Septoria lycopersici
ಶಿಲೀಂಧ್ರ
ರೋಗಲಕ್ಷಣಗಳು ಹಳೆಯ ಬೆಳವಣಿಗೆಯಿಂದ ಎಳೆಯ ಬೆಳವಣಿಗೆಯವರೆಗೂ ಕೆಳಗಿನಿಂದ ಮೇಲ್ಭಾಗಕ್ಕೆ ಹರಡುತ್ತವೆ. ಸಣ್ಣ, ನೀರು-ನೆನೆಸಿದ ಬೂದುಬಣ್ಣದ ವೃತ್ತಾಕಾರದ ಚುಕ್ಕೆಗಳು ಗಾಢ-ಕಂದು ಅಂಚುಗಳೊಂದಿಗೆ ಹಳೆಯ ಎಲೆಗಳ ಕೆಳಭಾಗದಲ್ಲಿ ಕಾಣಿಸುತ್ತವೆ. ಕಾಯಿಲೆಯ ನಂತರದ ಹಂತಗಳಲ್ಲಿ, ಕಲೆಗಳು ದೊಡ್ಡದಾಗುತ್ತವೆ ಮತ್ತು ಸಂಯೋಜಿಸುತ್ತವೆ, ಮತ್ತು ಕಪ್ಪು ಚುಕ್ಕೆಗಳು ಅದರ ಕೇಂದ್ರಗಳಲ್ಲಿ ಕಾಣಿಸಿಕೊಳ್ಳುತ್ತವೆ. ಅದೇ ಮಾದರಿಯನ್ನು ಕಾಂಡಗಳು ಮತ್ತು ಹೂವುಗಳ ಮೇಲೂ ಸಹ ಗಮನಿಸಬಹುದು, ಆದರೆ ಹಣ್ಣುಗಳಲ್ಲಿ ಇದು ವಿರಳವಾಗಿದೆ. ತೀವ್ರವಾಗಿ ಸೋಂಕಿತ ಎಲೆಗಳು ಸ್ವಲ್ಪ ಹಳದಿ ಬಣ್ಣಕ್ಕೇ ತಿರುಗಿರುತ್ತದೆ, ಸೊರಗುತ್ತವೆ ಮತ್ತು ಬಿದ್ದುಹೋಗುತ್ತವೆ. ವಿಪರ್ಣವು ಹಣ್ಣು ಬಿಸಿಲಿನಿಂದ ಸುಡುವುದಕ್ಕೆ (ಹಣ್ಣಿನ ಸನ್ ಸ್ಕೇಲ್ಡಿಂಗ್) ಕಾರಣವಾಗುತ್ತದೆ.
ಬೋರ್ಡೆಕ್ಸ್ ಮಿಶ್ರಣ, ತಾಮ್ರದ ಹೈಡ್ರಾಕ್ಸೈಡ್, ತಾಮ್ರದ ಸಲ್ಫೇಟ್, ಅಥವಾ ತಾಮ್ರದ ಆಕ್ಸಿಕ್ಲೋರೈಡ್ ಸಲ್ಫೇಟ್ನಂತಹ ತಾಮ್ರ ಆಧಾರಿತ ಶಿಲೀಂಧ್ರನಾಶಕಗಳು ರೋಗಕಾರಕವನ್ನು ನಿಯಂತ್ರಿಸಲು ಸಹಾಯ ಮಾಡಬಹುದು. ಕೊನೆಯ ಋತುವಿನ ಉದ್ದಕ್ಕೂ 7 ರಿಂದ 10 ದಿನದ ಮಧ್ಯಂತರಗಳಲ್ಲಿ ಹಾಕಿ. ಕೀಟನಾಶಕ ಲೇಬಲ್ನಲ್ಲಿ ಪಟ್ಟಿ ಮಾಡಲಾದ ಸುಗ್ಗಿಯ ನಿರ್ಬಂಧಗಳನ್ನು ಅನುಸರಿಸಿ.
