ಮೆಕ್ಕೆ ಜೋಳ

ಮೆಕ್ಕೆ ಜೋಳದ ಗಿಬ್ಬೆರೆಲ್ಲಾ ಕಾಂಡ ಕೊಳೆತ

Gibberella zeae

ಶಿಲೀಂಧ್ರ

ಸಂಕ್ಷಿಪ್ತವಾಗಿ

  • ತುದಿಯಲ್ಲಿ ಕೆಂಪು ಬಣ್ಣಕ್ಕೆ ತಿರುಗುವ ಸುಕ್ಕಾದ ಮತ್ತು ಕಲುಷಿತವಾದ ತೆನೆಗಳು.
  • ಎಲೆಗಳು ಮಂದ ಬೂದು-ಹಸಿರು ಬಣ್ಣಕ್ಕೆ ತಿರುಗಿ ಒಣಗುತ್ತವೆ.
  • ಕಾಂಡದ ತಿರುಳು ಚೂರುಚೂರಾಗಿರುತ್ತದೆ ಮತ್ತು ಗುಲಾಬಿ ಬಣ್ಣ ಅಥವಾ ಕೆಂಪು ಬಣ್ಣಕ್ಕೆ ತಿರುಗಿರುತ್ತದೆ.
  • ಬೇರುಗಳು ಕೊಳೆತು, ಕ್ರಮೇಣ ಸಸ್ಯಗಳು ಸಾಯುತ್ತವೆ.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ಮೆಕ್ಕೆ ಜೋಳ

ರೋಗಲಕ್ಷಣಗಳು

ಮೆಕ್ಕೆ ಜೋಳದಲ್ಲಿ, ಈ ರೋಗವು ತೆನೆ ಮತ್ತು ಕಾಂಡದ ಮೇಲೆ ರೋಗಲಕ್ಷಣಗಳನ್ನು ತೋರಿಸುತ್ತದೆ. ಆರಂಭಿಕ ರೋಗಲಕ್ಷಣಗಳೆಂದರೆ ತೆನೆಯ ತುದಿಯಲ್ಲಿ ಬಿಳಿಯ ಬೂಷ್ಟು ಕಾಣಿಸಿಕೊಳ್ಳುವುದು. ಇದು ಕಾಲಾನಂತರ ಗುಲಾಬಿ ಅಥವಾ ಕೆಂಪು ಬಣ್ಣಕ್ಕೆ ತಿರುಗುತ್ತದೆ. ರೋಗ ಮುಂದುವರಿಯುತ್ತಿದ್ದಂತೆ, ತೆನೆಯ ಉಳಿದ ಭಾಗಗಳಿಗೂ, ಹೆಚ್ಚಾಗಿ ಸಿಪ್ಪೆ ಮತ್ತು ಧಾನ್ಯಗಳ ನಡುವೆ ಬಣ್ಣಗೆಡುವಿಕೆ ಹರಡುತ್ತದೆ. ಮತ್ತು ಸೋಂಕಿತ ತೆನೆಗಳು ಸಂಪೂರ್ಣವಾಗಿ ಕೊಳೆಯಬಹುದು. ಆರಂಭದಲ್ಲಿ ಸೋಂಕಿಗೆ ಒಳಗಾದ ಸಸ್ಯಗಳ ಎಲೆಗಳು ಮಂದ ಬೂದು-ಹಸಿರು ಬಣ್ಣಕ್ಕೆ ತಿರುಗಿ, ಬಾಡಲು ಪ್ರಾರಂಭಿಸುತ್ತವೆ. ಕೆಳಗಿನ ಗೆಣ್ಣುಗಳ ನಡುವಣ ಪ್ರದೇಶಗಳು ಮೃದುವಾಗುತ್ತವೆ ಮತ್ತು ಕಪ್ಪು-ಕಂದು ಬಣ್ಣಕ್ಕೆ ತಿರುಗುತ್ತವೆ. ನಂತರ, ಕಪ್ಪು ಚುಕ್ಕೆಗಳು ಮೇಲ್ಮೈಯಲ್ಲಿ ಬೆಳೆಯಬಹುದು. ಅದನ್ನು ಬೆರಳಿನ ಉಗುರು ಬಳಸಿ ಸುಲಭವಾಗಿ ಕೆರೆದು ತೆಗೆಯಬಹುದು. ಕಾಂಡವನ್ನು ಉದ್ದವಾಗಿ ಸೀಳಿದಾಗ ಚೂರುಚೂರಾದ, ಗುಲಾಬಿ ಅಥವಾ ಕೆಂಪು ಛಾಯೆಯನ್ನು ಹೊಂದಿರುವ ಬಣ್ಣ ಕಳೆದುಕೊಂಡ ಅಂಗಾಂಶಗಳನ್ನು ನೋಡಬಹುದು. ಕ್ರಮೇಣ ಮುಖ್ಯ ಬೇರು ಕೊಳೆಯುತ್ತದೆ, ಕಂದು ಬಣ್ಣಕ್ಕೆ ತಿರುಗುತ್ತದೆ ಮತ್ತು ಸುಲಭವಾಗಿ ಮುರಿಯುತ್ತದೆ. ಸಸ್ಯವು ಅಕಾಲಿಕವಾಗಿ ಮರಣಿಸಬಹುದು ಮತ್ತು ಬಾಗಿ ಬೀಳಬಹುದು.

