ಬಾರ್ಲಿ

ಬಾರ್ಲಿಯ ಕಂದು ತುಕ್ಕು ಬ್ರೌನ್ ರಸ್ಟ್

Puccinia hordei

ಶಿಲೀಂಧ್ರ

ಸಂಕ್ಷಿಪ್ತವಾಗಿ

  • ಎಲೆಯ ಮೇಲ್ಭಾಗದಲ್ಲಿ ಸಣ್ಣ, ಕಿತ್ತಳೆ-ಕಂದು ಬಣ್ಣದ ಗುಳ್ಳೆಗಳು.
  • ತಿಳಿ ಬಣ್ಣದ ಹೊರ ವಲಯದಿಂದ ಸುತ್ತುವರಿದ ಗುಳ್ಳೆಗಳು.
  • ಎಲೆಯ ಕೆಳಭಾಗದಲ್ಲಿ ಕಪ್ಪು ಗುಳ್ಳೆಗಳು.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು
ಬಾರ್ಲಿ

ಬಾರ್ಲಿ

ರೋಗಲಕ್ಷಣಗಳು

ಮೊದಲ ರೋಗಲಕ್ಷಣಗಳು ಎಲೆಗಳ ಮೇಲ್ಭಾಗದಲ್ಲಿ ಅಲ್ಲಲ್ಲಿ ಹರಡಿರುವ ಸಣ್ಣ, ವೃತ್ತಾಕಾರದ, ಕಿತ್ತಳೆ-ಕಂದು ಬಣ್ಣದ ಗುಳ್ಳೆಗಳ ರೂಪದಲ್ಲಿ ಚಳಿಗಾಲದ ಕೊನೆಯಲ್ಲಿ ವಸಂತಕಾಲದಲ್ಲಿ ಕಾಣಿಸಿಕೊಳ್ಳುತ್ತವೆ. ಇವುಗಳು ಬಾರ್ಲಿ ಸಸ್ಯಗಳ ನಡುವೆ ಸಾಂಕ್ರಾಮಿಕ ಪ್ರಕ್ರಿಯೆಗೆ ಕಾರಣವಾಗುವ ಬೀಜಕಗಳನ್ನು ಹೊಂದಿರುತ್ತವೆ. ಸಾಂದರ್ಭಿಕವಾಗಿ ಈ ಗುಳ್ಳೆಗಳು ಕಾಂಡಗಳು, ಎಲೆಗಳ ಪೊರೆಗಳು ಮತ್ತು ತೆನೆಗಳ ಮೇಲೆ ಸಹ ಬೆಳೆಯುತ್ತವೆ. ಹೆಚ್ಚಾಗಿ ಹಳದಿ ಅಥವಾ ಹಸಿರು ಹೊರವರ್ತುಲ ಅವುಗಳನ್ನು ಸುತ್ತುವರೆದಿರುತ್ತದೆ. ಋತುವಿನ ನಂತರದ ಅವಧಿಯಲ್ಲಿ (ವಸಂತಕಾಲದ ಕೊನೆಯಲ್ಲಿ ಅಥವಾ ಬೇಸಿಗೆಯ ಆರಂಭದಲ್ಲಿ) ಸಣ್ಣ ಕಪ್ಪು ಗುಳ್ಳೆಗಳು ಕ್ರಮೇಣ ಎಲೆಗಳ ಕೆಳಭಾಗದಲ್ಲಿ ಬೆಳೆಯುತ್ತವೆ. ಈ ಹೊಸ ಗಂಟುಗಳು ಬೀಜಕಗಳನ್ನು ಒಳಗೊಂಡಿರುತ್ತವೆ. ಅದು ನಂತರ ಬೆಳೆಯ ಕವಲುಗಳಲ್ಲಿ ಅಥವಾ ರೋಗ ಚಕ್ರವನ್ನು ಮರುಪ್ರಾರಂಭಿಸಲು ಪರ್ಯಾಯ ಆಶ್ರಯದಾತ ಸಸ್ಯಗಳಲ್ಲಿ ಉಳಿಯುತ್ತದೆ. ತಿಳಿ ಕಂದು ಬಣ್ಣದ ಗುಳ್ಳೆಗಳಂತಲ್ಲದೆ, ಕಪ್ಪು ಗುಳ್ಳೆಗಳನ್ನು ಉಜ್ಜಿದಾಗ ಬೆರಳುಗಳಿಗೆ ಹರಡುವುದಿಲ್ಲ.

