು ಬಣ್ಣಕ್ಕೆ ತಿರುಗಬಹುದು ಮತ್ತು ಹಣ್ಣು ಹುಟ್ಟುವ ಮುನ್ನವೇ ಸಾಯುತ್ತವೆ. ಹಸಿರು ಮತ್ತು ಕಳಿತ ಹಣ್ಣುಗಳ ಕಾಂಡದ ತುದಿಯಲ್ಲಿ ತೆಳುವಾದ ಕಪ್ಪು ಬಣ್ಣದ ಅನಿಯಮಿತ ಕಲೆಗಳು ಬರುತ್ತವೆ. ರೋಗವು ಹೆಚ್ಚಾದಂತೆ, ಸೋಂಕಿತ ಭಾಗವು ಗುಳಿಬಿದ್ದಂತೆ, ಒಣಗಿದಂತೆ ಮತ್ತು ತೊಗಲಿನಂತೆ ಆಗುತ್ತದೆ.

ಶಿಫಾರಸುಗಳು

ಜೈವಿಕ ನಿಯಂತ್ರಣ

ಬೀಜಗಳ ಮೇಲೆ ರೋಗಕಾರಕವನ್ನು ತಡೆಗಟ್ಟಲು ಬಿಸಿ ನೀರಿನಿಂದ ಬೀಜಗಳನ್ನು ಸಂಸ್ಕರಿಸುವುದನ್ನು (122 °F ಅಥವಾ 50 °C ನಲ್ಲಿ 25 ನಿಮಿಷಗಳು) ಸೂಚಿಸಲಾಗುತ್ತದೆ. ಶಿಲೀಂಧ್ರಗಳಾದ ಎಕ್ರೆಮೆನಿಯಮ್ ಸ್ಟ್ರಿಕ್ಟಮ್, ಡೈಸಿಮಾ ಪುಲ್ವಿನಾಟಾ, ಟ್ರೈಕೋಡರ್ಮಾ ಹಾರ್ಜಿಯಂ ಅಥವಾ ಟಿ. ವೈರೈಡ್ ಮತ್ತು ಟ್ರೈಕೋಥೆಸಿಯಮ್ ರೋಸಮ್ ಎಮ್. ಫುಲ್ವಾಗೆ ವಿರೋಧಾತ್ಮಕವಾಗಿದ್ದು, ಅದರ ಹರಡುವಿಕೆಯನ್ನು ಕಡಿಮೆ ಮಾಡಲು ಬಳಸಬಹುದಾಗಿದೆ. ಹಸಿರುಮನೆ ಪ್ರಯೋಗಗಳಲ್ಲಿ ಟೊಮೆಟೊಗಳಲ್ಲಿ ಎಂ. ಫುಲ್ವಾದ ಬೆಳವಣಿಗೆಯನ್ನು ಪ್ರತಿಬಂಧಿಸಲು ಎ. ಸ್ಟ್ರೆಕ್ಟಮ್, ಟ್ರೈಕೋಡರ್ಮಾ ವೈರೈಡ್ ಸ್ಟ್ರೈನ್ 3 ಮತ್ತು ಟಿ. ರೋಸಮ್ ಕ್ರಮವಾಗಿ 53, 66 ಮತ್ತು 84% ನಷ್ಟು ಬಳಸಲಾಗಿದೆ. ಸಣ್ಣ ಹೊಲಗಳಲ್ಲಿ, ಆ್ಯಪಲ್-ಸಿಡರ್, ಬೆಳ್ಳುಳ್ಳಿ ಅಥವಾ ಹಾಲಿನ ದ್ರವೌಷಧಗಳನ್ನು ಮತ್ತು ವಿನೆಗರ್ ಮಿಶ್ರಣವನ್ನು ಬೂಷ್ಟನ್ನು ಸಂಸ್ಕರಿಸಲು ಬಳಸಬಹುದು.