ಶಿಫಾರಸುಗಳು

ಜೈವಿಕ ನಿಯಂತ್ರಣ

ಈವರೆಗೆ ಜಿ. ಝೀ ವಿರುದ್ಧ ಜೈವಿಕ ನಿಯಂತ್ರಣ ಅಭ್ಯಾಸ ಲಭ್ಯವಿಲ್ಲ. ನಿಮಗೆ ಏನಾದರೋ ತಿಳಿದಿದ್ದರೆ, ದಯವಿಟ್ಟು ನಮಗೆ ತಿಳಿಸಿ. ಯಾವುದೇ ಬೀಜಗಳನ್ನು ರೋಗಕಾರಕಗಳಿಂದ ಮುಕ್ತಗೊಳಿಸಲು ಬಿಸಿ ನೀರಿನ ಸ್ನಾನವನ್ನು ಬಳಸಬಹುದು. ನಿಮ್ಮ ಅಗತ್ಯಗಳಿಗೆ ಯಾವ ತಾಪಮಾನ ಮತ್ತು ಸಮಯ ಅತ್ಯುತ್ತಮವಾಗಿದೆ ಎಂಬುದನ್ನು ಪರಿಶೀಲಿಸಿ.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದರೆ, ತಡೆಗಟ್ಟುವ ಕ್ರಮಗಳು ಮತ್ತು ಜೈವಿಕ ಚಿಕಿತ್ಸೆಗಳು ಇರುವ ಸಮಗ್ರ ವಿಧಾನವನ್ನು ಯಾವಾಗಲೂ ಪರಿಗಣಿಸಿ. ಮೆಕ್ಕೆ ಜೋಳದಲ್ಲಿ ಗಿಬ್ಬೆರೆಲ್ಲಾ ಕಾಂಡ ಕೊಳೆತವನ್ನು ನಿರ್ವಹಿಸಲು ಯಾವುದೇ ಶಿಲೀಂಧ್ರನಾಶಕಗಳು ಪ್ರಸ್ತುತ ಲಭ್ಯವಿಲ್ಲ. ಬೀಜಗಳನ್ನು ಶಿಲೀಂಧ್ರನಾಶಕಗಳ ಮೂಲಕ ಚಿಕಿತ್ಸೆಗೆ ಒಳಪಡಿಸಬಹುದು. ವಿಶೇಷವಾಗಿ ಆ ಪ್ರದೇಶ ಜಿ.ಝೀ ಯಿಂದ ಗಮನಾರ್ಹವಾಗಿ ಸೋಂಕಿಗೆ ಒಳಗಾಗಿದ್ದರೆ.

