ದಪ್ಪ ಮೆಣಸಿನಕಾಯಿ & ಮೆಣಸಿನಕಾಯಿ

ಕಾಳು ಮೆಣಸಿನ ಆಂಥ್ರಾಕ್ನೋಸ್

Colletotrichum sp.

ಶಿಲೀಂಧ್ರ

ಸಂಕ್ಷಿಪ್ತವಾಗಿ

  • ಹಣ್ಣಿನ ಮೇಲೆ ಗಾಯಗಳು.
  • ಎಲೆಗಳು ಮತ್ತು ಕಾಂಡದ ಮೇಲೆ ಗಾಢ ಕಂದು ಅಂಚುಗಳೊಂದಿಗೆ ಬೂದು-ಕಂದು ಬಣ್ಣದ ಚುಕ್ಕೆಗಳು.
  • ಹಣ್ಣಿನ ಚುಕ್ಕೆಗಳ ಒಳಗೆ ಕೇಂದ್ರೀಕೃತ ಉಂಗುರಗಳು.
  • ಶಾಖೆಗಳ ಡೈ ಬ್ಯಾಕ್ ಮತ್ತು ಹಣ್ಣುಗಳ ಕೊಳೆತ.

ಇವುಗಳಲ್ಲಿ ಸಹ ಕಾಣಬಹುದು


ದಪ್ಪ ಮೆಣಸಿನಕಾಯಿ & ಮೆಣಸಿನಕಾಯಿ

ರೋಗಲಕ್ಷಣಗಳು

ಹಣ್ಣುಗಳ ಮೇಲೆ ನೀರಿನಲ್ಲಿ ನೆನೆದಂತಿರುವ ವೃತ್ತಾಕಾರದ ಅಥವಾ ಕೋನೀಯ ಗಾಯಗಳು, ನಂತರ ಮೃದುವಾದ ಮತ್ತು ಕುಳಿ ಬಿದ್ದಂತೆ ಆಗುತ್ತದೆ. ಗಾಯಗಳ ಕೇಂದ್ರಗಳು ಕಿತ್ತಳೆ ಅಥವಾ ಕಂದು ಬಣ್ಣದಲ್ಲಿರುತ್ತವೆ ಮತ್ತು ಆಮೇಲೆ ಕಪ್ಪು ಬಣ್ಣಕ್ಕೆ ತಿರುಗುತ್ತವೆ. ಆದರೆ ಸುತ್ತಲಿನ ಅಂಗಾಂಶವು ತಿಳಿ ಬಣ್ಣದ್ದಾಗಿರುತ್ತದೆ. ಗಾಯಗಳು ಬಹುತೇಕ ಹಣ್ಣಿನ ಮೇಲ್ಮೈಯನ್ನು ಆವರಿಸುತ್ತವೆ. ಅನೇಕ ಗಾಯಗಳು ಸಂಭವಿಸುತ್ತವೆ. ಹಣ್ಣಿನ ಕಲೆಗಳಲ್ಲಿ ಕೇಂದ್ರೀಕೃತ ಉಂಗುರಗಳು ಸಾಮಾನ್ಯವಾಗಿರುತ್ತವೆ. ಹಸಿರು ಹಣ್ಣುಗಳು ಸೋಂಕಿಗೆ ಒಳಗಾಗಬಹುದು, ಆದರೆ ಅವು ಹಣ್ಣಾಗುವವರೆಗೂ ಯಾವುದೇ ರೋಗಲಕ್ಷಣಗಳು ಕಾಣಿಸುವುದಿಲ್ಲ. ಎಲೆಯ ಮತ್ತು ಕಾಂಡದ ರೋಗಲಕ್ಷಣಗಳು ಸಣ್ಣ, ಅನಿಯಮಿಯತ ಆಕಾರದ ಗಾಢ ಕಂದು ಬಣ್ಣದ ಅಂಚುಗಳುಳ್ಳ ಬೂದು-ಕಂದು ಕಲೆಗಳಾಗಿ ಕಾಣುತ್ತವೆ. ಋತುವಿನ ಕೊನೆ ಭಾಗದಲ್ಲಿ ಪಕ್ವ ಹಣ್ಣುಗಳು ಕೊಳೆಯುತ್ತವೆ ಮತ್ತು ಶಾಖೆಗಳು ಸಾಯುತ್ತವೆ (ಡೈ ಬ್ಯಾಕ್).

