ಕಾಫಿ

ಮಸಿ ರೋಗ (ಸೂಟಿ ಮೋಲ್ಡ್)

Pezizomycotina

ಶಿಲೀಂಧ್ರ

ಸಂಕ್ಷಿಪ್ತವಾಗಿ

  • ಹಣ್ಣುಗಳ ಮೇಲೆ ಗಾಢ ಬೂದು ಬಣ್ಣದಿಂದ ಕಪ್ಪು ಬಣ್ಣದ ಮಸಿ.
  • ಎಲೆಗಳು, ಕೊಂಬೆಗಳು ಮತ್ತು ಕಾಂಡಗಳ ಮೇಲೂ ಕಾಣುತ್ತದೆ.
  • ಎಲೆಗಳು ಸತ್ತು ಉದುರಿಬೀಳಬಹುದು.

ಇವುಗಳಲ್ಲಿ ಸಹ ಕಾಣಬಹುದು

27 ಬೆಳೆಗಳು
ಸೇಬು
ಬಾಳೆಹಣ್ಣು
ಹುರುಳಿ
ಹಾಗಲಕಾಯಿ
ಇನ್ನಷ್ಟು

ಕಾಫಿ

ರೋಗಲಕ್ಷಣಗಳು

ಮಾವಿನ ಮರ ಮತ್ತು ಕೀಟಗಳಿಗೆ ಈ ಹಿಂದೆ ಆಹಾರವಾಗಿದ್ದ ಎಲ್ಲಾ ಸಸ್ಯಗಳಲ್ಲೂ ಮಸಿ ರೋಗ ಕಂಡುಬರಬಹುದು. ಈ ಮಸಿ ಪದರವು ವಾಸ್ತವವಾಗಿ ಕೀಟಗಳು ತಮ್ಮ ಜೊತೆಗಾರ ಕೀಟಗಳನ್ನು ಆಕರ್ಷಿಸಲು ಉತ್ಪತ್ತಿ ಮಾಡುವ ಸಿಹಿಯಾದ ಅಂಟು, ಸ್ರವಿಸುವಿಕೆಯ ಮೇಲೆ ಬೆಳೆಯುತ್ತವೆ. ಈ ಸಿಹಿದ್ರವ್ಯವನ್ನು ಆಹಾರದ ಮೂಲವಾಗಿಸಿಕೊಂಡು, ಮಸಿ ಪದರವು ಸೋಂಕಿತ ಸಸ್ಯದ ಭಾಗಗಳನ್ನು ನಿಧಾನವಾಗಿ ಆವರಿಸಿಕೊಳ್ಳುತ್ತದೆ ಮತ್ತು ಅದನ್ನು ಕಪ್ಪು ಬಣ್ಣವಾಗಿಸುತ್ತದೆ. ಸೂಟಿ ಮೋಲ್ಡ್ ಗಳು ಪರಾವಲಂಬಿಯಲ್ಲದ ಮತ್ತು ರೋಗಕಾರಕವಲ್ಲದ ಶಿಲೀಂಧ್ರಗಳು. ಹೀಗಾಗಿ, ಅವು ಸಸ್ಯ ಅಂಗಾಂಶಗಳೊಳಗೆ ಮನೆ ಮಾಡುವುದಿಲ್ಲ ಅಥವಾ ರೋಗಲಕ್ಷಣಗಳನ್ನು ಪ್ರಚೋದಿಸುವುದಿಲ್ಲ. ಆದಾಗ್ಯೂ, ಅವು ಸಸ್ಯಗಳ ದ್ಯುತಿಸಂಶ್ಲೇಷಣೆ ಕ್ರಿಯೆ ಮತ್ತು ವಾತಾವರಣದೊಂದಿಗೆ ಅನಿಲಗಳ ವಿನಿಮಯದ ಸಾಮರ್ಥ್ಯವನ್ನು ಮಾರ್ಪಡಿಸುತ್ತದೆ. ತೀವ್ರ ಸೋಂಕಿಗೆ ಒಳಗಾದ ಎಲೆಗಳು ಸಾಯುತ್ತವೆ ಮತ್ತು ಉದುರಿಹೋಗುತ್ತವೆ. ಈ ಮೂಲಕ ಸಸ್ಯಗಳ ಬೆಳವಣಿಗೆ ಮತ್ತು ಬದುಕುಳಿಯುವಿಕೆಯ ಮೇಲೆ ಪ್ರಭಾವ ಬೀರುತ್ತದೆ.

