ಬಾದಾಮಿ

ಬಾದಾಮಿಯ ಕೆಂಪು ಎಲೆ ಮಚ್ಚೆ

Polystigma ochraceum

ಶಿಲೀಂಧ್ರ

ಸಂಕ್ಷಿಪ್ತವಾಗಿ

  • ಕಂದು ಬಣ್ಣದ ಹೊರವಲಯದಿಂದ ಸುತ್ತುವರಿದ ಎಲೆಗಳ ಮೇಲೆ ತೆಳು ಹಸಿರಿನಿಂದ ಹಳದಿ ಕಿತ್ತಳೆ ಅಥವಾ ಗಾಢ ಬಣ್ಣದ ಅನಿಯಮಿತ ಕಲೆಗಳು.
  • ಎಲೆಗಳು ತುದಿ ಅಥವಾ ಅಂಚುಗಳಿಂದ ಸುರುಳಿಯಾಗಿ ಒಣಗುತ್ತವೆ.
  • ಅಕಾಲಿಕ ಎಲೆ ಉದುರುವಿಕೆ ಸಾಧ್ಯ.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು
ಬಾದಾಮಿ

ಬಾದಾಮಿ

ರೋಗಲಕ್ಷಣಗಳು

ರೋಗಲಕ್ಷಣಗಳು ಎಲೆಗಳ ಎರಡೂ ಬದಿಗಳಲ್ಲಿ ತೆಳು ಹಸಿರು ಚುಕ್ಕೆಗಳಾಗಿ ಪ್ರಾರಂಭವಾಗುತ್ತವೆ ಮತ್ತು ನಂತರ ಹಳದಿ-ಕಿತ್ತಳೆ ತೇಪೆಗಳಾಗಿ ಬದಲಾಗುತ್ತವೆ. ಈ ತೇಪೆಗಳು ವಸಂತಕಾಲದ ಉದ್ದಕ್ಕೂ ಗಾತ್ರದಲ್ಲಿ ಬೆಳೆಯುತ್ತವೆ ಮತ್ತು ಕ್ರಮೇಣ ಒಂದು ಗೂಡುತ್ತವೆ. ಬೇಸಿಗೆಯ ಕೊನೆಯಲ್ಲಿ ಎಲೆಯ ಮೇಲ್ಮೈನ ದೊಡ್ಡ ಭಾಗವನ್ನು ಆವರಿಸುತ್ತವೆ. ಅವು ಹರಡಿದಂತೆ, ಅವುಗಳ ಮಧ್ಯಭಾಗವು ಗಾಢವಾಗುತ್ತದೆ ಮತ್ತು ಅನಿಯಮಿತವಾಗುತ್ತದೆ. ಕಂದು ಬಣ್ಣದ ಹೊರವಲಯದಿಂದ ಸುತ್ತುವರಿಯುತ್ತವೆ. ರೋಗದ ಬೆಳವಣಿಗೆಯ ಮುಂದುವರಿದ ಹಂತಗಳಲ್ಲಿ, ಎಲೆಗಳು ಸುರುಳಿಯಾಗಿರುತ್ತವೆ ಮತ್ತು ನೆಕ್ರೋಟಿಕ್ ಆಗುತ್ತವೆ. ಇದು ತುದಿ ಅಥವಾ ಅಂಚುಗಳಿಂದ ಪ್ರಾರಂಭವಾಗುತ್ತದೆ. ಕೆಂಪು ಎಲೆ ಮಚ್ಚೆಯು ಅಕಾಲಿಕ ಎಲೆ ಉದುರುವಿಕೆಗೆ ಕಾರಣವಾಗಬಹುದು. ಆದ್ದರಿಂದ ದ್ಯುತಿಸಂಶ್ಲೇಷಣ ಸಾಮರ್ಥ್ಯದಲ್ಲಿನ ಇಳಿಕೆಗೆ ಕಾರಣವಾಗುತ್ತದೆ ಮತ್ತು ಇದರಿಂದಾಗಿ ಇಳುವರಿ ಮೇಲೆ ಪರಿಣಾಮ ಬೀರಬಹುದು.

