ಮೆಕ್ಕೆ ಜೋಳ

ಐಸ್ಪಾಟ್ ಆಫ್ ಮೇಜ್

Kabatiella zeae

ಶಿಲೀಂಧ್ರ

ಸಂಕ್ಷಿಪ್ತವಾಗಿ

  • ಕೆಳಗಿನ ಎಲೆಗಳಲ್ಲಿ ಅತೀ ಸಣ್ಣದಾದ, ನೀರು ತುಂಬಿದ, ಗುಂಡಾಗಿರುವ ಗಾಯಗಳು ಕಂಡುಬರುತ್ತವೆ.
  • ಗಾಯಗಳು "ಐಸ್ಪಾಟ್" ಗಳಾಗಿ ಬೆಳೆಯುತ್ತವೆ, ಇವುಗಳಿಗೆ ಒಂದು ಹಳದಿ ಕಂದು ಬಣ್ಣದ ನಡು ಮತ್ತು ಗಾಢವಾದ ಕಂದು ಬಣ್ಣದ ಅಂಚು ಇರುತ್ತದೆ.
  • ಅವು ನಂತರ ಒಂದುಗೂಡಿಕೊಂಡು ಕ್ಲೋರೋಟಿಕ್ ಅಥವಾ ನೆಕ್ರೋಟಿಕ್ ಅಂಗಾಂಶಗಳ ತೇಪೆಯನ್ನು ರೂಪಿಸುತ್ತವೆ.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ಮೆಕ್ಕೆ ಜೋಳ

ರೋಗಲಕ್ಷಣಗಳು

ಕೆಳಗಿನ ಎಲೆಗಳಲ್ಲಿ ಅತೀ ಸಣ್ಣದಾದ, ನೀರು ತುಂಬಿದ, ಗುಂಡಾಗಿರುವ ಗಾಯಗಳು ಕಂಡುಬರುತ್ತವೆ. ಗಾಯಗಳು "ಐಸ್ಪಾಟ್" ಗಳಾಗಿ ಬೆಳೆಯುತ್ತವೆ, ಇವುಗಳಿಗೆ ಒಂದು ಹಳದಿ ಕಂದು ಬಣ್ಣದ ನಡು ಮತ್ತು ಗಾಢವಾದ ಕಂದು ಬಣ್ಣದ ಅಂಚು ಇರುತ್ತದೆ ಮತ್ತು ದೊಡ್ಡ ಹಳದಿ "ಹಾಲೋ" ಇರುತ್ತದೆ. ಅವು ನಂತರ ಒಂದುಗೂಡಿಕೊಂಡು ಕ್ಲೋರೋಟಿಕ್ ಅಥವಾ ನೆಕ್ರೋಟಿಕ್ ಅಂಗಾಂಶಗಳ ತೇಪೆಯನ್ನು ರೂಪಿಸುತ್ತವೆ. ಈ ಗಾಯಗಳು ಹಳೆಯ ಎಲೆಗಳ ಮೇಲೆ ಸಾಮಾನ್ಯವಾಗಿ ಕಂಡುಬರುತ್ತವೆ, ಆದರೆ ಪೊರೆಗಳು ಮತ್ತು ಸಿಪ್ಪೆಗಳ ಮೇಲೆ ಕೂಡಾ ಇದನ್ನು ಗಮನಿಸಬಹುದು.

ಶಿಫಾರಸುಗಳು

ಜೈವಿಕ ನಿಯಂತ್ರಣ

ಕ್ಷಮಿಸಿ, ಕಾಬಾಟಿಲ್ಲ ಜ಼ೇ ವಿರುದ್ಧ ಯಾವುದೇ ಪರ್ಯಾಯ ಚಿಕಿತ್ಸೆಯ ಬಗ್ಗೆ ನಮಗೆ ಗೊತ್ತಿಲ್ಲ. ಈ ರೋಗದ ವಿರುದ್ಧ ಹೋರಾಡಲು ಸಹಾಯವಾಗುವ ಯಾವುದಾದರೂ ವಿಧ ನಿಮಗೆ ತಿಳಿದಿದ್ದರೆ ದಯವಿಟ್ಟು ನಮಗೆ ತಿಳಿಸಿ. ನಿಮ್ಮ ಪ್ರತಿಕ್ರಿಯೆಯನ್ನು ನಾವು ಎದುರು ನೋಡುತ್ತೇವೆ.

