Botryotinia squamosa
ಶಿಲೀಂಧ್ರ
ಸೋಂಕು ಯಾವುದೇ ಬೆಳವಣಿಗೆಯ ಹಂತದಲ್ಲಿ ತಗುಲಬಹುದು ಮತ್ತು ಸಾಮಾನ್ಯವಾಗಿ ಹಳೆಯ ಎಲೆಗಳಲ್ಲಿ ಮೊದಲು ಬೆಳೆಯುತ್ತದೆ. ಆರಂಭಿಕ ಲಕ್ಷಣಗಳು ಎಲೆಯ ಮೇಲ್ಮೈಯಲ್ಲಿ ಸಣ್ಣ (1-5 ಮಿಮೀ), ವೃತ್ತಾಕಾರದ ಅಥವಾ ಉದ್ದವಾದ ಬಿಳಿ ಕಲೆಗಳಾಗಿ ಗೋಚರಿಸುತ್ತವೆ. ಪ್ರತ್ಯೇಕ ಕಲೆಗಳು ಮತ್ತು ನಂತರದ ಮಚ್ಚೆಗಳ ಗುಂಪುಗಳು ತಿಳಿ ಹಸಿರು ಅಥವಾ ಬೆಳ್ಳಿ ಬಣ್ಣದ ಹೊರವರ್ತುಲದಿಂದ ಆವೃತವಾಗಿರುತ್ತವೆ. ಅದು ಆರಂಭದಲ್ಲಿ ನೀರಿನಲ್ಲಿ ನೆನೆಸಿದಂತ ರೂಪ ಹೊಂದಿರುತ್ತದೆ. ಕಾಲಾನಂತರದಲ್ಲಿ, ಗಾಯಗಳ ಸಂಖ್ಯೆಯು ಹೆಚ್ಚಾಗುತ್ತದೆ ಮತ್ತು ಹಳೆಯ ಕಲೆಗಳ ಕೇಂದ್ರವು ಗುಂಡಿ ಬಿದ್ದಂತಾಗಿ ಒಣಹುಲ್ಲಿನ ಬಣ್ಣ ಪಡೆಯುತ್ತದೆ. ಇದು ನೆಕ್ರೋಸಿಸ್ ಬೆಳವಣಿಗೆಯ ಸಂಕೇತವಾಗಿದೆ. ಗಾಯದಲ್ಲಿ ಉದ್ದನೆಯ ಒಂದು ವಿಶಿಷ್ಟವಾದ ಸೀಳು ನಂತರದ ಹಂತಗಳಲ್ಲಿ ಕಾಣಿಸಿಕೊಳ್ಳಬಹುದು. ಎಲೆಯ ತುದಿ ಮತ್ತು ಅಂಚುಗಳು ಮೃದುವಾಗುತ್ತವೆ ಮತ್ತು ಕ್ರಮೇಣ ನೆಕ್ರೋಟಿಕ್ ಆಗುತ್ತವೆ. ಇದರ ಪರಿಣಾಮವಾಗಿ ಬ್ಲೈಟಿಂಗ್ ಮತ್ತು ಡೈಬ್ಯಾಕ್ ಉಂಟಾಗುತ್ತದೆ. ಅನುಕೂಲಕರ ಪರಿಸ್ಥಿತಿಗಳಲ್ಲಿ, ರೋಗವು ಗೆಡ್ಡೆಯ ಮೇಲೆ ಸಹ ಪರಿಣಾಮ ಬೀರುತ್ತದೆ. ಅದರ ಗಾತ್ರ ಮತ್ತು ಗುಣಮಟ್ಟವನ್ನು ಕಡಿಮೆ ಮಾಡುತ್ತದೆ. ರೋಗವು ಮತ್ತಷ್ಟು ಹರಡುತ್ತಿದ್ದಂತೆ, ಹೊಲದಲ್ಲಿ ಸಾಯುತ್ತಿರುವ ಸಸ್ಯಗಳ ದೊಡ್ಡ ಹಳದಿ ತೇಪೆಗಳನ್ನು ದೂರದಿಂದ ಗಮನಿಸಬಹುದು.
ಈ ರೋಗಕ್ಕೆ ಚಿಕಿತ್ಸೆ ನೀಡಲು ಯಾವುದೇ ಜೈವಿಕ ಚಿಕಿತ್ಸೆ ಈ ಸಮಯದಲ್ಲಿ ಲಭ್ಯವಿಲ್ಲ. ನಿಮಗೆ ಏನಾದರೂ ತಿಳಿದಿದ್ದರೆ ನಮ್ಮನ್ನು ಸಂಪರ್ಕಿಸಿ.
