Cercospora beticola
ಶಿಲೀಂಧ್ರ
ರೋಗವು ಮೊದಲು ಹಳೆಯ, ಕೆಳಗಿನ ಎಲೆಗಳ ಮೇಲೆ ಪ್ರಾರಂಭವಾಗುತ್ತದೆ ಮತ್ತು ನಂತರ ಕಿರಿಯ ಎಲೆಗಳತ್ತ ಮುಂದುವರಿಯುತ್ತದೆ. ತಿಳಿ ಕಂದು ಅಥವಾ ಬೂದು ಬಣ್ಣದ, ದುಂಡಾದ ಅಥವಾ ಅಂಡಾಕಾರದ ಕಲೆಗಳು (2-3 ಮಿಮೀ ವ್ಯಾಸ) ಎಲೆಗಳು ಮತ್ತು ತೊಟ್ಟುಗಳ ಮೇಲೆ ಕಾಣಿಸಿಕೊಳ್ಳುತ್ತವೆ. ಈ ನೆಕ್ರೋಟಿಕ್ ಅಂಗಾಂಶಗಳು ಕೆಂಪು-ಕಂದು ಅಂಚುಗಳಿಂದ ಆವೃತವಾಗಿವೆ. ಕಲೆಗಳು ಹೆಚ್ಚಾಗಿ ವಿಲೀನಗೊಳ್ಳುತ್ತವೆ, ಮತ್ತು ಅವುಗಳ ಮಧ್ಯಭಾಗವು ಒಣಗಬಹುದು ಮತ್ತು ಬೀಳಬಹುದು. ಇದು ಎಲೆಯ ಮೇಲ್ಮೈನಲ್ಲಿ ರಂಧ್ರಗಳ ಬೆಳವಣಿಗೆಗೆ ಕಾರಣವಾಗುತ್ತದೆ (ಶಾಟ್-ಹೋಲ್ ಪರಿಣಾಮ). ಕ್ರಮೇಣ ಎಲೆಗಳು ಸಹ ಬಣ್ಣಗೆಡುತ್ತವೆ. ಮೊದಲು ಹಳದಿ ಬಣ್ಣಕ್ಕೆ (ಕ್ಲೋರೋಸಿಸ್) ಮತ್ತು ನಂತರ ಅವು ಒಣಗಿ ಸಾಯುವಾಗ ಕಂದು ಬಣ್ಣಕ್ಕೆ ತಿರುಗುತ್ತವೆ. ದೂರದಿಂದ, ಬಾಧಿತ ಸಸ್ಯಗಳು ಸುಟ್ಟಂತೆ ಕಾಣುತ್ತವೆ ಮತ್ತು ಮೇಲಾವರಣದಿಂದ ಹೊರಗುಳಿಯಬಹುದು. ಕಾಂಡಗಳು ಮತ್ತು ತೊಟ್ಟುಗಳ ಮೇಲಿನ ಚುಕ್ಕೆಗಳು ಉದ್ದವಾಗಿರುತ್ತವೆ ಮತ್ತು ಹೆಚ್ಚಾಗಿ ಸ್ವಲ್ಪ ಹುದುಗಿರುತ್ತವೆ. ದೀರ್ಘಕಾಲದ ಆರ್ದ್ರ ಪರಿಸ್ಥಿತಿಗಳಲ್ಲಿ, ಕಡು ಬೂದು ಬಣ್ಣದ ತುಂಬಾ ನಯವಾದ ಶಿಲೀಂಧ್ರಗಳ ಬೆಳವಣಿಗೆಯು ಕಾಣಿಸಿಕೊಳ್ಳಬಹುದು. ಪ್ರಧಾನವಾಗಿ ಎಲೆಯ ಕೆಳಭಾಗದಲ್ಲಿ ಮತ್ತು ಹೆಚ್ಚು ನಿಖರವಾಗಿ ಕಲೆಗಳ ಕೆಳಗೆ.
ಜೈವಿಕ ಎಲೆ ಸಿಂಪಡಣೆಗಳು, ಬ್ಯಾಕ್ಟೀರಿಯಾ ಸ್ಯೂಡೋಮೊನಾಸ್ ಫ್ಲೋರೊಸೆನ್ಸ್, ಬ್ಯಾಸಿಲಸ್ ಅಮಿಲೋಲಿಕ್ಫೇಸಿಯೆನ್ಸ್, ಬ್ಯಾಸಿಲಸ್ ಸಬ್ಟಿಲಿಸ್ ಮತ್ತು ಟ್ರೈಕೋಡರ್ಮಾ ಆಸ್ಪರೆಲಮ್ ಎಂಬ ಶಿಲೀಂಧ್ರವನ್ನು ಆಧರಿಸಿದ ಉತ್ಪನ್ನಗಳನ್ನು ಒಳಗೊಂಡಿವೆ. ಪರ್ಯಾಯವಾಗಿ, ಬೀಜಗಳ ಮೇಲ್ಮೈಯನ್ನು ಶಿಲೀಂಧ್ರಗಳಿಂದ ಸ್ವಚ್ಛಗೊಳಿಸಲು ಮತ್ತು ಅವುಗಳ ಆರೋಗ್ಯವನ್ನು ಖಚಿತಪಡಿಸಿಕೊಳ್ಳಲು ಬಿಸಿ-ನೀರಿನ ಚಿಕಿತ್ಸೆಗಳನ್ನು ಬಳಸಬಹುದು. ತಾಮ್ರ ಆಧಾರಿತ ಉತ್ಪನ್ನಗಳು (ತಾಮ್ರ ಆಕ್ಸಿಕ್ಲೋರೈಡ್) ಸಹ ಸಾವಯವ ಕೃಷಿಯಲ್ಲಿ ನಿಯಂತ್ರಣಕ್ಕೆ ಅಂಗೀಕೃತವಾದ ವಿಧಾನವಾಗಿದೆ.