ಶಿಫಾರಸುಗಳು

ಜೈವಿಕ ನಿಯಂತ್ರಣ

ಈ ರೋಗಕಾರಕದ ವಿರುದ್ಧ ಯಾವುದೇ ಜೈವಿಕ ನಿಯಂತ್ರಣ ತಿಳಿದಿಲ್ಲ. ಎಲೆಗಳ ಸೋಂಕನ್ನು ಗಣನೀಯವಾಗಿ ಕಡಿಮೆ ಮಾಡುವ ಸಾವಯವ ಶಿಲೀಂಧ್ರನಾಶಕಗಳೆಂದರೆ ತಾಮ್ರದ ಆಕ್ಸಿಕ್ಲೋರೈಡ್ (2 ಗ್ರಾಂ/ಲೀ), ತಾಮ್ರದ ಹೈಡ್ರಾಕ್ಸೈಡ್ (2 ಗ್ರಾಂ/ಲೀ) ಮತ್ತು ಬೋರ್ಡೆಕ್ಸ್ ಮಿಶ್ರಣ (10 ಗ್ರಾಂ/ಲೀ). ದಳ ಬೀಳುವ ಸಮಯದಲ್ಲಿ ಒಂದು ಬಾರಿ ಮತ್ತು ನಂತರ 14 ದಿನಗಳ ಅಂತರದಲ್ಲಿ ಎರಡನೇ ಬಾರಿ ಶಿಲೀಂಧ್ರನಾಶಕವನ್ನು ಬಳಸುವುದು ರೋಗವನ್ನು ಕಡಿಮೆ ಮಾಡಲು ಪರಿಣಾಮಕಾರಿಯಾಗಿದೆ.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದಲ್ಲಿ ಜೈವಿಕ ಚಿಕಿತ್ಸೆಗಳ ಜೊತೆಗೆ ತಡೆಗಟ್ಟುವ ಕ್ರಮಗಳಿರುವ ಸಂಯೋಜಿತ ವಿಧಾನವನ್ನು ಯಾವಾಗಲೂ ಪರಿಗಣಿಸಿ. ಎಲೆಗಳ ಸೋಂಕನ್ನು ಗಮನಾರ್ಹವಾಗಿ ಕಡಿಮೆ ಮಾಡುವ ಶಿಲೀಂಧ್ರನಾಶಕಗಳು ಮ್ಯಾಂಕೋಜೆಬ್ ಮತ್ತು ಸಂಬಂಧಿತ ಡೈಥಿಯೋಕಾರ್ಬಮೇಟ್‌ಗಳು (2 ಗ್ರಾಂ/ಲೀ). ದಳ ಬೀಳುವ ಸಮಯದಲ್ಲಿ ಒಂದು ಬಾರಿ ಮತ್ತು ನಂತರ 14 ದಿನಗಳ ಅಂತರದಲ್ಲಿ ಎರಡನೇ ಬಾರಿ ಶಿಲೀಂಧ್ರನಾಶಕವನ್ನು ಬಳಸುವುದು ರೋಗವನ್ನು ಕಡಿಮೆ ಮಾಡಲು ಪರಿಣಾಮಕಾರಿ ಎಂದು ಕಂಡುಬಂದಿದೆ.

ಅದಕ್ಕೆ ಏನು ಕಾರಣ

ರೋಗಲಕ್ಷಣಗಳು ಪಾಲಿಸ್ಟಿಗ್ಮಾ ಓಕ್ರೇಸಿಯಮ್ ಎಂಬ ಶಿಲೀಂಧ್ರದಿಂದ ಉಂಟಾಗುತ್ತವೆ. ಇದು ಜೀವಂತ ಎಲೆಗಳ ಮೇಲೆ ಗಾಢವಾದ ಬಣ್ಣದ ಶಿಲೀಂಧ್ರ ರಚನೆಗಳನ್ನು ರೂಪಿಸುತ್ತದೆ ಮತ್ತು ಸಪ್ರೊಫೈಟ್ ಆಗಿ ನೆಲದ ಮೇಲಿನ ಮರದ ಶೇಷಗಳ ಮೇಲೆ ಚಳಿಗಾಲವನ್ನು ಕಳೆಯಬಹುದು. ಈ ಬಿದ್ದ ಎಲೆಗಳ ಮೇಲೆ, ಶಿಲೀಂಧ್ರವು ಸಂತಾನೋತ್ಪತ್ತಿ ರಚನೆಗಳನ್ನು ರೂಪಿಸುತ್ತದೆ. ಅದು ಪರಿಸ್ಥಿತಿಗಳು ಅನುಕೂಲಕರವಾದಾಗ ಮುಂದಿನ ವಸಂತಕಾಲದಲ್ಲಿ ಬೀಜಕಗಳನ್ನು ಬಿಡುಗಡೆ ಮಾಡುತ್ತದೆ. ಬೀಜಕಗಳ ಬಿಡುಗಡೆಯು ಹೂಬಿಡುವ ಸಮಯದಿಂದ ಪ್ರಾರಂಭವಾಗುತ್ತದೆ ಮತ್ತು ದಳಗಳು ಬೀಳುವ ಸಮಯದಲ್ಲಿ ಅತೀ ಹೆಚ್ಚಾಗಿರುತ್ತದೆ. ಈ ಶಿಲೀಂಧ್ರವು ದ್ಯುತಿಸಂಶ್ಲೇಷಣೆಯ ದರಗಳು ಮತ್ತು ಮರಗಳ ಉತ್ಪಾದಕತೆಯ ಮೇಲೆ ಪರಿಣಾಮ ಬೀರುತ್ತದೆ.


ಮುಂಜಾಗ್ರತಾ ಕ್ರಮಗಳು

  • ಲಭ್ಯವಿದ್ದರೆ (ಹಲವು ಮಾರುಕಟ್ಟೆಯಲ್ಲಿ ಲಭ್ಯವಿವೆ) ರೋಗ ನಿರೋಧಕ ಅಥವಾ ರೋಗಕ್ಕೆ ಕಡಿಮೆ ಒಳಗಾಗುವ ಪ್ರಭೇದಗಳನ್ನು ನೆಡಿ.
  • ರೋಗದ ಲಕ್ಷಣಗಳಿಗಾಗಿ ನಿಯಮಿತವಾಗಿ ಹಣ್ಣಿನ ತೋಟವನ್ನು ಮೇಲ್ವಿಚಾರಣೆ ಮಾಡಿ.
  • ಇನಾಕ್ಯುಲಮ್ ಅನ್ನು ಕಡಿಮೆ ಮಾಡಲು ಸತ್ತ, ಸೋಂಕಿತ ಮರವನ್ನು ಕತ್ತರಿಸಿ.
  • ಸೋಂಕಿತ ಬಾದಾಮಿ ಮರದ ಭಾಗಗಳನ್ನು ಮತ್ತು ಕೊಳೆಯುತ್ತಿರುವ ಎಲೆಗಳು ಮತ್ತು ಉಳಿದ ಹೂವಿನ ಭಾಗಗಳನ್ನು ತೆಗೆದುಹಾಕಿ.
  • ತೆಗೆದ ಅಂಗಾಂಶಗಳನ್ನು ಸುಡುವ ಅಥವಾ ಆಳವಾಗಿ ಹೂಳುವ ಮೂಲಕ ನಾಶಪಡಿಸಬೇಕು.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