ದ್ರಾಕ್ಷಿ

ಫೋಮೊಪ್ಸಿಸ್ ಕೇನ್ ಮತ್ತು ಎಲೆ ಚುಕ್ಕೆ ರೋಗ

Phomopsis viticola

ಶಿಲೀಂಧ್ರ

ಸಂಕ್ಷಿಪ್ತವಾಗಿ

  • ಸುಪ್ತಾವಸ್ಥೆಯಲ್ಲಿರುವ ಕಾಂಡಗಳು ಕಪ್ಪು ಚುಕ್ಕೆಯೊಂದಿಗೆ ಬಿಳಿಯಾಗಿರುತ್ತವೆ.
  • ಎಲೆಗಳ ಮೇಲೆ ದೊಡ್ಡ ಹಳದಿ ಬಣ್ಣದ ಹೊರ ವೃತ್ತ ಇರುವ ಸಣ್ಣ, ಗಾಢ ಕಂದು ಬಣ್ಣದ ಚುಕ್ಕೆಗಳು ಕಾಣಿಸಿಕೊಳ್ಳುತ್ತವೆ.
  • ತೀವ್ರ ಸೋಂಕಿಗೆ ಒಳಗಾದ ಎಲೆಗಳು ತಿರುಚಿಕೊಂಡು, ಸುಲಭವಾಗಿ ಮತ್ತು ಅಕಾಲಿಕವಾಗಿ ಉದುರುತ್ತವೆ.
  • ಚಿಗುರುಗಳು, ತೊಟ್ಟುಗಳು ಮತ್ತು ಕಾಂಡಗಳ ಮೇಲೆ ಕಂದು ಬಣ್ಣದಿಂದ ಕಪ್ಪು ಬಣ್ಣದ ಉದ್ದನೆಯ ಕಲೆಗಳು ಕಾಣಿಸಿಕೊಳ್ಳುತ್ತವೆ.
  • ಕಪ್ಪು ಚುಕ್ಕೆಗಳೊಂದಿಗೆ ಹಣ್ಣುಗಳು ಕಂದು ಬಣ್ಣಕ್ಕೆ ತಿರುಗಿ ತೊಗಲಿನಂತಾಗುತ್ತದೆ.
  • ಸಂಪೂರ್ಣ ಗೊಂಚಲು ಅಕಾಲಿಕವಾಗಿ ಉದುರಬಹುದು.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ದ್ರಾಕ್ಷಿ

ರೋಗಲಕ್ಷಣಗಳು

ಚಳಿಗಾಲದಲ್ಲಿ, ಸುಪ್ತಾವಸ್ಥೆಯಲ್ಲಿರುವ ಜಲ್ಲೆಗಳ ಮೇಲೆ ಸಣ್ಣ ಕಪ್ಪು ಕಲೆಗಳಿರುವ ಬಿಳುಚಿಕೊಂಡಿರುವ ಬಿಳಿ ಕಲೆಗಳು ಕಾಣಿಸಿಕೊಳ್ಳುತ್ತವೆ. ದೊಡ್ಡ ಹಳದಿ ಹೊರವೃತ್ತ ಇರುವ ಹಲವಾರು ಸಣ್ಣ, ಗಾಢ ಕಂದು ಬಣ್ಣದ ಚುಕ್ಕೆಗಳು ಚಿಗುರಿನ ಕೆಳ ಎಲೆಗಳಲ್ಲಿ ಕಾಣಿಸಿಕೊಳ್ಳುತ್ತವೆ. ಕಲೆಗಳ ಮಧ್ಯಭಾಗವು ಒಣಗಿ, ಬೀಳಬಹುದು. ಇದರಿಂದಾಗಿ ಗಾಯಗಳಿಗೆ ಶಾಟ್- ಹೋಲ್ಸ್ ಲಕ್ಷಣ ಕಾಣಿಸಿಕೊಳ್ಳುತ್ತವೆ. ತೀವ್ರವಾಗಿ ಸೋಂಕಿತ ಎಲೆಗಳು ತಿರುಚಿದಂತಾಗಿ, ಸುಲಭವಾಗಿ ಮತ್ತು ಅಕಾಲಿಕವಾಗಿ ಬೀಳಬಹುದು. ತೊಟ್ಟುಗಳು ಮತ್ತು ಚಿಗುರುಗಳ ಮೇಲೆ, ಕಂದು ಬಣ್ಣದಿಂದ ಕಪ್ಪು ಕಲೆಗಳು ಮೂಡಿ ಉದ್ದನೆಯ ಆಕಾರ ಪಡೆದುಕೊಳ್ಳುತ್ತವೆ ಅಥವಾ ಗೆರೆಗಳಾಗಿ ಬೆಳೆಯುತ್ತವೆ. ಇವು ಅನೇಕ ವೇಳೆ ಒಂದಾಗಿ ದೊಡ್ಡ ಕಪ್ಪು ಕಲೆಗಳನ್ನು ರೂಪಿಸುತ್ತವೆ. ಇವು ಅಂಗಾಂಶಗಳನ್ನು ಸುತ್ತುವರಿಯಬಹುದು ಅಥವಾ ವಿಭಜಿಸಬಹುದು. ಇದರಿಂದಾಗಿ ಚಿಗುರುಗಳು ವಿರೂಪಗೊಳ್ಳುತ್ತವೆ ಅಥವಾ ಸಾಯುತ್ತವೆ. ನಂತರದ ಅವಧಿಯಲ್ಲಿ, ಕಾಂಡಗಳು (ಪೆಡಂಕಲ್ಸ್) ಮತ್ತು ಹಣ್ಣುಗಳು ಸಹ ರೋಗಲಕ್ಷಣಗಳನ್ನು ತೋರಿಸಬಹುದು. ಮೇಲ್ಮೈ ಮೇಲೆ ಕಪ್ಪು ಚುಕ್ಕೆಗಳೊಂದಿಗೆ ಹಣ್ಣುಗಳು ಕಂದು ಬಣ್ಣಕ್ಕೆ ತಿರುಗಿ, ತೊಗಲಿನಂತಾಗುತ್ತವೆ (ಮಮ್ಮಿಫಿಕೇಷನ್). ಸೋಂಕಿಗೆ ಒಳಗಾದ ಕಾಂಡಗಳು ಬಾಡುತ್ತವೆ. ಇದರಿಂದಾಗಿ ಹಣ್ಣುಗಳು ಅಥವಾ ಸಂಪೂರ್ಣ ಗೊಂಚಲುಗಳು ಅಕಾಲಿಕವಾಗಿ ಉದುರುತ್ತವೆ.

