Deightoniella torulosa
ಶಿಲೀಂಧ್ರ
ದುಂಡನೆಯ, ಸೂಜಿಮೊನೆಯಾಕಾರಾದ, ಕಪ್ಪು ಕಲೆಗಳು ಎಲೆಯ ಅಂಚಿನ ಹತ್ತಿರದಲ್ಲೇ ಮುಖ್ಯ ನಾಳಗಳ ಮೇಲೆ ಕಾಣಿಸಿಕೊಳ್ಳುತ್ತವೆ. ಕ್ರಮೇಣ, ಈ ತಾಣಗಳು ಗಾತ್ರದಲ್ಲಿ ದೊಡ್ಡದಾಗುತ್ತವೆ ಮತ್ತು ಕಿರಿದಾದ ಹಳದಿ ಅಂಚನ್ನು ಪಡೆಯುತ್ತವೆ. ಈ ದೊಡ್ಡ ಕಲೆಗಳ ಮಧ್ಯಬಾಗ ಒಣಗುತ್ತದೆ ಮತ್ತು ತೆಳು ಕಂದು ಪ್ರದೇಶಗಳು ಹಳದಿ ಅಂಚನ್ನು ಮೀರಿ ಎಲೆಯ ಅಂಚನ್ನು ತಲುಪುತ್ತವೆ. ಇದರಿಂದ ಈ ಕಲೆಗಳು ತಲೆಕೆಳಗಾದ 'ವಿ' ಆಕೃತಿಯಲ್ಲಿ ಗೋಚರಿಸುತ್ತವೆ. ಹಣ್ಣುಗಳಲ್ಲಿ ಮೊದಲು, ಕಪ್ಪು ಬಣ್ಣ ಹಣ್ಣಿನ ತುದಿಯಲ್ಲಿ ಕಾಣಿಸಿಕೊಳ್ಳುತ್ತದೆ. ನಂತರ ಕೆಲವೊಮ್ಮೆ ಹಳದಿ ಅಂಚುಗಳಿರುವ, ಅನಿಯಮಿತ ದಟ್ಟ ಚುಕ್ಕೆ ಅಥವಾ ಮಚ್ಚೆಗಳಾಗಿ ಹಣ್ಣುಗಳ ಉದ್ದಕ್ಕೂ ಕಾಣಿಸಿಕೊಳ್ಳುತ್ತದೆ. ಕೆಲವು ಪ್ರಭೇದಗಳಲ್ಲಿ, ಬಹುತೇಕ ದುಂಡನೆಯ ಕೆಂಪು ಕಂದು ಚುಕ್ಕೆಗಳು ಅಥವಾ ಕಪ್ಪು ಕೇಂದ್ರಗಳಿರುವ ಮತ್ತು ಗಾಢ ಹಸಿರು ಬಣ್ಣದ, ನೀರಿನಲ್ಲಿ ನೆನೆಸಿದಂತಹ ವೃತ್ತಕಾರದ ಚುಕ್ಕೆಗಳು ಕಾಣಬಹುದು.
ಈ ರೋಗದ ವಿರುದ್ಧ ಯಾವುದೇ ಶುದ್ಧ ಜೈವಿಕ ಪರಿಹಾರಗಳಿಲ್ಲ. ತೀವ್ರ ಸೋಂಕಿನ ಸಂದರ್ಭಗಳಲ್ಲಿ, ಸಾವಯವ ತಾಮ್ರದ ಮಿಶ್ರಣವನ್ನು, ಉದಾಹರಣೆಗೆ 1% ಬೋರ್ಡೆಕ್ಸ್ ಮಿಶ್ರಣವನ್ನು ಸೋಂಕಿತ ಪ್ರದೇಶಗಳ ಮೇಲೆ ಸಿಂಪಡಿಸಬಹುದಾಗಿದೆ.
