ಪಪ್ಪಾಯಿ

ಫೈಟೊಫ್ಥೊರಾ ಶಿರ ಮತ್ತು ಬೇರು ಕೊಳೆ ರೋಗ

Phytophthora spp.

ಶಿಲೀಂಧ್ರ

ಸಂಕ್ಷಿಪ್ತವಾಗಿ

  • ಸಣ್ಣ ಮತ್ತು ಸ್ವಲ್ಪ ಮಟ್ಟಿಗೆ ಹಳದಿಯಾದ ಎಲೆಗಳು.
  • ಹಣ್ಣುಗಳ ಕಳಪೆ ಬೆಳವಣಿಗೆ.
  • ಬೇರುಗಳ ಒಳಗಿನ ಅಂಗಾಂಶಗಳಲ್ಲಿ ಕೊಳೆತ.
  • ಕಾಂಡಗಳನ್ನು ಕತ್ತರಿಸಿ ನೋಡಿದಾಗ ಮೇಲಿನಿಂದ ಕೆಳಗೆ ಬೇರಿನವರೆಗೂ ಹರಡಿರುವ ಕೆಂಪ ಮಿಶ್ರಿತ ಕಂದು ಬಣ್ಣದ ನಿರ್ಜೀವ ಕ್ಯಾಂಕರ್ ಗಳನ್ನು ಕಾಣಬಹುದು.
  • ಕ್ಯಾಂಕರ್ ಗಳು ಅಂತಿಮವಾಗಿ ಕಾಂಡವನ್ನು ಸುತ್ತುವರೆದು ಕೊನೆಗೆ ಸಸ್ಯವನ್ನು ಕೊಲ್ಲುತ್ತವೆ.

ಇವುಗಳಲ್ಲಿ ಸಹ ಕಾಣಬಹುದು

8 ಬೆಳೆಗಳು
ಹಾಗಲಕಾಯಿ
ದ್ರಾಕ್ಷಿ
ಮರಗೆಣಸು
ಕಲ್ಲಂಗಡಿ
ಇನ್ನಷ್ಟು

ಪಪ್ಪಾಯಿ

ರೋಗಲಕ್ಷಣಗಳು

ರೋಗಲಕ್ಷಣಗಳು ಹಲವು ಬೇರು ರೋಗಗಳ ಲಕ್ಷಣಗಳನ್ನು ಹೊಂದಿರುತ್ತವೆ. ಸಣ್ಣ ಮತ್ತು ಸ್ವಲ್ಪ ಕ್ಲೋರೋಟಿಕ್ ಆದ ಎಲೆಗಳು, ಕಳಪೆ ಹಣ್ಣಿನ ಬೆಳವಣಿಗೆ ಮತ್ತು ಒಳಗಿನ ಅಂಗಾಂಶಗಳಲ್ಲಿ ಕೊಳೆತ ಕಂಡುಬರುವುದು ಶಿರ ಮತ್ತು ಬೇರು ಕೊಳೆರೋಗದ ಪ್ರಮುಖ ಲಕ್ಷಣಗಳಾಗಿವೆ. ಸೋಂಕಿತ ಬಳ್ಳಿಗಳ ಬೆಳವಣಿಗೆ ಕುಂಠಿತವಾಗುತ್ತವೆ ಮತ್ತು ಎಲೆಗಳು ವಿರಳವಾಗಿರುತ್ತವೆ ಮತ್ತು ಅಕಾಲಿಕವಾಗಿ ಉದುರಬಹುದು. ಕಾಂಡಗಳನ್ನು ಕತ್ತರಿಸಿ ನೋಡಿದಾಗ ಮೇಲಿನಿಂದ ಕೆಳಗೆ ಬೇರಿನವರೆಗೂ ಹರಡಿರುವ ಕೆಂಪ ಮಿಶ್ರಿತ ಕಂದು ಬಣ್ಣದ ನಿರ್ಜೀವ ಕ್ಯಾಂಕರ್ ಗಳನ್ನು ಕಾಣಬಹುದು. ಕ್ಯಾಂಕರ್ ಗಳು ಅಂತಿಮವಾಗಿ ಕಾಂಡವನ್ನು ಸುತ್ತುವರಿದು, ಬಳ್ಳಿಯ ಮೇಲ್ಭಾಗಕ್ಕೆ ನೀರು ಮತ್ತು ಪೌಷ್ಟಿಕಾಂಶಗಳ ಸಾಗಾಣಿಕೆಯನ್ನು ನಿರ್ಭಂದಿಸುತ್ತದೆ. ಅಂತಿಮವಾಗಿ ಸಸ್ಯವನ್ನು ಕೊಲ್ಲುತ್ತದೆ. ಬಳ್ಳಿಗಳನ್ನು ನೆಲದಿಂದ ಸುಲಭವಾಗಿ ಎಳೆದು ತೆಗೆಯಬಹುದು.

