ಭತ್ತ

ಉಡ್ ಬಟ್ಟಾ ಅಕ್ಕಿ ರೋಗ

Balansia oryzae-sativae

ಶಿಲೀಂಧ್ರ

ಸಂಕ್ಷಿಪ್ತವಾಗಿ

  • ಎಲೆಗಳಲ್ಲಿ ತೊಟ್ಟುಗಳ ವಿರೂಪತೆ.
  • ಮೇಲಿನ ಎಲೆಗಳು ಮತ್ತು ಪೊರೆ ಎಲೆಗಳು ಬಿಳಿ ಮೊಸಳಿನಂತಹ ಕವಚದ (ಮೈಸಿಲಿಯಲ್) ಚಾಪೆಯಲ್ಲಿ ಮುಚ್ಚಿಹೋಗಿ ಬೆಳ್ಳಿಯಂತೆ ಕಾಣಿಸಬಹುದು.
  • ಕುಂಠಿತಗೊಂಡ ಬೆಳವಣಿಗೆ.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ಭತ್ತ

ರೋಗಲಕ್ಷಣಗಳು

ಹೂಗೊಂಚಲು (ಪ್ಯಾನಿಕಲ್) ಹೊರಹೊಮ್ಮುವ ಸಮಯದಲ್ಲಿ ರೋಗಲಕ್ಷಣಗಳು ಮೊದಲು ಸ್ಪಷ್ಟವಾಗಿ ಕಂಡುಬರುತ್ತವೆ. ಸೋಂಕು ವ್ಯವಸ್ಥಿತವಾಗಿರುತ್ತದೆ ಮತ್ತು ಎಲ್ಲಾ ಟಿಲ್ಲರುಗಳು ಸೋಂಕಿಗೆ ಒಳಗೊಂಡಿರುತ್ತವೆ. ಸೋಂಕು ತಗುಲಿದ ಸಸ್ಯಗಳು ಸಾಮಾನ್ಯವಾಗಿ ಬಿಳಿ ಮೊಸಳಿನಂತಹ (ಮೈಸಿಲಿಯಲ್) ಚಾಪೆಯಿಂದ ಕೂಡಿರುತ್ತವೆ ಇದು ಹೂಗೊಂಚಲು ಶಾಖೆಗಳನ್ನು ಒಟ್ಟಿಗೆ ಕಟ್ಟಿಹಾಕಿರುತ್ತದೆ. ಹೂಗೊಂಚಲುಗಳು ಒಂಟಿಯಾಗಿ, ನೇರವಾಗಿ, ಕೊಳಕು-ಬಣ್ಣದ್ದಾಗಿ, ಸಿಲಿಂಡರಾಕಾರದ ರಾಡ್ಗಳಾಗಿ ಹೊರಹೊಮ್ಮುತ್ತವೆ. ಮೇಲ್ಭಾಗದ ಎಲೆಗಳು ಮತ್ತು ಪೊರೆ ಎಲೆಗಳನ್ನು ಸಹ ವಿಕೃತವಾಗಬಹುದು ಮತ್ತು ಬೆಳ್ಳಿಯ ರೀತಿ ಕಾಣಿಸಿಕೊಳ್ಳಬಹುದು. ಸಿರೆಗಳ ಉದ್ದಕ್ಕೂ ಬಿಳಿ ಮೊಸಳು (ಮೈಸಿಲಿಯಲ್) ಕಿರಿದಾದ ಪಟ್ಟೆಗಳನ್ನು ರೂಪಿಸುತ್ತದೆ. ಬಾಧಿತವಾದ ತೆನೆಗಳಲ್ಲಿ ಯಾವುದೇ ಧಾನ್ಯಗಳು ರೂಪುಗೊಳ್ಳುವುದಿಲ್ಲ.

