Bipolaris sacchari
ಶಿಲೀಂಧ್ರ
ಸೋಂಕು ತಗಲಿದ 1-3 ದಿನಗಳಲ್ಲಿ, ಬಿ. ಸಾಚಾರಿಯಿಂದ ಸೋಂಕಿತ ಕಬ್ಬಿನ ಎಲೆಗಳು ತಮ್ಮ ಎರಡೂ ಮೇಲ್ಮೈಗಳಲ್ಲಿ ಸಣ್ಣ ಕೆಂಪು ಕಲೆಗಳಂತೆ ಪ್ರಾರಂಭವಾಗುವ ಗಾಯಗಳನ್ನು ಪ್ರದರ್ಶಿಸುತ್ತವೆ. ಕಲೆಗಳು ಅಂಡಾಕಾರದಲ್ಲಿದ್ದು ಮುಖ್ಯ ನಾಳಗಳಿಗೆ ಸಮಾನಾಂತರವಾಗಿರುವ ಉದ್ದನೆಯ ಅಕ್ಷ ಹೊಂದಿರುತ್ತವೆ. ಅಂಚು ಕೆಂಪು ಬಣ್ಣದಿಂದ ಕಂದು ಬಣ್ಣದ್ದಾಗಿರುತ್ತದೆ. ಸ್ಥಳದ ಮಧ್ಯಭಾಗವು ಬೂದು ಅಥವಾ ಕಂದು ಬಣ್ಣದ್ದಾಗಿರುತ್ತದೆ. ಕಲೆಗಳು ಒಟ್ಟಿಗೆ ಸೇರಿ, ಉದ್ದವಾದ ಗೆರೆಗಳನ್ನು ರೂಪಿಸಬಹುದು. ತೀವ್ರವಾದ ಸೋಂಕುಗಳಲ್ಲಿ ಮೇಲಿನ ಭಾಗದ ಕೊಳೆತದಿಂದ, ಬಿತ್ತಿದ 12-14 ದಿನಗಳ ನಂತರದಲ್ಲಿ ಕಬ್ಬಿನ ಸಸಿ ರೋಗದಿಂದ ಸಾಯುತ್ತವೆ.
ದುರದೃಷ್ಟವಶಾತ್, ಬೈಪೋಲರಿಸ್ ಸಾಚಾರಿ ವಿರುದ್ಧ ಯಾವುದೇ ಪರ್ಯಾಯ ಚಿಕಿತ್ಸೆ ಇಲ್ಲ. ಈ ರೋಗದ ವಿರುದ್ಧ ಹೋರಾಡಲು ಸಹಾಯ ಮಾಡುವಂತಹ ಏನಾದರೂ ನಿಮಗೆ ತಿಳಿದಿದ್ದರೆ ದಯವಿಟ್ಟು ನಮ್ಮನ್ನು ಸಂಪರ್ಕಿಸಿ. ನಿಮ್ಮ ಮಾತುಗಳಿಗಾಗಿ ಎದುರು ನೋಡುತ್ತಿದ್ದೇವೆ.
ಲಭ್ಯವಿದ್ದರೆ ತಡೆಗಟ್ಟುವ ಕ್ರಮಗಳು ಮತ್ತು ಜೈವಿಕ ಚಿಕಿತ್ಸೆಗಳೊಂದಿಗೆ ಸಂಯೋಜಿತ ವಿಧಾನವನ್ನು ಯಾವಾಗಲೂ ಪರಿಗಣಿಸಿ. 10 ರಿಂದ 15 ದಿನಗಳ ಅಂತರದಲ್ಲಿ 0.2% ತಾಮ್ರದ ಆಕ್ಸಿಕ್ಲೋರೈಡ್ ಅಥವಾ 0.3% ಮ್ಯಾಂಕೋಜೆಬ್ ಅನ್ನು 2 ರಿಂದ 3 ಬಾರಿ ಎಲೆಗಳಿಗೆ ಸಿಂಪಡಿಸಬೇಕು. ರೋಗದ ತೀವ್ರತೆಗೆ ಅನುಗುಣವಾಗಿ ಸಿಂಪಡಿಸಬೇಕು
ಬೀಜಕಗಳಿಂದ (ಕೋನಿಡಿಯಾ) ಐಸ್ಪಾಟ್ ಹರಡುತ್ತದೆ. ಇದು ಎಲೆಗಳ ಗಾಯಗಳ ಮೇಲೆ ಹೇರಳವಾಗಿ ಉತ್ಪತ್ತಿಯಾಗುತ್ತದೆ ಮತ್ತು ಗಾಳಿ ಮತ್ತು ಮಳೆಯಿಂದ ಚದುರುತ್ತದೆ. ಹೆಚ್ಚಿನ ಆರ್ದ್ರತೆ ಮತ್ತು ಇಬ್ಬನಿ ರಚನೆಗಳು ಶಿಲೀಂಧ್ರ ಬೀಜಕ ಮೊಳಕೆಯೊಡೆಯಲು ಅನುಕೂಲಕರವಾಗಿದೆ. ಹಳೆಯ ಎಲೆಗಳಿಗಿಂತ ಕಿರಿಯ ಎಲೆಗಳಲ್ಲಿ ಆಕ್ರಮಣ ಹೆಚ್ಚು ವೇಗವಾಗಿರುತ್ತದೆ. ಬೀಜದ ತುಂಡುಗಳಿಂದ ಹರಡುವುದಿಲ್ಲ. ಉಪಕರಣಗಳಿಂದ ಮತ್ತು ಮಾನವ ಚಟುವಟಿಕೆಯಿಂದ ಯಾಂತ್ರಿಕ ಪ್ರಸರಣವು ಕೂಡ ಒಂದು ಸಮಸ್ಯೆಯಲ್ಲ.