ಮೆಕ್ಕೆ ಜೋಳ

ಮೆಕ್ಕೆ ಜೋಳದ ಕಂದು ಚುಕ್ಕೆ

Physoderma maydis

ಶಿಲೀಂಧ್ರ

ಸಂಕ್ಷಿಪ್ತವಾಗಿ

  • ಸಣ್ಣ, ಹಳದಿಯಿಂದ ಕಂದು ಬಣ್ಣದ ಚುಕ್ಕೆಗಳು ಎಲೆಗಳು, ಕಾಂಡ, ತೆನೆ ಕವಚ ಮತ್ತು ಹೊಟ್ಟುಗಳ ಮೇಲೆ ಕಾಣಿಸಿಕೊಳ್ಳುತ್ತವೆ.
  • ರೋಗಗ್ರಸ್ತ ಅಂಗಾಂಶದ ಪಟ್ಟೆಗಳು ಎಲೆಯ ಸಾಕಷ್ಟು ಭಾಗವನ್ನು ಆವರಿಸಬಹುದು.
  • ಕಡು ಕಂದು ಬಣ್ಣದಿಂದ ಕಪ್ಪು ಕಲೆಗಳು ಮುಖ್ಯ ನಾಳದ ಉದ್ದಕ್ಕೂ ಅಥವಾ ಅದರ ಹತ್ತಿರದಲ್ಲಿಯೇ ಕಂಡುಬರುತ್ತವೆ.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ಮೆಕ್ಕೆ ಜೋಳ

ರೋಗಲಕ್ಷಣಗಳು

ಸೋಂಕು, ಎಲೆಗಳು, ಕಾಂಡ, ತೆನೆ ಕವಚ ಮತ್ತು ಹೊಟ್ಟುಗಳ ಮೇಲೆ ಸಣ್ಣ, ಹಳದಿಯಿಂದ ಕಂದು ಬಣ್ಣದ ಚುಕ್ಕೆಗಳನ್ನು ಉಟುಮಾಡುತ್ತದೆ. ಕಡು ಕಂದು ಬಣ್ಣದಿಂದ ಕಪ್ಪು ಕಲೆಗಳು ಮುಖ್ಯ ನಾಳದ ಉದ್ದಕ್ಕೂ ಅಥವಾ ಅದರ ಹತ್ತಿರದಲ್ಲಿಯೇ ಕಂಡುಬರುತ್ತವೆ. ರೋಗ ಮುಂದುವರಿಯುತ್ತಿದ್ದಂತೆ, ಚುಕ್ಕೆಗಳು ದೊಡ್ಡದಾಗುತ್ತವೆ ಮತ್ತು ಸಂಖ್ಯೆಯಲ್ಲಿ ಹೆಚ್ಚಾಗುತ್ತವೆ. ರೋಗಗ್ರಸ್ತ ಅಂಗಾಂಶದ ಪಟ್ಟೆಗಳು ಎಲೆಯ ಸಾಕಷ್ಟು ಭಾಗವನ್ನು ಆವರಿಸಬಹುದು. ಅವುಗಳ ಬಣ್ಣವು ಸಾಮಾನ್ಯವಾಗಿ ಹಳದಿ ಬಣ್ಣದಿಂದ ಕಂದು ಬಣ್ಣಕ್ಕೆ ಬದಲಾಗುತ್ತದೆ ಮತ್ತು ಅವು ಕೆಲವು ರೀತಿಯ ತುಕ್ಕುಗಳಿಂದ ಉಂಟಾಗುವ ರೋಗಲಕ್ಷಣಗಳನ್ನು ನೆನಪಿಸುತ್ತವೆ. ಆದಾಗ್ಯೂ, ತುಕ್ಕು ರೋಗಗಳಿಗೆ ವಿರುದ್ಧವಾಗಿ, ಪಿ. ಮೇಡಿಸ್ ತೇಪೆಗಳು ಎಲೆಗಳಾದ್ಯಂತ ವಿಭಿನ್ನವಾದ ಪಟ್ಟೆಗಳಲ್ಲಿ, ಹೆಚ್ಚಾಗಿ ಸಸ್ಯದ ತಳದಲ್ಲಿ ಬೆಳೆಯುತ್ತವೆ. ಇನ್ನೊಂದು ವ್ಯತ್ಯಾಸವೆಂದರೆ, ಎದ್ದುಕಾಣುವ ಗಾಢವಾದ ಕಂದು ಬಣ್ಣದಿಂದ ಕಪ್ಪು ಬಣ್ಣದ ಚುಕ್ಕೆಗಳು ಮುಖ್ಯ ನಾಳದ ಮೇಲೆ ಅಥವಾ ಪಕ್ಕದಲ್ಲಿರುತ್ತವೆ. ರೋಗಕ್ಕೆ ಒಳಗಾಗುವ ಪ್ರಭೇದಗಳಲ್ಲಿ, ಮಧ್ಯದ ನಾಳಗಳು ಈ ಗಾಯಗಳೊಂದಿಗೆ ಮುಚ್ಚಲ್ಪಡುತ್ತವೆ ಮತ್ತು ಚಾಕೋಲೇಟ್ ಬಣ್ಣದಿಂದ, ಕೆಂಪು ಕಂದು ಅಥವಾ ಕೆನ್ನೇರಳೆ ಬಣ್ಣಕ್ಕೆ ತಿರುಗುತ್ತದೆ.

