ಕಲ್ಲಂಗಡಿ

ಕುಕುರ್ಬಿಟ್ಸ್ ನ ಗಮ್ಮಿ ಸ್ಟೆಮ್ ರೋಗ

Stagonosporopsis cucurbitacearum

ಶಿಲೀಂಧ್ರ

ಸಂಕ್ಷಿಪ್ತವಾಗಿ

  • ಎಲೆಗಳ ಮೇಲೆ ವೃತ್ತಾಕಾರದ, ತೆಳು ಕಂದು ಅಥವಾ ಗಾಢವಾದ ಕಂದು ಬಣ್ಣದ ಚುಕ್ಕೆಗಳಿರುತ್ತವೆ.
  • ಇವು ವೇಗವಾಗಿ ಹರಡುತ್ತವೆ.
  • ಕಂದು, ಅಂಟಂಟಾದ ರಸಸ್ರಾವದೊಂದಿಗೆ ಸ್ಟೆಮ್ ಹುಣ್ಣು (ಕ್ಯಾಂಕರ್) ಗಳು ಉಂಟಾಗುತ್ತವೆ.
  • ಹಣ್ಣಿನ ಮೇಲೆ ಸಣ್ಣ, ನೀರು-ತುಂಬಿದ ಕಲೆಗಳು, ಅಂಟಂಟಾದ ವಸ್ತುವನ್ನು ಸ್ರವಿಸುವುದು ಗೋಚರಿಸುತ್ತದೆ.

