ದ್ರಾಕ್ಷಿ

ದ್ರಾಕ್ಷಿಯ ಬೂದಿ ರೋಗ ( ಪೌಡರಿ ಮಿಲ್ಡ್ಯೂ )

Erysiphe necator

ಶಿಲೀಂಧ್ರ

ಸಂಕ್ಷಿಪ್ತವಾಗಿ

  • ಹಳದಿ ಚುಕ್ಕೆಗಳು ಎಲೆಗಳ ಮೇಲ್ಮೈಯಲ್ಲಿ ಸಾಮಾನ್ಯವಾಗಿ ಅಂಚಿನಲ್ಲಿ ಕಾಣಿಸಿಕೊಳ್ಳುತ್ತವೆ.
  • ಬೂದು ಬಣ್ಣದಿಂದ ಬಿಳಿಬಣ್ಣದ ಹುಡಿಯಂತಹ ಶಿಲೀಂಧ್ರಗಳು ಈ ಸ್ಥಳಗಳಲ್ಲಿ ಕ್ರಮೇಣ ಬೆಳೆಯುತ್ತವೆ.
  • ನಾಳಗಳು ಮತ್ತು ಚಿಗುರುಗಳಲ್ಲಿ, ಕಂದು ಅಥವಾ ಕಪ್ಪು ಹರಡಿದಂತಹ ತೇಪೆಗಳೂ ಕಾಣಿಸಿಕೊಳ್ಳುತ್ತವೆ.
  • ಹಣ್ಣುಗಳು ಗಾಢ ಕಂದು ಬಣ್ಣಕ್ಕೆ ತಿರುಗಬಹುದು ಮತ್ತು ಕಲೆಯುಕ್ತವಾಗಬಹುದು.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ದ್ರಾಕ್ಷಿ

ರೋಗಲಕ್ಷಣಗಳು

ರೋಗಲಕ್ಷಣದ ತೀವ್ರತೆಯು, ಬಳ್ಳಿಯ ವಿಧ ಮತ್ತು ಪರಿಸರದ ಸ್ಥಿತಿಗಳನ್ನು ಅವಲಂಬಿಸಿರುತ್ತದೆ. ಸಾಮಾನ್ಯವಾಗಿ, ಕ್ಲೋರೋಟಿಕ್ ಚುಕ್ಕೆಗಳು (2 ರಿಂದ 10 ಮಿ.ಮೀ ವ್ಯಾಸದಲ್ಲಿ) ಮೊಟ್ಟಮೊದಲ ಬಾರಿಗೆ ಹೊಸ ಎಲೆಗಳ ಮೇಲ್ಮೈಯಲ್ಲಿ ಅದರಲ್ಲೂ ಹೆಚ್ಚಾಗಿ ಅಂಚಿನಲ್ಲಿ ಕಾಣಿಸಿಕೊಳ್ಳುತ್ತವೆ. ಬೂದು ಬಣ್ಣದಿಂದ ಬಿಳಿ ಬಣ್ಣದ ಹುಡಿಯಾದ ಶಿಲೀಂಧ್ರಗಳ ಬೆಳವಣಿಗೆ ಈ ಸ್ಥಳಗಳಲ್ಲಿ ಕ್ರಮೇಣ ಕಾಣಿಸಿಕೊಳ್ಳುತ್ತದೆ. ರೋಗ ಮುಂದುವರಿಯುತ್ತಿದ್ದಂತೆ, ಕಲೆಗಳು ದೊಡ್ಡದಾಗುತ್ತವೆ ಮತ್ತು ಇಡೀ ಎಲೆಯನ್ನು ಆವರಿಸಬಹುದು, ಮತ್ತು ಎಲೆಗಳು ಅಂತಿಮವಾಗಿ ವಿರೂಪಗೊಳ್ಳಬಹುದು, ಒಣಗಬಹುದು ಮತ್ತು ಉದುರಬಹುದು. ಸೋಂಕಿತ ಎಲೆಗಳ ಕೆಳಭಾಗದಲ್ಲಿರುವ ನಾಳಗಳ ಭಾಗವು ಕಂದು ಬಣ್ಣಕ್ಕೆ ತಿರುಗಬಹುದು. ಚಿಗುರುಗಳ ಮೇಲೆ, ಕಂದು ಅಥವಾ ಕಪ್ಪು ಬಣ್ಣದ ಹರಡಿದಂತಹ ತೇಪೆಗಳೂ ಕಾಣಿಸುತ್ತವೆ. ನಂತರದ ಹಂತಗಳಲ್ಲಿ, ಇವು ಹೂಗೊಂಚಲುಗಳು ಮತ್ತು ಹಣ್ಣುಗಳ ಮೇಲೆ ಕೂಡಾ ಪರಿಣಾಮ ಬೀರುತ್ತವೆ. ಬಳ್ಳಿಗಳು ಕೆಟ್ಟ ವಾಸನೆಯನ್ನು ಹೊರ ಸೂಸುತ್ತವೆ. ಸೋಂಕಿಗೊಳಗಾದ ಹಣ್ಣುಗಳು ಗಾಢ ಕಂದು ಬಣ್ಣಕ್ಕೆ ತಿರುಗಿ ಮಚ್ಚೆಗಳಿಂದ ತುಂಬಬಹುದು ಅಥವಾ ಸಾಯಬಹುದು. ಕೆಲವು ಬಳ್ಳಿ ಪ್ರಭೇದಗಳಲ್ಲಿ, ಆವರಿಸುವಿಕೆ ವಿರಳವಾಗಿರುತ್ತದೆ ಮತ್ತು ರೋಗಲಕ್ಷಣಗಳು ಎಲೆಗಳ ಬೂದು ಅಥವಾ ನೇರಳೆ ಬಣ್ಣಕ್ಕೆ ಸೀಮಿತವಾಗಿರುತ್ತವೆ.