ಜೈವಿಕ ಚಿಕಿತ್ಸೆಗಳು ಲಭ್ಯವಿದ್ದರೆ ಒಟ್ಟಾಗಿ ತಡೆಗಟ್ಟುವ ಕ್ರಮಗಳೊಂದಿಗೆ ಸಮಗ್ರವಾದ ಮಾರ್ಗವನ್ನು ಯಾವಾಗಲೂ ಪರಿಗಣಿಸಿ. ಮ್ಯಾನೆಬ್, ಮನ್ಕೊಜೆಬ್, ಕ್ಲೋರೊಥಲೋನಿಲ್ ಹೊಂದಿರುವ ಶಿಲೀಂಧ್ರನಾಶಕಗಳು ಪರಿಣಾಮಕಾರಿಯಾಗಿ ಸೆಪ್ಟೋರಿಯಾ ಎಲೆ ಕಲೆ ಅನ್ನು ನಿಯಂತ್ರಿಸುತ್ತವೆ. ಋತುವಿನ ಉದ್ದಕ್ಕೂ 7 ರಿಂದ 10 ದಿನದ ಮಧ್ಯಂತರದಲ್ಲಿ, ಮುಖ್ಯವಾಗಿ ಹೂಬಿಡುವ ಮತ್ತು ಹಣ್ಣು ಸೆಟ್ಟಿಂಗ್ ಸಮಯದಲ್ಲಿ ಹಾಕಿ. ಕೀಟನಾಶಕ ಲೇಬಲ್ನಲ್ಲಿ ಪಟ್ಟಿ ಮಾಡಲಾದ ಸುಗ್ಗಿಯ ನಿರ್ಬಂಧಗಳನ್ನು ಅನುಸರಿಸಿ.
ಸಪ್ಟೊರಿಯಾ ಎಲೆ ಕಲೆಗಳು ವಿಶ್ವಾದ್ಯಂತ ಸಂಭವಿಸುತ್ತವೆ ಮತ್ತು ಇದು ಸೆಪ್ಟೋರಿಯಾ ಲೈಕೊಪೆರ್ಸಿಸಿ ಶಿಲೀಂಧ್ರದಿಂದ ಉಂಟಾಗುತ್ತದೆ. ಶಿಲೀಂಧ್ರವು ಆಲೂಗೆಡ್ಡೆ ಮತ್ತು ಟೊಮೆಟೋ ಕುಟುಂಬದ ಸಸ್ಯಗಳಿಗೆ ಮಾತ್ರ ಸೋಂಕು ತಗುಲಿಸುತ್ತದೆ. ಶಿಲೀಂಧ್ರದ ಬೆಳವಣಿಗೆಯ ತಾಪಮಾನವು 15 ಡಿಗ್ರಿ ಮತ್ತು 27 ಡಿಗ್ರಿ ಸೆಲ್ಶಿಯಸ್ ನಡುವೆ ಇರುತ್ತದೆ, ಅದು 25 ಡಿಗ್ರಿ ಸೆಲ್ಷಿಯಸ್ನಲ್ಲಿ ಉತ್ತಮ ಬೆಳವಣಿಗೆಯನ್ನು ಹೊಂದುತ್ತದೆ. ಬೀಜಕಣಗಳು ಓವರ್ಹೆಡ್ ನೀರಾವರಿಯಿಂದ, ಚಿಮ್ಮುವ ಮಳೆಯಿಂದ, ಕೀಳುವವರ ಕೈಗಳು ಮತ್ತು ಉಡುಪುಗಳಿಂದ, ಜೀರುಂಡೆಗಳಂತಹ ಕೀಟಗಳಿಂದ ಮತ್ತು ಸಾಗುವಳಿ ಉಪಕರಣಗಳಿಂದ ಹರಡಬಹುದು. ಇದು ಸೊಲ್ಯಾನೇಸಿಯಸ್ ಕಳೆಗಳ ಮೇಲೆ ಮತ್ತು ಮಣ್ಣು ಅಥವಾ ಮಣ್ಣಿನ ಉಳಿಕೆಗಳಲ್ಲಿ ಅಲ್ಪಾವಧಿಗಳವರೆಗೆ ಚಳಿಗಾಲವನ್ನು ಕಳೆಯುತ್ತದೆ.