Cordana musae
ಶಿಲೀಂಧ್ರ
ಹಳದಿ ಅಥವಾ ತಿಳಿ ಕಂದು ಬಣ್ಣದ, ಗೋಳಕಾರದ - ಅಥವಾ ಕಣ್ಣಿನ ಆಕಾರದ ಕಲೆಗಳು ಕೆಳಗಿನ ಎಲೆಗಳ ಅಂಚಿನ ಬಳಿ ಕಾಣಿಸಿಕೊಳ್ಳುತ್ತವೆ. ಕಾಲಾನಂತರದಲ್ಲಿ, ಕಲೆಗಳು ದೊಡ್ಡದಾಗಿ, ಅವುಗಳ ಕೇಂದ್ರ ಪ್ರದೇಶ ಸಾಯಲು ಆರಂಭಿಸುತ್ತದೆ ಮತ್ತು ಕ್ರಮೇಣ ಒಂದು ಸ್ಪಷ್ಟ ಮತ್ತು ನಿರ್ದಿಷ್ಟ ಏಕಕೇಂದ್ರ ವಲಯಗಳನ್ನು ರೂಪಿಸುತ್ತವೆ. ಎಲೆ ಬೆಳೆದಂತೆ ಈ ತಾಣಗಳು ನಾಳಗಳ ಉದ್ದಕ್ಕೂ, ಉದ್ದವಾಗಿ ಬೆಳೆಯಬಹುದು. ಈ ತಾಣಗಳು ಒಟ್ಟು ಸೇರಿ. ಕಲೆತು, ಹಳದಿ ಅಂಗಾಂಶಗಳಿಂದ ಸುತ್ತುವರಿದ ದೊಡ್ಡ ಸತ್ತಿರುವ ತೇಪೆಯಾಗಿ ರೂಪುಗೊಳ್ಳಬಹುದು. ಎಲೆಯ ಅಂಚು ಸೋಂಕಿಗೆ ಒಳಗಾದಾಗ, ಸಣ್ಣ ಏಕಕೇಂದ್ರ ತಾಣಗಳು ಉಂಟಾಗಿ, ನಂತರ ಮಸುಕಾದ ಕಂದು ಬಣ್ಣದ ಸತ್ತಿರುವ ಅಂಗಾಂಶಗಳ ಉದ್ದ ಪಟ್ಟೆಗಳಾಗಿ ಪರಿವರ್ತಿತವಾಗುತ್ತವೆ. ಈ ಪಟ್ಟೆಗಳು ಕೆಲವು ವೇಳೆ ಮಧ್ಯನಾಳದವರೆಗೂ ವಿಸ್ತರಿಸುತ್ತವೆ. ಸೋಂಕಿತ ಪ್ರದೇಶಗಳು ಸಾಮಾನ್ಯವಾಗಿ ಪ್ರಕಾಶಮಾನವಾದ ಹಳದಿ ಉಂಗುರಗಳಿಂದ ಸುತ್ತುವರಿದಿರುವ ಕಾರಣ ರೋಗ ಪೀಡಿತ ಎಲೆಗಳು ಎದ್ದು ಕಾಣುತ್ತವೆ.
ಈ ರೋಗದ ವಿರುದ್ಧ ಯಾವುದೇ ಶುದ್ಧ ಜೈವಿಕ ಪರಿಹಾರಗಳಿಲ್ಲ. ಆದ್ದರಿಂದ, ಬಾಳೆಯ ತೋಟದ ಸರಿಯಾದ ನಿರ್ವಹಣೆ ಬಹಳ ಮುಖ್ಯ. ತೀವ್ರ ಸೋಂಕಿನ ಸಂದರ್ಭಗಳಲ್ಲಿ, ಸಾವಯವ ತಾಮ್ರದ ಮಿಶ್ರಣವನ್ನು, ಉದಾಹರಣೆಗೆ, 1% ಬೋರ್ಡೆಕ್ಸ್ ಮಿಶ್ರಣವನ್ನು ಸೋಂಕಿತ ಪ್ರದೇಶಗಳ ಮೇಲೆ ಸಿಂಪಡಿಸಬಹುದಾಗಿದೆ.
