ಮೆಕ್ಕೆ ಜೋಳ

ಫಯೋಸ್ಪಯೇರಿಯಾ ಲೀಫ್ ಸ್ಪಾಟ್ (ಎಲೆ ಚುಕ್ಕೆ)

Phaeosphaeria maydis

ಶಿಲೀಂಧ್ರ

ಸಂಕ್ಷಿಪ್ತವಾಗಿ

  • ಸಣ್ಣ, ತಿಳಿ ಹಸಿರು ಅಥವಾ ಹಳದಿ ಬಣ್ಣದ ಕ್ಲೋರೋಟಿಕ್ ಕಲೆಗಳು ಎಲೆಯ ಅಗಲಕ್ಕೂ ಹರಡಿರುವುದು ಕಾಣುತ್ತದೆ.
  • ಈ ಕಲೆಗಳು ಗಾಢ ಕಂದು ಬಣ್ಣದ ಅನಿಯಮಿತ ಅಂಚುಗಳಿರುವ ವೃತ್ತಾಕಾರದ ಅಥವಾ ಆಯತಾಕಾರದ ಗಾಯಗಳಾಗಿ ಬೆಳೆಯುತ್ತವೆ ಮತ್ತು ಇವುಗಳ ಮಧ್ಯಭಾಗವು ಬಿಳುಪಾದಂತೆ ಮತ್ತು ಒಣಗಿದಂತೆ ಕಂಡುಬರುತ್ತವೆ.
  • ಇದು ತೀವ್ರವಾದಂತೆ ಗಾಯಗಳು ಒಂದುಗೂಡಿ ಸಂಪೂರ್ಣ ಎಲೆಯನ್ನು ಕೊಳೆಸುತ್ತವೆ.
  • ಫಯೋಸ್ಪಯೇರಿಯಾ ಲೀಫ್ ಸ್ಪಾಟ್ ಸಾಮಾನ್ಯವಾಗಿ ಋತುವಿನ ಕೊನೆಯಲ್ಲಿ ಬರುವ ಕಡಿಮೆ ಪ್ರಾಮುಖ್ಯತೆಯ ಒಂದು ರೋಗವಾಗಿದೆ.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ಮೆಕ್ಕೆ ಜೋಳ

ರೋಗಲಕ್ಷಣಗಳು

ಆರಂಭಿಕ ರೋಗಲಕ್ಷಣಗಳೆಂದರೆ, ಎಲೆಯ ಅಗಲಕ್ಕೂ ಹರಡಿದ ಸಣ್ಣ, ತಿಳಿ ಹಸಿರು ಅಥವಾ ಹಳದಿ ಬಣ್ಣದ ಕ್ಲೋರೋಟಿಕ್ ಕಲೆಗಳು ಕಂಡುಬರುತ್ತವೆ. ಈ ಕಲೆಗಳು ಗಾಢ ಕಂದು ಬಣ್ಣದ ಅನಿಯಮಿತ ಅಂಚುಗಳಿರುವ ವೃತ್ತಾಕಾರದ ಅಥವಾ ಆಯತಾಕಾರದ ಗಾಯಗಳಾಗಿ (3 ರಿಂದ 20 ಮಿ.ಮೀ) ಬೆಳೆಯುತ್ತವೆ ಮತ್ತು ಇವುಗಳ ಮಧ್ಯಭಾಗವು ಬಿಳುಪಾದಂತೆ ಮತ್ತು ಒಣಗಿದಂತೆ ಕಂಡುಬರುತ್ತವೆ. ಇದು ತೀವ್ರವಾದಂತೆ ಗಾಯಗಳು ಒಂದುಗೂಡಿ ಸಂಪೂರ್ಣ ಎಲೆಯನ್ನು ಕೊಳೆಸುತ್ತವೆ. ಎಲೆಗಳ ಕೆಳಭಾಗದಲ್ಲಿರುವ ಗಾಯಗಳೊಳಗೆ ಅತೀ ಸಣ್ಣದಾದ ಕಪ್ಪು ಚುಕ್ಕೆಗಳು ಕಂಡುಬರುತ್ತವೆ. ಸಸ್ಯದ ಬೆಳವಣಿಗೆಯ ಆರಂಭಿಕ ಹಂತದಲ್ಲಿ ಸೋಂಕಾದರೆ ಮತ್ತು ಮೇಲಿನ ಎಲೆಗಳು ಹೂಬಿಡುವುದಕ್ಕಿಂತ ಮುಂಚಿತವಾಗಿಯೇ ಕೊಳೆತರೆ, ಅದು ಇಳುವರಿಯಲ್ಲಿ ತೀವ್ರವಾದ ನಷ್ಟವನ್ನುಂಟುಮಾಡಬಹುದು.

ಶಿಫಾರಸುಗಳು

ಜೈವಿಕ ನಿಯಂತ್ರಣ

ಕ್ಷಮಿಸಿ, ಇದುವರೆಗೂ ಫಯೋಸ್ಪಯೇರಿಯಾ ಲೀಫ್ ಸ್ಪಾಟ್ಗೆ ಯಾವುದೇ ಜೈವಿಕ ಚಿಕಿತ್ಸೆಯ ಬಗ್ಗೆ ನಮಗೆ ತಿಳಿದಿಲ್ಲ. ಈ ರೋಗದ ವಿರುದ್ಧ ಹೋರಾಡಲು ಸಹಾಯವಾಗುವ ಯಾವುದಾದರೂ ವಿಧ ನಿಮಗೆ ತಿಳಿದಿದ್ದರೆ ದಯವಿಟ್ಟು ನಮಗೆ ತಿಳಿಸಿ. ನಿಮ್ಮ ಪ್ರತಿಕ್ರಿಯೆಯನ್ನು ನಾವು ಎದುರು ನೋಡುತ್ತೇವೆ.

