Fusarium verticillioides
ಶಿಲೀಂಧ್ರ
ರೋಗಲಕ್ಷಣಗಳು ಮೆಕ್ಕೆ ಜೋಳದ ಪ್ರಭೇದ, ಪರಿಸರ ಮತ್ತು ರೋಗದ ತೀವ್ರತೆಯ ಆಧಾರದ ಮೇಲೆ ಬದಲಾಗುತ್ತದೆ. ಈ ರೋಗವು ಸಾಮಾನ್ಯವಾಗಿ ಋತುವಿನ ಕೊನೆಯಲ್ಲಿ ಮತ್ತು ಶೇಖರಣೆಯ ಸಮಯದಲ್ಲಿ ಬರುತ್ತದೆ. ಬಿಳಿ, ಗುಲಾಬಿ ಬಣ್ಣವನ್ನು ಹೊಂದಿರುವ ಸೋಂಕಿತ ಕಾಳುಗಳು ಆರೋಗ್ಯಕರ ಕಾಳುಗಳ ಮಧ್ಯೆ ಕಂಡುಬರುತ್ತವೆ. ಕಾಳುಗಳಲ್ಲಿ ವಿಪರ್ಣನವನ್ನೂ ಸಹ ಕಾಣಬಹುದು. ಅವು ಹಳದಿ ಕಂದು ಅಥವಾ ಕಂದು ಬಣ್ಣಕ್ಕೆ ತಿರುಗಬಹುದು. ವಿಪರ್ಣನವು ಕಾಳುಗಳ ಮೇಲ್ಭಾಗದಿಂದ ತ್ರಿಜ್ಯೀಯ ಮಾದರಿಯಲ್ಲಿ ಹರಡುತ್ತದೆ. ರೋಗದ ಬೆಳವಣಿಗೆಗೆ ಪರಿಸ್ಥಿತಿಗಳು ಅನುಕೂಲಕರವಾಗಿದ್ದರೆ (ಬೆಚ್ಚಗಿನ ಮತ್ತು ಶುಷ್ಕ ವಾತಾವರಣ, ಕೀಟಗಳು ಇದ್ದರೆ), ಶಿಲೀಂಧ್ರವು ಜೊಂಡುಗಳಲ್ಲಿ ಸಂಪೂರ್ಣವಾಗಿ ಸೇರಿಕೊಳ್ಳುತ್ತವೆ ಮತ್ತು ಅಲ್ಲಿ ಶಿಲೀಂಧ್ರ ಬೆಳವಣಿಗೆ ಅಧಿಕವಾಗುತ್ತದೆ. ಜೊಂಡುಗಳು ಒಣಗಿದಂತೆ ಕಾಣುತ್ತವೆ ಮತ್ತು ಕಾಳುಗಳು ಸಂಪೂರ್ಣವಾಗಿ ಕೊಳೆತಕ್ಕೆ ತುತ್ತಾಗುತ್ತವೆ. ಕಾಳುಗಳ ಇಳುವರಿ ಕಡಿಮೆಯಾಗುತ್ತದೆ. ಶಿಲೀಂಧ್ರವು ಜೀವಾಣು ವಿಷವನ್ನು ಉತ್ಪಾದಿಸುತ್ತದೆ, ಇದರಿಂದಾಗಿ ಜೊಂಡು ಸೇವಿಸಲಾಗದಂತಾಗುತ್ತದೆ.
ಸ್ಯೂಡೋಮೊನಸ್ ಫ್ಲೂರಸೀನ್ಸ್ ಬ್ಯಾಕ್ಟೀರಿಯಾವನ್ನು ಆಧರಿಸಿದ ದ್ರವಗಳನ್ನು ಬೀಜ ಸಂಸ್ಕರಣೆಗೆ ಬಳಸಬಹುದು ಮತ್ತು ರೋಗದ ಸಂಭವನೀಯತೆಯನ್ನು, ಮತ್ತು ಜೀವಾಣು ವಿಷದ ಉತ್ಪಾದನೆಯನ್ನು ಕಡಿಮೆಮಾಡಲು ಸಿಂಪರಿಕೆಯಾಗಿ ಬಳಸಬಹುದು.