ಶಿಫಾರಸುಗಳು

ಜೈವಿಕ ನಿಯಂತ್ರಣ

ಬಿತ್ತನೆ ಮಾಡುವ ಮೊದಲು 10 ನಿಮಿಷಗಳ ಕಾಲ 50-54 °C ನಲ್ಲಿ ಬೀಜಗಳಿಗೆ ಬಿಸಿ ನೀರಿನ ಸಂಸ್ಕರಣೆಯು ರೋಗದ ಪರಿಣಾಮಕಾರಿ ನಿಯಂತ್ರಣವನ್ನು ನೀಡುತ್ತದೆ. ಬೀಜಗಳಲ್ಲಿನ ರೋಗಕಾರಕವನ್ನು ಕೊಲ್ಲುವಲ್ಲಿ ಬೀಜಗಳ ಸೌರ ಸಂಸ್ಕರಣೆಯು ಸಹ ಪರಿಣಾಮಕಾರಿಯಾಗಿರುತ್ತದೆ.

ರಾಸಾಯನಿಕ ನಿಯಂತ್ರಣ

ಜೈವಿಕ ಚಿಕಿತ್ಸೆಗಳು ಲಭ್ಯವಿದ್ದರೆ ಒಟ್ಟಾಗಿ ತಡೆಗಟ್ಟುವ ಕ್ರಮಗಳೊಂದಿಗೆ ಸಮಗ್ರವಾದ ಮಾರ್ಗವನ್ನು ಯಾವಾಗಲೂ ಪರಿಗಣಿಸಿ. ಕ್ಯಾಪ್ಟನ್ ಅಥವಾ ಥೀರಾಮ್ನೊಂದಿಗೆ ಬೀಜ ಸಂಸ್ಕರಣೆಯನ್ನು ಬಳಸಬಹುದು. ಔರಿಯೋಫಂಜಿನ (ಶಿಲೀಂಧ್ರನಾಶಕ ಪ್ರತಿಜೀವಕ)ಮತ್ತು ಮಾಂಕೋಜೇಬಿನ ವಿವಿಧ ಸಂಯೋಜನೆಗಳು ರೋಗದತೀವ್ರತೆಯನ್ನು ಕಡಿಮೆಗೊಳಿಸುತ್ತದೆ ಮತ್ತು ಕೆಲವೊಮ್ಮೆ ಅನೇಕ ಅಕ್ಕಿಯ ತಳಿಗಳಲ್ಲಿ ಹೆಚ್ಚಾದ ಧಾನ್ಯದ ಇಳುವರಿಯನ್ನೂ ನೀಡುತ್ತದೆ. ಕೇವಲ ಥೀರಾಮ್ನೊಂದಿಗಿನ ಅಥವಾ ಇದರ ನಂತರ ಮತ್ತೊಂದು ಶಿಲೀಂಧ್ರನಾಶಕದೊಡನೆ ಮಣ್ಣಿನ ಸಂಸ್ಕರಣೆಗಳು, ಉಡ್ ಬಟ್ಟಾ ರೋಗದ ಸಂಭವಗಳನ್ನು ಕಡಿಮೆ ಮಾಡುವಲ್ಲಿ ಮತ್ತು ಅಕ್ಕಿಯ ಇಳುವರಿಯನ್ನು ಹೆಚ್ಚಿಸುವಲ್ಲಿ ಬೀಜ ಸಂಸ್ಕರಣೆಗಳಿಗಿಂತ ಉತ್ತಮವಾಗಿದೆ.