ಲಭ್ಯವಿದ್ದಲ್ಲಿ ಜೈವಿಕ ಚಿಕಿತ್ಸೆಗಳ ಜೊತೆಗೆ ತಡೆಗಟ್ಟುವ ಕ್ರಮಗಳಿರುವ ಸಂಯೋಜಿತ ವಿಧಾನವನ್ನು ಯಾವಾಗಲೂ ಪರಿಗಣಿಸಿ. ರೋಗಕಾರಕವನ್ನು ನಿಯಂತ್ರಿಸಲು ಟ್ರಯಾಜೋಲ್ ಶಿಲೀಂಧ್ರನಾಶಕಗಳನ್ನು (ಡಿಫೆನೊಕೊನಜೋಲ್, ಪ್ರೊಪಿಕೊನಜೋಲ್, ಸೈಪ್ರೊಕೊನಜೋಲ್, ಟೆಟ್ರಾಕೊನಜೋಲ್, ಎಪಾಕ್ಸಿಕೋನಜೋಲ್, ಫ್ಲುಟ್ರಿಯಾಫೋಲ್, ಇತ್ಯಾದಿ) ಅಥವಾ ಬೆಂಜಿಮಿಡಾಜೋಲ್ ಗಳನ್ನು ಬಳಸಿ.
ಈ ರೋಗವು ಸೆರ್ಕೊಸ್ಪೊರಾ ಬೆಟಿಕೋಲಾ ಎಂಬ ಶಿಲೀಂಧ್ರದಿಂದ ಉಂಟಾಗುತ್ತದೆ, ಇದು ಮಣ್ಣಿನ ಮೇಲ್ಮೈಯಲ್ಲಿ ಅಥವಾ ಮೇಲಿನ ಮಣ್ಣಿನ ಪದರದಲ್ಲಿ ಸಸ್ಯದ ಅವಶೇಷಗಳ ಮೇಲೆ ಉಳಿದುಕೊಂಡಿರುತ್ತದೆ. ಬೀಟ್ ರೂಟ್ ಗೆಡ್ಡೆಗಳಿಗೆ ಸೋಂಕಿನ ಮೂಲವಾಗಿ ಕಂಡುಬರುವ ಕಳೆಗಳು (ಪಿಗ್ ವೀಡ್, ಗೂಸ್ಫೂಟ್, ಥಿಸಲ್)ಪರ್ಯಾಯ ಅತಿಥೇಯ ಸಸ್ಯಗಳಾಗಿದ್ದು, ಅವುಗಳ ಮೇಲೂ ಇವು ಚಳಿಗಾಲವನ್ನು ಕಳೆಯಬಹುದು. ಶಿಲೀಂಧ್ರದ ಬೆಳವಣಿಗೆಗೆ ಸೂಕ್ತವಾದ ಪರಿಸ್ಥಿತಿಗಳು ಹೆಚ್ಚಿನ ಆರ್ದ್ರತೆ (95-100 %), ಆಗಾಗ್ಗೆ ಇಬ್ಬನಿ ಮತ್ತು ಬೆಚ್ಚಗಿನ ಹವಾಮಾನ. ಸಾರಜನಕ ಗೊಬ್ಬರಗಳ ಅತಿಯಾದ ಬಳಕೆಯು ರೋಗದ ಸಂಭವವನ್ನು ಹೆಚ್ಚಿಸುತ್ತದೆ. ರೋಗವು ಹೊಲಗಳಲ್ಲಿ ಅಸಮಾನವಾಗಿ ವಿತರಿಸಲ್ಪಡುತ್ತದೆ. ಇದು ಸಾಮಾನ್ಯವಾಗಿ ಹೆಚ್ಚಿನ ಮಟ್ಟದ ಆರ್ದ್ರತೆಗೆ ಕಾರಣವಾಗಬಹುದಾದ ಸಂರಕ್ಷಿತ ಪ್ರದೇಶಗಳಲ್ಲಿ ಹೆಚ್ಚು ತೀವ್ರವಾಗಿರುತ್ತದೆ. ಇದು ವಿಶ್ವಾದ್ಯಂತ ಬೀಟ್ ರೂಟಿಗೆ ಬರುವ ಅತ್ಯಂತ ವಿನಾಶಕಾರಿ ಎಲೆಗಳ ರೋಗಕಾರಕವಾಗಿದೆ. ಚುಕ್ಕೆಗಳ ಸಣ್ಣ ಗಾತ್ರ ಮತ್ತು ಗಾಯಗಳ ಮಧ್ಯದಲ್ಲಿ ಕಪ್ಪು ಚುಕ್ಕೆಗಳ ಉಪಸ್ಥಿತಿಯಿಂದ ಸೆರ್ಕೊಸ್ಪೊರಾ ಸೋಂಕುಗಳು ಇತರ ಎಲೆ ರೋಗಗಳಿಂದ (ಆಲ್ಟರ್ನೇರಿಯಾ, ಫೋಮಾ ಮತ್ತು ಬ್ಯಾಕ್ಟೀರಿಯಾದ ಎಲೆಗಳ ಚುಕ್ಕೆಗಳಿಂದ) ಪ್ರತ್ಯೇಕಿಸಲ್ಪಡುತ್ತವೆ.