Rhizoctonia solani
ಶಿಲೀಂಧ್ರ
ಸಸ್ಯಕ ಹಂತದ ಕೊನೆಯಲ್ಲಿ ಈ ಸೋಂಕು ಸಾಮಾನ್ಯವಾಗಿ ಕಂಡುಬರುತ್ತದೆ. ಆರಂಭದಲ್ಲಿ, ವೃತ್ತಾಕಾರದ ಅಥವಾ ಅನಿಯಮಿತ ಹಸಿರು ನೀರು-ನೆನೆಸಿದ ಕಲೆಗಳು ಹಳೆಯ ಎಲೆಗಳ ಮೇಲೆ, ಕೆಲವೊಮ್ಮೆ ಪ್ರತ್ಯೇಕ ಎಲೆಗಳ ಮೇಲೆ ಕಾಣಿಸುತ್ತವೆ, ಮತ್ತು ಅವಕ್ಕೆ ಕೆಂಪು-ಕಂದು ಬಣ್ಣದ ಅಂಚಿರುತ್ತದೆ. ರೋಗದ ನಂತರದ ಹಂತಗಳಲ್ಲಿ, ಗಾಯಗಳು ಕಂದು ಅಥವಾ ಹಳದಿ-ಕಂದು ಬಣ್ಣಕ್ಕೆ ತಿರುಗುತ್ತವೆ, ಮತ್ತು ಕಲೆಗಳು ತೊಟ್ಟುಗಳು, ಕಾಂಡಗಳು ಮತ್ತು ಎಳೆ ಬೀಜಕೋಶಗಳಲ್ಲಿ ಕಾಣಿಸಿಕೊಳ್ಳುತ್ತವೆ. ಕಾಂಡಗಳು ಮತ್ತು ತೊಟ್ಟುಗಳ ಮೇಲೆ ಕಂದು ಬಣ್ಣದ ಊತಗಳು ಬೆಳೆಯುತ್ತವೆ. ಹತ್ತಿ ರೀತಿಯ ಶಿಲೀಂಧ್ರಗಳ ಬೆಳವಣಿಗೆಯ ಕಾರಣದಿಂದ ಎಲೆಗಳು ಒಂದಕ್ಕೊಂದು ಅಂಟಿಕೊಳ್ಳುವುದೂ ಸಹ ಸಾಮಾನ್ಯವಾಗಿದೆ. ತೀವ್ರವಾದ ಸೋಂಕುಗಳು ಎಲೆ ಮತ್ತು ಬೀಜಕೋಶಗಳ ರೋಗ ಮತ್ತು ವಿಪರ್ಣನವನ್ನು ಉಂಟುಮಾಡುತ್ತವೆ. ಸಸ್ಯಕ ಹಂತದಲ್ಲಿ ತಡವಾಗಿ ಸೋಂಕು ಹೆಚ್ಚಾಗಿ ಕಂಡುಬರುತ್ತದೆ.
ಜೈವಿಕ ಏಜೆಂಟ್ ಗಳು, ಸಸ್ಯದ ಸಾರಗಳು ಮತ್ತು ಸಾರಭೂತ ತೈಲಗಳು ಸೋಂಕನ್ನು ನಿಯಂತ್ರಿಸಲು ಸಹಾಯ ಮಾಡಬಹುದು. ಪರಾವಲಂಬಿ ಶಿಲೀಂಧ್ರ ಟ್ರೈಕೋಡರ್ಮಾ ಹಾರ್ಜಿಯಂಮ್ ರೈಜೊಕ್ಟೊನಿಯಾ ಏರಿಯಲ್ ಬ್ಲೈಟ್ನೊಂದಿಗೆ ಸ್ಪರ್ಧಿಸುತ್ತದೆ. ಈರುಳ್ಳಿ, ಬೆಳ್ಳುಳ್ಳಿ ಮತ್ತು ಅರಿಶಿನ ಸಸ್ಯದ ಸಾರಗಳು ದಕ್ಷತೆಯ ಈ ಕ್ರಮದಲ್ಲಿ ಶಿಲೀಂಧ್ರದ ಬೆಳವಣಿಗೆಯನ್ನು ಕಡಿಮೆಮಾಡುತ್ತವೆ. ಮೆಂಥಾ, ಸಿಟ್ರೋನೆಲ್ಲಾ, ಪುದೀನಾ, ಪಾಲ್ಮರೋಸಾ ಮತ್ತು ಜೆರೇನಿಯಂಗಳ ಸಾರಭೂತ ತೈಲಗಳು ಸೋಂಕನ್ನು ತಡೆಗಟ್ಟುತ್ತವೆ.
