ಉದ್ದಿನ ಬೇಳೆ & ಹೆಸರು ಬೇಳೆ

ಉದ್ದಿನಬೇಳೆಯ ಆಂಥ್ರಾಕ್ನೋಸ್

Colletotrichum lindemuthianum

ಶಿಲೀಂಧ್ರ

ಸಂಕ್ಷಿಪ್ತವಾಗಿ

  • ಎಲೆಗಳು, ಕಾಂಡ, ತೊಟ್ಟುಗಳು ಅಥವಾ ಕಾಯಿಗಳಲ್ಲಿ (ಬೀಜಕೋಶ) ಸಣ್ಣ, ಅನಿಯಮಿತ, ಹಳದಿ ಬಣ್ಣದಿಂದ ಹಿಡಿದು ಕಂದು ಬಣ್ಣದಲ್ಲಿರಬಹುದಾದ ನೀರಿನಲ್ಲಿ ನೆನೆಸಿದಂತಹ ಚುಕ್ಕೆಗಳು ಕಾಣಿಸಿಕೊಳ್ಳುತ್ತವೆ.
  • ಚುಕ್ಕೆಗಳೆಲ್ಲ ಜೊತೆಯಾಗಿ ಗುಳಿ ಬಿದ್ದ ಗಾಯಗಳಾಗುತ್ತವೆ.
  • ಈ ಗಾಯಗಳ ಮಧ್ಯಭಾಗ ಗಾಢ ಬಣ್ಣದಲ್ಲಿದ್ದು ಹಳದಿ, ಕಿತ್ತಳೆ ಅಥವಾ ಕೆಂಪು ಬಣ್ಣದ ಅಂಚು ಇರುತ್ತದೆ.
  • ಕಾಂಡ ಮತ್ತು ತೊಟ್ಟುಗಳ ಮೇಲೆ ಕ್ಯಾಂಕರ್ (ಹುಣ್ಣಿನಂತಹ ಗಾಯ) ಮೂಡಿ ಕೊನೆಗೆ ಎಲೆ ಉದುರಿ ಹೋಗುತ್ತದೆ.

ಇವುಗಳಲ್ಲಿ ಸಹ ಕಾಣಬಹುದು


ಉದ್ದಿನ ಬೇಳೆ & ಹೆಸರು ಬೇಳೆ

ರೋಗಲಕ್ಷಣಗಳು

ಸೋಂಕು ಗಿಡದ ಬೆಳವಣಿಗೆಯ ಯಾವುದೇ ಹಂತದಲ್ಲಿ ತಗುಲಬಹುದು ಮತ್ತು ಅದು ಎಲೆಗಳು, ಕಾಂಡಗಳು, ತೊಟ್ಟುಗಳು ಮತ್ತು ಬೀಜಕೋಶಗಳಲ್ಲಿ ಗೋಚರಿಸುತ್ತದೆ. ಮೊಳಕೆಯೊಡೆದ ನಂತರ ಸೋಂಕು ತಗುಲಿದಲ್ಲಿ ಅಥವಾ ಬೀಜಗಳಲ್ಲೇ ಸೋಂಕು ಇದ್ದಲ್ಲಿ, ಮೊಳಕೆಯಲ್ಲಿ ತುಕ್ಕು ಹಿಡಿದಂತೆ ಕಾಣುವ ಸಣ್ಣ ಚುಕ್ಕೆಗಳು ಮೂಡಿ, ಅವು ನಿಧಾನವಾಗಿ ದೊಡ್ಡದಾಗಿ ಮೊಟ್ಟೆಯಾಕಾರದ ಚುಕ್ಕೆಗಳಾಗುತ್ತವೆ. ಕೊನೆಯಲ್ಲಿ ಸೋಂಕು ಹರಡುತ್ತದೆ. ಬೆಳೆದ ಗಿಡಗಳ ಮೇಲೆ, ಶುರುವಿನಲ್ಲಿ ಗಾಢ ಕಂದು ಅಥವಾ ಕಪ್ಪು ಬಣ್ಣದ ನೀರು-ನೆನೆಸಿದಂತಹ ಚುಕ್ಕೆಗಳು ಸಾಮಾನ್ಯವಾಗಿ ಎಲೆಯ ಕೆಳಭಾಗದಲ್ಲಿ ಅಥವಾ ತೊಟ್ಟುಗಳಲ್ಲಿ ಕಾಣಿಸಿಕೊಳ್ಳುತ್ತವೆ. ಕಾಲಾನಂತರದಲ್ಲಿ, ಈ ಚುಕ್ಕೆಗಳು ಗುಳಿಬಿದ್ದು ಗಾಯವಾಗುತ್ತದೆ. ಈ ಗಾಯಗಳ ಮಧ್ಯಭಾಗ ಗಾಢ ಬಣ್ಣದಲ್ಲಿದ್ದು ಹಳದಿ, ಕಿತ್ತಳೆ ಅಥವಾ ಕೆಂಪು ಬಣ್ಣದ ಅಂಚು ಇರುತ್ತದೆ. ಬೀಜಕೋಶಗಳ ಮೇಲೆ ತುಕ್ಕು ಬಣ್ಣದ ಗಾಯಗಳಾಗಿ, ಅವು ಮುದುಡಿ ಒಣಗಬಹುದು. ಸೋಂಕು ಹೆಚ್ಚಿದ್ದರೆ, ತೊಂದರೆಗೊಳಗಾದ ಭಾಗಗಳು ಸೊರಗಿ ಜೋತು ಬೀಳುತ್ತವೆ. ಕಾಂಡಗಳು ಮತ್ತು ತೊಟ್ಟುಗಳ ಮೇಲೆ ಕ್ಯಾಂಕರ್ಗಳ ಬೆಳವಣಿಗೆಯಾಗಿ ಸಾಮಾನ್ಯವಾಗಿ ಎಲೆ ಉದುರಿ ಹೋಗುತ್ತದೆ.