ಅದಕ್ಕೆ ಏನು ಕಾರಣ

ದಕ್ಷಿಣ ಭಾರತದ ಹಲವು ಭಾಗಗಳಲ್ಲಿ ತೀವ್ರ ಸ್ವರೂಪಗಳಲ್ಲಿ ಕಂಡುಬರುತ್ತದೆ. ಆರಂಭಿಕ ಮತ್ತು ಕೊನೆಯ ಬಿತ್ತನೆಯ ಬೆಳೆಗಳ ಮೇಲೆ ರೋಗದ ಸಂಭವವು ಕಡಿಮೆ ತೀವ್ರವಾಗಿರುತ್ತದೆ. ಬೀಜಗಳ ಅಥವಾ ಅಕ್ಕಿ ಎಲೆಗಳ ಮೇಲೆ ಶಿಲೀಂಧ್ರಗಳ ಮತ್ತು ನೆಡುವ ಮುಂಚೆ ಸುತ್ತಮುತ್ತಲಿನ ಇತರ ಹೋಸ್ಟಗಳ ಮೇಲೆ ಶಿಲೀಂಧ್ರಗಳ ಉಪಸ್ಥಿತಿ ಗೋಚರವಾಗುತ್ತದೆ. ಸೋಂಕಿತ ಶಿಲೀಂಧ್ರ ಬೀಜಕಗಳು ಸುಗ್ಗಿಯ ನಂತರದ ಉಳಿಕೆಗಳಲ್ಲಿ ಅಥವಾ ಗಾಳಿ ಅಥವಾ ನೀರಿನಿಂದ ಸಾಗಣೆಯ ಮೂಲಕವೂ ಬದುಕುಳಿಯುತ್ತವೆ. ಈ ಶಿಲೀಂಧ್ರವು ಇಸಾಚ್ನೆ ಎಲಿಗನ್ಸ್, ಸಿನಾಡಾನ್ ಡಕ್ಟಿಲೊನ್, ಪಿನ್ಸಿಟಮ್ ಎಸ್ಪಿ ಮತ್ತು ಎರಾಗ್ರೊಸ್ಟಿಸ್ ಟೆನ್ಯುವೊಫೋಲಿಯಾಗಗಳಂತಹ ಹುಲ್ಲುಗಳನ್ನೂ ಸಹ ಪೂರಕವಾದ ಹೋಸ್ಟಗಳಾಗಿ ಪಡೆದಿದೆ. ಬೆಚ್ಚಗಿನ ಉಷ್ಣತೆ ಮತ್ತು ಅಧಿಕ ಆರ್ದ್ರತೆಗಳಲ್ಲಿ ಇದು ಬೆಳೆಯುತ್ತದೆ. ಎಲ್ಲಾ ಸಸ್ಯದ ಹಂತಗಳಲ್ಲಿ, ಬಿತ್ತನೆ ಮತ್ತು ಸಸಿ ಬೆಳವಣಿಗೆಯ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಆದಾಗ್ಯೂ, ಹೂಗೊಂಚಲು ಹೊರಹೊಮ್ಮುವ ಸಮಯದಲ್ಲಿ ರೋಗಲಕ್ಷಣಗಳು ಮೊದಲು ಸ್ಪಷ್ಟವಾಗಿ ಕಾಣಿಸಿಕೊಳ್ಳಬಹುದು.


ಮುಂಜಾಗ್ರತಾ ಕ್ರಮಗಳು

  • ರೋಗ ಮುಕ್ತ ಬೀಜಗಳು ಮತ್ತು ನಿರೋಧಕ ಸಸ್ಯ ಪ್ರಭೇದಗಳನ್ನು ಬಳಸಿ.
  • ರೋಗವು ಗುರುತಿಸಲ್ಪಟ್ಟ ಜಾಗದಿಂದ ಬೀಜಗಳನ್ನು ಬಳಸಬೇಡಿ.
  • ಗದ್ದೆಯಲ್ಲಿ ರೋಗಲಕ್ಷಣವುಳ್ಳ ಪ್ಯಾನಿಕಲ್ಗಗಳಿಗಾಗಿ ಪರಿಶೀಲಿಸಿ ಮತ್ತು ಅವನ್ನು ತೆಗೆದುಹಾಕಿ.
  • ಆರಂಭಿಕ ಅಥವಾ ನಂತರದ ಅವಧಿಗಳಲ್ಲಿ ಬಿತ್ತನೆ ಮಾಡಿ.
  • ಗದ್ದೆಗಳಿಂದ ಅಥವಾ ಸುತ್ತಮುತ್ತಲಿನಿಂದ ಇರಬಹುದಾದ ಪೂರಕವಾದ ಹೋಸ್ಟ್ಗಳನ್ನು ತೆಗೆದುಹಾಕಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