ಇವುಗಳಲ್ಲಿ ಸಹ ಕಾಣಬಹುದು

5 ಬೆಳೆಗಳು
ಹಾಗಲಕಾಯಿ
ಸೌತೆಕಾಯಿ
ಕಲ್ಲಂಗಡಿ
ಕುಂಬಳಕಾಯಿ
ಇನ್ನಷ್ಟು

ಕಲ್ಲಂಗಡಿ

ರೋಗಲಕ್ಷಣಗಳು

ಸಸಿಗಳ ಮೇಲೆ, ವೃತ್ತಾಕಾರದ, ನೀರು-ತುಂಬಿದ, ಕಪ್ಪು ಅಥವಾ ಕಂದು ಬಣ್ಣದ ಕಲೆಗಳು ಬೀಜ ಎಲೆಗಳು ಮತ್ತು ಕಾಂಡಗಳ ಮೇಲೆ ಕಾಣಿಸುತ್ತವೆ. ಹಳೆಯ ಸಸ್ಯಗಳಲ್ಲಿ, ಕಡು ಕಂದು ಬಣ್ಣದಿಂದ ತೆಳು ಕಂದು ಬಣ್ಣದ, ವೃತ್ತಾಕಾರದಿಂದ ಅನಿಯಮಿತ ಚುಕ್ಕೆಗಳು ಎಲೆಗಳಲ್ಲಿ ಕಾಣಿಸಿಕೊಳ್ಳುತ್ತವೆ. ಸಾಮಾನ್ಯವಾಗಿ ಇದು ಅಂಚಿನಲ್ಲಿ ಅಥವಾ ಅದರ ಹತ್ತಿರ ಮೊದಲಿಗೆ ಕಾಣಿಸುತ್ತದೆ. ಸಂಪೂರ್ಣ ಎಲೆಗೆ ರೋಗ ತಗುಲುವವರೆಗೆ ಈ ಕಲೆಗಳು ಶೀಘ್ರವಾಗಿ ಹಿಗ್ಗುತ್ತವೆ. ಹುಣ್ಣು (ಕ್ಯಾಂಕರ್ )ಗಳು ಕಾಂಡದ ನಾಳೀಯ ಅಂಗಾಂಶಗಳಲ್ಲಿ ಬೆಳೆಯುತ್ತವೆ ಮತ್ತು ಕಂದು, ಅಂಟಂಟಾದ ರಸಸ್ರಾವವು ಸಾಮಾನ್ಯವಾಗಿ ಮೇಲ್ಭಾಗದಲ್ಲಿ ಉತ್ಪತ್ತಿಯಾಗುತ್ತದೆ. ಶಿಲೀಂಧ್ರದ ಸಣ್ಣ ಫ್ರುಟಿಂಗ್ ಕಾಯಗಳಿಗೆ ಅನುಗುಣವಾಗಿ, ಗಾಯಗಳ ಮೇಲೆ ಕಪ್ಪು ಚುಕ್ಕೆಗಳು ಹೆಚ್ಚಾಗಿ ಗೋಚರಿಸುತ್ತವೆ. ಕಾಂಡಗಳು ಸುರುಳಿಯಾಗಬಹುದು ಮತ್ತು ಸಸಿ ಅಥವಾ ಎಳೆ ಸಸ್ಯಗಳು ಸಾಯುತ್ತವೆ. ಹಳೆಯ ಸಸ್ಯಗಳಲ್ಲಿ ಸೋಂಕು ಬಂದಲ್ಲಿ, ಗಾಯಗಳು ಅಂಗಾಂಶಗಳ ಊತದ ಕೇಂದ್ರಭಾಗದಲ್ಲಿ ನಿಧಾನವಾಗಿ ಬೆಳೆಯುತ್ತವೆ. ಹುಣ್ಣು ಬಂದ ಕಾಂಡಗಳು ಸಾಮಾನ್ಯವಾಗಿ ಮಧ್ಯಾವಧಿಯ ನಂತರ, ಬಾಡಿಹೋಗಬಹುದು ಮತ್ತು ಸೀಳಬಹದು. ಸೋಂಕಿತ ಹಣ್ಣಿನ ಮೇಲೆ ಸಣ್ಣ, ನೀರು-ತುಂಬಿದ ಕಲೆಗಳು ಬೆಳೆಯುತ್ತವೆ, ಅನಿರ್ದಿಷ್ಟ ಗಾತ್ರಕ್ಕೆ ಅಗಲವಾಗುತ್ತವೆ ಮತ್ತು ಅಂಟಂಟಾದ ವಸ್ತುವನ್ನು ಹೊರಹಾಕುತ್ತವೆ.

ಶಿಫಾರಸುಗಳು

ಜೈವಿಕ ನಿಯಂತ್ರಣ

ರೈನೌಟ್ರಿಯಾ ಸ್ಯಾಚಲಿನೆನ್ಸಿಸ್ನ ಸಾರವನ್ನು ಸಾವಯವ ತೋಟಗಳಲ್ಲಿ ಬಳಸಬಹುದು. ಬಾಸಿಲಸ್ ಸಬ್ಟಿಲೀಸ್ ಸ್ಟ್ರೈನ್ QST 713 ಯ ಸೂತ್ರೀಕರಣಗಳು ಸಹ ರೋಗದ ವಿರುದ್ಧ ಪರಿಣಾಮಕಾರಿಯಾಗಿದೆ.

ರಾಸಾಯನಿಕ ನಿಯಂತ್ರಣ

ಯಾವಾಗಲೂ ಜೈವಿಕ ಚಿಕಿತ್ಸೆಗಳು ಲಭ್ಯವಿದ್ದರೆ ಅದರ ಜೊತೆ ನಿರೋಧಕ ಕ್ರಮಗಳನ್ನು ಒಟ್ಟುಗೂಡಿಸಿ ಸಮಗ್ರವಾದ ಮಾರ್ಗವನ್ನು ಪರಿಗಣಿಸಿ. ಸಂಪರ್ಕ ಶಿಲೀಂಧ್ರನಾಶಕಗಳಾದ ಕ್ಲೋರೊಥಲೋನಿಲ್, ಮನ್ಕೊಜೆಬ್, ಮನೆಬ್, ಥಿಯೊಫನೇಟ್-ಮೀಥೈಲ್ ಮತ್ತು ಟೆಬೊಕೊನಜೋಲ್ಗಳನ್ನು ಒಳಗೊಂಡಿರುವ ಸೂತ್ರೀಕರಣಗಳು ಈ ರೋಗದ ವಿರುದ್ಧ ಪರಿಣಾಮಕಾರಿಯಾಗಿವೆ.

