Pseudocercospora cladosporioides
ಶಿಲೀಂಧ್ರ
ಎಲೆಗಳ ಮೇಲಿನ ಮತ್ತು ಕೆಳಗಿನ ಭಾಗದಲ್ಲಿ ರೋಗದ ಲಕ್ಷಣಗಳು ಭಿನ್ನವಾಗಿರುತ್ತವೆ. ಮೇಲಿನ ಮೇಲ್ಮೈಯಲ್ಲಿ, ಅನಿಯಮಿತ, ಹರಡಿದಂತಹ ಕ್ಲೋರೋಟಿಕ್ ಕಲೆಗಳು ಕಾಣಿಸಿಕೊಳ್ಳುತ್ತವೆ. ಅವು ಕಾಲ ಕ್ರಮೇಣ ಕಂದು ಮತ್ತು ನೆಕ್ರೋಟಿಕ್ ಆಗುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ, ಎಲೆಯ ಕೆಳಗಿನ ಮೇಲ್ಮೈ ಮಚ್ಚೆಗಳನ್ನು ಹೊಂದಿರುತ್ತವೆ. ಅದು ಶಿಲೀಂಧ್ರದ ಬೆಳವಣಿಗೆಯಿಂದಾಗಿ ಕ್ರಮೇಣ ಕೊಳಕು ಬೂದು ಬಣ್ಣಕ್ಕೆ ತಿರುಗುತ್ತದೆ. ಎಲೆಗಳು ತರುವಾಯ ಹಳದಿ, ಕೆಂಪು-ಕಂದು ಬಣ್ಣಕ್ಕೆ ತಿರುಗುತ್ತವೆ ಮತ್ತು ಅಕಾಲಿಕವಾಗಿ ಉದುರಬಹುದು. ಇದು ತೀವ್ರತರವಾದ ಪ್ರಕರಣಗಳಲ್ಲಿ ಇದು ಪೂರ್ತಿ ಎಲೆ ಉದುರುವಿಕೆಗೆ ಕಾರಣವಾಗುತ್ತದೆ. ಬಾಧಿತ ಕೊಂಬೆಗಳು ಅಥವಾ ಮರಗಳು ಸಾಮಾನ್ಯವಾಗಿ ಕುಂಠಿತ ಬೆಳವಣಿಗೆಯನ್ನು ತೋರಿಸುತ್ತವೆ. ಹಣ್ಣುಗಳ ಮೇಲೆ ಸಣ್ಣ, ಕಂದು ಚುಕ್ಕೆಗಳು ಬೆಳೆಯುತ್ತವೆ ಮತ್ತು ವಿಳಂಬವಾದ, ಏಕರೂಪವಲ್ಲದ ಪಕ್ವತೆಯನ್ನು ಹೊಂದಿರಬಹುದು. ಈ ರೋಗಲಕ್ಷಣಗಳನ್ನು ಫ್ಯುಸಿಕ್ಲಾಡಿಯಮ್ ಒಲಿಜಿನಿಯಮ್ ಅಥವಾ ಕೊಲೆಟೋಟ್ರಿಕಮ್ ಜಾತಿಗಳಂತಹ ಇತರ ರೋಗಕಾರಕಗಳಿಂದ ಮತ್ತು ಅಜೀವಕ ಅಂಶಗಳಿಂದ ಉಂಟಾಗುವ ರೋಗಲಕ್ಷಣಗಳೆಂದು ತಪ್ಪು ತಿಳಿಯುವ ಸಾಧ್ಯತೆ ಇದೆ.
ರೋಗವನ್ನು ನಿಯಂತ್ರಿಸಲು ಬೋರ್ಡೆಕ್ಸ್ ಮಿಶ್ರಣದಂತಹ ಸಾವಯವ ತಾಮ್ರದ ಸೂತ್ರೀಕರಣಗಳನ್ನು ಮಳೆ ಬೀಳುವ ಮೊದಲು ಅಥವಾ ಕೊಯ್ಲು ಮಾಡಿದ ನಂತರ ನೇರವಾಗಿ ಅನ್ವಯಿಸಬಹುದು.