ಶಿಫಾರಸುಗಳು

ಜೈವಿಕ ನಿಯಂತ್ರಣ

ಶಿಲೀಂಧ್ರ-ವಿರೋಧಿ ಜೈವಿಕ ಚಿಕಿತ್ಸೆಯನ್ನು ಕೈಗೊಳ್ಳಬಹುದು, ಉದಾಹರಣೆಗೆ ಗಾಯಗಳು ಮತ್ತು ಸಮರುವಿಕೆಯನ್ನು ಮಾಡಲು ಕತ್ತರಿಸಿದ ಭಾಗಗಳನ್ನು ಬೋರ್ಡೆಕ್ಸ್ ಮಿಶ್ರಣದೊಂದಿಗೆ ಪೇಂಟ್ ಮಾಡುವುದು. ಅದೇ ಮಿಶ್ರಣದಿಂದ ನಿರೋಧಕ ಚಿಕಿತ್ಸೆಯನ್ನು ಮಾಡಿದರೂ ಸಹ ಅದು ದಾಳಿಯನ್ನು ಕಡಿಮೆ ಮಾಡುತ್ತದೆ. ಮರಗಳಿಗೆ ಅತಿಯಾಗಿ ಸೋಂಕಾಗಿದ್ದರೆ, ರೋಗವು ಗುಣಪಡಿಸಲು ಆಗುವುದಿಲ್ಲ ಮತ್ತು ನಿರೋಧಕ ಕ್ರಮಗಳು ಮಾತ್ರ ಅದರ ತೀವ್ರತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ.

ರಾಸಾಯನಿಕ ನಿಯಂತ್ರಣ

ಜೈವಿಕ ಚಿಕಿತ್ಸೆಗಳು ಮತ್ತು ತಡೆಗಟ್ಟುವ ಕ್ರಮಗಳಿರುವ ಸಮಗ್ರ ಮಾರ್ಗವಿದ್ದರೆ ಅದನ್ನೇ ಯಾವಾಗಲೂ ಮೊದಲು ಪರಿಗಣಿಸಿ. ನೀರಾವರಿಯ ಮೂಲಕ ಶಿಲೀಂಧ್ರನಾಶಕಗಳನ್ನು ಸಿಂಪಡಿಸುವುದು ಮರಗಳು ಮತ್ತು ಬಳ್ಳಿಗಳಿಗೆ ಚಿಕಿತ್ಸೆ ನೀಡುವ ಪರಿಣಾಮಕಾರಿ ಮಾರ್ಗವಾಗಿದೆ. ಮೊದಲ ರೋಗಲಕ್ಷಣಗಳು ಕಂಡುಬಂದಾಗ, ಫೊಸ್ಟೈಲ್ ಅಲ್ಯೂಮಿನಿಯಂ, ಬೆನೊಮಿಲ್, ಲೋಡಾಕ್ಸೈಲ್ ಅಥವಾ ಮೀಥೈಲ್ ಥಿಯೋಪನೆಟ್-ಮೀಥೈಲ್ಗಳನ್ನು ಮೂಲವಾಗಿ ಹೊಂದಿರುವ ಶಿಲೀಂಧ್ರನಾಶಕವನ್ನು ಚೆನ್ನಾಗಿ ನೀರಾವರಿ ಮೂಲಕ ಮರಗಳ ತಳಕ್ಕೆ ಹಾಕಿ. ರೋಗದ ಹರಡುವಿಕೆಯನ್ನು ತಡೆಗಟ್ಟಲು, ಕೃಷಿ ಉಪಕರಣಗಳನ್ನು ಬಳಸಿದ ನಂತರ ಬ್ಲೀಚ್ ಹಾಕಿ ತೊಳೆಯಬೇಕು.