ಶಿಫಾರಸುಗಳು

ಜೈವಿಕ ನಿಯಂತ್ರಣ

ಸೋಂಕಿತ ಬೀಜಗಳನ್ನು 52 °C ಬಿಸಿ ನೀರಿನಲ್ಲಿ 30 ನಿಮಿಷಗಳ ಕಾಲ ನೆನೆಸಿ ಚಿಕಿತ್ಸೆ ನೀಡಬಹುದು. ಚಿಕಿತ್ಸೆಯ ಅಪೇಕ್ಷಿತ ಪರಿಣಾಮವನ್ನು ಖಚಿತಪಡಿಸಿಕೊಳ್ಳಲು ತಾಪಮಾನ ಮತ್ತು ಸಮಯವನ್ನು ನಿಖರವಾಗಿ ಅನುಸರಿಸಬೇಕು.

ರಾಸಾಯನಿಕ ನಿಯಂತ್ರಣ

ಜೈವಿಕ ಚಿಕಿತ್ಸೆಗಳು ಲಭ್ಯವಿದ್ದರೆ ತಡೆಗಟ್ಟುವ ಕ್ರಮಗಳೊಂದಿಗೆ ಸಮಗ್ರವಾದ ಮಾರ್ಗವನ್ನು ಯಾವಾಗಲೂ ಪರಿಗಣಿಸಿ. ಶಿಲೀಂಧ್ರನಾಶಕಗಳು ಅಗತ್ಯವಿದ್ದರೆ, ಮನ್ಕೊಜೆಬ್ ಅಥವಾ ತಾಮ್ರ ಆಧಾರಿತ ಉತ್ಪನ್ನಗಳನ್ನು ಒಳಗೊಂಡಿರುವ ಸಿಂಪಡಣೆಯ ಉತ್ಪನ್ನಗಳನ್ನು ಬಳಸಿ. ಹೂಬಿಡುವ ಸಮಯದಲ್ಲಿ ಚಿಕಿತ್ಸೆ ಪ್ರಾರಂಭಿಸಿ.

ಅದಕ್ಕೆ ಏನು ಕಾರಣ

ಈ ರೋಗವು ಸಿ. ಗ್ಲೋಯಿಯೋಸ್ಪೋರಿಯೋಡಸ್ ಮತ್ತು ಸಿ. ಕ್ಯಾಪ್ಸಿಸಿ ಸೇರಿದಂತೆ, ಕೊಲೆಟೊಟ್ರಿಚಮ್ ವರ್ಗಕ್ಕೆ ಸೇರಿದ ಶಿಲೀಂಧ್ರದ ಗುಂಪಿನಿಂದ ಉಂಟಾಗುತ್ತದೆ. ಈ ರೋಗಕಾರಕಗಳು ಎಲ್ಲಾ ಬೆಳವಣಿಗೆ ಹಂತಗಳಲ್ಲಿಯೂ ಅಂದರೆ ಹಸಿಯಾದ ಮತ್ತು ಪಕ್ವವಾದ ಹಣ್ಣುಗಳು ಮತ್ತು ಕೊಯ್ಲಿನ ನಂತರವೂ ಮೆಣಸಿನ ಗಿಡವನ್ನು ಸೋಂಕಿತಗೊಳಿಸಬಹುದು. ಅವು ಬೀಜಗಳ ಒಳಗೆ ಮತ್ತು ಮೇಲೆ, ಸಸ್ಯಗಳ ಉಳಿಕೆಗಳಲ್ಲಿ ಅಥವಾ ಪರ್ಯಾಯ ಆಶ್ರಯದಾತ ವಾದ ಸೊಲೆನೇಸಿಯಾದಲ್ಲಿ ಬದುಕುತ್ತವೆ. ಅವು ಸೋಂಕಿತ ಕಸಿಗಳ ಮೂಲಕವೂ ಬರಬಹುದು. ಶಿಲೀಂಧ್ರಗಳು ಬೆಚ್ಚಗಿನ ಮತ್ತು ಆರ್ದ್ರ ಅವಧಿಗಳಲ್ಲಿ ಬೆಳೆಯುತ್ತವೆ ಮತ್ತು ಮಳೆ ಅಥವಾ ನೀರಾವರಿ ನೀರಿನಿಂದ ಹರಡಬಹುದು. ಒಂದು ಹಣ್ಣಿನ ಸೋಂಕು 10 ° C ನಿಂದ 30 ° C ವರೆಗೆ ಉಷ್ಣಾಂಶದಲ್ಲಿ ಉಂಟಾಗಬಹುದು, 23 ° C ನಿಂದ 27 ° C ವರೆಗೆ ಉಷ್ಣಾಂಶ ರೋಗ ಅಭಿವೃದ್ಧಿಗೆ ಸೂಕ್ತವಾಗಿದೆ. ಹಣ್ಣುಗಳ ಮೇಲ್ಮೈ ಆರ್ದ್ರತೆಯು ಆಂಥ್ರಾಕ್ನೋಸ್ ನ ತೀವ್ರತೆಯನ್ನು ಹೆಚ್ಚಿಸುತ್ತದೆ.


