Pseudocercospora punicae
ಶಿಲೀಂಧ್ರ
ಹೂವಿನ ಪುಷ್ಪದಳಗಳಲ್ಲಿ ರೋಗಲಕ್ಷಣಗಳನ್ನು ಮೊದಲು ಗಮನಿಸಬಹುದು. ಸಣ್ಣ, ವೃತ್ತಾಕಾರದ ಮತ್ತು ಕಂದು ಬಣ್ಣದಿಂದ ಕಪ್ಪು ಬಣ್ಣದ ಕಲೆಗಳು ಅಲ್ಲಿ ಕಾಣಿಸಿಕೊಳ್ಳುತ್ತವೆ. ಕಲೆಗಳು ನಂತರ ಹಿಗ್ಗುತ್ತವೆ, ಒಗ್ಗೂಡುತ್ತವೆ ಮತ್ತು ಗಾಢವಾಗುತ್ತವೆ. ಆಕಾರವು ಅನಿಯಮಿತವಾಗುತ್ತದೆ ಮತ್ತು ತೇಪೆಗಳು 1 ರಿಂದ 12 ಮಿಮೀ ವ್ಯಾಸವನ್ನು ತಲುಪಬಹುದು. ಹಣ್ಣಿನ ಮೇಲಿನ ಕಲೆಗಳು ಬ್ಯಾಕ್ಟೀರಿಯಾದ ರೋಗದ ಸಮಯದಲ್ಲಿ ಕಂಡುಬರುವ ಗಾಯಗಳನ್ನು ಹೋಲುತ್ತವೆ. ಆದರೆ ಅವು ಗಾಢವಾದ ಕಪ್ಪು ಬಣ್ಣದಲ್ಲಿದ್ದು, ಪ್ರತ್ಯೇಕವಾಗಿರುತ್ತವೆ. ವಿವಿಧ ಗಾತ್ರಗಳಲ್ಲಿರುತ್ತವೆ. ಬಿರುಕುಗಳಿರುವುದಿಲ್ಲ ಮತ್ತು ಜಿಗುಟಾಗಿರುವುದಿಲ್ಲ. ಎಲೆಗಳ ಮೇಲೆ, ಕಲೆಗಳು ಚದುರಿಹೋಗಿರುತ್ತವೆ. ವೃತ್ತಾಕಾರ ಅಥವಾ ಅನಿಯಮಿತವಾಗಿ, ಹರಡಿದಂತಹ ಹಳದಿ ಅಂಚುವಿನೊಂದಿಗೆ ಗಾಢ ಕೆಂಪು ಕಂದು ಬಣ್ಣದಿಂದ ಬಹುತೇಕ ಕಪ್ಪು ಬಣ್ಣದಲ್ಲಿ ಇರುತ್ತವೆ. ಕಲೆಗಳು 0.5 ರಿಂದ 5 ಮಿ.ಮೀ ವ್ಯಾಸವನ್ನು ಹೊಂದಿರುತ್ತವೆ ಮತ್ತು ಒಗ್ಗೂಡುವುದಿಲ್ಲ. ಮಚ್ಚೆಯುಳ್ಳ ಎಲೆಗಳು ತಿಳಿ ಹಸಿರು ಬಣ್ಣ ಪಡೆಯುತ್ತವೆ. ಹಳದಿ ಬಣ್ಣಕ್ಕೆ ತಿರುಗುತ್ತವೆ ಮತ್ತು ಉದುರುತ್ತವೆ. ಕಪ್ಪು ಅಂಡಾಕಾರದ ಕಲೆಗಳು ಕೊಂಬೆಗಳ ಮೇಲೆ ಗೋಚರಿಸುತ್ತವೆ. ಸಮತಟ್ಟಾಗಿ, ಕುಗ್ಗಿ ಉಬ್ಬಿದ ಅಂಚು ಪಡೆಯುತ್ತವೆ. ಸೋಂಕಿತ ಕೊಂಬೆಗಳು ಒಣಗಿ ಸಾಯುತ್ತವೆ.
ಕ್ಷಮಿಸಿ, ಈ ಕಾಯಿಲೆಯ ಜೈವಿಕ ನಿಯಂತ್ರಣ ಏಜೆಂಟ್‌ಗಳ ಬಗ್ಗೆ ನಮಗೆ ಏನೂ ತಿಳಿದಿಲ್ಲ. ಈ ಸ್ಥಳವನ್ನು ತುಂಬುವ ನಿರೀಕ್ಷೆಯಲ್ಲಿ ನಾವಿದ್ದೇವೆ.
