Phyllosticta maculata
ಶಿಲೀಂಧ್ರ
ಎಲೆಗಳು ಮತ್ತು ಹಣ್ಣುಗಳ ಮೇಲೆ ಕಂಡುಬರುವ ವಿವಿಧ ಗಾತ್ರದ ಗಾಢ ಕಂದು ಅಥವಾ ಕಪ್ಪು ಬಣ್ಣದ ಕಲೆಗಳು ಈ ರೋಗದ ಮುಖ್ಯವಾದ ರೋಗಲಕ್ಷಣ. ಎಲೆಯ ಮೇಲ್ಭಾಗ ಮತ್ತು ಹಣ್ಣಿನ ಚರ್ಮವು ಮರಳು ಕಾಗದದಂತೆ ಕಾಣುತ್ತದೆ. ಸಣ್ಣ ಚುಕ್ಕೆಗಳ ವ್ಯಾಸ 1 ಮಿ.ಮೀ ಗಿಂತ ಕಡಿಮೆಯಿರುತ್ತವೆ. ಕಲೆಗಳು ಸಾಲುಗಳಾಗಿ ಹರಡಬಹುದು ಮತ್ತು ಅವು ಎಲೆಯ ಉದ್ದಕ್ಕೂ ಗೆರೆಗಳ ರೀತಿಯಲ್ಲಿ ಕರ್ಣೀಯವಾಗಿ ಹರಡುತ್ತವೆ ಅಥವಾ ಮಧ್ಯಭಾಗದಿಂದ ಎಲೆಯ ಅಂಚಿನವರೆಗೂ ಹರಡುತ್ತವೆ, ಸಾಮಾನ್ಯವಾಗಿ ನಾಳಗಳ ಉದ್ದಕ್ಕೂ ಕಾಣಿಸಿಕೊಳ್ಳಬಹುದು. ದೊಡ್ಡ ಮಚ್ಚೆಗಳ ವ್ಯಾಸ 4 ಮಿ.ಮೀ. ವರೆಗೆ ಇರುತ್ತವೆ ಮತ್ತು ಇವು ಗೆರೆಗಳಂತೆಯೂ ಸಹ ಕಾಣಿಸಿಕೊಳ್ಳಬಹುದು. ಕೆಲವೊಮ್ಮೆ ಈ ದೊಡ್ಡ ಕಲೆಗಳ ಮಧ್ಯಭಾಗದ ಬಣ್ಣ ತೆಳು ಬಣ್ಣವಾಗಿರುತ್ತದೆ. ಈ ಕಲೆಗಳು ತೊಟ್ಟುಗಳು, ನಡುದಿಂಡುಗಳು, ಬೆಳೆಯುತ್ತಿರುವ ಎಲೆಗಳು ಮತ್ತು ಹೂ ತೊಟ್ಟಿಲುಗಳ ಮೇಲೆ ಸಹ ಕಾಣಿಸಿಕೊಳ್ಳುತ್ತವೆ. ಮಚ್ಚೆಗಳು ಹಣ್ಣಿನ ಗೊಂಚಲು ಹುಟ್ಟಿದ ನಂತರ 2-4 ವಾರಗಳಲ್ಲಿಯೇ ಹಣ್ಣುಗಳ ಮೇಲೆ ಸಹ ಕಾಣಿಸಿಕೊಳ್ಳಬಹುದು. ಮೊದಲು ಕಂಡುಬರುವ ಕಲೆಗಳು ಗಾಢ ಹಸಿರು ಬಣ್ಣದ ಪ್ರಭಾವಾಲಯವಿರುವ, ನೀರು-ತುಂಬಿದ ಅಂಗಾಂಶವಿರುವ ಅತೀ ಸಣ್ಣದಾದ ಕೆಂಪು-ಕಂದು ಬಣ್ಣದ ಚುಕ್ಕೆಗಳಾಗಿ ಕಂಡುಬರುತ್ತವೆ.
ಸೋಂಕಿತ ಎಲೆಗಳು ಬೀಜಕಗಳ ಪ್ರಾಥಮಿಕ ಮೂಲವಾಗಿರುವುದರಿಂದ, ಕೊಯ್ಲು ಮಾಡಿದ ನಂತರ ಬಾಳೆಹಣ್ಣುಗಳ ಮೇಲೆ ಆ ಎಲೆಗಳ ಒಂದು ಚೀಲವನ್ನು ಇಟ್ಟರೆ, ಬೀಜಕಗಳು ಹಣ್ಣಿಗೆ ಹರಡುವುದನ್ನು ತಡೆಗಟ್ಟಬಹುದು. ಸರ್ಫ್ (1ಜಿ) ಅಥವಾ ಸ್ಯಾಂಡೋವಿಟ್ (1 ಮಿಲಿ) ಪ್ರತಿ ಲೀಟರ್ ನೀರಿಗೆ 5 ಮಿ.ಮಿ ನೊಂದಿಗೆ ಬೇವಿನ ಎಣ್ಣೆ ಅನ್ವಯಿಕೆಗಳನ್ನು (1500 ಪಿಪಿಎಮ್) ಬಳಸಬೇಕು. ಇದನ್ನು ಬೆಳೆಯ ಹೂಬಿಡುವ ಹಂತದಲ್ಲಿ ಮತ್ತು ಮೊದಲು ಕಾಣಿಸಿಕೊಂಡಾಗ ರೋಗನಿರೋಧಕವಾಗಿ ಬಳಸಬಹುದು.