ಶಿಫಾರಸುಗಳು

ಜೈವಿಕ ನಿಯಂತ್ರಣ

ಇಲ್ಲಿಯವರೆಗೆ, ಬಾರ್ಲಿಯ ಕಂದು ತುಕ್ಕು ರೋಗಕ್ಕೆ ಯಾವುದೇ ಜೈವಿಕ ನಿಯಂತ್ರಣ ಪರಿಹಾರ ದೊರೆತಿಲ್ಲ. ನಿಮಗೆ ಯಾವುದಾದರೂ ತಿಳಿದಿದ್ದರೆ ದಯವಿಟ್ಟು ನಮ್ಮನ್ನು ಸಂಪರ್ಕಿಸಿ.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದಲ್ಲಿ ಯಾವಾಗಲೂ ತಡೆಗಟ್ಟುವ ಕ್ರಮಗಳು ಮತ್ತು ಜೈವಿಕ ಚಿಕಿತ್ಸೆಗಳಿರುವ ಸಮಗ್ರ ವಿಧಾನವನ್ನು ಪರಿಗಣಿಸಿ. ಪ್ರೋಥಿಯೋಕೊನಜೋಲ್ ಆಧಾರಿತ ರಕ್ಷಣಾತ್ಮಕ ಶಿಲೀಂಧ್ರನಾಶಕಗಳೊಂದಿಗೆ ಸಕಾಲಿಕ ಸಿಂಪಡಣೆ ಸಾಮಾನ್ಯವಾಗಿ ಕಂದು ತುಕ್ಕು ನಿಯಂತ್ರಿಸಲು ಸಹಾಯ ಮಾಡುತ್ತದೆ. ಬಾರ್ಲಿಯಲ್ಲಿ ಎಲೆಗಳ ತುಕ್ಕು ರೋಗಕ್ಕೆ ಚಿಕಿತ್ಸೆ ನೀಡಲು ಎಲೆಗಳ ಶಿಲೀಂಧ್ರನಾಶಕಗಳ ಶ್ರೇಣಿಯೂ ಲಭ್ಯವಿದೆ. ಉತ್ತಮ ನಿಗ್ರಹಕ್ಕಾಗಿ, ಎಲೆಯ ತುಕ್ಕು ಪತ್ತೆಯಾದ ಕೂಡಲೇ ಬಳಸಿ. ತುಕ್ಕು ರೋಗಗಳಿಗೆ ಋತುಮಾನವು ಅನುಕೂಲಕರವಾದಾಗ ಹೆಚ್ಚುವರಿ ಬಳಕೆಗಳು ಅಗತ್ಯವಾಗಬಹುದು.

