ಮರಗೆಣಸು

ಮರಗೆಣಸಿನ ಬಿಳಿ ಎಲೆ ಚುಕ್ಕೆ

Passalora manihotis

ಶಿಲೀಂಧ್ರ

ಸಂಕ್ಷಿಪ್ತವಾಗಿ

  • ಎಲೆಯ ಮೇಲ್ಭಾಗದಲ್ಲಿ ಬಿಳಿ ಕಲೆಗಳು.
  • ಅನಿಯಮಿತ ಕೆಂಪು ಗೆರೆ ಮತ್ತು ಹಳದಿ ಹೊರ ವರ್ತುಲದಿಂದ ಸುತ್ತುವರಿದಿರುತ್ತದೆ.
  • ಎಲೆಯ ಕೆಳಗಿನ ಭಾಗದಲ್ಲಿ ಬೂದು ಬಣ್ಣದ ಕಲೆಗಳು.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು
ಮರಗೆಣಸು

ಮರಗೆಣಸು

ರೋಗಲಕ್ಷಣಗಳು

ರೋಗಲಕ್ಷಣಗಳು ಪ್ರಭೇದ ಮತ್ತು ಪರಿಸರ ಪರಿಸ್ಥಿತಿಗಳ ಮೇಲೆ ಅವಲಂಬಿತವಾಗಿರುತ್ತದೆ. ಸಾಮಾನ್ಯವಾಗಿ, ಹಳೆಯ ಎಲೆಗಳ ಮೇಲೆ ಹಾನಿ ಹೆಚ್ಚಾಗಿರುತ್ತದೆ ಮತ್ತು ಎಳೆಯ ಎಲೆಗಳಲ್ಲಿ ಕ್ರಮೇಣವಾಗಿ ಕಡಿಮೆಯಾಗಿರುತ್ತದೆ. ಗುಳಿ ಬಿದ್ಳುದ, ಬಿಳಿಯ, ಕೋನೀಯ ಅಥವಾ ವೃತ್ತಾಕಾರದ ಕಲೆಗಳು ಎಲೆಗಳ ಮೇಲಿನ ಭಾಗದಲ್ಲಿ ಬೆಳೆಯುತ್ತವೆ. ಹೆಚ್ಚಾಗಿ ಇವು ಅನಿಯಮಿತ ಕೆಂಪು ಗೆರೆ ಮತ್ತು ದೊಡ್ಡ ಹಳದಿ ಹೊರವರ್ತುಲದಿಂದ ಸುತ್ತಲ್ಪಟ್ಟಿರುತ್ತವೆ. ಇದಕ್ಕೆ ಬದಲಾಗಿ ಎಲೆಯ ಮೇಲ್ಮೈನ ಕೆಳಗಿನ ಭಾಗದಲ್ಲಿ, ಈ ಕಲೆಗಳು ಹರಡಿದಂತಹ ಬಣ್ಣದ ಅಂಚಿನೊಂದಿಗೆ ಕಾಣಿಸಿಕೊಳ್ಳುತ್ತವೆ. ಶಿಲೀಂಧ್ರವು ಬೆಳೆದಂತೆ ಮತ್ತು ರೋಗಲಕ್ಷಣಗಳು ಮುಂದುವರೆದಂತೆ, ಕಲೆಗಳು ಬೂದುಬಣ್ಣದ, ವೆಲ್ವೆಟ್ ರೀತಿಯಾಗುತ್ತವೆ. ಇದು ಆರ್ದ್ರ ವಾತಾವರಣದಲ್ಲಿ ವಿಶೇಷವಾಗಿ ಸ್ಪಷ್ಟವಾಗಿ ಕಂಡುಬರುತ್ತದೆ. ಈ ರೋಗವು ಸಾಮಾನ್ಯವಾಗಿ ತೇವಾಂಶವುಳ್ಳ ಆದರೆ ತಂಪಾದ ಮರಗೆಣಸು ಬೆಳೆಯುವ ಪ್ರದೇಶಗಳಲ್ಲಿ ಕಂಡುಬರುತ್ತದೆ.

