ಉದ್ದಿನ ಬೇಳೆ & ಹೆಸರು ಬೇಳೆ

ಉದ್ದಿನಬೇಳೆಯಲ್ಲಿ ತುಕ್ಕು ರೋಗ

Uromyces phaseoli

ಶಿಲೀಂಧ್ರ

ಸಂಕ್ಷಿಪ್ತವಾಗಿ

  • ಕೆಂಪುಮಿಶ್ರಿತ ಕಂದು ಬಣ್ಣದ ಸಣ್ಣ ದುಂಡಗಿನ ಗುಳ್ಳೆಗಳು ಎಲೆಗಳ ಕೆಳಭಾಗದಲ್ಲಿ ಕಾಣಿಸುತ್ತವೆ.
  • ನಂತರ ಈ ಚಿಕ್ಕ ಗುಳ್ಳೆಗಳೆಲ್ಲ ಜೊತೆಯಾಗಿ ದೊಡ್ಡದಾಗಿ ಎಲೆಯ ಮೇಲ್ಭಾಗದಲ್ಲಿ ಕಾಣಿಸುತ್ತವೆ.
  • ಗಾಢ ಕಂದು ಬಣ್ಣದ ರೇಖೆಗಳು ಋತುವಿನ ನಂತರದ ಭಾಗದಲ್ಲಿ ಕಾಣಿಸಿಕೊಳ್ಳುತ್ತವೆ.
  • ಎಲೆತೊಟ್ಟುಗಳು, ಬೀಜಕೋಶಗಳು ಮತ್ತು ಕಾಂಡದ ಮೇಲೆ ಸೋಂಕು ಕಂಡುಬರಬಹುದು.
  • ಎಲೆಗಳು ಒಣಗಿ, ಮುದುಡಿ ಉದುರಿಹೋಗುತ್ತವೆ.
  • ಇದು ಇಳುವರಿಯಲ್ಲಿ ನಷ್ಟಕ್ಕೆ ಕಾರಣವಾಗುತ್ತದೆ.

ಇವುಗಳಲ್ಲಿ ಸಹ ಕಾಣಬಹುದು


ಉದ್ದಿನ ಬೇಳೆ & ಹೆಸರು ಬೇಳೆ

ರೋಗಲಕ್ಷಣಗಳು

ಆರಂಭದಲ್ಲಿ ಕೆಂಪುಮಿಶ್ರಿತ ಕಂದು ಬಣ್ಣದ ಸಣ್ಣ ದುಂಡಗಿನ ಗುಳ್ಳೆಗಳು ಎಲೆಯ ಕೆಳಭಾಗದಲ್ಲಿ ಕಾಣಿಸುತ್ತವೆ. ಶಿಲೀಂಧ್ರಗಳ ಚುಕ್ಕೆಗಳ ನಡುವೆ ಈ ಗುಳ್ಳೆಗಳು ಕಂಡುಬರುತ್ತವೆ. ಈ ಗುಳ್ಳೆಗಳು ಮೊದಲು ಸಣ್ಣ ಗುಂಪುಗಳಲ್ಲಿ ಕಾಣಿಸಿಕೊಂಡರೂ, ನಂತರ ಎಲ್ಲವೂ ಜೊತೆಯಾಗಿ ಎಲೆಯ ದಳದ ದೊಡ್ಡ ಭಾಗವನ್ನು ಆಕ್ರಮಿಸಿಕೊಳ್ಳುತ್ತವೆ. ಇದಲ್ಲದೆ, ಗಾಢ ಕಂದು ಬಣ್ಣದ ರೇಖೆಗಳು ಋತುವಿನ ನಂತರದ ಭಾಗದಲ್ಲಿ ಕಾಣಿಸಿಕೊಳ್ಳುತ್ತವೆ. ಭಾರೀ ಸೋಂಕು ಎಲೆಯ ಮೇಲೆ ಪರಿಣಾಮ ಬೀರಬಹುದು, ಇದರಿಂದಾಗಿ ಎಲೆಗಳು ಗುಳ್ಳೆಗಳಿಂದ ಮುಚ್ಚಿಹೋಗುತ್ತವೆ. ಎಲೆಗಳು ಒಣಗಿ, ಮುದುಡುತ್ತವೆ ಮತ್ತು ಉದುರುತ್ತವೆ. ರೋಗದ ಈ ಹಂತದಲ್ಲಿ, ತೊಟ್ಟು, ಬೀಜಕೋಶ ಮತ್ತು ಕಾಂಡಗಳ ಮೇಲೆ ಸಹ ಪರಿಣಾಮ ಬೀರಬಹುದು. ಎಲೆಗಳುದುರುವುದರಿಂದ ಇಳುವರಿಯಲ್ಲಿ ತೀವ್ರ ನಷ್ಟವಾಗುತ್ತದೆ.