ಶಿಫಾರಸುಗಳು

ಜೈವಿಕ ನಿಯಂತ್ರಣ

ಬಿಳಿನೊಣ, ಗಿಡಹೇನುಗಳು, ಸ್ಕೇಲ್ಸ್, ಇರುವೆಗಳು ಮತ್ತು ಮಲಿ ಬಗ್ ಗಳನ್ನು ನಿವಾರಿಸಲು, ವಿಶಾಲ ವ್ಯಾಪ್ತಿಯ ಸಾವಯವ ಸಂಯುಕ್ತವಾಗಿರುವ ಬೇವಿನ ಎಣ್ಣೆಯ ಸಂಯೋಜನೆಗಳನ್ನು ಬಳಸಿ. ಬೇವಿನ ಎಣ್ಣೆ ಶಿಲೀಂಧ್ರದ ಬೆಳವಣಿಗೆಯನ್ನು ಕೂಡ ಕಡಿಮೆ ಮಾಡುತ್ತದೆ. ಕೀಟನಾಶಕ ಸಾಬೂನು ಅಥವಾ ಪಾತ್ರೆ ತೊಳೆಯುವ ಸಾಬೂನು (ಉದಾ. 5 ಲೀಟರ್ ನೀರಿಗೆ ಒಂದು ಚಮಚ)ಗಳ ದ್ರಾವಣವನ್ನು ಸೋಂಕಿತ ಸಸ್ಯಗಳ ಮೇಲೆ ಸಿಂಪಡಿಸಬಹುದಾಗಿದೆ. ಸಾಬೂನು ದ್ರಾವಣವು ಸಸ್ಯಗಳ ಮೇಲೆ ಉಳಿಯಲು ಬಿಟ್ಟು ನಂತರ ಅದನ್ನು ತೊಳೆಯಬಹುದು. ಆ ಮೂಲಕ ಮೋಲ್ಡ್ ಗಳನ್ನು ನಿವಾರಿಸಬಹುದು.

ರಾಸಾಯನಿಕ ನಿಯಂತ್ರಣ

ಜೈವಿಕ ಚಿಕಿತ್ಸೆಗಳು ಮತ್ತು ತಡೆಗಟ್ಟುವ ಕ್ರಮಗಳನ್ನು ಒಟ್ಟಾಗಿ ಹೊಂದಿರುವ ಸಮಗ್ರವಾದ ವಿಧಾನ ಇದ್ದರೆ ಮೊದಲು ಅದನ್ನು ಪರಿಗಣಿಸಿ. ಆರ್ಗನೋಫಾಸ್ಫೇಟ್ ಕುಟುಂಬಕ್ಕೆ ಸೇರಿದ ಆಸ್ಫೆಟ್, ಮ್ಯಾಲಥಿಯಾನ್ ಅಥವಾ ಡೈಯಾಜಿನಾನ್ ಮುಂತಾದವುಗಳ ಸಂಶ್ಲೇಷಿತ ಕೀಟನಾಶಕಗಳನ್ನು ಮರವನ್ನು ತಿನ್ನುವ ಕೀಟಗಳನ್ನು ತಡೆಗಟ್ಟಲು ಬಳಸಬಹುದು.