ಯಾವಾಗಲೂ ಜೈವಿಕ ಚಿಕಿತ್ಸೆಗಳು ಲಭ್ಯವಿದ್ದರೆ ಅದರ ಜೊತೆ ನಿರೋಧಕ ಕ್ರಮಗಳನ್ನು ಒಟ್ಟುಗೂಡಿಸಿ ಸಮಗ್ರವಾದ ಮಾರ್ಗವನ್ನು ಪರಿಗಣಿಸಿ. ಶಿಲೀಂಧ್ರನಾಶಕಗಳು ಅಗತ್ಯವಿದ್ದರೆ, ಪಿರಕ್ಲಾಸ್ಟ್ರೊಬಿನ್ ಜೊತೆಗೆ ಫ್ಲುಕ್ಸಪೈರಾಕ್ಸಡ್ ಅನ್ನು ಒಳಗೊಂಡಿರುವ ಉತ್ಪನ್ನಗಳನ್ನು ಸಿಂಪಡಿಸಿ. ಶಿಲೀಂಧ್ರನಾಶಕಗಳನ್ನು ಒಂದು ಋತುವಿನಲ್ಲಿ ಎರಡು ಬಾರಿಗಿಂತ ಹೆಚ್ಚಾಗಿ ಬಳಸಬೇಡಿ. ಕೊಯ್ಲು ಮಾಡಲು 21 ದಿನಗಳಿಗಿಂತ ಕಡಿಮೆ ಸಮಯವಿದ್ದರೆ ಸಂಸ್ಕರಣೆ ಪ್ರಾರಂಭಿಸಬೇಡಿ.
ರೈಜೊಕ್ಟೊನಿಯಾ ಸೊಲಾನಿ ಎಂಬ ಶಿಲೀಂಧ್ರವು ಮಣ್ಣಿನಲ್ಲಿ ಅಥವಾ ಸಸ್ಯದ ಉಳಿಕೆಗಳ ಮೇಲೆ ಬದುಕುತ್ತದೆ. ಇದು ಕಳೆಗಳು ಮುಂತಾದ ಪರ್ಯಾಯ ಹೋಸ್ಟ್ ಗಳಲ್ಲಿ ಚಳಿಗಾಲವನ್ನು ಕಳೆಯುತ್ತದೆ. ದೀರ್ಘಕಾಲದ ಬೆಚ್ಚಗಿನ ತಾಪಮಾನಗಳು (25 ರಿಂದ 32°C) ಮತ್ತು ಹೆಚ್ಚಿನ ಸಾಪೇಕ್ಷ ಆರ್ದ್ರತೆಗಳ ಸಮಯದಲ್ಲಿ, ಗಾಳಿ ಮತ್ತು ಮಳೆಯಿಂದಾಗಿ ಸಸ್ಯಗಳ ಮೇಲೆ ಶಿಲೀಂಧ್ರಗಳು ವ್ಯಾಪಕವಾಗಿ ಹರಡುತ್ತವೆ. ಅವು ಎಲೆಗಳನ್ನು ಒಟ್ಟಿಗೆ ನೇಯ್ದು "ಜಾಲದ" ರೀತಿಯ ಎಲೆಗೊಂಚಲುಗಳ ಚಾಪೆಯನ್ನು ರೂಪಿಸುತ್ತವೆ, ಇದು ಈ ರೋಗದಿಂದ ಸಸ್ಯಗಳಲ್ಲಿ ಕಂಡುಬರುವ ವಿಶಿಷ್ಟ ಅಂಶ.