ಶಿಫಾರಸುಗಳು

ಜೈವಿಕ ನಿಯಂತ್ರಣ

ಸಾಲ್ವಿಯಾ ಅಫಿಷಿನಾಲಿಸ್ ಮತ್ತು ಪೊಟೆನ್ಟಿಲ್ಲಾ ಎರೆಕ್ಟಾ ಗಿಡಗಳ ಸಾರ ಸೋಂಕನ್ನು ಪತ್ತೆಹಚ್ಚಿದ ನಂತರ ಶಿಲಿಂಧ್ರ ಬೆಳವಣಿಗೆಗೆ ವಿರುದ್ಧವಾದ ರಕ್ಷಣಾತ್ಮಕ ಕ್ರಮವಾಗಿ ಉತ್ತಮ ಪರಿಣಾಮವನ್ನು ನೀಡುತ್ತವೆ.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದರೆ, ಸಾವಯವ ಚಿಕಿತ್ಸೆಗಳೊಂದಿಗೆ ನಿರ್ಬಂಧಕ ಮಾರ್ಗಗಳನ್ನು ಸೇರಿಸಿ ಸಮಗ್ರ ವಿಧಾನವನ್ನು ಮೊದಲು ಪರಿಗಣಿಸಿ. ಸೋಂಕು ಪತ್ತೆಯಾಗುವುದು ತಡವಾದರೆ ರಾಸಾಯನಿಕ ಚಿಕಿತ್ಸೆ ಕಾರ್ಯಸಾಧುವಲ್ಲ. ಶಿಲೀಂಧ್ರನಾಶಕಗಳ ಅಗತ್ಯವಿದ್ದರೆ, ಮನ್ಕೊಜೆಬ್, ಕಾರ್ಬೆಂಡಜೈಮ್, ಪ್ರೊಪಿಕಾನಜೋಲ್, ತಾಮ್ರ ಅಥವಾ ಸಲ್ಫರ್ ಕಾಂಪೌಂಡ್ಗಳಿರುವ ಉತ್ಪನ್ನಗಳನ್ನು ಎಲೆಗಳ ಮೇಳೆ ಸಿಂಪಡಿಸಬಹುದು (ಸಾಮಾನ್ಯವಾಗಿ 3ಗ್ರಾಂ/ಲೀ). ರೋಗ ಪತ್ತೆಯಾದ ಕೂಡಲೇ ಚಿಕಿತ್ಸೆ ಶುರು ಮಾಡಿ ಹಾಗೂ 15 ದಿನಗಳ ನಂತರ ಪುನರಾವರ್ತಿಸಿ.

ಅದಕ್ಕೆ ಏನು ಕಾರಣ

ಮಣ್ಣಿನಲ್ಲಿರುವ ಬೆಳೆಯ ಉಳಿಕೆಗಳಲ್ಲಿ ಅಥವಾ ಪರ್ಯಾಯ ಆಶ್ರಯದಾತ ಗಿಡಗಳಲ್ಲಿ ರೋಗಕಾರಕವು ಉಳಿದುಕೊಂಡಿರುತ್ತದೆ. ಮಣ್ಣಿನಿಂದ ಗಿಡದ ತಳಭಾಗದಲ್ಲಿರುವ ಬೆಳೆದ ಎಲೆಗಳ ಮೇಲೆ ಬೀಜಕಗಳು ರಾಚುವ ಮೂಲಕ ಪ್ರಾಥಮಿಕ ಸೋಂಕು ತಗುಲುತ್ತದೆ. ಗಿಡದಿಂದ ಗಿಡಕ್ಕೆ ಗಾಳಿಯ ಮೂಲಕವೂ ಹರಡುತ್ತದೆ. ಬೆಚ್ಚಗಿನ ತಾಪಮಾನ (21 ರಿಂದ 26 °C), ತೇವ ಹೆಚ್ಚಿರುವ ಮತ್ತು ಮೋಡ ಮುಸುಕಿದ ಹವಾಮಾನದ ಜೊತೆಗೆ ರಾತ್ರಿಯ ಹೊತ್ತು ಮಂಜು ಇದ್ದರೆ ಸೋಂಕು ಶುರುವಾಗಲು ಮತ್ತು ಹರಡಲು ಅನುಕೂಲಕರ.


ಮುಂಜಾಗ್ರತಾ ಕ್ರಮಗಳು

  • ಆರೋಗ್ಯಕರ ಸಸಿಗಳಿಂದ ಪಡೆದ ಬೀಜಗಳನ್ನು ಅಥವಾ ಪ್ರಮಾಣೀಕೃತ ರೋಗ-ಮುಕ್ತ ಬೀಜಗಳನ್ನು ಬಳಸಿ.
  • ನಿಮ್ಮ ಪ್ರದೇಶದಲ್ಲಿ ಲಭ್ಯವಿದ್ದರೆ ಸಹಿಷ್ಣು ಅಥವಾ ನಿರೋಧಕ ಪ್ರಭೇದಗಳನ್ನು ಬಳಸಿ.
  • ನಿಮ್ಮ ಹೊಲದ ಆಸುಪಾಸಿನಲ್ಲಿ ಆಶ್ರಯದಾತ ಗಿಡಗಳನ್ನು ನೆಡದಿರಿ.
  • ನಿಮ್ಮ ತೋಟದಿಂದ ಪರ್ಯಾಯ ಆಶ್ರಯದಾತ ಗಿಡಗಳನ್ನು ಮತ್ತು ಕಳೆಗಳನ್ನು ತೆಗೆದುಹಾಕಿ.
  • ಸೋಂಕಿತ ಗಿಡಗಳ ಭಾಗಗಳನ್ನು ಪರಿಶೀಲಿಸಿ ತೆಗೆದುಹಾಕಿ.
  • ಪ್ರತಿ ಮೂರು ಅಥವಾ ನಾಲ್ಕು ವರ್ಷಗಳಿಗೊಮ್ಮೆ ಸೋಂಕಿಗೆ ಆಶ್ರಯ ನೀಡದ ಬೆಳೆಗಳೊಂದಿಗೆ ಸರದಿ ಬೆಳೆ ಮಾಡಿ.
  • ನೆಲವನ್ನು ಆಳಕ್ಕೆ ಉತ್ತು, ಗಿಡದ ಉಳಿಕೆಗಳನ್ನು ಸುಡುವ ಮೂಲಕ ಅಥವಾ ಉಳುವ ಮೂಲಕ ನಾಶ ಮಾಡಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