ಲಭ್ಯವಿದ್ದರೆ ಜೈವಿಕ ಚಿಕಿತ್ಸೆಗಳೊಂದಿಗೆ ತಡೆಗಟ್ಟುವ ಕ್ರಮಗಳಿರುವ ಸಂಯೋಜಿತ ವಿಧಾನವನ್ನು ಯಾವಾಗಲೂ ಪರಿಗಣಿಸಿ. ಆರ್ಥಿಕ ಮಿತಿ ತಲುಪಿದರೆ, ನಿಯಂತ್ರಣ ಕ್ರಮಗಳನ್ನು ಪರಿಚಯಿಸಬೇಕಾಗುತ್ತದೆ. ಹಣ್ಣು ಮೂಡಿದ ನಂತರ 15 ದಿನಗಳ ಅಂತರದಲ್ಲಿ ಶಿಲೀಂಧ್ರನಾಶಕದ ಎರಡು ಮೂರು ಸಿಂಪಡಿಸುವಿಕೆಯು ರೋಗದ ಉತ್ತಮ ನಿಯಂತ್ರಣಕ್ಕೆ ನೆರವಾಗುತ್ತದೆ. ಸಕ್ರಿಯ ಪದಾರ್ಥಗಳು ಮ್ಯಾಂಕೋಜೆಬ್, ಕೊನಜೋಲ್ ಅಥವಾ ಕಿಟಾಜಿನ್. ದಾಳಿಂಬೆಗೆ ಸಂಬಂಧಿಸಿದಂತೆ ನೋಂದಣಿಯಾಗಿರುವ ಸಿಂಪಡಿಕೆ ಶಿಲೀಂಧ್ರನಾಶಕಗಳನ್ನು ಮಾತ್ರ ಬಳಸಿ. ಶಿಫಾರಸು ಮಾಡಲಾದ ನಿಗದಿತ ಸಾಂದ್ರತೆಗಳನ್ನು ಅನುಸರಿಸುವುದು ಮತ್ತು ಪ್ರತಿರೋಧಗಳನ್ನು ತಡೆಗಟ್ಟಲು ವಿಭಿನ್ನ ಕ್ರಮಗಳೊಂದಿಗೆ ಶಿಲೀಂಧ್ರನಾಶಕಗಳನ್ನು ಬಳಸುವುದು ಮುಖ್ಯ. ನಿರೀಕ್ಷಣಾ ಅವಧಿಯನ್ನು ಅರಿತು ಪಾಲಿಸುವುದು ಸಹ ಬಹಳ ಮುಖ್ಯ.
ಸೂಡೊಸೆರ್ಕೊಸ್ಪೊರಾ ಪ್ಯುನಿಕೆ ಎಂಬ ಶಿಲೀಂಧ್ರದಿಂದ ರೋಗಲಕ್ಷಣಗಳು ಉಂಟಾಗುತ್ತವೆ. ಇದು ಸಸ್ಯದ ಅವಶೇಷಗಳಲ್ಲಿ ಮತ್ತು ಸಸ್ಯದ ಸೋಂಕಿತ ಕಾಂಡದ ಭಾಗಗಳಲ್ಲಿ ಬದುಕಬಲ್ಲದು. ಇದು ಗಾಳಿಜನ್ಯ ಬೀಜಕಗಳಿಂದ ಹರಡುತ್ತದೆ. ರೋಗದ ಹೊರಹೊಮ್ಮುವಿಕೆಗೆ ಮಳೆ ಮತ್ತು ನೀರಿನಲ್ಲಿ ನೆನೆದ ಮಣ್ಣು ಅನುಕೂಲಕರವಾಗಿದೆ. ಆದ್ದರಿಂದ ಆರ್ದ್ರ ಮತ್ತು ಮಳೆಯ ಪರಿಸ್ಥಿತಿಯಲ್ಲಿ ಸೋಂಕಿನ ಪ್ರಕ್ರಿಯೆ ಮತ್ತು ರೋಗ ಹರಡುವಿಕೆಯು ವೇಗವಾಗಿರುತ್ತದೆ. ಎಲೆಯ ಮೇಲಿನ ಕಲೆಗಳು ಪರೋಕ್ಷವಾಗಿ ಇಳುವರಿಯನ್ನು ಕಡಿಮೆ ಮಾಡುತ್ತವೆ. ದ್ಯುತಿಸಂಶ್ಲೇಷಣೆಗೆ ಬೇಕಾದ ಶಕ್ತಿ ಉತ್ಪಾದಿಸುವ ಪ್ರದೇಶವನ್ನು ಅವು ಕಡಿಮೆಮಾಡುತ್ತವೆ. ಸೋಂಕಿತ ಎಲೆಗಳನ್ನು ಚಹಾ ಉತ್ಪಾದನೆಗಾಗಲಿ ಅಥವಾ ಇನ್ನಾವುದಕ್ಕೂ ಮಾರಾಟ ಮಾಡಲು ಸಾಧ್ಯವಿಲ್ಲ. ಹಣ್ಣಿನ ಕಲೆಗಳು ಮಾರುಕಟ್ಟೆಯ ಉತ್ಪನ್ನದ ಆರ್ಥಿಕ ನಷ್ಟಕ್ಕೆ ಕಾರಣವಾಗುತ್ತವೆ. ಸೋಂಕಿತ ಹಣ್ಣುಗಳನ್ನು ಮಾರಾಟ ಮಾಡಲು ಸಾಧ್ಯವಿಲ್ಲ.