ಅದಕ್ಕೆ ಏನು ಕಾರಣ

ಈ ಕುಟುಂಬದ ಹಲವಾರು ಬೆಳೆಗಳಿಗೆ ಸೋಂಕು ಉಂಟುಮಾಡುವ ಶಿಲೀಂಧ್ರವಾದ ಸ್ಟ್ಯಾಗೋನೋಸ್ಪೊಪೊಪ್ಸಿಸ್ ಕುಕುರ್ಬಿಟಿಸಿಯಂನಿಂದ ಈ ರೋಗಲಕ್ಷಣಗಳು ಉಂಟಾಗುತ್ತವೆ. ರೋಗಕಾರಕವನ್ನು ಸೋಂಕಿತ ಬೀಜಗಳು ಹರಡಬಹುದು. ಆಶ್ರಯದಾತ ಸಸ್ಯಗಳ ಅನುಪಸ್ಥಿತಿಯಲ್ಲಿ, ಇದು ಸೋಂಕಿತ ಬೆಳೆ ಉಳಿಕೆಯ ಮೇಲೆ ಒಂದು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಕಾಲ ಚಳಿಗಾಲವನ್ನು ಕಳೆಯಬಹುದು. ವಸಂತಕಾಲದಲ್ಲಿ, ಪರಿಸ್ಥಿತಿಗಳು ಅನುಕೂಲಕರವಾದಾಗ, ಬೀಜಕಗಳನ್ನು ಉತ್ಪಾದಿಸಲಾಗುತ್ತದೆ. ಇದು ಸೋಂಕಿನ ಪ್ರಾಥಮಿಕ ಮೂಲವಾಗಿ ಕಾರ್ಯನಿರ್ವಹಿಸುತ್ತದೆ. ತೇವಾಂಶ, 85 ಪ್ರತಿಶತದಷ್ಟು ಸಾಪೇಕ್ಷ ಆರ್ದ್ರತೆ, ಮಳೆ ಮತ್ತು ಎಲೆ ಆರ್ದ್ರತೆಯ ಅವಧಿಯು (1 ರಿಂದ 10 ಗಂಟೆಗಳವರೆಗೆ) ಯಶಸ್ವಿ ಸೋಂಕು ಮತ್ತು ರೋಗಲಕ್ಷಣಗಳ ಬೆಳವಣಿಗೆಗೆ ಸೂಕ್ತ ಸ್ಥಿತಿಗಳು. ರೋಗಕ್ಕೆ ಸೂಕ್ತವಾದ ಉಷ್ಣತೆಯು ಆಯಾ ಜಾತಿಯನ್ನು ಅವಲಂಬಿಸಿರುತ್ತದೆ ಮತ್ತು ಕಲ್ಲಂಗಡಿ ಹಾಗು ಸೌತೆಕಾಯಿಯಲ್ಲಿ 24 °ಸಿ ನಷ್ಟು ಮತ್ತು ಕರಬೂಜದಲ್ಲಿ ಸುಮಾರು 18 °ಸಿ ವರೆಗೆ ಬದಲಾಗುತ್ತದೆ. ಬೀಜಕಗಳು ನೇರವಾಗಿ ಎಪಿಡರ್ಮಿಸ್ ನ ಒಳಗೆ ನುಗ್ಗುತ್ತವೆ ಮತ್ತು ಸ್ಟೊಮಾಟಾ ಅಥವಾ ಗಾಯಗಳ ಮೂಲಕವೇ ಸಂಭವಿಸಬೇಕಾಗಿಲ್ಲ. ಗಾಯಗೊಳ್ಳುವುದು, ಪಟ್ಟೆಯಿರುವ ಸೌತೆಕಾಯಿ ಜೀರುಂಡೆಗಳಿಂದಾಗುವ ಸೋಂಕು, ಮತ್ತು ಗಿಡಹೇನುಗಳ ಆಹಾರ ಚಟುವಟಿಕೆ ಮತ್ತು ಇವುಗಳ ಜೊತೆ ಸೂಕ್ಷ್ಮ ಶಿಲೀಂಧ್ರಗಳ ಸೋಂಕುಗಳು, ಮುಂತಾದವು ಸಸ್ಯಗಳನ್ನು ಸೋಂಕಿಗೆ ಒಳಪಡಿಸುತ್ತವೆ.