ಶಿಫಾರಸುಗಳು

ಜೈವಿಕ ನಿಯಂತ್ರಣ

ಸೋಂಕನ್ನು ನಿಯಂತ್ರಿಸಲು ಸಾವಯವ ಪದಾರ್ಥಗಳು ಸಹಾಯ ಮಾಡಬಹುದು. ಬೀಜಗಳನ್ನು ಶಿಲೀಂಧ್ರಗಳಾದ ಟ್ರೈಕೋಡರ್ಮಾ ಹಾರ್ಜಿಯಂ ಮತ್ತು ಬ್ಯಾಕ್ಟೀರಿಯಾ ಸ್ಯೂಡೋಮೊನಸ್ ಫ್ಲೂರಸೀನ್ಗಳಿಂದ ಸಂಸ್ಕರಿಸಿದರೆ ಅವು ಈ ಶಿಲೀಂಧ್ರಕ್ಕೆ ಪ್ರತಿರೋಧ ಒಡ್ಡುತ್ತವೆ. 3ಗ್ರಾಂ/ಲೀ ತಾಮ್ರ ಆಕ್ಸಿಕ್ಲೋರೈಡ್ ಆಧಾರಿತ ಶಿಲೀಂಧ್ರನಾಶಕಗಳನ್ನು 15 ದಿನಗಳ ಮಧ್ಯಂತರದಲ್ಲಿ ಬಳಸಿ.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದರೆ, ಸಾವಯವ ಚಿಕಿತ್ಸೆಗಳೊಂದಿಗೆ ನಿರ್ಬಂಧಕ ಮಾರ್ಗಗಳನ್ನು ಸೇರಿಸಿ ಸಮಗ್ರ ವಿಧಾನವನ್ನು ಮೊದಲು ಪರಿಗಣಿಸಿ. ಹವಾಮಾನ ಪರಿಸ್ಥಿತಿಗಳಿಗೆ ಅನುಗುಣವಾಗಿ ಈ ರೋಗಕ್ಕೆ ರಾಸಾಯನಿಕ ಚಿಕಿತ್ಸೆ ಆರ್ಥಿಕವಾಗಿ ಕಾರ್ಯಸಾಧುವಲ್ಲದೆ ಇರಬಹುದು. ಬೀಜಗಳನ್ನು ಸರಿಯಾದ ಶಿಲೀಂಧ್ರನಾಶಕಗಳೊಂದಿಗೆ ನೆನೆಸಿ, ಚಿಕಿತ್ಸೆ ಮಾಡಬಹುದು, ಉದಾಹರಣೆಗೆ ಥಿರಮ್ 80% WP @ 2 ಗ್ರಾಂ / ಲೀ ಅಥವಾ ಕ್ಯಾಪ್ಟನ್ 75WP @ 2.5 ಗ್ರಾಂ / ಲೀ ನೀರು. ಶಿಲೀಂಧ್ರನಾಶಕ ದ್ರವೌಷಧಗಳಾದ ಪೋಲ್ಪೇಟ್, ಮನ್ಕೊಜೆಬ್, ಥಿಯೊಫನೇಟ್ ಮೀಥೈಲ್ (0.1%) ಅಥವಾ ತಾಮ್ರ ಆಕ್ಸಿಕ್ಲೋರೈಡ್ 3 ಗ್ರಾಂ /ಲೀ ಗಳನ್ನು ಆಧರಿಸಿದ ಉತ್ಪನ್ನಗಳನ್ನು 15 ದಿನಗಳ ಮಧ್ಯಂತರದಲ್ಲಿ ಬಳಸಬಹುದು.