ರಾಸಾಯನಿಕ ನಿಯಂತ್ರಣ

ಯಾವಾಗಲೂ ಜೈವಿಕ ಚಿಕಿತ್ಸೆಗಳು ಲಭ್ಯವಿದ್ದರೆ ಅದರ ಜೊತೆ ನಿರೋಧಕ ಕ್ರಮಗಳನ್ನು ಒಟ್ಟುಗೂಡಿಸಿ ಸಮಗ್ರವಾದ ಮಾರ್ಗವನ್ನು ಪರಿಗಣಿಸಿ. ರೋಗದ ಬೆಳವಣಿಗೆಗೆ ಪರಿಸರೀಯ ಪರಿಸ್ಥಿತಿಗಳು ಸೂಕ್ತವಾದಾಗ ಸೋಂಕಿಗೆ ಮೊದಲೇ ಸಿಂಪರಿಕೆಗಳನ್ನು ಮಾಡಬೇಕು. ಹೊಲದ ಬಳಕೆಗೆ ಸೂಚಿಸಲಾದ ಸಂಯುಕ್ತಗಳೆಂದರೆ ಕ್ಲೋರೊಥಲೋನಿಲ್, ಮನೆಬ್, ಮನ್ಕೊಜೆಬ್ ಮತ್ತು ತಾಮ್ರದ ಸೂತ್ರೀಕರಣಗಳು. ಹಸಿರುಮನೆಗಳಿಗೆ, ಡೈಫಿನೊಕೊನಜೋಲ್, ಮಂಡಿಪ್ರೋಪಮಿಡ್, ಸಿಯಾಕ್ಸನಿಲ್, ಫಾಮೋಕ್ಸಾಡಾನ್ ಮತ್ತು ಸೈಪ್ರೊಡಿನಿಲ್ ಗಳನ್ನು ಸೂಚಿಸಲಾಗಿದೆ.

ಅದಕ್ಕೆ ಏನು ಕಾರಣ

ಈ ರೋಗಲಕ್ಷಣಗಳು ಮೈಕೊವೆಲೋಸಿಲ್ಲಾ ಫುಲ್ವಾ ಎಂಬ ಶಿಲೀಂಧ್ರದಿಂದ ಉಂಟಾಗುತ್ತವೆ, ಇದರ ಬೀಜಕಗಳು ಕೊಠಡಿಯ ತಾಪಮಾನದಲ್ಲಿ ಸುಮಾರು 6 ತಿಂಗಳುಗಳಿಂದ ಒಂದು ವರ್ಷದವರೆಗೆ ರೋಗ ಬರುವ ಸಸ್ಯಗಳು ಇಲ್ಲದೆ ಬದುಕಬಲ್ಲವು (ಕಡ್ಡಾಯವಲ್ಲ). ಸುದೀರ್ಘ ಕಾಲದವರೆಗೆ ಎಲೆಗಳು ತೇವವಾಗಿದ್ದರೆ ಮತ್ತು ಆರ್ದ್ರತೆಗಳು 85% ಕ್ಕಿಂತ ಹೆಚ್ಚಿದ್ದರೆ ಬೀಜಕಗಳು ಕುಡಿಯೊಡೆಯಲು ಸಹಾಯವಾಗುತ್ತದೆ. ಕುಡಿಯೊಡೆಯಲು ತಾಪಮಾನವು 4 ° ರಿಂದ 34 °ಸಿ ವರೆಗೆ ಇರಬೇಕು, ಸೂಕ್ತ ತಾಪಮಾನವು 24-26 °ಸಿ ನಷ್ಟು ಇರಬೇಕು. ಒಣ ಹವಾಮಾನಗಳು ಮತ್ತು ಎಲೆಗಳ ಮೇಲೆ ನೀರು ಇಲ್ಲದಿದ್ದರೆ ಕುಡಿಯೊಡೆಯಲು ಸಾಧ್ಯವಾಗುವುದಿಲ್ಲ. ಎಲೆಯ ಎರಡೂ ಬದಿಗಳಲ್ಲಿ ಕಲೆಗಳು ಬರುವ ಮೂಲಕ ಇನಾಕ್ಯುಲೇಷನ್ ಆಗಿ 10 ದಿನಗಳ ನಂತರ ರೋಗಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಎಲೆಯ ಕೆಳಭಾಗದಲ್ಲಿ, ಬೀಜಕ-ಉತ್ಪಾದಿಸುವ ಭಾಗಗಳು ಹೆಚ್ಚಿನ ಸಂಖ್ಯೆಯಲ್ಲಿ ಹುಟ್ಟುತ್ತವೆ ಮತ್ತು ಈ ಬೀಜಕಗಳು ಸಸ್ಯದಿಂದ ಸಸ್ಯಕ್ಕೆ ಗಾಳಿ ಮತ್ತು ನೀರಿನ ಹನಿಗಳ ಮೂಲಕ ಸುಲಭವಾಗಿ ಹರಡುತ್ತವೆ. ಜೊತೆಗೆ ಉಪಕರಣಗಳು, ಕಾರ್ಮಿಕರು ಮತ್ತು ಕೀಟಗಳ ಮೇಲೆ ಕೂಡಾ ಹರಡುತ್ತವೆ. ಆರ್ದ್ರತೆ ಮಟ್ಟ ಹೆಚ್ಚಿದ್ದಾಗ ರೋಗಕಾರಕವು ಸ್ಟೊಮಾಟಾದ ಮೂಲಕ ಎಲೆಗಳ ಒಳಹೊಕ್ಕಿ ಸೋಂಕು ಮಾಡುತ್ತದೆ.