ಶಿಫಾರಸುಗಳು

ಜೈವಿಕ ನಿಯಂತ್ರಣ

ಶಿಲೀಂಧ್ರದ ಹರಡುವಿಕೆಯನ್ನು ನಿಯಂತ್ರಿಸಲು ಯಾವುದೇ ಜೈವಿಕ ನಿಯಂತ್ರಣ ಕ್ರಮಗಳು ಇದುವರೆಗೆ ಲಭ್ಯವಿಲ್ಲ. ರೋಗವನ್ನು ತಪ್ಪಿಸಲು, ರೋಗರಹಿತ ನೆಡು ವಸ್ತುಗಳನ್ನು ಬಳಸುವುದು ಮತ್ತು ಸೂಕ್ತ ತಡೆಗಟ್ಟುವ ಕ್ರಮಗಳನ್ನು ಅಳವಡಿಸಿಕೊಳ್ಳುವುದು ಅತ್ಯಗತ್ಯ.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದರೆ ಜೈವಿಕ ಚಿಕಿತ್ಸೆಗಳೊಂದಿಗೆ ತಡೆಗಟ್ಟುವ ಕ್ರಮಗಳಿರುವ ಸಮಗ್ರ ವಿಧಾನವನ್ನು ಯಾವಾಗಲೂ ಪರಿಗಣಿಸಿ. ಮರಗೆಣಸಿನಲ್ಲಿ ಬಿಳಿ ಎಲೆ ಚುಕ್ಕೆಗಳನ್ನು ಥಿಯೋಫನೇಟ್ (0.20%), ಕ್ಲೋರ್ಥಾಲೋನಿಲ್ ಹೊಂದಿರುವ ಶಿಲೀಂಧ್ರನಾಶಕಗಳನ್ನು ತಿಂಗಳಿಗೊಮ್ಮೆ ಸಿಂಪಡಿಸುವ ಮೂಲಕ ಪರಿಣಾಮಕಾರಿಯಾಗಿ ನಿಯಂತ್ರಿಸಬಹುದು. ತಾಮ್ರದ ಶಿಲೀಂಧ್ರನಾಶಕಗಳು, ಮೆಟಾಲಾಕ್ಸಿಲ್ ಮತ್ತು ಮ್ಯಾಂಕೋಜೆಬ್ ಅನ್ನು ಸಹ ಶಿಫಾರಸು ಮಾಡಲಾಗಿದೆ. ಜಮೀನಿನಲ್ಲಿ ಕಳೆಗಳ ಬೆಳವಣಿಗೆಯನ್ನು ನಿಯಂತ್ರಿಸಲು ಕಳೆನಾಶಕಗಳನ್ನು ಸಹ ಬಳಸಬಹುದು.

ಅದಕ್ಕೆ ಏನು ಕಾರಣ

ಫೆಯೋರಾಮುಲೇರಿಯಾ ಮನಿಹೋಟಿಸ್ ಎಂಬ ಶಿಲೀಂಧ್ರದಿಂದ ರೋಗಲಕ್ಷಣಗಳು ಉಂಟಾಗುತ್ತವೆ. ಇದು ಒಣ ಋತುವನ್ನು ಸಸ್ಯದ ಮೇಲಿರುವ ಅಥವಾ ನೆಲದ ಮೇಲಿನ ರೋಗಪೀಡಿತ ಮರಗೆಣಿಸಿನ ಎಲೆಗಳಲ್ಲಿ ಕಳೆಯುತ್ತದೆ. ಅನುಕೂಲಕರ ಪರಿಸ್ಥಿತಿಗಳಲ್ಲಿ ಎಲೆಗಳ ಮೇಲ್ಮೈನ ಅಡಿಯಲ್ಲಿರುವ, ನೆಕ್ರೋಟಿಕ್ ತೇಪೆಗಳ ಕೆಳಗೆ ಬೀಜಕಗಳನ್ನು ಉತ್ಪಾದಿಸುತ್ತವೆ. ನಂತರ ಇದು ಗಾಳಿ ಅಥವಾ ಮಳೆಯ ಮೂಲಕ ಹೊಸ ಸಸ್ಯಗಳಿಗೆ ಹರಡುತ್ತದೆ. ಆರೋಗ್ಯಕರ ಅಂಗಾಂಶಗಳ ಒಳಗೆ ಬೀಜಕಗಳು ಎಲೆಗಳ ಮೇಲಿನ ನೈಸರ್ಗಿಕ ರಂಧ್ರಗಳ ಮೂಲಕ ನುಗ್ಗುತ್ತವೆ. ಮತ್ತು ಶಿಲೀಂಧ್ರವು ನಿಧಾನವಾಗಿ ಸಸ್ಯವನ್ನು ಆವರಿಸುತ್ತದೆ. ಇದರಿಂದ ರೋಗಲಕ್ಷಣಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ರೋಗಪೀಡಿತ ನೆಡು ವಸ್ತುಗಳನ್ನು ಇತರ ಹೊಲಗಳಿಗೆ ಅಥವಾ ಜಮೀನುಗಳಿಗೆ ಸಾಗಿಸಿದಾಗ ಬಹಳ ದೂರದವರೆಗಿನ ಹರಡುವಿಕೆ ಕೂಡ ಸಂಭವಿಸಬಹುದು. ಕೆಲವು ಕಳೆಗಳು ಪರ್ಯಾಯ ಆಶ್ರಯದಾತ ಸಸ್ಯಗಳಾಗಿ ಕಾರ್ಯನಿರ್ವಹಿಸುತ್ತವೆ. ಇದು ಸಾಮಾನ್ಯವಾಗಿ ಮರಗೆಣಸು ಸಸ್ಯಗಳಿಗೆ ಹಾನಿಕಾರಕವಲ್ಲ ಮತ್ತು ಮುತ್ತುವಿಕೆ ತೀವ್ರವಾಗಿಲ್ಲದಿದ್ದರೆ ಇಳುವರಿಯ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರುವುದಿಲ್ಲ. ಆದರೂ, ತಂಪಾದ ಮತ್ತು ಆರ್ದ್ರ, ಮಳೆಯ ವಾತಾವರಣವು ಶಿಲೀಂಧ್ರದ ಜೀವನ ಚಕ್ರವನ್ನು ಬೆಂಬಲಿಸುತ್ತದೆ ಮತ್ತು ರೋಗದ ತೀವ್ರತೆಯನ್ನು ಹೆಚ್ಚಿಸುತ್ತದೆ.