ಶಿಫಾರಸುಗಳು

ಜೈವಿಕ ನಿಯಂತ್ರಣ

ಈವರೆಗೆ ಪಿ. ಮೇಡಿಸ್ ಗೆ ಯಾವುದೇ ಜೈವಿಕ ಚಿಕಿತ್ಸೆಯು ಲಭ್ಯವಿಲ್ಲ. ನಿಮಗೆ ಯಾವುದಾದರೋ ತಿಳಿದಿದ್ದರೆ ದಯವಿಟ್ಟು ನಮಗೆ ತಿಳಿಸಿ. ಇದರ ಸಂಭವನೀಯತೆ ಮತ್ತು ರೋಗ ಉಲ್ಭಣ ತಪ್ಪಿಸಲು ಕೃಷಿ ನಿಯಂತ್ರಣವೇ ಅತ್ಯಂತ ಪ್ರಮುಖ ಅಭ್ಯಾಸವಾಗಿದೆ.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದರೆ, ತಡೆಗಟ್ಟುವ ಕ್ರಮಗಳು ಮತ್ತು ಜೈವಿಕ ಚಿಕಿತ್ಸೆಗಳು ಇರುವ ಸಮಗ್ರ ವಿಧಾನವನ್ನು ಯಾವಾಗಲೂ ಪರಿಗಣಿಸಿ. ಪಿ. ಮೆಡಿಸ್ ವಿರುದ್ಧ ಯಾವುದೇ ರಾಸಾಯನಿಕ ಚಿಕಿತ್ಸೆ ಶಿಫಾರಸು ಮಾಡಲಾಗಿಲ್ಲ. ಏಕೆಂದರೆ, ಇದರ ಸಂಭವವು ವಿರಳವಾಗಿರುತ್ತದೆ ಮತ್ತು ಇಳುವರಿಯ ಮೇಲೆ ಪರಿಣಾಮವು ಕಡಿಮೆಯಾಗಿರುತ್ತದೆ.