ನಿರೋಧಕ ಕ್ರಮಗಳು ಮತ್ತು ಜೈವಿಕ ಚಿಕಿತ್ಸೆಗಳು ಒಟ್ಟಾಗಿರುವ ಸಮಗ್ರ ವಿಧಾನ ಇದ್ದರೆ ಅದನ್ನು ಮೊದಲು ಪರಿಗಣಿಸಿ. ತೀವ್ರ ಸೋಂಕಿನ ಸಂದರ್ಭಗಳಲ್ಲಿ 0.4% ಮಂಕೋಝೆಬ್ ಅಥವಾ ತಾಮ್ರದ ಆಕ್ಸಿ ಕ್ಲೋರೈಡ್ ತೈಲವನ್ನು 0.2 -0.4% ಪ್ರಮಾಣದಲ್ಲಿ ಸಿಂಪಡಿಸಿ. ಸಂಪರ್ಕ ಶಿಲಿಂಧ್ರನಾಶಕಗಳಾದ ಕ್ಲೋರೋಥಲೋನಿಲ್ ಅಥವಾ ಮಂಕೋಝೆಬ್ ಮತ್ತು ವ್ಯವಸ್ಥಿತ ಶಿಲೀಂಧ್ರನಾಶಕಗಳಾದ ತೆಬುಕೋನಜೋಲ್ ಅಥವಾ ಪ್ರೊಪಿಕೊನಾಝೋಲ್ ಗಳನ್ನು ಶಿಫಾರಸು ಮಾಡಲಾಗಿದೆ. ಸಿಂಪಡಣೆ ಮೇಲಿನ ಭಾಗವನ್ನೂ ತಲುಪಿವೆ ಎಂಬುದನ್ನು ಖಚಿತಪಡಿಸಿಕೊಳ್ಳಿ.
ಡೈಗ್ಚೋನಿಯೆಲ್ಲಾ ಟೊರುಲೋಸಾ ಶಿಲೀಂಧ್ರ ಈ ರೋಗಕ್ಕೆ ಕಾರಣವಾಗಿದೆ. ಇದು ಸತ್ತ ಬಾಳೆ ಎಲೆಗಳಲ್ಲಿ ಕಂಡುಬರುತ್ತದೆ ಮತ್ತು ಮಳೆ ಹಾಗು ಹಿಮದ ಅವಧಿಗಳಲ್ಲಿ ಹೊಸ ಇನಾಕ್ಯುಲಮ್ ಅನ್ನು ಉತ್ಪಾದಿಸುತ್ತದೆ. ಆರ್ದ್ರತೆಯು ಕ್ಷೀಣಿಸಿದಂತೆ, ಬೀಜಕಗಳು ಬಿರುಸಾಗಿ ಬಿಡುಗಡೆ ಹೊಂದುತ್ತವೆ ಮತ್ತು ಅಂತಿಮವಾಗಿ ಗಾಳಿ ಮೂಲಕ ಹರಡುತ್ತವೆ. ಇದರಿಂದಾಗಿ, ಅಧಿಕ ವಾಯು ತೇವಾಂಶದ ಪರಿಸ್ಥಿತಿಯ ನಂತರ ಗಾಳಿಯಲ್ಲಿ ಶುಷ್ಕತೆಯ ಅವಧಿ ಆರಂಭವಾದರೆ ಈ ರೋಗ ಶೀಘ್ರವಾಗಿ ಹರಡುತ್ತದೆ. ಶಿಲೀಂಧ್ರದ ಹರಡುವಿಕೆಯು ನಿಕಟವಾಗಿ ನೆಡಲ್ಪಟ್ಟ ತೋಟಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಶಿಲೀಂಧ್ರವು ಸಸ್ಯದ ಅಂಗಾಂಶಕ್ಕೆ ಹಾನಿ ಮಾಡುತ್ತದೆ. ಇದರಿಂದ ದ್ಯುತಿಸಂಶ್ಲೇಷಕ ಪ್ರದೇಶ ಗಮನಾರ್ಹವಾಗಿ ಕಡಿಮೆಯಾಗಿ , ಇಳುವರಿ ನಷ್ಟ ಸಂಭವಿಸುತ್ತದೆ.