ರಾಸಾಯನಿಕ ನಿಯಂತ್ರಣ

ಯಾವಾಗಲೂ ಜೈವಿಕ ಚಿಕಿತ್ಸೆಗಳು ಲಭ್ಯವಿದ್ದರೆ ಅದರ ಜೊತೆ ನಿರೋಧಕ ಕ್ರಮಗಳನ್ನು ಒಟ್ಟುಗೂಡಿಸಿ ಸಮಗ್ರವಾದ ಮಾರ್ಗವನ್ನು ಪರಿಗಣಿಸಿ. ಶಿಲೀಂಧ್ರನಾಶಕ ಸಂಸ್ಕರಣೆಯ ಸಾಧಕ ಬಾಧಕಗಳನ್ನು ಇಳುವರಿಯ ಸಂಭಾವ್ಯತೆ, ಬೆಳೆ ಮೌಲ್ಯ, ಮತ್ತು ಶಿಲೀಂಧ್ರನಾಶಕಗಳ ವೆಚ್ಚದ ಆಧಾರದ ಮೇಲೆ ಎಚ್ಚರಿಕೆಯಿಂದ ಉಪಯೋಗಿಸಿ. ಶಿಲೀಂಧ್ರನಾಶಕ ಸಂಸ್ಕರಣೆಗಳಲ್ಲಿ ಮನ್ಕೊಜೆಬ್, ಪ್ರೊಪಿಕಾನಜೋಲ್ ಮತ್ತು ಕ್ಲೋರೊಥಲೋನಿಲ್ ಸೇರಿವೆ. ಈ ಸಂಯುಕ್ತಗಳೊಂದಿಗೆ ಸಹ ಬೀಜ ಸಂಸ್ಕರಣೆಯನ್ನು ಪರಿಗಣಿಸಬಹುದು.

ಅದಕ್ಕೆ ಏನು ಕಾರಣ

ಶಿಲೀಂಧ್ರವು ಮಣ್ಣಿನ ಮೇಲಿರುವ ಜೋಳದ ಉಳಿಕೆಗಳಲ್ಲಿ ಬದುಕುತ್ತದೆ ಮತ್ತು ಕೆಲವೊಮ್ಮೆ ಅವುಗಳನ್ನು ಬೀಜಗಳಲ್ಲೂ ಕಾಣಬಹುದು. ವಸಂತ ಋತುವಿನಲ್ಲಿ, ಅವು ಬೀಜಕಗಳನ್ನು ಉತ್ಪಾದಿಸಲು ಪ್ರಾರಂಭಮಾಡುತ್ತವೆ ಮತ್ತು ಈ ಬೀಜಕಗಳು ಗಾಳಿ ಅಥವಾ ಮಳೆ ಹನಿಯಿಂದ ಹೊಸ ಬೆಳೆಗಳಿಗೆ ಹರಡುತ್ತವೆ. ಎರಡನೆಯ ಸೋಂಕಿನಲ್ಲಿ ಈ ಬೀಜಕಗಳು ಗಾಳಿ ಮತ್ತು ಮಳೆ ಹನಿಗಳ ಮೂಲಕ ಸಸ್ಯದಿಂದ ಸಸ್ಯಕ್ಕೆ ಹರಡುತ್ತವೆ. ಎಲೆಯ ಆರ್ದ್ರತೆ, ತಂಪಾದ ತಾಪಮಾನ, ಆಗಾಗ್ಗೆ ಬರುವ ಮಳೆ ಅಥವಾ ಇಬ್ಬನಿಗಳು ರೋಗವು ಹರಡಲು ಸೂಕ್ತ ಪರಿಸ್ಥಿತಿಗಳು. ಮತ್ತೊಂದೆಡೆ, ಉಷ್ಣ ಮತ್ತು ಶುಷ್ಕ ವಾತಾವರಣವು ಅದರ ಪ್ರಗತಿಯನ್ನು ನಿಧಾನಗೊಳಿಸಲು ಸಹಾಯ ಮಾಡುತ್ತದೆ. ಏಕ ಬೇಸಾಯ ಮತ್ತು ಕಡಿಮೆ ಉಳುಮೆ ಮಾಡುವ ಅಭ್ಯಾಸಗಳು ಶಿಲೀಂಧ್ರದ ಬೆಳವಣಿಗೆಗೆ ಅನುಕೂಲಕರವಾಗಿರುತ್ತದೆ. ಹೂಬಿಡುವ ಅಥವಾ ಜೋಳದ ಪರಿಪಕ್ವತೆಯ ಹಂತಗಳಲ್ಲಿ ಶಿಲೀಂಧ್ರವು ಸಸ್ಯದ ಮೇಲಿನ ಭಾಗಗಳಿಗೆ ಹರಡಿದರೆ ಅದು ಸಸ್ಯದ ಉತ್ಪಾದಕತೆ ಮತ್ತು ಇಳುವರಿಯನ್ನು ಕಡಿಮೆ ಮಾಡುತ್ತದೆ.


ಮುಂಜಾಗ್ರತಾ ಕ್ರಮಗಳು

  • ನಿರೋಧಕ ಅಥವಾ ಸಹಿಷ್ಣು ಪ್ರಭೇದಗಳನ್ನು ನೆಡಿ.
  • ಕೊಯ್ಲಿನ ನಂತರ ಉಳುಮೆ ಮಾಡಿ ಸಸ್ಯದ ಉಳಿಕೆಗಳನ್ನು ಹೂತುಹಾಕಿ.
  • 2 ವರ್ಷಗಳು ಅಥವಾ ಅದಕ್ಕಿಂತ ಹೆಚ್ಚಿನ ಕಾಲ ಹೋಸ್ಟ್ ಅಲ್ಲದ ಸಸ್ಯಗಳೊಂದಿಗೆ ಸರದಿ ಬೆಳೆ ಮಾಡಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