ಶಿಫಾರಸುಗಳು

ಜೈವಿಕ ನಿಯಂತ್ರಣ

ಸಲ್ಫರ್, ತೋಟಗಾರಿಕಾ ತೈಲ ಮತ್ತು ವಿವಿಧ ವಾಣಿಜ್ಯ ಉತ್ಪನ್ನಗಳನ್ನು ಪ್ರಮಾಣಿತ ಸಾವಯವ ದ್ರಾಕ್ಷಿ ಬೆಳೆಗಳಲ್ಲಿ ಬಳಸಬಹುದಾಗಿದೆ. ಎರಿಸಿಫೆ ನೆಕ್ಟೇಟರ್ ನ ಜೀವನಚಕ್ರವನ್ನು ಪರಾವಲಂಬಿ ಶಿಲೀಂಧ್ರ ಆಂಪೆಲೋಮೈಸಸ್ ಕ್ವಿಸ್ಕ್ವಾಲಿಸ್, ತಡೆಗಟ್ಟುತ್ತದೆ ಎಂದು ವರದಿಯಾಗಿದೆ. ಶಿಲೀಂಧ್ರ-ತಿನ್ನುವ ಹುಳಗಳು ಮತ್ತು ಜೀರುಂಡೆಗಳು ಕೆಲವು ಬಳ್ಳಿಗಳಲ್ಲಿ ಪ್ರೌಡ್ರೀ ಮಿಲ್ಡೂ ಸೋಂಕನ್ನು ಕಡಿಮೆ ಮಾಡುವುದು ತಿಳಿದು ಬಂದಿದೆ.

ರಾಸಾಯನಿಕ ನಿಯಂತ್ರಣ

ಜೈವಿಕ ಚಿಕಿತ್ಸೆಗಳು ಮತ್ತು ತಡೆಗಟ್ಟುವ ಕ್ರಮಗಳು ಒಟ್ಟಾಗಿರುವ ಸಮಗ್ರವಾದ ಮಾರ್ಗವಿದ್ದರೆ ಮೊದಲು ಅದನ್ನು ಪರಿಗಣಿಸಿ. ಸಸ್ಯದ ಎಲ್ಲಾ ಹಸಿರು ಮೇಲ್ಮೈಗಳ ಮೇಲೆ ಉತ್ತಮವಾಗಿ ಸಿಂಪಡಿಸಲು ಸಾಧ್ಯವಾಗಬೇಕು ಮತ್ತು ಸಕಾಲಿಕ ಸಿಂಪಡಿಕೆ ಅಗತ್ಯವಾಗಿದೆ. ಸಲ್ಫರ್, ತೈಲಗಳು, ಬೈಕಾರ್ಬನೇಟ್ ಗಳು ಅಥವಾ ಫ್ಯಾಟೀ ಆಸಿಡ್ ಗಳನ್ನು ಆಧರಿಸಿದ ರಕ್ಷಕಗಳನ್ನು ಆರಂಭಿಕ ಸೋಂಕು ಕಡಿಮೆ ಮಾಡಲು ಬಳಸಬಹುದು. ಶಿಲೀಂಧ್ರ ಪತ್ತೆಯಾದ ನಂತರ ಸ್ಟ್ರೋಬಿಲ್ಯೂರಿನ್ ಮತ್ತು ಅಜೋನಾಫ್ತಾಲೆನೆಸ್ ಗಳನ್ನು ಆಧರಿಸಿದ ಉತ್ಪನ್ನಗಳನ್ನು ಸಿಂಪಡಿಸಬಹುದಾಗಿದೆ.