ಅದಕ್ಕೆ ಏನು ಕಾರಣ

ಫೈಟೊಫ್ಥೊರಾ ವಂಶದ ಅನೇಕ ಶಿಲೀಂಧ್ರಗಳಿಂದ ಈ ರೋಗಲಕ್ಷಣಗಳು ಉಂಟಾಗುತ್ತವೆ. ಒಮ್ಮೆ ಜಮೀನಿಗೆ ಕಾಲಿಟ್ಟ ನಂತರ, ಇವು ಅನೇಕ ವರ್ಷಗಳ ಕಾಲ ಮಣ್ಣಿನಲ್ಲಿ ಬದುಕಬಲ್ಲವು. ಭೂಮಿಯಿಂದ ಇವುಗಳ ನಿರ್ಮೂಲನೆ ಸಾಧ್ಯವಿಲ್ಲ. ಈ ಶಿಲೀಂಧ್ರಗಳು ಚಟುವಟಿಕೆಗಾಗಿ ಹೆಚ್ಚು ಮಣ್ಣಿನ ತೇವಾಂಶ ಮಟ್ಟವನ್ನು ಮತ್ತು ಆರ್ದ್ರ ಹಾಗು ಬಿಸಿ ವಾತಾವರಣವನ್ನು ಅವಲಂಬಿಸಿರುತ್ತವೆ. ರೋಗಪೀಡಿತ ಬಳ್ಳಿಗಳು ತೋಟದಲ್ಲಿ ಸಾಮಾನ್ಯವಾಗಿ ಒಂದೇ ಅಥವಾ ಸಣ್ಣ ಗುಂಪಿನಲ್ಲಿ ಕಂಡುಬರುತ್ತವೆ. ನೀರು ಸರಿಯಾಗಿ ಬಸಿದುಹೋಗದ, ಆಗಾಗ್ಗೆ ಪ್ರವಾಹವಾಗುವ ಪ್ರದೇಶಗಳಲ್ಲಿ ಅಥವಾ ಅತೀ ಹೆಚ್ಚು ನೀರಾವರಿ ಮಾಡುವಲ್ಲಿ ಕಂಡುಬರುತ್ತವೆ. ಹನಿ ನೀರಾವರಿ ಅಳವಡಿಸಿರುವ ದ್ರಾಕ್ಷಿತೋಟಗಳಲ್ಲಿ, ನೇರವಾಗಿ ಕೀಲುಕದ ಅಡಿಯಲ್ಲಿರುವ ಬಳ್ಳಿಗಳಲ್ಲಿ ಮತ್ತು ಯಾವ ಕಾಂಡಗಳ ಮೇಲೆ ನೀರು ನೇರವಾಗಿ ಬೀಳುತ್ತಿರುತ್ತದೋ ಅಲ್ಲಿ ರೋಗಲಕ್ಷಣಗಳು ಕಾಣಿಸಿಕೊಳ್ಳಬಹುದು. ರೋಗವನ್ನು ಹರಡುವ ಮತ್ತೊಂದು ಮಾರ್ಗವೆಂದರೆ ಸೋಂಕಿತ ವಸ್ತುಗಳ ಸಾಗಣೆ ಮೂಲಕ. ಉದಾಹರಣೆಗೆ ಕಸಿ ಮಾಡುವಾಗ.