ಅದಕ್ಕೆ ಏನು ಕಾರಣ

ರೋಗಲಕ್ಷಣಗಳು ಗಿಬ್ಬೆರೆಲಾ ಝೀ, ಎಂಬ ಸಸ್ಯದ ಅವಶೇಷಗಳಲ್ಲಿ ಮತ್ತು ಪ್ರಾಯಶಃ ಬೀಜಗಳಲ್ಲಿ ಚಳಿಗಾಲ ಕಳೆಯುವ ಶಿಲೀಂಧ್ರದಿಂದ ಉಂಟಾಗುತ್ತವೆ. ಒದ್ದೆಯಾದ, ಬೆಚ್ಚನೆಯ ವಾತಾವರಣದಲ್ಲಿ ಬೀಜಕಗಳು ಉತ್ಪಾದನೆಯಾಗುತ್ತವೆ ಮತ್ತು ಗಾಳಿ ಮತ್ತು ನೀರಿನ ಹನಿಗಳಿಂದ ಹರಡುತ್ತವೆ. ಒಂದು ಬೀಜಕ ತೆನೆಯ ರೇಷ್ಮೆ ಎಳೆಯ ಮೇಲೆ ಇಳಿದು, ಅಂಗಾಂಶಗಳನ್ನು ಆಕ್ರಮಿಸಿಕೊಳ್ಳಲು ಆರಂಭಿಸಿದಾಗ ಸಾಮಾನ್ಯವಾಗಿ ಪ್ರಾಥಮಿಕ ಸೋಂಕು ಸಂಭವಿಸುತ್ತದೆ. ಸೋಂಕಿನ ಇತರ ಸಂಭಾವ್ಯ ಮೂಲಗಳೆಂದರೆ ಬೇರು, ಕಾಂಡ ಅಥವಾ ಎಲೆಗಳಲ್ಲಿನ ಗಾಯಗಳು. ಹಕ್ಕಿ ಮತ್ತು ಕೀಟಗಳು ನಿರ್ದಿಷ್ಟವಾಗಿ ಹಾನಿಕಾರಕವಾಗಿದ್ದು, ಬೀಜಕಗಳನ್ನು ಅಥವಾ ಬೀಜಗಳನ್ನು ಹೊತ್ತುಕೊಂಡು ಹೋಗುವುದರ ಜೊತೆಗೆ ಅವು ಸಸ್ಯ ಅಂಗಾಂಶಗಳಿಗೂ ಹಾನಿ ಮಾಡುತ್ತವೆ. ಭತ್ತ, ಹುಲ್ಲು ಜೋಳ, ಗೋಧಿ, ರೈ, ಟ್ರಿಟಿಕಲ್ ಅಥವಾ ಬಾರ್ಲಿಯಂತಹ ಧಾನ್ಯಗಳು ಸಹ ಈ ರೋಗಕಾರಕದ ಸೋಂಕಿಗೆ ಒಳಗಾಗಬಹುದು. ಇತರ ಸಸ್ಯಗಳು ರೋಗಲಕ್ಷಣಗಳನ್ನು ತೋರಿಸದೆ ಈ ರೋಗಕಾರಕವನ್ನು ಸಾಗಿಸುತ್ತವೆ. ಈ ಮೂಲಕ ಇನಾಕ್ಯುಲಮ್ ಮೂಲವಾಗಿ ಕಾರ್ಯನಿರ್ವಹಿಸುತ್ತವೆ.


ಮುಂಜಾಗ್ರತಾ ಕ್ರಮಗಳು

  • ಈ ರೋಗದ ಚಿಹ್ನೆಗಳಿಗಾಗಿ ನಿಯಮಿತವಾಗಿ ಹೊಲದ ಮೇಲ್ವಿಚಾರಣೆ ಮಾಡಿ.
  • ಉತ್ತಮ ಕಾಂಡ ಶಕ್ತಿ ಮತ್ತು ಎಲೆ ರೋಗಗಳಿಗೆ ಪ್ರತಿರೋಧವನ್ನು ಹೊಂದಿರುವ ಮಿಶ್ರತಳಿಗಳನ್ನು ಆಯ್ಕೆ ಮಾಡಿ.
  • ಅಂತರ ಮತ್ತು ಬೀಜ ಪ್ರಮಾಣಗಳ ವಿಷಯದಲ್ಲಿ ಶಿಫಾರಸುಗಳನ್ನು ಅನುಸರಿಸಿ.
  • ಸರಿಯಾದ ಸಾರಜನಕ / ಪೊಟ್ಯಾಸಿಯಮ್ ಸಮತೋಲನವನ್ನು ನಿರ್ವಹಿಸಲು ಮಣ್ಣಿನ ಪರೀಕ್ಷೆಗಳನ್ನು ಬಳಸಿ ಮತ್ತು ರಸಗೊಬ್ಬರ ಶಿಫಾರಸುಗಳನ್ನು ಅನುಸರಿಸಿ.
  • ಪರಾಗಸ್ಪರ್ಶದ ನಂತರ ಮತ್ತು ಧಾನ್ಯ ತುಂಬುವ ಸಮಯದಲ್ಲಿ ಸಸ್ಯದ ಒತ್ತಡವನ್ನು ಕಡಿಮೆ ಮಾಡಿ.
  • ಹೊಲದಲ್ಲಿ ಕೆಲಸ ಮಾಡುವ ಸಮಯದಲ್ಲಿ ಸಸ್ಯಗಳಿಗೆ ಯಾಂತ್ರಿಕ ಹಾನಿಯಾಗುವುದನ್ನು ತಪ್ಪಿಸಿ.
  • ಸಸ್ಯ ಅವಶೇಷಗಳನ್ನು ಒಡೆಯಲು ಅವುಗಳನ್ನು ನೆಲದೊಳಗೆ ಉಳುಮೆ ಮಾಡಿ.
  • ರೋಗಕ್ಕೆ ಒಳಗಾಗದ ಬೆಳೆಗಳೊಂದಿಗೆ ಬೆಳೆ ಸರದಿ ಯೋಜನೆ ಮಾಡಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