ಭತ್ತ

ಭತ್ತದ ಎಲೆ ಕವಚ ಕೊಳೆತ ರೋಗ

Sarocladium oryzae

ಶಿಲೀಂಧ್ರ

ಸಂಕ್ಷಿಪ್ತವಾಗಿ

  • ತೆನೆಯನ್ನು ಸುತ್ತುವರೆದಿರುವ ಮೇಲ್ಭಾಗದ ಎಲೆಯ ಕವಚಗಳಲ್ಲಿ ಕಲೆಯ ತರಹದ ಗಾಯಗಳು ಉಂಟಾಗುತ್ತವೆ.
  • ಎಲೆ ಕವಚಗಳು ಕೊಳೆಯುತ್ತವೆ ಮತ್ತು ಅವುಗಳ ಮೇಲೆ ಬಿಳಿಯ ಪುಡಿಯಂತಹ ಶಿಲೀಂಧ್ರಗಳ ಬೆಳವಣಿಗೆಯಾಗುತ್ತದೆ.
  • ಹೊರಹೊಮ್ಮಿದ ತೆನೆಗಳಲ್ಲಿನ ಧಾನ್ಯಗಳು ಬಣ್ಣ ಕಳೆದುಕೊಳ್ಳುತ್ತವೆ ಮತ್ತು ಬರಡಾಗಿ ಮಾರ್ಪಡುತ್ತವೆ.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ಭತ್ತ

ರೋಗಲಕ್ಷಣಗಳು

ಆರಂಭಿಕ ರೋಗಲಕ್ಷಣಗಳೆಂದರೆ, ತೆನೆಯನ್ನು ಸುತ್ತುವರೆದ ಎಲೆಗಳ ಮೇಲೆ ಬಾಗಿರುವುದರಿಂದ ಅನಿಯಮಿತವರೆಗೆ ಕಲೆಗಳು (0.5 ರಿಂದ 1.5 ಮಿಮೀ). ಕಲೆಗಳು, ಬೂದು ಬಣ್ಣದ ಕೇಂದ್ರಗಳು ಮತ್ತು ಕಂದು ಅಂಚುಗಳನ್ನು ಹೊಂದಿರುತ್ತವೆ ಮತ್ತು ಅವುಗಳು ಸಾಮಾನ್ಯವಾಗಿ ಒಟ್ಟು ಸೇರಿ ಎಲೆ ಕವಚದ ಕೊಳೆತವನ್ನು ಉಂಟು ಮಾಡುತ್ತವೆ ಮತ್ತು ನಂತರ ಬಣ್ಣ ಕಳೆದುಕೊಳ್ಳುವಂತೆ ಮಾಡುತ್ತವೆ. ತೀವ್ರವಾದ ಸೋಂಕಿನ ಸಂದರ್ಭದಲ್ಲಿ, ಎಳೆಯ ತೆನೆಗಳು ಹೊರಹೊಮ್ಮುವುದಿಲ್ಲ. ಬಾಧಿತ ಎಲೆ ಕವಚಗಳ ಹೊರಗಿನ ಮೇಲ್ಮೈಯಲ್ಲಿ ಕಾಣುವಂತೆ ಸಾಕಷ್ಟು ಬಿಳಿ ಪುಡಿಯ ಶಿಲೀಂಧ್ರಗಳು ಬೆಳೆಯುತ್ತವೆ. ಹೊರಹೊಮ್ಮಿದ ತೆನೆಗಳ ಧಾನ್ಯಗಳು ಬಣ್ಣ ಕಳೆದುಕೊಳ್ಳುತ್ತವೆ ಮತ್ತು ಬರಡಾಗಿ ಮಾರ್ಪಡುತ್ತವೆ. ಹೊರಹೊಮ್ಮದ ತೆನೆಗಳು ಕೆಂಪು-ಕಂದು ಬಣ್ಣದಿಂದ ಗಾಢ ಕಂದು ಬಣ್ಣಕ್ಕೆ ತಿರುಗುವ ಹೂವುಗಳನ್ನು ಉತ್ಪತ್ತಿ ಮಾಡುತ್ತವೆ. ಸೋಂಕು ಬೂಟಿಂಗ್ ನ ಕೊನೆಯ ಹಂತದಲ್ಲಿ ಸಂಭವಿಸಿದಾಗ ಬೆಳೆ ಹೆಚ್ಚು ಹಾನಿಗೊಳಗಾಗುತ್ತದೆ ಮತ್ತು ತೀವ್ರ ಹಾನಿಯನ್ನು ಉಂಟುಮಾಡಬಹುದು.

