ಸೋಯಾಬೀನ್

ಫ್ರಾಗ್ ಐಯ್ ಲೀಫ್ ಸ್ಪಾಟ್

Cercospora sojina

ಶಿಲೀಂಧ್ರ

ಸಂಕ್ಷಿಪ್ತವಾಗಿ

  • ಸಣ್ಣ, ನೀರು-ನೆನೆಸಿದ ಕಲೆಗಳು ಎಲೆಗಳ ಮೇಲೆ ಕಾಣಿಸಿಕೊಳ್ಳುತ್ತವೆ.
  • ಕಲೆಗಳು ದುಂಡಾದ ನೆಕ್ರೋಟಿಕ್ ಗಾಯಗಳಾಗಿ ಬೆಳೆಯುತ್ತವೆ ಮತ್ತು ಅವುಗಳ ಮಧ್ಯ ಭಾಗ ಬೂದು ಬಣ್ಣವಾಗಿದ್ದು ಗಾಢ-ಕಂದು ಬಣ್ಣದ ಅಂಚುಗಳಿರುತ್ತವೆ.
  • ಗಾಯಗಳು ಕಾಂಡ ಮತ್ತು ಬೀಜಕೋಶಗಳಿಗೆ ಹರಡಬಹುದು.
  • ಸೋಂಕಿತ ಬೀಜಗಳಲ್ಲಿ ಗಾಢ ಬಣ್ಣದ ಸಣ್ಣ ಮತ್ತು ದೊಡ್ಡ ಕಲೆಗಳು ಕಂಡುಬರುತ್ತವೆ ಮತ್ತು ಅವು ಸೊರಗಿದಂತೆ ಕಾಣುತ್ತವೆ.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ಸೋಯಾಬೀನ್

ರೋಗಲಕ್ಷಣಗಳು

ಸೋಂಕು ಬೆಳವಣಿಗೆಯ ಯಾವುದೇ ಹಂತದಲ್ಲಿ ಬರಬಹುದು ಆದರೆ ಹೂಬಿಡುವ ಸಮಯದಲ್ಲಿನ ಎಳೆ ಎಲೆಗಳಲ್ಲಿ ಇದು ಸಾಮಾನ್ಯವಾಗಿ ಕಂಡುಬರುತ್ತದೆ. ಆರಂಭಿಕ ರೋಗಲಕ್ಷಣಗಳೆಂದರೆ ಸಣ್ಣ, ನೀರು-ನೆನೆಸಿದ ಕಲೆಗಳು. ಕಾಲಾನಂತರದಲ್ಲಿ, ಕಲೆಗಳು ದುಂಡಾದ ಕಲೆಗಳಾಗಿ (1-5 ಮಿಮೀ) ಬೆಳೆಯುತ್ತವೆ ಮತ್ತು ಅವುಗಳ ಮಧ್ಯ ಭಾಗ ಬೂದು ಬಣ್ಣವಾಗಿದ್ದು ಗಾಢ-ಕನ್ನೇರಳೆ ಬಣ್ಣದ ಅಂಚುಗಳಿರುತ್ತವೆ. ಸೋಂಕು ತೀವ್ರವಾಗಿದ್ದ ಸಂದರ್ಭದಲ್ಲಿ, ಎಲೆಗಳು ಸಾಯುತ್ತವೆ ಮತ್ತು ಉದುರಿಹೋಗುತ್ತವೆ. ಕಾಂಡಗಳ ಮೇಲೆ ಉದ್ದವಾದ ಕಲೆಗಳು ಕಾಣಿಸಿಕೊಳ್ಳುತ್ತವೆ ಮತ್ತು ಅವುಗಳ ಮಧ್ಯ ಭಾಗ ಒಡೆದಂತಿರುತ್ತದೆ. ಬೀಜಕೋಶಗಳ ಮೇಲೆ, ವೃತ್ತಾಕಾರದ ಅಥವಾ ಉದ್ದವಾದ ಗುಳಿಬಿದ್ದ ಕಂದು ಬಣ್ಣದ ಕಲೆಗಳು ಕಾಣಿಸಿಕೊಳ್ಳುತ್ತವೆ. ಸೋಂಕಿತ ಬೀಜಗಳು ಸೊರಗಿದಂತಾಗಿ ವಿಭಿನ್ನ ಗಾತ್ರದ ಕಂದು ಬಣ್ಣದ ಕಲೆಗಳು ಕಂಡುಬರುತ್ತವೆ.

ಶಿಫಾರಸುಗಳು

ಜೈವಿಕ ನಿಯಂತ್ರಣ

ಲಭ್ಯವಿದ್ದರೆ, ಯಾವಾಗಲೂ ಜೈವಿಕ ಉತ್ಪನ್ನಗಳ ಜೊತೆ ಸಮಗ್ರವಾದ ಮಾರ್ಗವನ್ನು ಪರಿಗಣಿಸಿ.