ಮುಂಜಾಗ್ರತಾ ಕ್ರಮಗಳು

  • ನಾಟಿ ಮಾಡುವ ಮೊದಲು ಮಣ್ಣಿಗೆ ಗೊಬ್ಬರ ಸೇರಿಸುವ ಮೂಲಕ ಅದರ ಕಾರ್ಬನ್ ಅಂಶ ಹೆಚ್ಚಿಸಿ.
  • ನೀರು ನಿಲ್ಲುವುದನ್ನು ತಪ್ಪಿಸಲು ಉತ್ತಮ ಒಳಚರಂಡಿ ವ್ಯವಸ್ಥೆ ಮಾಡಿ.
  • ಎರಡು ಸಾಲುಗಳ ನಡುವೆ ಹಸಿಗೊಬ್ಬರ ಹಾಕುವ ಮೂಲಕ ಮಣ್ಣು ಮತ್ತು ಗಿಡಗಳ ನಡುವೆ ಬೀಜಕಗಳು ಹರಡದಂತೆ ತಡೆಯಿರಿ.
  • ನಿಮ್ಮ ಪ್ರದೇಶದಲ್ಲಿ ಲಭ್ಯವಿದ್ದರೆ ನಿರೋಧಕ ಪ್ರಭೇದಗಳನ್ನು ಬೆಳೆಯಿರಿ.
  • ಆರೋಗ್ಯಕರ ಸಸ್ಯಗಳಿಂದ ಅಥವಾ ಪ್ರಮಾಣೀಕೃತ ಮೂಲಗಳಿಂದ ಬೀಜಗಳನ್ನು ಬಳಸಿ.
  • ನೆಡುವ ಮೊದಲು ರೋಗದ ಲಕ್ಷಣಗಳಿಗಾಗಿ ಸಸಿಗಳನ್ನು ಪರಿಶೀಲಿಸಿ.
  • ರೋಗದ ಲಕ್ಷಣಗಳಿಗಾಗಿ ಹೊಲವನ್ನು ನಿಯಮಿತವಾಗಿ ಪರಿಶೀಲಿಸಿ.
  • ಹೊಲ ಮತ್ತು ಸುತ್ತಮುತ್ತ ಕಳೆ ಮತ್ತು ಪರ್ಯಾಯ ಗಿಡಗಳನ್ನು ತೆಗೆಯಿರಿ.
  • ತುಂತುರು ನೀರಾವರಿ ತಡೆಯಿರಿ ಮತ್ತು ಬೆಳಗಿನ ವೇಳೆ ಮಾತ್ರ ನೀರಾವರಿ ಮಾಡಿ.
  • ಭಾಗಗಳಲ್ಲಿ ಸಾರಜನಕ ಬಳಸುವ ಮೂಲಕ ಸಂತುಲಿತ ರಸಗೊಬ್ಬರ ಬಳಕೆ ಮಾಡಿ.
  • ಸುಗ್ಗಿಯ ತ್ಯಾಜ್ಯವನ್ನು ತೆಗೆದುಹಾಕಿ ಅಥವಾ ಸುಡುವ ಮೂಲಕ ನಾಶಪಡಿಸಿ.
  • ಬೆಳೆಗಳನ್ನು ಬದಲಿಸಿ ಆದರೆ ಇತರ ಮೆಣಸಿನಕಾಯಿ, ಟೊಮೆಟೊ ಅಥವಾ ಸ್ಟ್ರಾಬೆರಿ ಬೆಳೆಗಳೊಂದಿಗಲ್ಲ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