ಯಾವಾಗಲೂ ಜೈವಿಕ ಚಿಕಿತ್ಸೆಗಳು ಲಭ್ಯವಿದ್ದರೆ ಅದರ ಜೊತೆ ನಿರೋಧಕ ಕ್ರಮಗಳನ್ನು ಒಟ್ಟುಗೂಡಿಸಿ ಸಮಗ್ರವಾದ ಮಾರ್ಗವನ್ನು ಪರಿಗಣಿಸಿ. ಎಲೆಗಳು ಮತ್ತು ಹಣ್ಣುಗಳ ಮೇಲೆ ಪ್ರತಿ 2 ವಾರಗಳಿಗೊಮ್ಮೆ ಅಥವಾ ತಿಂಗಳಿಗೊಮ್ಮೆ ಮಾನೆಬ್ ಅನ್ನು ಸಿಂಪಡಿಸಿದರೆ, ಅದು ಬೀಜಕಗಳ ಹರಡುವಿಕೆಯನ್ನು ಗಮನಾರ್ಹವಾಗಿ ಕಡಿಮೆ ಮಾಡಬಹುದು. ಫೋಲ್ಪೆಟ್, ಕ್ಲೋರೊಥಲೋನಿಲ್, ಮನ್ಕೊಝೆಬ್, ಟ್ರಿಯಾಜೊಲ್ಸ್, ಪ್ರೊಪಿಕೊನಜೋಲ್ ಮತ್ತು ಸ್ಟ್ರೋಬಿಲ್ಯೂರಿನ್ ಕುಟುಂಬದಂತಹ ಶಿಲೀಂಧ್ರನಾಶಕಗಳನ್ನು ವಾರಕ್ಕೆ ಎರಡು ಬಾರಿ ಸಿಂಪಡಿಸಿದರೂ ಸಹ ಅದು ರೋಗದ ವಿರುದ್ಧ ಪರಿಣಾಮಕಾರಿ ಫಲಿತಾಂಶಗಳನ್ನು ನೀಡುತ್ತದೆ.
ಫೀಲೊಸ್ಟಿಕ್ಟಾ ಮ್ಯಾಕುಲೇಟಾ ಎಂಬ ಶಿಲೀಂಧ್ರದಿಂದ ಈ ರೋಗಲಕ್ಷಣಗಳು ಉಂಟಾಗುತ್ತವೆ. ಇದು ಬಾಳೆಹಣ್ಣು ಬೆಳೆಯ ಬೆಳವಣಿಗೆ ಚಕ್ರದ ಎಲ್ಲಾ ಹಂತಗಳಲ್ಲಿ ಸಸ್ಯದ ಮೇಲೆ ಪರಿಣಾಮ ಬೀರಬಹುದು. ಇದನ್ನು 'ನೀರು ಬೀಜಕ ಜೀವಿ' ಎಂದು ಪರಿಗಣಿಸಲಾಗುತ್ತದೆ ಏಕೆಂದರೆ ಅದರ ಬೀಜಕಗಳ ಪ್ರಸರಣಕ್ಕೆ ನೀರು ಅವಶ್ಯಕವಾದುದು (ಉದಾಹರಣೆಗೆ ಮಳೆಹನಿಗಳು, ನೀರಿನ ಎರಚಲು, ಇಬ್ಬನಿ ಹನಿಗಳು). ಸೋಂಕಿತ ಸಸ್ಯ ವಸ್ತು ಮತ್ತು ಹಣ್ಣುಗಳನ್ನು ಒಂದು ಜಾಗದಿಂದ ಇನ್ನೊಂದಕ್ಕೆ ಒಯ್ಯುವಾಗಲೂ ಸಹ ಬಾಳೆಹಣ್ಣು ಚುಕ್ಕೆ ರೋಗ ಹರಡಬಹುದು. ಚುಕ್ಕೆ ಕಲೆಗಳಲ್ಲಿ ಬೀಜಕಗಳನ್ನು ಉತ್ಪಾದಿಸುವ ಶಿಲೀಂಧ್ರ ಭಾಗಗಳಿರುತ್ತವೆ. ಅವು ಕುಡಿಯೊಡೆದಾಗ, ಬೀಜಕಗಳು ಫಿಲಮಂಟ್ ಗಳನ್ನು ಉತ್ಪತ್ತಿ ಮಾಡುತ್ತವೆ. ಅದು ಆಶ್ರಯದಾತ ಸಸ್ಯದ ಒಳಹೊಕ್ಕುತ್ತದೆ ಮತ್ತು ಜೀವಕೋಶಗಳ ಒಳಗೆ ಮತ್ತು ಮಧ್ಯ ಸಂಖ್ಯಾಭಿವೃದ್ಧಿ ಮಾಡುತ್ತವೆ. ಇದರಿಂದ ಸಸ್ಯದ ಅಂಗಾಂಶದ ಮೇಲ್ಮೈ ಪದರಗಳಲ್ಲಿ ಹೊಸ ಕಲೆಗಳು ಅಥವಾ ಗಾಯಗಳನ್ನು ಹರಡುತ್ತದೆ. ಮೊದಲ ಪೊರೆ ಹುಟ್ಟುವ ಅವಧಿಯು ಉಷ್ಣವಾದ ಆರ್ದ್ರ ವಾತಾವರಣದಲ್ಲಿ 20 ದಿನಗಳಿಗಿಂತ ಕಡಿಮೆಯಿರಬಹುದು.