ಶಿಫಾರಸುಗಳು

ಜೈವಿಕ ನಿಯಂತ್ರಣ

ಕ್ಷಮಿಸಿ, ಫೋಮೋಪ್ಸಿಸ್ ವಿಟಿಕೋಲಾ ವಿರುದ್ಧ ಯಾವುದೇ ಪರ್ಯಾಯ ಚಿಕಿತ್ಸೆಯ ಬಗ್ಗೆ ನಮಗೆ ಗೊತ್ತಿಲ್ಲ. ಈ ರೋಗದ ವಿರುದ್ಧ ಹೋರಾಡಲು ಸಹಾಯವಾಗುವ ಯಾವುದಾದರೋ ಮಾಹಿತಿ ಇದ್ದರೆ ನಮ್ಮನ್ನು ಸಂಪರ್ಕಿಸಿ. ನಿಮ್ಮ ಉತ್ತರದ ನಿರೀಕ್ಷೆಯಲ್ಲಿರುತ್ತೇವೆ.

ರಾಸಾಯನಿಕ ನಿಯಂತ್ರಣ

ಜೈವಿಕ ಚಿಕಿತ್ಸೆಗಳು ಮತ್ತು ತಡೆಗಟ್ಟುವ ಕ್ರಮಗಳು ಒಟ್ಟಾಗಿರುವ ಸಮಗ್ರವಾದ ಮಾರ್ಗ ಲಭ್ಯವಿದ್ದರೆ ಅದನ್ನು ಮೊದಲು ಪರಿಗಣಿಸಿ. ಹೊಸ ಅಂಗಾಂಶಗಳು ಸೋಂಕಿತಗೊಂಡ ನಂತರ ಲಭ್ಯವಿರುವ ರಾಸಾಯನಿಕಗಳು ರೋಗ ನಿರ್ಮೂಲನೆಯಲ್ಲಿ ಕೆಲಸ ಮಾಡುವುದಿಲ್ಲ. ಆದರೆ ಅದರ ಪರಿಣಾಮಗಳನ್ನು ಸೀಮಿತಗೊಳಿಸಬಹುದು. ಔಷಧ ಹಾಕಲು ಕಾಲೋಚಿತ ಸಮಯವನ್ನು ಅನುಸರಿಸುವುದು ಮುಖ್ಯ. ಶಿಫಾರಸು ಮಾಡಲಾಗುವ ಔಷಧಗಳು ಫ್ಲಝಿನಾಮ್, ಮನ್ಕೊಜೆಬ್, ಡಿಥೈಯಾನ್, ಝಿರಾಮ್ ಮತ್ತು ಕಪ್ಟನ್. ಮಳೆ ಮುಂದುವರಿದರೆ ಹೊಸ ಗಿಡಗಳನ್ನು ರಕ್ಷಿಸಲು ಹೆಚ್ಚುವರಿ ಸಿಂಪಡಿಕೆಯ ಅಗತ್ಯವಿರುತ್ತದೆ.