ಯಾವಾಗಲೂ ಜೈವಿಕ ಚಿಕಿತ್ಸೆಗಳು ಲಭ್ಯವಿದ್ದರೆ ಅದರ ಜೊತೆ ನಿರೋಧಕ ಕ್ರಮಗಳನ್ನು ಒಟ್ಟುಗೂಡಿಸಿ ಸಮಗ್ರವಾದ ಮಾರ್ಗವನ್ನು ಪರಿಗಣಿಸಿ. ಋತುವಿನ ಆರಂಭದಲ್ಲಿ ಶಿಲೀಂಧ್ರನಾಶಕಗಳನ್ನು ಹಾಕಿದರೆ ಅದರಿಂದ ಜೊಂಡಿಗಾಗುವ ಸೋಂಕನ್ನು ನಿಯಂತ್ರಿಸಬಹುದು. ಜೊಂಡುಗಳಲ್ಲಿ ಹಾನಿ ಉಂಟಾಗುವುದರಿಂದ, ಈ ರೋಗದ ವಿರುದ್ಧ ಹೋರಾಡಲು ಶಿಲೀಂಧ್ರನಾಶಕಗಳು ಅತ್ಯಂತ ಪರಿಣಾಮಕಾರಿ ಮಾರ್ಗವಲ್ಲ. ಜೊಂಡುಗಳಿಗೆ ಹಾನಿಮಾಡಿ ಶಿಲೀಂಧ್ರದ ಬೆಳವಣಿಗೆಗೆ ದಾರಿ ಮಾಡಿಕೊಡುವ ಕೀಟಗಳನ್ನು ನಿಯಂತ್ರಿಸಿ. ಶಿಲೀಂಧ್ರವನ್ನು ನಿಯಂತ್ರಿಸಲು ಧಾನ್ಯ ಗಟ್ಟಿಗೊಳಿಸುವಿಕೆಯ ಹಂತದ ಸಮಯದಲ್ಲಿ 1 ಮಿಲಿ / ಲೀ ಪ್ರೊಪಿಕೊನಜೋಲ್ ಅನ್ನು ಹೊಂದಿರುವ ಉತ್ಪನ್ನಗಳನ್ನು ಬಳಸಬಹುದು.
ಈ ರೋಗವು ಮುಖ್ಯವಾಗಿ ಫುಸಾರಿಯಂ ವರ್ಟಿಶಿಲ್ಲಿಯಾಡ್ಸ್ ಎಂಬ ಶಿಲೀಂಧ್ರದಿಂದ ಉಂಟಾಗುತ್ತದೆ, ಆದರೆ ಫುಸಾರಿಯಂನ ಇತರ ಜಾತಿಗಳಿಂದಲೂ ಸಹ ಇದೇ ರೀತಿಯ ರೋಗಲಕ್ಷಣಗಳು ಉಂಟಾಗಬಹುದು. ಇದು ಬೀಜಗಳು, ಬೆಳೆ ಉಳಿಕೆಗಳು ಅಥವಾ ಹುಲ್ಲುಗಾವಲುಗಳಂತಹ ಪರ್ಯಾಯ ಹೋಸ್ಟ್ ಗಳಲ್ಲಿ ಬದುಕುತ್ತದೆ. ಬೀಜಕಗಳು ಮುಖ್ಯವಾಗಿ ಗಾಳಿಯ ಮೂಲಕ ಹರಡುತ್ತದೆ. ಇದು ಮುಖ್ಯವಾಗಿ ಆಲಿಕಲ್ಲು ಅಥವಾ ಕೀಟಗಳು ಮತ್ತು ಪಕ್ಷಿಗಳಿಂದಾಗುವ ಹಾನಿ ಅಥವಾ ಹೊಲದ ಕೆಲಸದ ಸಮಯದಲ್ಲಿ ಆಗುವ ಗಾಯಗಳ ಮೂಲಕ ಕಾಳುಗಳ ಜೊಂಡಿನೊಳಗೆ ಪ್ರವೇಶಿಸುತ್ತದೆ. ಇದು ಕುಡಿಯೊಡೆದು, ಒಳಗೆ ಬಂದ ಜಾಗದಿಂದ ಕಾಳುಗಳನ್ನು ಕ್ರಮೇಣ ಆಕ್ರಮಿಸುತ್ತದೆ. ಪರ್ಯಾಯವಾಗಿ, ಇದು ಬೇರುಗಳಿಂದ ಆರಂಭಿಸಿ ವ್ಯವಸ್ಥಿತ ಬೆಳವಣಿಗೆಯ ಮೂಲಕ ಇಡೀ ಸಸ್ಯವನ್ನು ಆಕ್ರಮಿಸಬಹುದು. ಸಸ್ಯಗಳಿಗೆ ವ್ಯಾಪಕ ಪರಿಸರ ಪರಿಸ್ಥಿತಿಗಳಲ್ಲಿ ಸೋಂಕಾಗಬಹುದು, ಆದರೆ ಹವಾಮಾನವು ಬೆಚ್ಚಗೆ ಹಾಗೂ ಒಣಗಿದ್ದಾಗ ಮತ್ತು ಸಸ್ಯಗಳು ಹೂಬಿಡುವ ಹಂತಕ್ಕೆ ತಲುಪಿದಾಗ ರೋಗಲಕ್ಷಣಗಳು ತೀವ್ರವಾಗುತ್ತವೆ. ಇದು ಮೆಕ್ಕೆ ಜೋಳದಲ್ಲಿ ಕಂಡುಬರುವ ಅತ್ಯಂತ ಸಾಮಾನ್ಯವಾದ ರೋಗವಾಗಿದೆ.