Phytophthora nicotianae
ಶಿಲೀಂಧ್ರ
ಗಿಡದ ಬೆಳವಣಿಗೆಯ ಎಲ್ಲ ಹಂತಗಳಲ್ಲಿ ಮತ್ತು ಗಿಡದ ಎಲ್ಲಾ ಭಾಗಗಳಲ್ಲಿ ಈ ರೋಗದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಎಲೆಗಳು ಅಸ್ವಾಭಾವಿಕ ಬಣ್ಣ ಮತ್ತು ಆಕಾರಕ್ಕೆ ತಿರುಗುತ್ತವೆ. ಎಲೆಗಳು ವಿರೂಪಗೊಂಡು ಸುರುಳಿ ಸುತ್ತಿಕೊಳ್ಳುತ್ತವೆ. ಪತ್ರಹರಿತ್ತಿನ ಉತ್ಪಾದನೆ ಕಡಿಮೆಯಾಗಿ ಹಳದಿ ಬಣ್ಣಕ್ಕೆ ತಿರುಗಿದ ಎಲೆಗಳಲ್ಲಿ ಮೃತ ಭಾಗಗಳು ಕಾಣಿಸಿಕೊಳ್ಳುತ್ತವೆ. ರೋಗವು ಉಲ್ಬಣಗೊಂಡಂತೆ ಸತ್ತ ಅಂಗಾಂಶ ಉದುರಿ ಎಲೆಗಳು ಅಲ್ಲಲ್ಲಿ ಹರಿದಂತೆ ಕಾಣುತ್ತವೆ. ಮರಗಳಿಗೆ ಈ ರೋಗ ಬಂದರೆ ಹಣ್ಣು ಅಸಹಜ ಆಕಾರದಲ್ಲಿರುತ್ತದೆ ಹಾಗೂ ಹಣ್ಣಿನ ಸಿಪ್ಪೆಯಲ್ಲಿ ಕಪ್ಪು ಅಥವಾ ಕಂದು ಬಣ್ಣದ ಗಾಯಗಳಿರುತ್ತವೆ. ಬಳಿಕ ಈ ಗಾಯಗಳ ಮೇಲೆ ವಿಪರೀತವಾಗಿ ಬೂಷ್ಟು ಬೆಳೆದು ಅಲ್ಲಿಂದ ಹಣ್ಣಿನ ರಸ ತೊಟ್ಟಿಕ್ಕುವುದು ಕಾಣುತ್ತದೆ. ಹಣ್ಣುಗಳು ಸೊರಗುತ್ತವೆ. ಹಣ್ಣಿನ ಸಿಪ್ಪೆಯು ಮುರುಟುವ ಸ್ಪಷ್ಟ ಲಕ್ಷಣಗಳು ಕಾಣಿಸುತ್ತದೆ. ಮರದ ತೊಗಟೆಯು ಗಾಢ ಕಂದು ಬಣ್ಣಕ್ಕೆ ತಿರುಗುತ್ತದೆ ಹಾಗೂ ಬೆಳೆದ ರೆಂಬೆಗಳಲ್ಲಿ ಶಿಲೀಂಧ್ರದಿಂದಾದ ಕೊಳೆತ ಕಾಣುತ್ತದೆ. ಈ ಗಾಯಗಳಲ್ಲಿ ಗೋಂದು ಸುರಿಯುವುದು ಕಾಣಬಹುದು. ಕತ್ತರಿಸಿ ನೋಡಿದರೆ, ರೆಂಬೆ ಹಾಗೂ ಬೇರಿನೊಳಗಿನ ಭಾಗದ ಅಂಗಾಂಶ ಕೊಳೆಯುತ್ತಿರುವ ಕುರುಹು ಕಾಣುತ್ತದೆ. ಒಟ್ಟಾರೆಯಾಗಿ, ಗಿಡಗಳು ಸೊರಗುತ್ತವೆ ಹಾಗೂ ರೋಗ ವಿಪರೀತಗೊಂಡಲ್ಲಿ ಸಸಿಯು ಸಾಯುತ್ತದೆ.