ನಿರೋಧಕ ಕ್ರಮಗಳು ಮತ್ತು ತಡೆಗಟ್ಟುವ ವಿಧಾನ ಇರುವ ಜೈವಿಕ ಚಿಕಿತ್ಸೆ ಲಭ್ಯವಿದ್ದಲ್ಲಿ ಮೊದಲು ಪರಿಗಣಿಸಿ. ಬಾಳೆಯಲ್ಲಿ ಹಲವು ರೀತಿಯ ಎಲೆ ಚುಕ್ಕೆ ರೋಗಗಳಿರುವ ಕಾರಣ -ಉದಾಹರಣೆಗೆ ಫ್ರೆಕ್ಕಲ್ ಎಲೆ ಚುಕ್ಕೆ ಅಥವಾ ಸಿಗಟೋಕಾ ಎಲೆ ಚುಕ್ಕೆ - ಇದು ಕೋರ್ಡಾನ ಎಲೆ ಚುಕ್ಕೆಯೇ ಎಂದು ಖಚಿತಪಡಿಸಿಕೊಳ್ಳಿ. ಸೋಂಕು ತೀವ್ರವಾಗಿರುವ ಸಂದರ್ಭಗಳಲ್ಲಿ 0.4% ಮಂಕೋಝೆಬ್ ಅಥವಾ ತಾಮ್ರದ ಆಕ್ಸಿ ಕ್ಲೋರೈಡ್ ತೈಲವನ್ನು 0.2 -0.4% ಪ್ರಮಾಣದಲ್ಲಿ ಸಿಂಪಡಿಸಿ. ಸಂಪರ್ಕ ಶಿಲಿಂಧ್ರನಾಶಕಗಳಾದ ಕ್ಲೋರೋಥಲೋನಿಲ್ ಅಥವಾ ಮಂಕೋಝೆಬ್ ಮತ್ತು ವ್ಯವಸ್ಥಿತ ಶಿಲೀಂಧ್ರನಾಶಕಗಳಾದ ತೆಬುಕೋನಜೋಲ್ ಅಥವಾ ಪ್ರೊಪಿಕೊನಾಝೋಲ್ ಗಳನ್ನು ಶಿಫಾರಸು ಮಾಡಲಾಗಿದೆ. ಸಿಂಪಡಣೆ ಮೇಲಿನ ಭಾಗವನ್ನೂ ತಲುಪಿವೆ ಎಂಬುದನ್ನು ಖಚಿತಪಡಿಸಿಕೊಳ್ಳಿ.
ರೋಗಲಕ್ಷಣಗಳು, ಶಿಲೀಂಧ್ರ ಕೋರ್ಡಾನ ಮುಸಾಯಿಯಿಂದ ಉಂಟಾಗುತ್ತವೆ. ಇದನ್ನು ಕೋರ್ಡಾನ ಎಲೆ ಚುಕ್ಕೆ ರೋಗ ಎಂದು ಕೂಡ ಕರೆಯಲಾಗುತ್ತದೆ. ಇದು ಬಹುತೇಕ ಎಲ್ಲಾ ಬಾಳೆ ಬೆಳೆಯುವ ಪ್ರದೇಶಗಳಲ್ಲೂ ಇರುವ ಬಾಳೆಯ ಪ್ರಮುಖ ಶಿಲೀಂಧ್ರ ರೋಗಗಳಲ್ಲಿ ಒಂದಾಗಿದೆ. ಇನಾಕ್ಯುಲಮ್ ನೀರಿನ ತುಂತುರು ಮತ್ತು ಗಾಳಿಯ ಮೂಲಕ ಹರಡುತ್ತದೆ. ಇದು ವಿಶೇಷವಾಗಿ ಹತ್ತಿರವಿರುವ ತೋಟಗಳಿಗೆ ವಿನಾಶಕಾರಿ ರೀತಿಯಲ್ಲಿ ಹರಡುತ್ತದೆ. ಶಿಲೀಂಧ್ರಗಳ ಬೆಳವಣಿಗೆ ಹೆಚ್ಚು ಮಳೆ, ಸೆಕೆ ಮತ್ತು ಆರ್ದ್ರತೆಯ ಸ್ಥಿತಿಯಲ್ಲಿ ಚುರುಕಾಗಿರುತ್ತದೆ. ಸೋಂಕು ಉಂಟಾದ ಎಲೆಗೆ ಆಗಿರುವ ಹಾನಿ, ದ್ಯುತಿಸಂಶ್ಲೇಷಣೆ ಮಾಡಬಲ್ಲ ಪ್ರದೇಶ ಮತ್ತು ಇಳುವರಿಯಲ್ಲಿ ಗಣನೀಯ ಕಡಿತಕ್ಕೆ ಕಾರಣವಾಗುತ್ತದೆ.