ಮುಂಜಾಗ್ರತಾ ಕ್ರಮಗಳು

  • ರೋಗ-ರಹಿತ ಕಟ್ಟಿಂಗ್ ಬಳಸುವುದನ್ನು ಖಚಿತಪಡಿಸಿಕೊಳ್ಳಿ.
  • ಪ್ರದೇಶದಲ್ಲಿ ಲಭ್ಯವಿದ್ದರೆ ನಿರೋಧಕ ಪ್ರಭೇದಗಳನ್ನು ನೆಡಿ.
  • ಸಸ್ಯಗಳ ನಡುವೆ ಅಗಲವಾದ ಅಂತರವಿರುವುದನ್ನು ಖಚಿತಪಡಿಸಿಕೊಳ್ಳಿ.
  • ಮೇಲಾವರಣದಲ್ಲಿ ಉತ್ತಮ ವಾತಾಯನಕ್ಕೆ ಅವಕಾಶ ಮಾಡಿ.
  • ಆರ್ದ್ರ ಋತುವಿನ ಅರಂಭದಲ್ಲೇ ಬೇಗನೆ ನಾಟಿ ಮಾಡಿ.
  • ಇದರಿಂದ ಬೆಳೆಗಳು ರೋಗಕ್ಕೆ ಒಳಗಾಗುವ ಹಂತವನ್ನು ತಲುಪುವ ಮೊದಲೇ ಬಲಿಷ್ಚವಾಗುತ್ತವೆ.
  • (ಒಣ ಕಾಲದ ವೇಳೆಗೆ 6-8-ತಿಂಗಳು ಹಳೆಯದಾಗಿರಬೇಕು).
  • ರೋಗಕ್ಕೆ ತುತ್ತಾಗುವ ಸಾಧ್ಯತೆ ಹೆಚ್ಚಿರುವ ಹಳೆಯ ಮರಗಳ ಪಕ್ಕದಲ್ಲಿ ಹೊಸ ಮರಗೆಣಸು ಗಿಡಗಳನ್ನು ನೆಡಬೇಡಿ.
  • ರೋಗಕಾರಕದ ಮೂಲವನ್ನು ತೊಡೆದುಹಾಕಲು ಒಣ ಕಾಲದಲ್ಲಿ ಉದುರಿದ ಮರಗೆಣಸಿನ ಎಲೆಗಳನ್ನು ಒಟ್ಟುಮಾಡಿ, ಸುಟ್ಟುಹಾಕಿ.
  • ಪರ್ಯಾಯವಾಗಿ, ಎಲ್ಲಾ ಸೋಂಕಿತ ಸಸ್ಯಗಳನ್ನು ಆಳವಾಗಿ ಹೂತುಹಾಕಿ ಅಥವಾ ಸುಟ್ಟುಹಾಕಿ.
  • ಪ್ರತಿ 3 ರಿಂದ 5 ವರ್ಷಗಳಿಗೊಮ್ಮೆ ಬೆಳೆ ಸರದಿಯನ್ನು ಮಾಡಿ.
  • ಇದರಿಂದ ರೋಗಾಣು ಜಮೀನಿನನಲ್ಲಿ ಎಲ್ಲಿಯೂ ಉಳಿಯುವುದಿಲ್ಲ.
  • ಮರಗಮೆಣಸು ಕೃಷಿಯಲ್ಲಿ ಬಳಸುವ ಯಾವುದೇ ಸಾಧನಗಳ ಉತ್ತಮ ನೈರ್ಮಲ್ಯವನ್ನು ಕಾಪಾಡಿಕೊಳ್ಳಿ.
  • ಸೋಂಕಿಗೆ ಒಳಗಾಗದ ಪ್ರದೇಶಗಳಿಂದ ಸಸ್ಯ ವಸ್ತುಗಳನ್ನು ಸಾಗಿಸಬೇಡಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