ಲಭ್ಯವಿದ್ದಲ್ಲಿ ಜೈವಿಕ ಚಿಕಿತ್ಸೆಗಳ ಜೊತೆಗೆ ತಡೆಗಟ್ಟುವ ಕ್ರಮಗಳಿರುವ ಸಂಯೋಜಿತ ವಿಧಾನವನ್ನು ಯಾವಾಗಲೂ ಪರಿಗಣಿಸಿ. ತಾಮ್ರದ ಹೈಡ್ರಾಕ್ಸೈಡ್, ಕಾಪರ್ ಆಕ್ಸಿಕ್ಲೋರೈಡ್, ಟ್ರೈಬಾಸಿಕ್ ಕಾಪರ್ ಸಲ್ಫೇಟ್ ಅಥವಾ ತಾಮ್ರದ ಆಕ್ಸೈಡ್ ಅನ್ನು ಹೊಂದಿರುವ ಫಿಕ್ಸ್ಡ್ ತಾಮ್ರದ ಸಿಂಪಡಣೆಗಳನ್ನು ಎಲೆಗಳನ್ನು ರಕ್ಷಣಾತ್ಮಕ ಪದರದಿಂದ ಮುಚ್ಚಲು ಬಳಸಬಹುದು. ತಾಮ್ರದ ಸ್ಪ್ರೇಗಳನ್ನು ಕೊಯ್ಲು ಮಾಡಿದ ನಂತರ ಶರತ್ಕಾಲದ ಮತ್ತು ಚಳಿಗಾಲದ ಮಳೆಗಳು ಶಿಲೀಂಧ್ರಗಳ ಬೀಜಕಗಳನ್ನು ಹರಡುವ ಮೊದಲೇ ನೇರವಾಗಿ ಅನ್ವಯಿಸಬೇಕು. ಹಣ್ಣಿನ ಗುಣಮಟ್ಟವನ್ನು ಹಾಳು ಮಾಡದಂತೆ ತಡೆಯಲು ಸುಗ್ಗಿಯ ಅವಧಿಯಲ್ಲಿ ಅವುಗಳನ್ನು ಬಳಸಬಾರದು.
ಸೆರ್ಕೊಸ್ಪೊರಾ ಕ್ಲಾಡೋಸ್ಪೊರಿಯೊಯ್ಡ್ಸ್ ಎಂಬ ಶಿಲೀಂಧ್ರದಿಂದ ರೋಗಲಕ್ಷಣಗಳು ಉಂಟಾಗುತ್ತವೆ. ಇದು ಮರದ ಮೇಲೆ ಉಳಿಯುವ ಸೋಂಕಿತ ಎಲೆಗಳ ಮೇಲೆ, ಇನ್ನೂ ನಿಖರವಾಗಿ ಹೇಳಬೇಕೆಂದರೆ ಅವುಗಳ ಗಾಯಗಳಲ್ಲಿ ಬದುಕುಳಿಯುತ್ತದೆ. ಶರತ್ಕಾಲದಲ್ಲಿ ಇದು ಬೆಳವಣಿಗೆಯನ್ನು ಪುನರಾರಂಭಿಸಿದಂತೆ, ಈ ಗಾಯಗಳ ಅಂಚುಗಳು ಹೆಚ್ಚಾಗುತ್ತವೆ ಮತ್ತು ಬೀಜಕಗಳ ಹೊಸ ಗುಂಪು ಅಲ್ಲಿ ಬೆಳೆಯುತ್ತದೆ. ಹೊಸ ಸೋಂಕುಗಳು ಹೆಚ್ಚಾಗಿ ಮಳೆಯಿಂದಾಗಿ ಮತ್ತು ಹೆಚ್ಚಾಗಿ ಚಳಿಗಾಲದಲ್ಲಿ ಸಂಭವಿಸುತ್ತವೆ. ಬೇಸಿಗೆಯ ವೇಳೆಗೆ, ಹೆಚ್ಚಿನ ರೋಗಗ್ರಸ್ತ ಎಲೆಗಳು ಮರಗಳಿಂದ ಉದುರುತ್ತವೆ. ಕೆಲವು ಆರೋಗ್ಯಕರ ಎಲೆಗಳು ಮಾತ್ರ ತುದಿಗಳಲ್ಲಿ ಉಳಿಯುತ್ತವೆ. ಇದರಿಂದಾಗಿ ಸ್ವಲ್ಪ ಎಲೆಗಳಿರುವ ಕೊಂಬೆಗಳು ಮರದಲ್ಲಿ ಉಳಿಯುತ್ತವೆ. ಹೆಚ್ಚಿನ ತಾಪಮಾನವು ಶಿಲೀಂಧ್ರದ ಜೀವನ ಚಕ್ರವನ್ನು ನಿರ್ಬಂಧಿಸುತ್ತದೆ. ಆರ್ಥಿಕ ಹಾನಿಯನ್ನುಂಟು ಮಾಡುವಷ್ಟು ಗಂಭೀರವಾಗುವುದಕ್ಕೆ ಆ ರೋಗಕ್ಕೆ ಹಲವಾರು ವರ್ಷಗಳು ಬೇಕಾಗಬಹುದು. ಹೆಚ್ಚಿನ ಮಟ್ಟದ ಎಲೆ ಉದುರುವಿಕೆ ಮತ್ತು ತಡವಾದ ಮತ್ತು ಏಕರೂಪವಲ್ಲದ ಹಣ್ಣಾಗುವಿಕೆ ತೈಲದ ಇಳುವರಿಯಲ್ಲಿನ ಇಳಿಕೆಗೆ ಕಾರಣವಾಗುತ್ತದೆ.