ಮುಂಜಾಗ್ರತಾ ಕ್ರಮಗಳು

  • ಪ್ರಮಾಣೀಕೃತ ಮೂಲಗಳಿಂದ ಅಥವಾ ರೋಗ ಮುಕ್ತ ಸಸ್ಯಗಳಿಂದ ಬೀಜವನ್ನು ಪಡೆದುಕೊಳ್ಳಿ, ವಾಯುಗಾಮಿ ಬೀಜಕಗಳ ಮೂಲಕ ಮಾಲಿನ್ಯದಿಂದ ದೂರವಿರಿಸಿ.
  • ದ್ವಿತೀಯಕ ಸೋಂಕಿನ ಅವಕಾಶವನ್ನು ಕಡಿಮೆಗೊಳಿಸಲು ಸೂಕ್ಷ್ಮ-ಶಿಲೀಂಧ್ರ-ನಿರೋಧಕ ಪ್ರಭೇದಗಳನ್ನು ಬಳಸಿ.
  • ರೋಗದ ರೋಗಲಕ್ಷಣಗಳನ್ನು ಗುರುತಿಸಲು ಹೊಲವನ್ನು ನಿಯಮಿತವಾಗಿ ಪರಿಶೀಲಿಸಿ.
  • 2 ವರ್ಷದ ಸರದಿ ಬೆಳೆಯನ್ನು ಯೋಜಿಸಿ ಮತ್ತು ಅದನ್ನು ಅನುಸರಿಸಿ.
  • ಕುಕುರ್ಬಿಟ್ಗಳನ್ನು ನಾಟಿ ಮಾಡುವ ಮೊದಲು ವೈಲ್ಡ್ ಸಿಟ್ರಾನ್ಸ್, ಬಾಲ್ಸಾಮ್ ಪಿಯರ್, ಅಥವಾ ತಾನಾಗೇ ಬೆಳೆದ ಕುಕುರ್ಬಿಟ್ಸ್ಗಳನ್ನು ನಿರ್ಮೂಲನೆ ಮಾಡಬೇಕು.
  • ಸುಗ್ಗಿಯ ನಂತರ ತಕ್ಷಣವೇ ಸಸ್ಯದ ಉಳಿಕೆಗಳನ್ನು ಹೂಳಬೇಕು.
  • ಸುಗ್ಗಿಯ ಸಮಯದಲ್ಲಿ ಹಣ್ಣುಗಳಿಗೆ ಗಾಯವಾಗದಂತೆ ನೋಡಿಕೊಳ್ಳಿ.
  • ಕಟಾವಿನ ನಂತರ ಬರುವ ಕಪ್ಪು ಕೊಳೆತವನ್ನು ತಡೆಯಲು 7-10 °ಸಿ ನಲ್ಲಿ ಹಣ್ಣುಗಳನ್ನು ಸಂಗ್ರಹಿಸಿ.
  • ಸಸ್ಯಗಳಲ್ಲಿ ತೇವಾಂಶವನ್ನು ಕಡಿಮೆ ಮಾಡಬೇಕು.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