ಅದಕ್ಕೆ ಏನು ಕಾರಣ

ಮಣ್ಣಿನಲ್ಲಿ, ಸೋಂಕಿತ ಬೀಜಗಳಲ್ಲಿ ಮತ್ತು ಗಿಡದ ಉಳಿಕೆಗಳ ಮೇಲೆ ಕೊಲೆಟೊಟ್ರಿಚಮ್ ಲಿಂಡೆಮಥಿಯನಮ್ ಶಿಲೀಂಧ್ರವು ಉಳಿದುಕೊಂಡಿರುತ್ತದೆ. ಇದು ಪರ್ಯಾಯ ಆಶ್ರಯದಾತ ಗಿಡಗಳಲ್ಲೂ ಚಳಿಗಾಲವನ್ನು ಕಳೆಯುತ್ತದೆ. ಎಲೆಗಳು ಮಳೆ, ಮಂಜು ಅಥವಾ ತೋಟದ ಕೆಲಸದ ಸಮಯದಲ್ಲಿ ಒದ್ದೆಯಾದಾಗ ಬೆಳೆಯುಚ ಸಸಿಗಳಿಗೆ ಶಿಲೀಂಧ್ರದ ಬೀಜಕಗಳು ಹರಡುತ್ತವೆ. ಹಾಗಾಗಿ ಮಳೆ ಅಥವಾ ಮಂಜಿನ ಕಾರಣದಿಂದ ಎಲೆ ಒದ್ದೆಯಿದ್ದಾಗ ತೋಟದ ಕೆಲಸ (ಕೆಲಸಗಾರರು, ಚಿಕಿತ್ಸೆಗಳು...ಇತ್ಯಾದಿ) ಮಾಡದೇ ಇರುವುದು ಮುಖ್ಯ. ತಣ್ಣಗಿನ ತಾಪಮಾನದಿಂದ ಹಿಡಿದು ಮಧ್ಯಮ ತಾಪಮಾನವು (13-21 °C) ಮತ್ತು ಆಗಾಗ ಬೀಳುವ ಮಳೆ ಕೂಡ ಶಿಲೀಂಧ್ರದ ಬೆಳವಣಿಗೆ ಹಾಗೂ ಪ್ರಸರಣಕ್ಕೆ ಸಹಕಾರಿಯಾಗುತ್ತದೆ, ಇದರಿಂದಾಗಿ ಸೋಂಕು ಹೆಚ್ಚುವ ಸಂಭಾವ್ಯತೆ ಮತ್ತು ತೀವ್ರತೆ ಕಂಡುಬರುತ್ತದೆ.


ಮುಂಜಾಗ್ರತಾ ಕ್ರಮಗಳು

  • ಪ್ರಮಾಣೀಕೃತ ರೋಗಕಾರಕ-ಮುಕ್ತ ಬೀಜ ವಸ್ತುಗಳನ್ನು ಬಳಸಿ.
  • ರೋಗವನ್ನು ಚೇತರಿಸಿಕೊಳ್ಳುವ ಸಹಿಷ್ಣು ಅಥವಾ ನಿರೋಧಕ ಪ್ರಭೇದಗಳನ್ನು ನೆಡಿ.
  • ರೋಗಗಳ ಯಾವುದೇ ಚಿಹ್ನೆಗಳನ್ನು ಗುರುತಿಸಲು ನಿಮ್ಮ ಸಸ್ಯಗಳು ಅಥವಾ ಹೊಲವನ್ನು ಪರಿಶೀಲಿಸಿ.
  • ನಿಮ್ಮ ಕೃಷಿ ಪ್ರದೇಶದ ಬಳಿ ಕಳೆ ಮಿತಿಮೀರಿ ಬೆಳಯದಂತೆ ನೋಡಿಕೊಳ್ಳಿ (ಕಳೆಯು ಪರ್ಯಾಯ ಹೋಸ್ಟ್ ಆಗಿ ಕಾರ್ಯನಿರ್ವಹಿಸುತ್ತದೆ).
  • ಹೊಲದಲ್ಲಿ ನಿರ್ಮಲೀಕರಣವನ್ನು ಕಾಪಡಿಕೊಳ್ಳಿ.
  • ಎಲೆಗಳು ಒದ್ದೆಯಾಗಿರುವಾಗ ಹೊಲಗಳಲ್ಲಿ ಕೆಲಸ ಮಾಡಬೇಡಿ, ಮತ್ತು ನಿಮ್ಮ ಉಪಕರಣಗಳು ಮತ್ತು ಸಾಧನಗಳನ್ನು ಸ್ವಚ್ಛಗೊಳಿಸಿ.
  • ಪ್ರತಿ ಮೂರು ವರ್ಷಗಳಿಗೊಮ್ಮೆ ರೋಗಕ್ಕೆ ಆಶ್ರಯ ನೀಡದ ಬೆಳೆಗಳೊಂದಿಗೆ ಸರದಿ ಬೆಳೆ ಮಾಡಲು ಸೂಚಿಸಲಾಗುತ್ತದೆ.
  • ಕೊಯ್ಲಿನ ನಂತರ ಸೋಂಕಿತ ಸಸ್ಯದ ಉಳಿಕೆಗಳನ್ನು ಹೂತುಹಾಕಿ ಅಥವಾ ತೆಗೆದುಹಾಕಿ ಮತ್ತು ಅದನ್ನು ಸುಟ್ಟುಬಿಡಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