ಮುಂಜಾಗ್ರತಾ ಕ್ರಮಗಳು

  • ಪ್ರಮಾಣಿತ, ರೋಗ ಮುಕ್ತ ಬೀಜಗಳನ್ನು ಉಪಯೋಗಿಸಿ.
  • ನಿಮ್ಮ ಪ್ರದೇಶದಲ್ಲಿ ಲಭ್ಯವಿದ್ದರೆ ನಿರೋಧಕ ಅಥವಾ ಚೇತರಿಸಿಕೊಳ್ಳುವ ಪ್ರಭೇದಗಳನ್ನು ನೆಡಿ.
  • ರೋಗದ ತೀವ್ರತೆಯನ್ನು ಕಡಿಮೆ ಮಾಡಲು ಋತುವಿಗಿಂತ ಮೊದಲೇ ನಾಟಿ ಮಾಡಿ.
  • ವಾಯು ಸಂಚಲನೆ ಹೆಚ್ಚಿಸಲು ಮತ್ತು ಮೇಲಾವರಣದಲ್ಲಿ ಆರ್ದ್ರತೆಯನ್ನು ಕಡಿಮೆ ಮಾಡಲು ಸಸ್ಯಗಳ ಸಾಲು ಮತ್ತು ಅಂತರವನ್ನು ಸರಿಹೊಂದಿಸಿ.
  • ರೋಗದ ಇರುವಿಕೆಯನ್ನು ಆಗಾಗ್ಗೆ ಪರಿಶೀಲಿಸಿ ಮತ್ತು ಸೋಂಕಿತ ಸಸ್ಯಗಳು ಪತ್ತೆಯಾದ ತಕ್ಷಣ ತೆಗೆದುಹಾಕಿ.
  • ವಿಪರೀತವಾಗಿ ಸಾರಜನಕವನ್ನು ರಸಗೊಬ್ಬರಗ ಬಳಸುವುದನ್ನು ತಡೆಗಟ್ಟಿ.
  • ಹಸಿರುಮನೆ ಒಳಗೆ ವಾಯು ಸಂಚಲನೆಯಾಗುವಂತೆ ನೋಡಿಕೊಳ್ಳಿ.
  • ಸಾಪೇಕ್ಷ ಆರ್ದ್ರತೆಯು 85% ಗಿಂತ ಕಡಿಮೆಯಿರುವಂತೆ ಮತ್ತು ರಾತ್ರಿ ತಾಪಮಾನವು ಹೊರಗಿನ ತಾಪಮಾನಕ್ಕಿಂತ ಹೆಚ್ಚಿರುವಂತೆ ನೋಡಿಕೊಳ್ಳಿ (ಹಸಿರುಮನೆಗೆ ಸೂಕ್ತವಾಗಿರುತ್ತದೆ).
  • ಹನಿ ನೀರಾವರಿ ಬಳಸಿ ಮತ್ತು ಎಲೆಗೊಂಚಲುಗಳಿಗೆ ನೀರು ಹಾಕುವುದನ್ನು ತಪ್ಪಿಸಿ.
  • ಕಂಬಿ, ತಂತಿಗಳನ್ನು ಬಳಸಿ, ಅಥವಾ ಸಸ್ಯಗಳು ನಿಲ್ಲುವಂತೆ ಮಾಡಲು ಮತ್ತು ಅದರ ಸುತ್ತಲೂ ಗಾಳಿಯ ಹರಿವನ್ನು ಹೆಚ್ಚಿಸಲು ಸಸ್ಯದ ಎತ್ತರವನ್ನು ಕತ್ತರಿಸಿ.
  • ಕೊಯ್ಲಿನ ನಂತರ ಎಲ್ಲಾ ಸಸ್ಯಗಳ ಉಳಿಕೆಗಳನ್ನು ತೆಗೆದುಹಾಕಿ ಮತ್ತು ನಾಶಮಾಡಿ.
  • ಬೆಳೆಗಳ ನಡುವೆಯಿರುವ ಹಸಿರುಮನೆಯನ್ನು ಸ್ವಚ್ಛಗೊಳಿಸಿ ಮತ್ತು ಉಪಕರಣಗಳು ಮತ್ತು ಕಾರ್ಮಿಕರ ನಡುವೆ ವ್ಯಾಪಕ ನೈರ್ಮಲ್ಯ ಮಾನದಂಡಗಳನ್ನು ಕಾಪಾಡಿಕೊಳ್ಳಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