ಲಭ್ಯವಿದ್ದರೆ, ಜೈವಿಕ ಚಿಕಿತ್ಸೆಗಳೊಂದಿಗೆ ತಡೆಗಟ್ಟುವ ಕ್ರಮಗಳಿರುವ ಸಂಯೋಜಿತ ವಿಧಾನವನ್ನು ಯಾವಾಗಲೂ ಪರಿಗಣಿಸಿ. ಸೋಂಕಿನ ಅಪಾಯವನ್ನು ಕಡಿಮೆ ಮಾಡಲು ಉತ್ತಮ ಕೃಷಿ ಅಭ್ಯಾಸಗಳು ಅವಶ್ಯಕ. ಶಿಲೀಂಧ್ರನಾಶಕಗಳು ಅಗತ್ಯವಿದ್ದರೆ, ಫ್ಲೂಡಿಯೋಆಕ್ಸೊನಿಲ್ ನೊಂದಿಗೆ ಇಪ್ರೊಡಿಯೋನ್, ಪೈರಿಮೆಥಾನಿಲ್, ಫ್ಲುವಾಜಿನಮ್ ಅಥವಾ ಸೈಪ್ರೊಡಿನಿಲ್ ಅನ್ನು ಒಳಗೊಂಡಿರುವ ಉತ್ಪನ್ನಗಳನ್ನು ಸ್ಪ್ರೇ ಯಂತೆ ಬಳಸಿದಾಗ ಅತ್ಯುತ್ತಮ ಫಲಿತಾಂಶಗಳನ್ನು ನೀಡುತ್ತವೆ. ಕ್ಲೋರ್ತಲೋನಿಲ್ ಮತ್ತು ಮ್ಯಾಂಕೋಜೆಬ್ ಆಧಾರಿತ ಇತರ ಉತ್ಪನ್ನಗಳು ಸಹ ಕಾರ್ಯನಿರ್ವಹಿಸುತ್ತವೆ ಆದರೆ ಕಡಿಮೆ ದಕ್ಷತೆಯನ್ನು ಹೊಂದಿರುತ್ತವೆ. ಶಿಲೀಂಧ್ರನಾಶಕಗಳನ್ನು ಮೇಲಿಂದ ಸಿಂಪಡಿಸುವ ವಿಧಾನಗಳಿಗಿಂತ ನೆಲದಲ್ಲಿ ಹೊಗೆ ಹಾಕುವುದು ಹೆಚ್ಚು ಪರಿಣಾಮಕಾರಿಯಾಗಿದೆ.
ಈ ರೋಗವು ಬೊಟ್ರಿಟಿಸ್ ಸ್ಕ್ವಾಮೋಸಾ ಎಂಬ ಶಿಲೀಂಧ್ರದಿಂದ ಉಂಟಾಗುತ್ತದೆ. ಇದು ಸೋಂಕಿತ ಗೆಡ್ಡೆಗಳು ಅಥವಾ ಹೊಲದಲ್ಲಿ ಉಳಿದಿರುವ ಸಸ್ಯದ ಅವಶೇಷಗಳ ಮೇಲೆ ಅಥವಾ ಶೇಖರಣಾ ಸೌಲಭ್ಯಗಳಲ್ಲಿ ಉಳಿದಿರುತ್ತವೆ. ಪರಿಸ್ಥಿತಿಗಳು ಅನುಕೂಲಕರವಾದಾಗ, ಈ ಅಂಗಾಂಶಗಳ ಮೇಲೆ ಶಿಲೀಂಧ್ರ ಬೀಜಕಗಳು ಉತ್ಪಾದನೆಯಾಗುತ್ತದೆ ಮತ್ತು ಗಾಳಿಯಿಂದ ನೆರೆಯ ಸಸ್ಯಗಳಿಗೆ ಹರಡುತ್ತದೆ. ಇದು ಸೋಂಕಿನ ಪ್ರಾಥಮಿಕ ಮೂಲವಾಗಿ ಕಾರ್ಯನಿರ್ವಹಿಸುತ್ತದೆ. 10 ರಿಂದ 20 °C ನಡುವಿನ ತಾಪಮಾನ, ಹೆಚ್ಚಿನ ಮಳೆ, ಎಲೆಗಳ ತೇವಾಂಶ ಅಥವಾ ಹೆಚ್ಚಿನ ಸಾಪೇಕ್ಷ ಆರ್ದ್ರತೆಯು ಶಿಲೀಂಧ್ರದ ಜೀವನ ಚಕ್ರಕ್ಕೆ ಅನುಕೂಲಕರವಾಗಿರುತ್ತದೆ. ತೀವ್ರವಾದ ಸೋಂಕುಗಳನ್ನು ತಪ್ಪಿಸಲು ಎಲೆಗಳನ್ನು ಸಾಧ್ಯವಾದಷ್ಟು ಒಣದಾಗಿಡುವುದು ಬಹಳ ಮುಖ್ಯ. ಇದರ ರೋಗಲಕ್ಷಣಗಳನ್ನು ಇತರ ರೋಗ ಅಥವಾ ಬರ ಒತ್ತಡ, ಆಲಿಕಲ್ಲು ಗಾಯ, ಥ್ರೈಪ್ಸ್ ಮುತ್ತುವಿಕೆ ಅಥವಾ ಸಸ್ಯನಾಶಕ ಹಾನಿಯಂತಹ ಅಸ್ವಸ್ಥತೆಗಳೆಂದು ತಪ್ಪಾಗಿ ತಿಳಿಯುವ ಸಂಭವ ಇದೆ. .