ಅದಕ್ಕೆ ಏನು ಕಾರಣ

ಬೂದಿ ರೋಗವು ರೋಗಕಾರಕ ಶಿಲೀಂಧ್ರವಾದ ಎರಿಸಿಫೆ ನೆಕ್ಟರ್ ನಿಂದ ಉಂಟಾಗುತ್ತದೆ. ಇವು ಚಳಿಗಾಲದವಲ್ಲಿ ಸುಪ್ತಾವಸ್ಥೆಯಲ್ಲಿರುವ ಮೊಗ್ಗುಗಳು ಅಥವಾ ತೊಗಟೆಯ ಬಿರುಕುಗಳಲ್ಲಿ ಕದಲದಂತೆ ಶಿಲೀಂಧ್ರ ಬೀಜಕಗಳಾಗಿ ಉಳಿದುಕೊಂಡಿರುತ್ತವೆ. ವಸಂತಕಾಲದಲ್ಲಿ, ಈ ಬೀಜಕಗಳನ್ನು ಗಾಳಿಯು ಹೊಸ ಸಸ್ಯಗಳಿಗೆ (ಪ್ರಾಥಮಿಕ ಸೋಂಕು) ತೆಗೆದುಕೊಂಡು ಹೋಗುತ್ತದೆ. ಶಿಲೀಂಧ್ರವು ಹೊಸ ಸಸ್ಯದ ಮೇಲೆ ಬೆಳೆದ ನಂತರ, ಅದು ಹೊಸ ಬೀಜಕಗಳನ್ನು ಉತ್ಪಾದಿಸಲು ಆರಂಭಿಸುತ್ತದೆ ಮತ್ತು ಗಾಳಿಯ ಮೂಲಕ ಇದು ಹರಡಲು ಪ್ರಾರಂಭಿಸುತ್ತದೆ (ದ್ವಿತೀಯ ಸೋಂಕು). ಮಂಜು ಮತ್ತು ಇಬ್ಬನಿಗಳಿಂದ ಸಿಗುವ ತೇವಾಂಶ, ಹೆಚ್ಚು ಅವಧಿಯ ಎಲೆಗಳ ಆರ್ದ್ರತೆ ಅಥವಾ ಮೋಡ ಕವಿದ ವಾತಾವರಣ ಬೀಜಕಗಳ ಉತ್ಪಾದನೆಗೆ ಅನುಕೂಲಕರ. ಆದರೆ ಸೋಂಕಿನ ಪ್ರಕ್ರಿಯೆಗೆ ಅತ್ಯಗತ್ಯವೇನೂ ಅಲ್ಲ. (ಇತರ ಶಿಲೀಂಧ್ರ ರೋಗಗಳಿಗೆ ವ್ಯತಿರಿಕ್ತವಾಗಿ). ಶಿಲೀಂಧ್ರದ ಜೀವನಚಕ್ರಕ್ಕೆ ಕಡಿಮೆಯಿಂದ ಮಧ್ಯಮ ಮಟ್ಟದ ವಿಕಿರಣ ಮತ್ತು 6 ರಿಂದ 33 °C (22 ರಿಂದ 28 ° C ವರೆಗಿನ ಸೂಕ್ತ) ವರೆಗಿನ ತಾಪಮಾನ ಅನುಕೂಲಕರ. 35 ಡಿಗ್ರಿಗಿಂತ ಹೆಚ್ಚಿನ ಸೆಲ್ಸಿಯಸ್ ತಾಪಮಾನ, ನೇರ ಸೂರ್ಯನ ಬೆಳಕು ಮತ್ತು ನಿಯಮಿತ ಮಳೆಗೆ ಒಡ್ಡಿದ ಎಲೆಯ ಮೇಲ್ಮೈಗಳಲ್ಲಿ ಪೌಡ್ರೀ ಮಿಲ್ ಡೂ ಕಡಿಮೆ ಇರುತ್ತದೆ.


ಮುಂಜಾಗ್ರತಾ ಕ್ರಮಗಳು

  • ಲಭ್ಯವಿದ್ದರೆ ಸಹಿಷ್ಣು ಪ್ರಭೇದಗಳನ್ನು ಬಳಸಿ.
  • ಉತ್ತಮವಾಗಿ ಗಾಳಿಯಾಡುವಂತೆ ಬಳ್ಳಿಗಳ ನಡುವೆ ಅಗಲವಾದ ಅಂತರವನ್ನು ಬಿಡಿ.
  • ತೆರೆದ ಮೇಲ್ ಚಪ್ಪರ ಇರುವಂತೆ ಸಸಿಗಳನ್ನು ಕತ್ತರಿಸುವ ಅಭ್ಯಾಸ ಇಟ್ಟುಕೊಳ್ಳಿ.
  • ಸೂರ್ಯನ ಕಿರಣ ಬೀಳುವ ಪ್ರದೇಶಗಳನ್ನು ಆರಿಸಿ.
  • ರೋಗದ ಚಿಹ್ನೆಗಳಿಗಾಗಿ ನಿಯಮಿತವಾಗಿ ತೋಟವನ್ನು ಪರಿಶೀಲಿಸಿ.
  • ಸಸ್ಯದ ವಿಪರೀತ ಬೆಳವಣಿಗೆಯನ್ನು ತಪ್ಪಿಸಲು ಸಾರಜನಕ ಗೊಬ್ಬರಗಳನ್ನು ಎಚ್ಚರಿಕೆಯಿಂದ ಬಳಸಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