ರಾಸಾಯನಿಕ ನಿಯಂತ್ರಣ

ಯಾವಾಗಲೂ ಜೈವಿಕ ಚಿಕಿತ್ಸೆಗಳು ಲಭ್ಯವಿದ್ದರೆ ಅದರ ಜೊತೆ ನಿರೋಧಕ ಕ್ರಮಗಳನ್ನು ಒಟ್ಟುಗೂಡಿಸಿ ಸಮಗ್ರವಾದ ಮಾರ್ಗವನ್ನು ಪರಿಗಣಿಸಿ. ರೋಗಕಾರಕವು ಉಂಟಾಗುವ ಸಮಯದಲ್ಲಿ ಆರಂಭಿಸಿ ಬೆಳೆವಣಿಗೆ ಋತುವಿನ ನಂತರದ ಹಂತಗಳಲ್ಲಿ ಪಿರಕ್ಲೋಸ್ಟ್ರೋಬಿನ್ ಇರುವ ಉತ್ಪನ್ನಗಳನ್ನು ಎರಡು ಬಾರಿ ಸಿಂಪಡಿಸಿದರೆ ಅದು ರೋಗಕಾರಕದ ಹರಡುವಿಕೆಯನ್ನು ತಡೆಗಟ್ಟುತ್ತದೆ. ಆರ್ದ್ರ ಪರಿಸ್ಥಿತಿಗಳು ಶಿಲೀಂಧ್ರನಾಶಕಗಳ ಪರಿಣಾಮವನ್ನು ಹೆಚ್ಚಿಸುತ್ತವೆ. ಕೊಯ್ಲು ಮಾಡಲು 21 ದಿನಗಳಿಗಿಂತ ಕಡಿಮೆ ಸಮಯವಿದ್ದರೆ ಸಂಸ್ಕರಣೆಯನ್ನು ಪ್ರಾರಂಭಿಸಬಾರದು.

ಅದಕ್ಕೆ ಏನು ಕಾರಣ

ಸೆರ್ಕೊಸ್ಪೊರಾ ಸೊಜಿನಾ ಎಂಬ ಶಿಲೀಂಧ್ರದಿಂದ ಫ್ರಾಗ್ ಐಯ್ ಲೀಫ್ ಸ್ಪಾಟ್ ಉಂಟಾಗುತ್ತದೆ. ಇದು ಸಸ್ಯಗಳ ನಡುವೆ, ಹೊಲದಲ್ಲಿನ ಬೆಳೆ ಉಳಿಕೆಗಳು ಅಥವಾ ಬೀಜಗಳಲ್ಲಿ ಬದುಕುತ್ತದೆ. ಸೋಂಕಿತ ಬೀಜಗಳನ್ನು ನೆಟ್ಟರೆ ಸೋಂಕಿತ ಸಸಿಗಳು ಬೆಳೆಯುತ್ತವೆ. ಹಳೆಯ ಸೋಯಾಬೀನ್ ಎಲೆಗಳಿಗಿಂತ ಎಳೆಯ ಎಲೆಗಳು ರೋಗಕ್ಕೆ ಬೇಗ ತುತ್ತಾಗುತ್ತವೆ. ಬೆಚ್ಚಗಿನ, ಆರ್ದ್ರ, ಆಗಾಗ್ಗೆ ಮಳೆ ಬರುವ ಮೋಡಕವಿದ ಹವಾಮಾನಗಳು ರೋಗದ ಹರಡುವಿಕೆಗೆ ಅನುಕೂಲವಾಗಿರುತ್ತವೆ. ಮಣ್ಣಿನ ಮೇಲೆ ಸೋಂಕಿತ ಸೋಯಾಬೀನ್ ಸಸ್ಯಗಳ ಉಳಿಕೆಗಳನ್ನು ಹಾಗೇ ಬಿಟ್ಟರೂ ಸಹ ಅದು ರೋಗವನ್ನು ಹರಡುತ್ತವೆ.


ಮುಂಜಾಗ್ರತಾ ಕ್ರಮಗಳು

  • ಚೇತರಿಸಿಕೊಳ್ಳುವ ಸಹಿಷ್ಣು ಅಥವಾ ನಿರೋಧಕ ಪ್ರಭೇದಗಳನ್ನು ನೆಡಿ.
  • ಪ್ರಮಾಣೀಕೃತ ರೋಗಕಾರಕ-ಮುಕ್ತ ಬೀಜಗಳನ್ನು ಬಳಸಿ.
  • ಹೊಲವನ್ನು ನಿಯಮಿತವಾಗಿ ಪರಿಶೀಲಿಸಿ.
  • ಸೋಂಕಿತ ಎಲೆಗಳು ಮತ್ತು ಶಾಖೆಗಳನ್ನು ತೆಗೆದುಹಾಕಿ.
  • ಉತ್ತಮ ಒಳಚರಂಡಿ ವ್ಯವಸ್ಥೆ ಮಾಡಿ.
  • ಋತುವಿನ ಆರಂಭದಲ್ಲೇ ನಾಟಿ ಮಾಡಿ.
  • ಮೆಕ್ಕೆ ಜೋಳ ಮತ್ತು ಇತರ ಧಾನ್ಯಗಳಂತಹ ಹೋಸ್ಟ್ ಅಲ್ಲದ ಬೆಳೆಗಳೊಂದಿಗೆ ಮೂರು ವರ್ಷಗಳ ಕಾಲ ಸರದಿ ಬೆಳೆ ಮಾಡಿ.
  • ಆಳವಾಗಿ ಉಳುಮೆ ಮಾಡಿ ಮತ್ತು ಸಸ್ಯದ ಉಳಿಕೆಗಳನ್ನು ಹೂತುಹಾಕಿ.
  • ಸೋಂಕಿತ ಸಸ್ಯಗಳ ಉಳಿಕೆಗಳನ್ನು ತೆಗೆದುಹಾಕಿ ಮತ್ತು ಸುಟ್ಟು ಹಾಕಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