ಅದಕ್ಕೆ ಏನು ಕಾರಣ

ರೋಗಲಕ್ಷಣಗಳು ಫಿಸೊಡರ್ಮಾ ಮೆಡಿಸ್ ನಿಂದ ಉಂಟಾಗುತ್ತವೆ. ಇದು ಸೋಂಕಿತ ಬೆಳೆಗಳ ಅವಶೇಷಗಳು ಅಥವಾ ಮಣ್ಣಿನಲ್ಲಿ (ಅನುಕೂಲಕರ ಸ್ಥಿತಿಗಳಲ್ಲಿ 7 ವರ್ಷಗಳವರೆಗೆ) ಸುಪ್ತವಾಗಿರುವ ಶಿಲೀಂಧ್ರಗಳಾಗಿವೆ. ನಿರಂತರವಾಗಿ ಜೋಳ ಬೆಳೆಯುವ ಅಥವಾ ಹೇರಳವಾದ ಬೆಳೆ ಉಳಿಕೆಗಳಿರುವ ಹೊಲಗಳಲ್ಲಿ ಈ ರೋಗ ಹೆಚ್ಚು ಸಾಮಾನ್ಯವಾಗಿದೆ, ಉದಾಹರಣೆಗೆ, ಕಡಿಮೆ ಉಳುಮೆ ಮಾಡುವ ಅಭ್ಯಾಸ ಇರುವಲ್ಲಿ. ಸೋಂಕು ಸಾಮಾನ್ಯವಾಗಿ ಮಳೆ ನೀರು ಅಥವಾ ನೀರಾವರಿ ನಂತರ ನೀರು ಶೇಖರಗೊಳ್ಳುವ ಸುಳಿಯಲ್ಲಿ ಪ್ರಾರಂಭವಾಗುತ್ತದೆ. ಅಲ್ಲಿಂದ, ದ್ವಿತೀಯ ಇನಾಕ್ಯುಲಮ್ ಗಾಳಿ ಅಥವಾ ನೀರಿನ ಹಾರುವಿಕೆ ಮೂಲಕ ಇತರ ಸಸ್ಯ ಸುರುಳಿಗಳಿಗೆ ಹರಡುತ್ತದೆ. ಇದು ಹಳೆಯ ಎಲೆಗಳ ತಳದಲ್ಲಿ ರೋಗಲಕ್ಷಣಗಳು ಹೆಚ್ಚಾಗಿರುವುದು ಏಕೆ ಎಂಬುದನ್ನು ವಿವರಿಸುತ್ತದೆ. ಇದಕ್ಕಾಗಿ ಸೂಕ್ತ ಬೆಳಕು ಮತ್ತು ಉಷ್ಣಾಂಶದ ಪರಿಸ್ಥಿತಿಗಳು ಕೂಡಾ ಅಗತ್ಯವಾಗಿರುತ್ತದೆ. ಒಟ್ಟಾರೆಯಾಗಿ, ಈ ರೋಗವು ಗಂಭೀರವಾಗಿಲ್ಲ ಮತ್ತು ಇಳುವರಿಗಳ ಮೇಲೆ ಕಡಿಮೆ ಪರಿಣಾಮ ಬೀರುತ್ತದೆ.


ಮುಂಜಾಗ್ರತಾ ಕ್ರಮಗಳು

  • ರೋಗದ ಚಿಹ್ನೆಗಳಿಗಾಗಿ ನಿಯಮಿತವಾಗಿ ಹೊಲದ ಮೇಲ್ವಿಚಾರಣೆ ಮಾಡಿ.
  • ಶಿಲೀಂಧ್ರಗಳು, ಸೋಂಕಿತ ಬೆಳೆಗಳ ಅವಶೇಷದಲ್ಲಿ ಅಥವಾ 2-7 ವರ್ಷಗಳವರೆಗೆ ಮಣ್ಣಿನಿಂದ ಉಳಿಯುವುದರಿಂದ, ವಿಶಾಲವಾದ ಬೆಳೆ ಸರದಿ ಅಭ್ಯಾಸ ಮಾಡಿ.
  • ಆಳವಾಗಿ ಉಳುಮೆ ಮಾಡಿ ಅಥವಾ ಹೊಲದಿಂದ ದೂರದಲ್ಲಿ ಅವುಗಳನ್ನು ಸುಡುವುದರ ಮೂಲಕ ಬೆಳೆ ಉಳಿಕೆಗಳನ್ನು ತೆಗೆದುಹಾಕಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