ಶಿಫಾರಸುಗಳು

ಜೈವಿಕ ನಿಯಂತ್ರಣ

ಸಿಟ್ರಸ್ ಮತ್ತು ಭತ್ತದಿಂದ ಬೇರ್ಪಡಿಸಲ್ಪಟ್ಟ ಸ್ಯೂಡೋಮೊನಸ್ ಫ್ಲೂರಸೆನ್ಸ್ ಗಳಂತಹ ರೈಝೋಬ್ಯಾಕ್ಟೀರಿಯಾದ ಬ್ಯಾಕ್ಟೀರಿಯಾಗಳು ಎಲೆ ಕವಚ ಕೊಳೆತದಂತಹ ಶಿಲೀಂಧ್ರಗಳಿಗೆ ವಿಷಕಾರಿಯಾಗಿದೆ. ಇದರಿಂದಾಗಿ ಸೋಂಕಿನ ಪ್ರಮಾಣ ಕಡಿಮೆಯಾಗಿ ಇಳುವರಿ ಹೆಚ್ಚು ಸಿಗುತ್ತದೆ. ಬೈಪೋಲಾರಿಸ್ ಝೀಕೊಲಾ ಮತ್ತೊಂದು ಸಂಭಾವ್ಯ ವೈರಿಯಾಗಿದ್ದು, ಇದು ಎಸ್. ಒರಿಝೆಯ ಮೈಸೀಲಿಯಾ ಬೆಳವಣಿಗೆಯನ್ನು ಸಂಪೂರ್ಣವಾಗಿ ನಿರೋಧಿಸುತ್ತದೆ. ಟ್ಯಾಗೆಟ್ಸ್ ಎರೆಕ್ಟಾದ ಎಲೆಗಳು ಮತ್ತು ಹೂವುಗಳ ಸಾರದ ವಿರೋಧಿ ಚಟುವಟಿಕೆಯು ಕೂಡ ಎಸ್. ಓರಿಝೆ ಮೈಸಿಲಿಯಮ್ ಅನ್ನು 100% ದಷ್ಟು ಪ್ರತಿಬಂಧಿಸುತ್ತದೆ.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದರೆ, ಜೈವಿಕ ಚಿಕಿತ್ಸೆಗಳೊಂದಿಗೆ ತಡೆಗಟ್ಟುವ ಕ್ರಮಗಳಿರುವ ಸಮಗ್ರವಾದ ಮಾರ್ಗವನ್ನು ಯಾವಾಗಲೂ ಮೊದಲು ಪರಿಗಣಿಸಿ. ತೀವ್ರ ಸೋಂಕಿನ ಸಂದರ್ಭದಲ್ಲಿ, ಮಂಕೊಜೆಬ್, ಕಾಪರ್ ಆಕ್ಸಿಕ್ಲೋರೈಡ್ ಅಥವಾ ಪ್ರೊಪಿಕಾನಜೋಲ್ (ಸಾಮಾನ್ಯವಾಗಿ 1 ಮಿಲಿ / ಲೀ ನೀರಿನಷ್ಟು) ನಂತಹ ಶಿಲೀಂಧ್ರನಾಶಕಗಳನ್ನು ಬೂಟಿಂಗ್ ಮತ್ತು ತೆನೆ ಮೂಡುವ ಸಮಯದಲ್ಲಿ ಎರಡು ಬಾರಿ ವಾರಗಳ ಅಂತರದಲ್ಲಿ ಬಳಸಿದರೆ ರೋಗದ ಪ್ರಕರಣಗಳನ್ನು ಕಡಿಮೆ ಮಾಡಬಹುದು, ಬಿತ್ತನೆ ಮಾಡುವ ಮೊದಲು ಮಂಕೋಜೆಬ್ ನಂತಹ ಬೀಜ ಚಿಕಿತ್ಸಕ ಶಿಲೀಂಧ್ರನಾಶಕದ ಬಳಕೆಯೂ ಸಹ ಪರಿಣಾಮಕಾರಿಯಾಗಿದೆ.