ರಾಸಾಯನಿಕ ನಿಯಂತ್ರಣ

ಯಾವಾಗಲೂ ಜೈವಿಕ ಚಿಕಿತ್ಸೆಗಳು ಲಭ್ಯವಿದ್ದರೆ ಅದರ ಜೊತೆ ನಿರೋಧಕ ಕ್ರಮಗಳನ್ನು ಒಟ್ಟುಗೂಡಿಸಿ ಸಮಗ್ರವಾದ ಮಾರ್ಗವನ್ನು ಪರಿಗಣಿಸಿ. ಈ ರೋಗವನ್ನು ನಿಯಂತ್ರಿಸಲು ಮಂಕೋಜೆಬ್, ಪಿರಾಕ್ಲೋಸ್ಟ್ರೊಬಿನ್ನಂಥ ಶಿಲೀಂಧ್ರನಾಶಕಗಳನ್ನು ಎಲೆಗಳ ಮೇಲೆ ಸಿಂಪಡಿಸಬಹುದು.

ಅದಕ್ಕೆ ಏನು ಕಾರಣ

ಈ ರೋಗವು ಫಯೋಸ್ಪಯೇರಿಯಾ ಮೆಯಿಡಿಸ್ ಎಂಬ ಶಿಲೀಂಧ್ರದಿಂದ ಉಂಟಾಗುತ್ತದೆ, ಇದು ಬೆಳೆ ಉಳಿಕೆಗಳಲ್ಲಿ ಚಳಿಗಾಲವನ್ನು ಕಳೆಯುತ್ತದೆ. ಅನುಕೂಲಕರ ಪರಿಸ್ಥಿತಿಯಲ್ಲಿ, ಅದರ ಬೀಜಕಗಳು ಮಳೆ ಹನಿ ಮತ್ತು ಗಾಳಿಯ ಮೂಲಕ ಹೊಸ ಸಸ್ಯಗಳಿಗೆ ಹರಡುತ್ತವೆ. ಇದು ಹೊಸ ಎಲೆಗಳಲ್ಲಿ ಕುಡಿಯೊಡೆಯುತ್ತದೆ ಮತ್ತು ದ್ವಿತೀಯ ಹಂತದ ಸೋಂಕನ್ನು ಪ್ರಾರಂಭಿಸುತ್ತದೆ. ಅಧಿಕ ಮಳೆ ಮತ್ತು ಹೆಚ್ಚಿನ ಸಾಪೇಕ್ಷ ಆರ್ದ್ರತೆಗಳ (70% ಗಿಂತ ಹೆಚ್ಚು) ಜೊತೆ, ರಾತ್ರಿ ವೇಳೆಯಲ್ಲಿನ ಕಡಿಮೆ ತಾಪಮಾನವು (ಸುಮಾರು 15 ಡಿಗ್ರಿ ಸೆಲ್ಸಿಯಸ್), ರೋಗದ ಪ್ರಗತಿಗೆ ಸೂಕ್ತ ಪರಿಸ್ಥಿತಿಗಳು. ಈ ಪರಿಸ್ಥಿತಿಗಳು ಎತ್ತರದ ಪ್ರದೇಶಗಳಲ್ಲಿ ವ್ಯಾಪಕವಾಗಿರುತ್ತವೆ. ರೋಗವು ಕೆಲವು ನಿರ್ದಿಷ್ಟ ಸಂದರ್ಭಗಳಲ್ಲಿ ಮಾತ್ರ ಸಸ್ಯ ಉತ್ಪಾದಕತೆಯ ಮೇಲೆ ಮತ್ತು ಇಳುವರಿಯ ಮೇಲೆ ಪರಿಣಾಮ ಬೀರುತ್ತದೆ. ಸಾಮಾನ್ಯವಾಗಿ, ಇದನ್ನು ಕಡಿಮೆ ಪ್ರಾಮುಖ್ಯತೆಯ ಋತುವಿನ ಕೊನೆಯಲ್ಲಿ ಬರುವ ರೋಗ ಎಂದು ಪರಿಗಣಿಸಲಾಗಿದೆ.


ಮುಂಜಾಗ್ರತಾ ಕ್ರಮಗಳು

  • ಲಭ್ಯವಿದ್ದರೆ ನಿರೋಧಕ ಪ್ರಭೇದಗಳನ್ನು ಬಳಸಿ.
  • ರೋಗಗಳು ಹರಡುವುದಕ್ಕೆ ಅನುಕೂಲವಾಗುವ ಹವಾಮಾನ ಸ್ಥಿತಿಗಳನ್ನು ತಪ್ಪಿಸಲು ಋತುವಿಗಿಂತ ಮೊದಲು ಅಥವಾ ನಂತರ ನಾಟಿ ಮಾಡಿ.
  • ಕೊಯ್ಲಿನ ನಂತರ ಆಳವಾಗಿ ಉಳುಮೆ ಮಾಡಿ ಬೆಳೆ ಉಳಿಕೆಗಳನ್ನು ಹೂಳಬೇಕು.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