ಅದಕ್ಕೆ ಏನು ಕಾರಣ

ಬಾರ್ಲಿಯಲ್ಲಿ ತುಕ್ಕು ರೋಗವನ್ನು ತರಿಸುವ ನಾಲ್ಕು ವಿಧದ ಶಿಲೀಂಧ್ರಗಳಲ್ಲಿ ಒಂದಾದ ಪುಸಿನಿಯಾ ಹಾರ್ಡೆ ಎಂಬ ಶಿಲೀಂಧ್ರದಿಂದ ರೋಗಲಕ್ಷಣಗಳು ಉಂಟಾಗುತ್ತವೆ. ಈ ಜೀವಿಗಳು ಹಸಿರು ಸಸ್ಯಗಳ ಮೇಲೆ ಮಾತ್ರ ಬೆಳೆಯುತ್ತವೆ. ಪಿ. ಹಾರ್ಡೆಯು, ಬೇಸಿಗೆಗಳನ್ನು ಕೊನೆಯ ಕವಲುಗಳಲ್ಲಿ ಮತ್ತು ಸ್ಟಾರ್ ಆಫ್ ಬೆಥ್ ಲೆಹೆಮ್ (ಆರ್ನಿಥೋಗಲಮ್ ಅಂಬೆಲ್ಲಾಟಂ) ನಂತಹ ಪರ್ಯಾಯ ಅತಿಥೇಯಗಳ ಮೇಲೆ ಬದುಕುಳಿಯುತ್ತದೆ. ಹೆಚ್ಚಿನ ಆರ್ದ್ರತೆ ಮತ್ತು ಆಗಾಗ್ಗೆ ಬೀಳುವ ಮಳೆಯೊಂದಿಗೆ ಬೆಚ್ಚಗಿನ ತಾಪಮಾನಗಳು (15° ನಿಂದ 22 °C ವರೆಗೆ) ರೋಗದ ಬೆಳವಣಿಗೆಯನ್ನು ಬೆಂಬಲಿಸುತ್ತವೆ. ಜೊತೆಗೆ, ಶುಷ್ಕ ಗಾಳಿಯ ದಿನಗಳು ಬೀಜಕಗಳ ಹರಡುವಿಕೆಗೆ ಸಹಾಯ ಮಾಡುತ್ತದೆ. ಬಾರ್ಲಿಯಲ್ಲಿ ಕಂದು ತುಕ್ಕುಗಳ ತೀವ್ರ ದಾಳಿ ಮುಖ್ಯವಾಗಿ ಋತುವಿನ ಕೊನೆಯಲ್ಲಿ ಸಂಭವಿಸುತ್ತವೆ. ಅದರಲ್ಲೂ ವಿಶೇಷವಾಗಿ ಹೆಚ್ಚಿನ ಪ್ರಮಾಣದಲ್ಲಿ ಸಾರಜನಕವನ್ನು ಹಾಕಿದರೆ. ಮೊದಲಿಗೆ ಬಿತ್ತಿದ ಬೆಳೆಗಳು ವಿಶೇಷವಾಗಿ ರಾತ್ರಿಗಳು ಇನ್ನೂ ಬೆಚ್ಚಗಿರುವಾಗ ನಂತರ ಬಿತ್ತಿದ ಬೆಳೆಗಳಿಗಿಂತ ಹೆಚ್ಚು ತೀವ್ರವಾಗಿ ಸೋಂಕಿಗೆ ಒಳಗಾಗುತ್ತವೆ. ಆದಾಗ್ಯೂ, ಬೆಳೆಗಳನ್ನು ಶಿಲೀಂಧ್ರನಾಶಕದಿಂದ ಸಂಸ್ಕರಿಸಿದರೆ ಬಾರ್ಲಿಯಲ್ಲಿನ ಕಂದು ತುಕ್ಕು ರೋಗ ಅಪರೂಪಕ್ಕೆ ಕಾಣುವ ಸಮಸ್ಯೆಯಾಗುತ್ತದೆ.


ಮುಂಜಾಗ್ರತಾ ಕ್ರಮಗಳು

  • ನಿರೋಧಕ ಪ್ರಭೇದಗಳನ್ನು ನೆಡಿ, ಇದು ರೋಗಕಾರಕದ ಚಕ್ರವನ್ನು ಮುರಿಯಲು ಅತ್ಯಂತ ಪರಿಣಾಮಕಾರಿ ಮಾರ್ಗವಾಗಿದೆ.
  • ಬೇಗ ನೆಡುವುದನ್ನು ತಪ್ಪಿಸಿ.
  • ವಸಂತಕಾಲದ ಆರಂಭದಲ್ಲಿ ರೋಗಲಕ್ಷಣಗಳಿಗಾಗಿ ಜಮೀನಿನ ಮೇಲ್ವಿಚಾರಣೆ ಮಾಡಿ.
  • ಸುಗ್ಗಿಯ ನಂತರ ರೋಗದ ಕ್ಯಾರಿ-ಓವರ್ ಅನ್ನು ತಡೆಗಟ್ಟಲು ತಾನಾಗಿ ಬೆಳೆದ ಸಸಿಗಳು ಮತ್ತು ಪರ್ಯಾಯ ಆಶ್ರಯದಾತ ಸಸಿಗಳನ್ನು ತೆಗೆದುಹಾಕಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