ಅದಕ್ಕೆ ಏನು ಕಾರಣ

ಎಲೆ ಕವಚ ಕೊಳೆತವು ಮುಖ್ಯವಾಗಿ ಬೀಜದಿಂದ ಹರಡುವ ರೋಗ. ಈ ರೋಗವು ಮುಖ್ಯವಾಗಿ ಶಿಲೀಂಧ್ರ ಸರೋಕ್ಲಾಡಿಯಮ್ ಒರಿಝೆ ಮೂಲಕ ಉಂಟಾಗುತ್ತದೆ. ಆದರೆ ಕೆಲವು ಸಂದರ್ಭಗಳಲ್ಲಿ ಸಕ್ರೊಲಾಡಿಯಮ್ ಅಟೆನ್ಯೂವಾಟಮ್ ನಿಂದಲೂ ಆಗಬಹುದು. ಶಿಲೀಂಧ್ರಗಳು ಸುಗ್ಗಿಯ ನಂತರ ಭತ್ತದ ಬೆಳೆಗಳ ಅವಶೇಷದಲ್ಲಿ ಬದುಕುಳಿಯುತ್ತವೆ ಮತ್ತು ಮುಂದಿನ ಋತುಗಳಲ್ಲಿ ಸೋಂಕನ್ನು ಉಂಟುಮಾಡಬಹುದು. ಗಿಡಗಳ ಸಾಂದ್ರತೆ ಹೆಚ್ಚಾದಂತೆ ಮತ್ತು ಕೀಟಗಳಿಂದ ಉಂಟಾದ ಗಾಯಗಳ ಮೂಲಕ, ಶಿಲೀಂಧ್ರಗಳಿಗೆ ಪ್ರವೇಶ ಕೊಡುವ ಸಸ್ಯಗಳಲ್ಲಿ, ಇದರ ಸೋಂಕು ಹೆಚ್ಚಾಗಿರುತ್ತದೆ. ಉಳುಮೆ ಹಂತದಲ್ಲಿ ಪೊಟ್ಯಾಸಿಯಮ್, ಕ್ಯಾಲ್ಸಿಯಂ ಸಲ್ಫೇಟ್ ಅಥವಾ ಸತು ರಸಗೊಬ್ಬರಗಳ ಬಳಕೆ ಕಾಂಡ ಮತ್ತು ಎಲೆಯ ಅಂಗಾಂಶಗಳನ್ನು ಬಲಪಡಿಸುತ್ತದೆ ಮತ್ತು ಇದರಿಂದಾಗಿ ವ್ಯಾಪಕ ಹಾನಿ ತಪ್ಪುತ್ತದೆ. ಇದು ವೈರಸ್ ಸೋಂಕುಗಳಿಂದ ದುರ್ಬಲಗೊಂಡ ಸಸ್ಯಗಳಿಗೂ ಸಹ ಸಂಬಂಧಿಸಿದೆ. ಸೆಕೆ (20-28 ° ಸಿ) ಮತ್ತು ತೇವಾಂಶವುಳ್ಳ (ಆರ್ದ್ರ) ಹವಾಮಾನವು ರೋಗದ ಬೆಳವಣಿಗೆಗೆ ಅನುಕೂಲಕರವಾಗಿರುತ್ತದೆ.


ಮುಂಜಾಗ್ರತಾ ಕ್ರಮಗಳು

  • ಪ್ರಮಾಣೀಕೃತ ಆರೋಗ್ಯಕರ ಬೀಜಗಳನ್ನು ಬಳಸಿ.
  • 25ಸೆಂ.ಮೀ x 25ಸೆಂ.ಮೀ ನಷ್ಟು ವಿಶಾಲ ಅಂತರದಲ್ಲಿ ನೆಡಿ.
  • ಒಂದೇ ಜಮೀನಿನಲ್ಲಿ ಏಕ ಫಸಲಿನ ಕೃಷಿಬೆಳೆ ತಪ್ಪಿಸಿ, ಕನಿಷ್ಠ ಎರಡು ಪ್ರಭೇದಗಳನ್ನು ಬಳಸಿ.
  • ಹೂಗೊಂಚಲು ಮಿಟೆಗಳಂತಹ ಕೀಟಗಳು ಮತ್ತು ಕೀಟಾಣುಗಳಿಗಾಗಿ ನಿಯಮಿತವಾಗಿ ಜಮೀನನ್ನು ಪರೀಕ್ಷಿಸಿ ಮತ್ತು ಅವುಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಪ್ರಯತ್ನಿಸಿ.
  • ಪೊಟಾಷಿಯಂ, ಕ್ಯಾಲ್ಸಿಯಂ ಸಲ್ಫೇಟ್ ಅಥವಾ ಸತುವಿನ ರಸಗೊಬ್ಬರಗಳನ್ನು ಉಳುಮೆ ಹಂತದಲ್ಲಿ ಹಾಕಿ.
  • ಸೋಂಕಿಗೊಳಗಾದ ಹುಲ್ಲು ಮತ್ತು ಕಳೆಗಳನ್ನು ಜಮೀನಿನಿಂದ ತೆಗೆಯುವುದು ಸಹ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