ಮುಂಜಾಗ್ರತಾ ಕ್ರಮಗಳು

  • ಲಭ್ಯವಿದ್ದರೆ ಫೈಟೊಫ್ಥೊರಾ ನಿರೋಧಕ ಪ್ರಭೇದಗಳನ್ನು ಬಳಸಿ.
  • ವಿವಿಧ ತೋಟಗಳ ನಡುವೆ, ಪ್ರದೇಶಗಳ ನಡುವೆ ಸೋಂಕಿತ ಸಸ್ಯ ವಸ್ತುಗಳನ್ನು ಸಾಗಿಸಬೇಡಿ.
  • ನೀರು ನಿಲ್ಲುವ ಪ್ರದೇಶಗಳಲ್ಲಿ ಗಿಡ ನೆಡಬೇಡಿ.
  • ಕಾಂಡದ ಸುತ್ತ ನೀರಿನ ಶೇಖರಣೆಗೆ ಅನುಕೂಲವಾಗುವ ಯಾವುದೇ ಮಣ್ಣಿನ ಒಳಚರಂಡಿ ಸಮಸ್ಯೆ ಇದ್ದರೆ ಸರಿಪಡಿಸಿ.
  • ಮಣ್ಣಿನಲ್ಲಿ ಪುನರಾವರ್ತಿತವಾಗಿ ಮತ್ತು ದೀರ್ಘಕಾಲದವರೆಗೆ ನೀರು ನಿಲ್ಲುವುದನ್ನು ತಪ್ಪಿಸಿ.
  • ಬೇರಿನ ಭಾಗದಲ್ಲಿ ಸಾವಯವ ಮಲ್ಚ್ ಇರುವಂತೆ ನೋಡಿಕೊಳ್ಳಿ.
  • ದ್ರಾಕ್ಷಿತೋಟದಿಂದ ಸಸ್ಯದ ಉಳಿಕೆಗಳನ್ನು ತೆಗೆದುಬಿಡಿ.
  • ಸಮತೋಲಿತ ರಾಸಾಯನಿಕ ಗೊಬ್ಬರ ಬಳಕೆ ಯೋಜಿಸಿ.
  • ಸೋಂಕಿತ ಸಸ್ಯದ ಭಾಗಗಳನ್ನು ಸತ್ತ ಮರಗಳನ್ನು ಅಥವಾ ದ್ರಾಕ್ಷಿಬಳ್ಳಿಗಳನ್ನು ತೆಗೆದುಹಾಕಿ ಮತ್ತು ಸುಟ್ಟುಬಿಡಿ.
  • ಸೋಂಕಿಗೊಳಗಾದ ಸ್ಥಳಗಳಿಂದ ಆರೋಗ್ಯಕರ ನೆಲಕ್ಕೆ ಹೋಗುವ ಮೊದಲು ಕೃಷಿ ಸಲಕರಣೆಗಳನ್ನು ಸ್ವಚ್ಛಗೊಳಿಸಲು ಮರೆಯಬೇಡಿ.
  • ನೀರು ನೇರವಾಗಿ ಕಾಂಡದ ಕೆಳಗೆ ಹರಿಯದಂತೆ ಹನಿ ನೀರಾವರಿ ವ್ಯವಸ್ಥೆಯನ್ನು ಸರಿಹೊಂದಿಸಿ.
  • ಕಸಿ ಮಾಡುವಾಗ, ಮಣ್ಣಿನ ಮಟ್ಟಕ್ಕಿಂತ ಸಾಕಷ್ಟು ಮೇಲೆ ಕಸಿಯ ಭಾಗ ಇರುವಂತೆ ನೋಡಿಕೊಳ್ಳಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