ಅದಕ್ಕೆ ಏನು ಕಾರಣ

ಶಿಲೀಂಧ್ರವು ಹಲವಾರು ವರ್ಷಗಳ ಕಾಲ ಸೋಂಕಿತ ಬಳ್ಳಿಯ ಅಂಗಾಂಶಗಳಲ್ಲಿ (ಮೊಗ್ಗುಗಳು, ತೊಗಟೆ, ಒಣ ಹಣ್ಣುಗಳು, ಮತ್ತು ಜಲ್ಲೆಗಳು) ಚಳಿಗಾಲವನ್ನು ಕಳೆಯಬಹುದು. ಇವು ಒದ್ದೆಯಾದ, ಆರ್ದ್ರ ವಾತಾವರಣದಲ್ಲಿ, ವಸಂತಕಾಲದಲ್ಲಿ ಬೀಜಕಗಳನ್ನು ಉತ್ಪಾದಿಸತೊಡಗುತ್ತವೆ. ಈ ಬೀಜಕಗಳು ನಂತರ ಅದೇ ಬಳ್ಳಿಯ ಹೊಸ ಬೆಳೆಯುತ್ತಿರುವ ಅಂಗಾಂಶಗಳಿಗೆ ನೀರು ಮತ್ತು ಮಳೆಯ ತುಂತುರಿನ ಮೂಲಕ ಹರಡುತ್ತವೆ. ಗರಿಷ್ಠ ತಾಪಮಾನವು 23 ಇದ್ದಾಗ ಕನಿಷ್ಠ 10 ಗಂಟೆಗಳ ಕಾಲ ಆರ್ದ್ರತೆಯಿದ್ದರೆ ಬೀಜಕದ ರಾಶಿಗಳು ಬಿಡುಗಡೆಯಾಗುತ್ತವೆ. ಶಿಲೀಂಧ್ರವು 1 ರಿಂದ 30 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ವ್ಯಾಪ್ತಿಯಲ್ಲಿ ಬೆಳೆಯುವ ಮತ್ತು ರೋಗ ಹರಡುವ ಸಾಮರ್ಥ್ಯವನ್ನು ಹೊಂದಿವೆ. ವಿಶೇಷವಾಗಿ ಹೂವು ಮತ್ತು ಹಣ್ಣು ಮೂಡುವ ಸಮಯದಲ್ಲಿ ದೀರ್ಘಕಾಲದ ಮಳೆ, ಶೀತ ಹವಾಮಾನ ರೋಗವನ್ನು ಉತ್ತೇಜಿಸುತ್ತದೆ. ರೋಗಕಾರಕವು ಅದೇ ಬಳ್ಳಿಯಲ್ಲಿ ಹರಡುವ ಪ್ರವೃತ್ತಿಯನ್ನು ಹೊಂದಿರುತ್ತದೆ. ಬಳ್ಳಿಯಿಂದ ಬಳ್ಳಿಗೆ ಅಲ್ಲ. ಸೋಂಕಿತ ಸಸ್ಯದ ವಸ್ತುಗಳು ಅಥವಾ ನರ್ಸರಿ ವಸ್ತುಗಳ ಸಾಗಣೆಯ ಮೂಲಕ ರೋಗಕಾರಕವು ದೂರದವರೆಗೆ ಪ್ರಸರಣಗೊಳ್ಳುತ್ತವೆ.


ಮುಂಜಾಗ್ರತಾ ಕ್ರಮಗಳು

  • ರೋಗದ ಚಿಹ್ನೆಗಳಿಗಾಗಿ ದ್ರಾಕ್ಷಿತೋಟವನ್ನು ಪರಿಶೀಲಿಸುತ್ತಿರಿ.
  • ಸುಪ್ತಾವಸ್ಥೆಯ ಕಾಲದಲ್ಲಿ ಸೋಂಕಿತ ಜಲ್ಲೆಗಳನ್ನು ತೆಗೆದುಹಾಕಿ ಮತ್ತು ಸುಟ್ಟು ಬಿಡುವ ಮೂಲಕ ಅಥವಾ ಹೂತುಬಿಡುವ ಮೂಲಕ ಮರದ ಭಾಗವನ್ನು ನಾಶಪಡಿಸಿ.
  • ಸಮರುವಿಕೆಯ ಸಂದರ್ಭದಲ್ಲಿ, ಸತ್ತ ಮತ್ತು ರೋಗಪೀಡಿತ ಮರವನ್ನು ತೆಗೆದುಹಾಕಿ.
  • ಸಮರ್ಪಕವಾಗಿ ಗಾಳಿಯಾಡಲು ಸಹಾಯವಾಗುವಂತೆ ಸಮರುವಿಕೆಯ ಮೂಲಕ ಮೇಲಾವರಣವನ್ನು ಉತ್ತಮವಾಗಿ ನಿರ್ವಹಿಸಿ.
  • ತೋಟಗಳ ನಡುವೆ ಸಸ್ಯದ ವಸ್ತುಗಳನ್ನು ಸಾಗಿಸಬೇಡಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