ಈ ಶಿಲೀಂಧ್ರದ ನಿಯಂತ್ರಣವು ಬೆಳೆ ಮತ್ತು ವಾತಾವರಣದ ಪರಿಸ್ಥಿತಿಗಳ ಮೇಲೆ ಅವಲಂಬಿಸಿದೆ. ಫೈಟೊಫ್ಥೊರಾ ನಿಕೋಟಿಯಾನೆಯ ಅನೇಕ ವಿರೋಧಿ ರೋಗಕಾರಕಗಳಿವೆ. ಉದಾಹರಣೆಗೆ ಆಸ್ಪರ್ಜಿಲ್ಲಸ್ ಟೆರಿಯಸ್, ಸ್ಯೂಡೋಮೊನಸ್ ಪುಟಿಡಾ ಅಥವಾ ಟ್ರೈಕೋಡರ್ಮಾ ಹಾರ್ಜಿಯಂ. ತಾಮ್ರ ಆಧಾರಿತ ಶಿಲೀಂಧ್ರನಾಶಕಗಳನ್ನು ತೇವದ ಋತುವಿನಲ್ಲಿ ಪ್ರತಿ 2-3 ತಿಂಗಳಿಗೊಮ್ಮೆ ಬಳಸುವುದರಿಂದ ಶಿಲೀಂಧ್ರದ ದಾಳಿಯನ್ನು ಕಡಿಮೆ ಮಾಡಬಹುದು. ಗಾಯಗೊಂಡ ತೊಗಟೆಯನ್ನು ತೆಗೆದು ತಾಮ್ರದ ಶಿಲೀಂಧ್ರನಾಶಕವನ್ನು ಆ ಜಾಗಕ್ಕೆ ಬಳಿಯಬಹುದು.
ಲಭ್ಯವಿದ್ದರೆ, ಸಾವಯವ ಚಿಕಿತ್ಸೆಗಳೊಂದಿಗೆ ನಿರ್ಬಂಧಕ ಮಾರ್ಗಗಳನ್ನು ಸೇರಿಸಿ ಸಮಗ್ರ ವಿಧಾನವನ್ನು ಮೊದಲು ಪರಿಗಣಿಸಿ. ಕೆಲವು ಬೆಳೆಗಳಲ್ಲಿ, ಮೆಟಾಲಾಕ್ಸಿಲ್ ಮತ್ತು ಫಾಸ್ಪೋನೇಟ್ ಎರಡೂ ಪರಿಣಾಮಕಾರಿಯಾಗಿರುವುದು ಕಂಡುಬಂದಿದೆ. ಮೆಟಾಲಾಕ್ಸಿಲ್ಲಿಗೆ ಸ್ವಲ್ಪ ಪ್ರತಿರೋಧ ಬೆಳೆದಿರುವುದು ವರದಿಯಾಗಿದೆ.
ಕೃಷಿ ಮತ್ತು ತೋಟಗಾರಿಕಾ ವಲಯದಲ್ಲಿನ ಅನೇಕ ಸಸ್ಯ ಜಾತಿಯ ಪ್ರಮುಖ ಪ್ರಭೇದಗಳಲ್ಲಿ ಫೈಟೊಫ್ಥೊರಾ ನಿಕೋಟಿಯಾನೆ ದಾಳಿಯಾಗುತ್ತದೆ. ಹಾಗಾಗಿ ಇದೊಂದು ಗಂಭೀರ ರೋಗಕಾರಕ. ಇದು ಮಣ್ಣಿನಿಂದ ಹರಡುವ ಶಿಲೀಂಧ್ರ. ಇದು ಮುಖ್ಯವಾಗಿ ಬಿಸಿಯಾದ ಮತ್ತು ತೇವಾಂಶ ಹೆಚ್ಚಿರುವ ವಾತಾವರಣದಲ್ಲಿ ಕಂಡುಬರುವ ಶಿಲೀಂಧ್ರವಾಗಿದ್ದರೂ, ಸಮಶೀತೋಷ್ಣ ವಾತಾವರಣದಲ್ಲಿ ಸಹ ಇದು ಇರುತ್ತದೆ. ರೋಗಕಾರಕ ಹಬ್ಬಲು ಮತ್ತು ಅದರ ಬೀಜಕಗಳು ಹರಡಲು ಧಾರಾಳ ತೇವಾಂಶವು ಅವಶ್ಯ. ಮಳೆ ಅಥವಾ ನೀರಾವರಿಯ ನೀರ ಹನಿಗಳಿಂದ ರೋಗಪೀಡಿತ ಗಿಡದಿಂದ ಹತ್ತಿರದ ಆರೋಗ್ಯಕರ ಗಿಡಗಳಿಗೆ ಬೀಜಕಗಳು ಹರಡುತ್ತವೆ. ಬೀಜಕಗಳು ನೀರಿನಲ್ಲಿ ಬದುಕುಳಿಯುವುದರಿಂದ, ರೋಗದ ಮೂಲ ಪ್ರದೇಶದಿಂದ ದೂರದಲ್ಲಿರುವ ಗಿಡಗಳನ್ನು ಕೂಡ ಒಳಚರಂಡಿಯ ಮೂಲಕ ಅಥವಾ ನೀರಾವರಿ ವ್ಯವಸ್ಥೆಯ ಮೂಲಕ ತಲುಪುತ್ತವೆ.