ಅದಕ್ಕೆ ಏನು ಕಾರಣ

ಸಸ್ಯಂಗಾಂಶವನ್ನು ತಿನ್ನುವ ಮ್ಯಾಂಗೋ ಲೀಫ್ ಹಾಪರ್ (ಅಮ್ರಿಟೋಡಸ್ ಆಟ್ಕಿನ್ಸೋನಿ), ಬಿಳಿನೊಣಗಳು, ಗಿಡಹೇನುಗಳು ಮತ್ತು ಇನ್ನೂ ಮುಂತಾದ ಸಸ್ಯಗಳ ಸಾರ ಹೀರುವ ಕೀಟಗಳೊಂದಿಗೆ ಈ ರೋಗಕ್ಕೆ ಸಂಬಂಧವಿದೆ. ಆಹಾರ ತಿನ್ನುವ ಪ್ರಕ್ರಿಯೆಯಲ್ಲಿ, ಇವು ಆಯಾ ಸಸ್ಯಗಳ ಮೇಲೆ ಸಿಹಿಯಾದ ದ್ರವ್ಯ ಸ್ರವಿಸುತ್ತವೆ. ಇದು ಸೂಟಿ ಮೋಲ್ಡ್ ಬೆಳೆಯಲು ಸರಿಯಾದ ಮಾಧ್ಯಮವನ್ನು ಸೃಷ್ಟಿಸುತ್ತದೆ. ಈ ಸಿಹಿದ್ರವ್ಯವು ನೆರೆಹೊರೆಯ ಎಲೆಗಳು ಅಥವಾ ಗಿಡಗಳ ಮೇಲೆ ಬೀಳುತ್ತದೆ. ಇದರಿಂದಾಗಿ ಶಿಲೀಂಧ್ರ ಮತ್ತಷ್ಟು ಹರಡುತ್ತದೆ. ಈ ಶಿಲೀಂಧ್ರಗಳು ಮೋಲ್ಡ್ ಅಥವಾ ಬೀಜಕಗಳ ರೂಪದಲ್ಲಿ ಸಸ್ಯದ ಭಾಗಗಳು, ಉಪಕರಣಗಳು ಅಥವಾ ಸಾರಿಗೆ ವಾಹನಗಳ ಮೇಲೆ ಬದುಕುಳಿಯುತ್ತವೆ. ಕೀಟಗಳು ಸಸ್ಯದಿಂದ ಸಸ್ಯಕ್ಕೆ ಮೋಲ್ಡ್ ಅನ್ನು ಹರಡುತ್ತದೆ. ಉದಾಹರಣೆಗೆ, ಇರುವೆಗಳು ತಮ್ಮ ಸ್ವಂತ ಪ್ರಯೋಜನಕ್ಕಾಗಿ ಈ ಮಸಿ ಪದರವನ್ನು ರಕ್ಷಿಸುವತ್ತ ಒಲವು ತೋರುತ್ತವೆ.


ಮುಂಜಾಗ್ರತಾ ಕ್ರಮಗಳು

  • ಮರಗಳ ನಡುವೆ ಸಾಕಷ್ಟು ಅಂತರವಿರಲಿ.
  • ಸೂರ್ಯನ ಬೆಳಕುಗಳು ಬೀಳುವಂತಿರಲಿ.
  • ಸಸ್ಯಗಳಿಗೆ ಗಾಯಮಾಡುವಂತಹ ಸಸ್ಯದ ಸಾರ ಹೀರುವ ಕೀಟಗಳ ಹಾವಳಿಯನ್ನು ತಡೆಯಿರಿ.
  • ಮರಗಳನ್ನು ತಲುಪದಂತೆ ಇರುವೆಗಳನ್ನು ತಡೆಗಟ್ಟಲು ಮರಗಳ ಸುತ್ತ ಭೌತಿಕ ಅಡೆತಡೆಗಳನ್ನು ನಿರ್ಮಿಸಿ.
  • ಅಂಗಾಂಶಗಳನ್ನು ತಿನ್ನುವ ಪರಾವಲಂಬಿಗಳ ವಿರುದ್ಧ ಮರಗಳ ನೈಸರ್ಗಿಕ ಪ್ರತಿರೋಧವನ್ನು ಹೆಚ್ಚಿಸಲು ಮರಗಳಿಗೆ ಸಾಕಷ್ಟು ಗೊಬ್ಬರ ಮತ್ತು ನೀರು ಹಾಕಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